ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPadನಲ್ಲಿನ ಹುಡುಕಿ ಆ್ಯಪ್‌ನಿಂದ AirTag, Apple Pencil Pro ಅಥವಾ ಇತರೆ ಐಟಮ್ ಅನ್ನು ತೆಗೆದುಹಾಕುವುದು

ನಿಮ್ಮ Apple ಖಾತೆಯಿಂದ AirTag, Apple Pencil Pro ಅಥವಾ ಥರ್ಡ್-ಪಾರ್ಟಿ ಐಟಮ್ ಅನ್ನು ತೆಗೆದುಹಾಕಲು ನೀವು ಹುಡುಕಿ ಆ್ಯಪ್ ಅನ್ನು ಬಳಸಬಹುದು, ಇದರಿಂದ ಬೇರೆಯವರು ಅದನ್ನು ನೋಂದಾಯಿಸಬಹುದು.

AirTag, Apple Pencil Pro ಅಥವಾ ಥರ್ಡ್-ಪಾರ್ಟಿ ಐಟಮ್ ಅನ್ನು ನೋಂದಾಯಿಸುವುದು ಹೇಗೆ ಎಂಬುದನ್ನು ತಿಳಿಯಿರಿ.

AirTag ಅಥವಾ ಇತರೆ ಐಟಮ್ ಅನ್ನು ತೆಗೆದುಹಾಕುವುದು

  1. ನಿಮ್ಮ iPadನಲ್ಲಿನ ಹುಡುಕಿ ಆ್ಯಪ್‌ಗೆ ಹೋಗಿ.

  2. ಸ್ಕ್ರೀನ್‌ನ ಕೆಳ ಎಡಭಾಗದಲ್ಲಿರುವ ಐಟಮ್‌ಗಳು ಎಂಬುದನ್ನು ಟ್ಯಾಪ್ ಮಾಡಿ, ನಂತರ ನೀವು ತೆಗೆದುಹಾಕಲು ಬಯಸುವ ಐಟಮ್ ಅನ್ನು ಟ್ಯಾಪ್ ಮಾಡಿ.

  3. ಐಟಮ್ ಅನ್ನು ನಿಮ್ಮ iPadನ ಹತ್ತಿರಕ್ಕೆ ತನ್ನಿ.

    ಐಟಮ್ ನಿಮ್ಮ ಸಾಧನದ ಹತ್ತಿರದಲ್ಲಿ ಇಲ್ಲದಿದ್ದರೆ, ನೀವು ಈಗಲೂ ಅದನ್ನು ನಿಮ್ಮ ಖಾತೆಯಿಂದ ತೆಗೆದುಹಾಕಬಹುದು. ಆದಾಗ್ಯೂ, ಯಾರಾದರೂ ಐಟಮ್ ಒಂದನ್ನು ತಮ್ಮ Apple ಖಾತೆಗೆ ನೋಂದಾಯಿಸುವ ಮೊದಲು ಅದನ್ನು ರೀಸೆಟ್ ಮಾಡಬೇಕು.

  4. ಐಟಮ್ ಅನ್ನು ತೆಗೆದುಹಾಕಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ಸ್ಕ್ರೀನ್ ಮೇಲಿನ ಸೂಚನೆಗಳನ್ನು ಅನುಸರಿಸಿ.

Apple Pencil Proವನ್ನು ತೆಗೆದುಹಾಕುವುದು

  1. ನಿಮ್ಮ iPadನಲ್ಲಿನ ಹುಡುಕಿ ಆ್ಯಪ್‌ಗೆ ಹೋಗಿ.

  2. ಸ್ಕ್ರೀನ್‌ನ ಕೆಳಭಾಗದಲ್ಲಿರುವ ಸಾಧನಗಳು ಎಂಬುದನ್ನು ಟ್ಯಾಪ್ ಮಾಡಿ, ನಂತರ ನೀವು ತೆಗೆದುಹಾಕಲು ಬಯಸುವ Apple Pencil Proವನ್ನು ಟ್ಯಾಪ್ ಮಾಡಿ.

  3. ಕೆಳಕ್ಕೆ ಸ್ಕ್ರೋಲ್ ಮಾಡಿ ಮತ್ತು ‘ಈ ಸಾಧನವನ್ನು ತೆಗೆದುಹಾಕಿ’ ಎಂಬುದನ್ನು ಟ್ಯಾಪ್ ಮಾಡಿ.

    Apple Pencil Proವನ್ನು ತೆಗೆದುಹಾಕುವುದರಿಂದ ಹುಡುಕಿ ಆ್ಯಪ್‌ನ ಲಾಕ್ ಅನ್ನು ತೆಗೆದುಹಾಕಲಾಗುತ್ತದೆ, ಇದು ಮತ್ತೊಂದು Apple ಖಾತೆಗೆ ತಮ್ಮ iPadನಲ್ಲಿನ ‘ಹುಡುಕಿ’ ಆ್ಯಪ್‌‌ನಲ್ಲಿ Apple Pencil Proವನ್ನು ಸೇರಿಸಲು ಅನುವು ಮಾಡಿಕೊಡುತ್ತದೆ.

ಗಮನಿಸಿ: ಐಟಮ್ ಅನ್ನು ರೀಸೆಟ್ ಮಾಡಲು ತಯಾರಕರ ಸೂಚನೆಗಳನ್ನು ಅನುಸರಿಸಿ. AirTagಗಾಗಿ, ನಿಮ್ಮ AirTag ಅನ್ನು ರೀಸೆಟ್ ಮಾಡುವುದು ಹೇಗೆ ಎಂಬ Apple ಬೆಂಬಲ ಲೇಖನವನ್ನು ನೋಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.