ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPadನಲ್ಲಿ Touch IDಯನ್ನು ಸೆಟಪ್ ಮಾಡಿ

ಹೋಮ್ ಬಟನ್ ಹೊಂದಿರುವ iPadನಲ್ಲಿ, iPad (10ನೇ ಜನರೇಷನ್ ಮತ್ತು ನಂತರದ ಆವೃತ್ತಿ), iPad Air (4ನೇ ಜನರೇಷನ್ ಮತ್ತು ನಂತರದ ಆವೃತ್ತಿ), iPad mini (6ನೇ ಜನರೇಷನ್) ಅಥವಾ iPad miniಯಲ್ಲಿ (A17 Pro), ನೀವು iPad ಅನ್ನು ಅನ್‌ಲಾಕ್ ಮಾಡಲು, ಖರೀದಿಗಳು ಮತ್ತು ಪಾವತಿಗಳನ್ನು ದೃಢೀಕರಿಸಲು ಮತ್ತು ಅನೇಕ ಥರ್ಡ್ ಪಾರ್ಟಿ ಆ್ಯಪ್‌ಗಳಿಗೆ ಸೈನ್ ಇನ್ ಮಾಡಲು Touch IDಯನ್ನು ಸುರಕ್ಷಿತವಾಗಿ ಮತ್ತು ಅನುಕೂಲಕರವಾಗಿ ಬಳಸಬಹುದು.

Touch IDಯನ್ನು ಬಳಸಲು, ನೀವು ನಿಮ್ಮ iPadನಲ್ಲಿ ಪಾಸ್‌ಕೋಡ್ ಅನ್ನು ಸೆಟ್ ಮಾಡಬೇಕು.

Touch IDಯನ್ನು ಆನ್ ಮಾಡಿ

  1. ಸೆಟ್ಟಿಂಗ್ಸ್ ಆ್ಯಪ್‌  > Touch ID ಮತ್ತು ಪಾಸ್‌ಕೋಡ್ ಎಂಬಲ್ಲಿಗೆ ಹೋಗಿ.

  2. ‘ಇದಕ್ಕಾಗಿ Touch IDಯನ್ನು ಬಳಸಿ’ ಎಂಬುದರ ಕೆಳಗಿನ ಯಾವುದಾದರೂ ಆಯ್ಕೆಯನ್ನು ಆನ್ ಮಾಡಿ, ನಂತರ ಸ್ಕ್ರೀನ್ ಮೇಲಿನ ಸೂಚನೆಗಳನ್ನು ಅನುಸರಿಸಿ.

ನೀವು iTunes ಮತ್ತು App Store ಅನ್ನು ಆನ್ ಮಾಡಿದಾಗ, ನೀವು App Store, Apple Books ಅಥವಾ iTunes Storeನಿಂದ ನಿಮ್ಮ ಮೊದಲ ಖರೀದಿಯನ್ನು ಮಾಡಿದಾಗ ನಿಮ್ಮ Apple ಖಾತೆ ಪಾಸ್‌ವರ್ಡ್ ಅನ್ನು ಕೇಳಲಾಗುತ್ತದೆ. ನೀವು ನಿಮ್ಮ ಮುಂದಿನ ಖರೀದಿಯನ್ನು ಮಾಡುವಾಗ, Touch IDಯನ್ನು ಬಳಸಲು ನಿಮ್ಮನ್ನು ಕೇಳಲಾಗುತ್ತದೆ.

ಗಮನಿಸಿ: ನಿಮಗೆ ಫಿಂಗರ್‌ಪ್ರಿಂಟ್ ಅನ್ನು ಸೇರಿಸಲು ಅಥವಾ Touch IDಯನ್ನು ಬಳಸಿಕೊಂಡು ನಿಮ್ಮ iPad ಅನ್ನು ಅನ್‌ಲಾಕ್ ಮಾಡಲು ಸಾಧ್ಯವಾಗದಿದ್ದರೆ, ನಿಮ್ಮ iPad ಅಥವಾ iPadನಲ್ಲಿ Touch ID ಕಾರ್ಯನಿರ್ವಹಿಸದಿದ್ದರೆ ಎಂಬ Apple ಬೆಂಬಲ ಲೇಖನವನ್ನು ನೋಡಿ.

Touch IDಯನ್ನು ಯಾವಾಗ ಬಳಸಬೇಕು ಎಂಬುದನ್ನು ಆಯ್ಕೆಮಾಡಿ

ನಿಮ್ಮ iPad ಅನ್ನು ಅನ್‌ಲಾಕ್ ಮಾಡಲು, ಪಾವತಿಗಳನ್ನು ದೃಢೀಕರಿಸಲು, ಪಾಸ್‌ವರ್ಡ್‌ಗಳನ್ನು ಸ್ವಯಂಚಾಲಿತವಾಗಿ ಭರ್ತಿಮಾಡಲು ಹಾಗೂ ಪಾಸ್‌ವರ್ಡ್-ಸಂರಕ್ಷಿತ ಆ್ಯಪ್‌ಗಳನ್ನು ತೆರೆಯಲು ನೀವು Touch IDಯನ್ನು ಬಳಸಬಹುದು.

ಸೆಟ್ಟಿಂಗ್ಸ್ ಆ್ಯಪ್‌  > Touch ID ಮತ್ತು ಪಾಸ್‌ಕೋಡ್ ಎಂಬಲ್ಲಿಗೆ ಹೋಗಿ, ‘ಇದಕ್ಕಾಗಿ Touch IDಯನ್ನು ಬಳಸಿ’ ಎಂಬುದರ ಕೆಳಗಿನ ಆಯ್ಕೆಗಳನ್ನು ಆನ್ ಮಾಡಿ.

ಫಿಂಗರ್‌ಪ್ರಿಂಟ್ ಅನ್ನು ಸೇರಿಸಿ

ನೀವು ಒಂದಕ್ಕಿಂತ ಹೆಚ್ಚು ಫಿಂಗರ್‌ಪ್ರಿಂಟ್‌ಗಳನ್ನು ಸೇರಿಸಬಹುದು (ಉದಾಹರಣೆಗೆ, ನಿಮ್ಮ ಹೆಬ್ಬೆರಳು ಮತ್ತು ತೋರುಬೆರಳುಗಳೆರಡರ ಫಿಂಗರ್‌ಪ್ರಿಂಟ್).

  1. ಸೆಟ್ಟಿಂಗ್ಸ್ ಆ್ಯಪ್‌  > Touch ID ಮತ್ತು ಪಾಸ್‌ಕೋಡ್ ಎಂಬಲ್ಲಿಗೆ ಹೋಗಿ.

  2. ಫಿಂಗರ್‌ಪ್ರಿಂಟ್ ಸೇರಿಸಿ ಎಂಬುದನ್ನು ಟ್ಯಾಪ್ ಮಾಡಿ.

  3. ಸ್ಕ್ರೀನ್ ಮೇಲಿನ ಸೂಚನೆಗಳನ್ನು ಅನುಸರಿಸಿ.

ಫಿಂಗರ್‌ಪ್ರಿಂಟ್ ಅನ್ನು ಹೆಸರಿಸಿ ಅಥವಾ ಡಿಲೀಟ್ ಮಾಡಿ

  1. ಸೆಟ್ಟಿಂಗ್ಸ್ ಆ್ಯಪ್‌  > Touch ID ಮತ್ತು ಪಾಸ್‌ಕೋಡ್ ಎಂಬಲ್ಲಿಗೆ ಹೋಗಿ.

    ನೀವು ಒಂದಕ್ಕಿಂತ ಹೆಚ್ಚಿನ ಫಿಂಗಪ್ರಿಂಟ್ ಅನ್ನು ಸೇರಿಸಿದರೆ, ಅದರ ಪ್ರಿಂಟ್ ಅನ್ನು ಗುರುತಿಸಲು ಈ ಕೆಳಗಿನವುಗಳಲ್ಲಿ ಒಂದನ್ನು ಮಾಡಿ:

    • ಹೋಮ್ ಬಟನ್ ಹೊಂದಿರುವ iPadನಲ್ಲಿ: ಹೋಮ್ ಬಟನ್ ಮೇಲೆ ಬೆರಳನ್ನು ಇರಿಸಿ.

    • iPad (10ನೇ ಜನರೇಷನ್ ಮತ್ತು ನಂತರದ ಆವೃತ್ತಿ), iPad mini (6ನೇ ಜನರೇಷನ್), iPad mini (A17 Pro) ಮತ್ತು iPad Air (4ನೇ ಜನರೇಷನ್ ಮತ್ತು ನಂತರದ ಆವೃತ್ತಿ): ಟಾಪ್ ಬಟನ್ ಮೇಲೆ ಬೆರಳನ್ನು ಇರಿಸಿ.

  2. ಫಿಂಗರ್‌ಪ್ರಿಂಟ್ ಅನ್ನು ಟ್ಯಾಪ್ ಮಾಡಿ, ನಂತರ ಹೆಸರನ್ನು ನಮೂದಿಸಿ (ಉದಾಹರಣೆಗೆ “ಹೆಬ್ಬೆರಳು”) ಅಥವಾ ಫಿಂಗರ್‌ಪ್ರಿಂಟ್ ಡಿಲೀಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

Touch IDಯನ್ನು ಆಫ್ ಮಾಡಿ

ಸೆಟ್ಟಿಂಗ್ಸ್ ಆ್ಯಪ್‌  > Touch ID ಮತ್ತು ಪಾಸ್‌ಕೋಡ್ ಎಂಬುದಕ್ಕೆ ಹೋಗಿ, ನಂತರ ಒಂದು ಅಥವಾ ಹೆಚ್ಚಿನ ಆಯ್ಕೆಗಳನ್ನು ಆಫ್ ಮಾಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.