ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPadನಲ್ಲಿ Siri ಮೂಲಕ ಕರೆಗಳು, ಸಂದೇಶಗಳು ಮತ್ತು ಹೆಚ್ಚಿನವುಗಳನ್ನು ಘೋಷಿಸಿ

Siriಯು ಬೆಂಬಲಿತ ಹೆಡ್‌ಫೋನ್‌ಗಳಲ್ಲಿ ಸಂದೇಶ ಆ್ಯಪ್‌ನಂತಹ ಆ್ಯಪ್‌ಗಳಿಂದ ಬರುವ ಕರೆಗಳು ಮತ್ತು ನೋಟಿಫಿಕೇಷನ್‌ಗಳನ್ನು ಘೋಷಿಸಬಹುದು. ನೀವು “Hey Siri” ಎಂದು ಹೇಳದೆಯೇ ನಿಮ್ಮ ವಾಯ್ಸ್ ಮೂಲಕ ಉತ್ತರಿಸಬಹುದು ಅಥವಾ ಪ್ರತ್ಯುತ್ತರಿಸಬಹುದು.

ಕರೆಗಳನ್ನು ಘೋಷಿಸಿ ಮತ್ತು ನೋಟಿಫಿಕೇಷನ್‌ಗಳನ್ನು ಘೋಷಿಸಿ ಎಂಬುದು ಬೆಂಬಲಿತ ಥರ್ಡ್ ಪಾರ್ಟಿ ಆ್ಯಪ್‌ಗಳೊಂದಿಗೂ ಕಾರ್ಯನಿರ್ವಹಿಸುತ್ತವೆ.

ಕರೆಗಳನ್ನು ಘೋಷಿಸಸಲು Siriಗೆ ಅನುಮತಿಸುವುದು

ಕರೆಗಳನ್ನು ಘೋಷಿಸಿ ಎಂಬುದರ ಮೂಲಕ, ನಿಮ್ಮ ವಾಯ್ಸ್ ಬಳಸಿ ನೀವು ಸ್ವೀಕರಿಸಬಹುದಾದ ಅಥವಾ ನಿರಾಕರಿಸಬಹುದಾದ ಒಳಬರುವ ಫೋನ್ ಕರೆಗಳು ಮತ್ತು FaceTime ಕರೆಗಳನ್ನು Siriಯು ಗುರುತಿಸುತ್ತದೆ.

  1. ನಿಮ್ಮ iPadನಲ್ಲಿ ಸೆಟ್ಟಿಂಗ್ಸ್ ಆ್ಯಪ್‌ಗೆ  ಹೋಗಿ.

  2. Siri (ಅಥವಾ Apple Intelligence ಮತ್ತು Siri) ಅನ್ನು ಟ್ಯಾಪ್ ಮಾಡಿ.

  3. ಕರೆಗಳನ್ನು ಘೋಷಿಸಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ಆಯ್ಕೆಯೊಂದನ್ನು ಆರಿಸಿ.

  4. ಕರೆ ಬಂದಾಗ, Siri ಕಾಲರ್ ಅನ್ನು ಗುರುತಿಸುತ್ತದೆ ಮತ್ತು ನೀವು ಕರೆಗೆ ಉತ್ತರಿಸಲು ಬಯಸುವಿರಾ ಎಂದು ಕೇಳುತ್ತದೆ. ಕರೆಯನ್ನು ಸ್ವೀಕರಿಸಲು “ಯಸ್” ಎಂದು ಹೇಳಿ ಅಥವಾ ನಿರಾಕರಿಸಲು “ನೋ” ಎಂದು ಹೇಳಿ.

ನೋಟಿಫಿಕೇಷನ್‌ಗಳನ್ನು ಘೋಷಿಸಲು Siriಗೆ ಅನುಮತಿಸಿ

Siriಯು ಸಂದೇಶ ಆ್ಯಪ್ ಮತ್ತು ರಿಮೈಂಡರ್ಸ್ ಆ್ಯಪ್ ರೀತಿಯ ಆ್ಯಪ್‌ಗಳಿಂದ ಒಳಬರುವ ನೋಟಿಫಿಕೇಷನ್‌ಗಳನ್ನು ಸ್ವಯಂಚಾಲಿತವಾಗಿ ಘೋಷಿಸಬಹುದು. Siriಯು ಸಮಯ-ಸೂಕ್ಷ್ಮ ನೋಟಿಫಿಕೇಷನ್‌ಗಳನ್ನು ಬಳಸುವ ಆ್ಯಪ್‌ಗಳಿಗೆ ಆ್ಯಪ್ ನೋಟಿಫಿಕೇಷನ್‌ಗಳನ್ನು ಸ್ವಯಂಚಾಲಿತವಾಗಿ ಸಕ್ರಿಯಗೊಳಿಸುತ್ತದೆ, ಆದರೆ ನೀವು ಯಾವುದೇ ಸಮಯದಲ್ಲಿ ಸೆಟ್ಟಿಂಗ್ಸ್ ಅನ್ನು ಬದಲಾಯಿಸಬಹುದು. ಸಮಯ ಸೂಕ್ಷ್ಮ ನೋಟಿಫಿಕೇಷನ್‌ಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಲು, ಫೋಕಸ್ ಅನ್ನು ಸೆಟಪ್ ಮಾಡಿ ಎಂಬುದನ್ನು ನೋಡಿ.

  1. ನಿಮ್ಮ iPadನಲ್ಲಿ ಸೆಟ್ಟಿಂಗ್ಸ್ ಆ್ಯಪ್‌ಗೆ  ಹೋಗಿ.

  2. Siri (ಅಥವಾ Apple Intelligence ಮತ್ತು Siri) ಅನ್ನು ಟ್ಯಾಪ್ ಮಾಡಿ.

  3. ನೋಟಿಫಿಕೇಷನ್‌ಗಳನ್ನು ಘೋಷಿಸಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ನೋಟಿಫಿಕೇಷನ್‌ಗಳನ್ನು ಘೋಷಿಸಿ ಎಂಬುದನ್ನು ಆನ್ ಮಾಡಿ.

  4. Siri ಯಾವ ಆ್ಯಪ್‌ನ ನೋಟಿಫಿಕೇಷನ್‌ಗಳನ್ನು ಘೋಷಿಸಬೇಕು ಎಂದು ನೀವು ಬಯಸುವಿರೋ ಆ ಆ್ಯಪ್ ಅನ್ನು ಟ್ಯಾಪ್ ಮಾಡಿ, ನಂತರ ನೋಟಿಫಿಕೇಷನ್‌ಗಳನ್ನು ಘೋಷಿಸಿ ಎಂಬುದನ್ನು ಆನ್ ಮಾಡಿ.

    ಕೆಲವು ಆ್ಯಪ್‌ಗಳಿಗೆ, ಎಲ್ಲಾ ನೋಟಿಫಿಕೇಷನ್‌ಗಳನ್ನು ಘೋಷಿಸಬೇಕೆ ಅಥವಾ ಸಮಯ-ಸೂಕ್ಷ್ಮ ನೋಟಿಫಿಕೇಷನ್‌ಗಳನ್ನು ಮಾತ್ರ ಘೋಷಿಸಬೇಕೆ ಎಂಬುದನ್ನು ಸಹ ನೀವು ಆಯ್ಕೆ ಮಾಡಬಹುದು.

ಸಂದೇಶಗಳಂತಹ ನೀವು ಪ್ರತ್ಯುತ್ತರವನ್ನು ಕಳುಹಿಸಬಹುದಾದ ಆ್ಯಪ್‌ಗಳಿಗೆ, Siri ನೀವು ಹೇಳಿದ್ದನ್ನು ಪುನರಾವರ್ತಿಸುತ್ತದೆ, ನಂತರ ನಿಮ್ಮ ಉತ್ತರವನ್ನು ಕಳುಹಿಸುವ ಮೊದಲು ದೃಢೀಕರಣವನ್ನು ಕೇಳುತ್ತದೆ. ಖಚಿತಪಡಿಸಿಕೊಳ್ಳಲು ಕಾಯದೆ ಪ್ರತ್ಯುತ್ತರಗಳನ್ನು ಕಳುಹಿಸಲು, ‘ಖಚಿತಪಡಿಸಿಕೊಳ್ಳದೆ ಪ್ರತ್ಯುತ್ತರಗಳನ್ನು ಕಳುಹಿಸಿ’ ಎಂಬುದನ್ನು ಆನ್ ಮಾಡಿ.

Siri ಘೋಷಣೆಗಳಿಗೆ ಕೈಗಳನ್ನು ಬಳಸದೆ ಪ್ರತಿಕ್ರಿಯಿಸಿ

ನೀವು ಬೆಂಬಲಿತ AirPods ಅನ್ನು ಹಾಕಿಕೊಂಡಿರುವಾಗ, Siriಯ ಘೋಷಣೆಗಳಿಗೆ ಪ್ರತಿಕ್ರಿಯಿಸಲು ನೀವು ತಲೆಯಾಡಿಸಬಹುದು ಅಥವಾ ತಲೆಯನ್ನು ಅಲ್ಲಾಡಿಸಬಹುದು. ನೀವು ಕೆಲಸದ ಸ್ಥಳಕ್ಕೆ ಬಸ್‌ನಲ್ಲಿ ಹೋಗುತ್ತಿದ್ದರೆ, ಜೋರಾಗಿ ಮಾತನಾಡದೆಯೇ ಕರೆಗಳು, ಸಂದೇಶಗಳು ಮತ್ತು ನೋಟಿಫಿಕೇಷನ್‌ಗಳನ್ನು ನಿರ್ವಹಿಸಲು ನೀವು ಇನ್ನೂ Siri ಅನ್ನು ಬಳಸಬಹುದು. AirPods ಬಳಕೆದಾರರ ಮಾರ್ಗದರ್ಶಿಯಲ್ಲಿನಿಮ್ಮ AirPods ಜೊತೆಗೆ ನಿಯಂತ್ರಣಗಳು ಮತ್ತು ಜೆಸ್ಚರ್‌ಗಳನ್ನು ಬಳಸಿ ಎಂಬುದನ್ನು ನೋಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.