ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPadನಲ್ಲಿನ ಹುಡುಕಿ ಆ್ಯಪ್‌ನಲ್ಲಿ ಸ್ನೇಹಿತರ ಸ್ಥಳವು ಬದಲಾದಾಗ ಸೂಚನೆ ಪಡೆಯುವುದು

ನಿಮ್ಮ ಸ್ನೇಹಿತರ ಸ್ಥಳವು ಬದಲಾದಾಗ ನೋಟಿಫಿಕೇಷನ್ ಪಡೆಯಲು ಹುಡುಕಿ ಆ್ಯಪ್ ಬಳಸಿ. ಸ್ನೇಹಿತರೊಬ್ಬರು ಸ್ಥಳಕ್ಕೆ ಬಂದಾಗ, ಸ್ಥಳವನ್ನು ತೊರೆದಾಗ ಅಥವಾ ಸ್ಥಳದಲ್ಲಿ ಇಲ್ಲದಿರುವಾಗ ನೀವು ಸೂಚನೆ ಪಡೆಯಬಹುದು.

ಪ್ರಮುಖ ಸೂಚನೆ: ನಿಮ್ಮ ಸ್ನೇಹಿತರ ಸ್ಥಳವು ಬದಲಾದಾಗ ನೋಟಿಫಿಕೇಷನ್ ಸ್ವೀಕರಿಸಲು, ಹುಡುಕಿ ಆ್ಯಪ್‌ಗೆ ನೀವು ನೋಟಿಫಿಕೇಷನ್‌ಗಳನ್ನು ಅನುಮತಿಸುತ್ತಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ನೋಟಿಫಿಕೇಷನ್ ಸೆಟ್ಟಿಂಗ್ಸ್ ಬದಲಾಯಿಸಿ ಎಂಬುದನ್ನು ನೋಡಿ.

ನಿಮ್ಮ ಸ್ಥಳವು ಬದಲಾದಾಗಲೂ ನೀವು ಸ್ನೇಹಿತರಿಗೆ ತಿಳಿಸಬಹುದು. ಹುಡುಕಿ ಆ್ಯಪ್‌ನಲ್ಲಿ ನಿಮ್ಮ ಸ್ಥಳವು ಬದಲಾದಾಗ ಸ್ನೇಹಿತರೊಬ್ಬರಿಗೆ ಸೂಚಿಸಿ ಎಂಬುದನ್ನು ನೋಡಿ.

ನಿಮ್ಮ ಸ್ನೇಹಿತರು ಸ್ಥಳಕ್ಕೆ ಆಗಮಿಸಿದಾಗ ಅಥವಾ ಅಲ್ಲಿಂದ ಹೊರಟು ಹೋದಾಗ ಸೂಚನೆ ಪಡೆಯಿರಿ

  1. ನಿಮ್ಮ iPadನಲ್ಲಿನ ಹುಡುಕಿ ಆ್ಯಪ್‌ಗೆ ಹೋಗಿ.

  2. ಸ್ಕ್ರೀನ್‌ನ ಕೆಳ ಎಡಭಾಗದಲ್ಲಿರುವ ಜನರು ಎಂಬುದನ್ನು ಟ್ಯಾಪ್ ಮಾಡಿ, ನಂತರ ನೀವು ಯಾವ ವ್ಯಕ್ತಿಯ ಬಗ್ಗೆ ಸೂಚನೆ ಪಡೆಯಲು ಬಯಸುತ್ತೀರೋ ಆ ವ್ಯಕ್ತಿಯ ಹೆಸರನ್ನು ಟ್ಯಾಪ್ ಮಾಡಿ.

  3. ನೋಟಿಫಿಕೇಷನ್‌ಗಳ ಕೆಳಗೆ, ಸೇರಿಸಿ ಅನ್ನು ಟ್ಯಾಪ್ ಮಾಡಿ, ನಂತರ ನನಗೆ ಸೂಚಿಸಿ ಎಂಬುದನ್ನು ಟ್ಯಾಪ್ ಮಾಡಿ.

  4. ಸ್ಥಳಕ್ಕೆ ಸ್ನೇಹಿತರೊಬ್ಬರು ಆಗಮಿಸಿದಾಗ ಅಥವಾ ಅಲ್ಲಿಂದ ಹೊರಟುಹೋದಾಗ ನಿಮಗೆ ಸೂಚಿಸಬೇಕೆಂದು ಬಯಸುತ್ತೀರೋ ಇಲ್ಲವೋ ಎಂಬುದನ್ನು ಆರಿಸಿ.

  5. ಸ್ಥಳವನ್ನು ಆಯ್ಕೆಮಾಡಿ ಅಥವಾ ಹೊಸ ಸ್ಥಳವನ್ನು ರಚಿಸಲು ಮತ್ತು ಸ್ಥಳದ ತ್ರಿಜ್ಯವನ್ನು ಸೆಟ್ ಮಾಡಲು ಹೊಸ ಸ್ಥಳವನ್ನು ಟ್ಯಾಪ್ ಮಾಡಿ.

    ದೊಡ್ಡ ತ್ರಿಜ್ಯದೊಂದಿಗೆ, ನಿಮ್ಮ ಸ್ನೇಹಿತರು ಸ್ಥಳದಲ್ಲಿಯೆ ಇರುವ ಬದಲು, ಆ ಸ್ಥಳದ ಹತ್ತಿರದಲ್ಲಿದ್ದಾಗ ನಿಮಗೆ ಸೂಚಿಸಲಾಗುತ್ತದೆ.

  6. ನಿಮಗೆ ಒಮ್ಮೆ ಮಾತ್ರ ಅಥವಾ ಪ್ರತಿ ಬಾರಿಯೂ ಸೂಚನೆ ನೀಡಬೇಕೆ ಎಂಬುದನ್ನು ಆರಿಸಿ.

  7. ಸೇರಿಸಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ಸರಿ ಎಂಬುದನ್ನು ಟ್ಯಾಪ್ ಮಾಡಿ.

    ನೀವು ನೋಟಿಫಿಕೇಷನ್ ಅನ್ನು ಸೆಟ್ ಮಾಡಿದ ನಂತರ ನಿಮ್ಮ ಸ್ನೇಹಿತರಿಗೆ ಅಲರ್ಟ್ ದೊರೆಯುತ್ತದೆ.

    ನೀವು ಪುನರಾವರ್ತಿತ ನೋಟಿಫಿಕೇಷನ್ ಅನ್ನು ಸೆಟ್ ಮಾಡಿದರೆ, ಅದನ್ನು ಸೆಟ್ ಮಾಡುವ ಮೊದಲು ನಿಮ್ಮ ಸ್ನೇಹಿತರು ಅದನ್ನು ಅನುಮೋದಿಸಬೇಕು. ನೀವು ಮೊದಲ ಬಾರಿಗೆ ಆಯ್ಕೆ ಮಾಡಿದ ಸ್ಥಳಕ್ಕೆ ಬಂದಾಗ ಅಥವಾ ಅಲ್ಲಿಂದ ಹೊರಡುವಾಗ ಅವರು ಅನುಮೋದಿಸುವಂತೆ ಕೇಳುವ ಅಲರ್ಟ್ ಅನ್ನು ಪಡೆಯುತ್ತಾರೆ.

ನಿಮ್ಮ ಸ್ನೇಹಿತರು ಸ್ಥಳದಲ್ಲಿ ಇಲ್ಲದಿರುವಾಗ ಸೂಚನೆ ಪಡೆಯಿರಿ

ನಿಗದಿತ ವೇಳಾಪಟ್ಟಿಯ ಸಮಯದಲ್ಲಿ ನಿಮ್ಮ ಸ್ನೇಹಿತರು ಅಥವಾ ಕುಟುಂಬದ ಸದಸ್ಯರು ನಿರ್ದಿಷ್ಟ ಸ್ಥಳದಲ್ಲಿ ಇರದಿದ್ದರೆ ನೀವು ನೋಟಿಫಿಕೇಷನ್ ಅನ್ನು ಸ್ವೀಕರಿಸಬಹುದು. ಉದಾಹರಣೆಗೆ, ಶಾಲೆಯ ಸಮಯದಲ್ಲಿ ನಿಮ್ಮ ಮಗು ಶಾಲೆಯಲ್ಲಿಲ್ಲದಿದ್ದರೆ ನಿಮಗೆ ಸೂಚನೆ ದೊರೆಯಬಹುದು.

  1. ನಿಮ್ಮ iPadನಲ್ಲಿನ ಹುಡುಕಿ ಆ್ಯಪ್‌ಗೆ ಹೋಗಿ.

  2. ಸ್ಕ್ರೀನ್‌ನ ಕೆಳ ಎಡಭಾಗದಲ್ಲಿರುವ ಜನರು ಎಂಬುದನ್ನು ಟ್ಯಾಪ್ ಮಾಡಿ, ನಂತರ ನೀವು ಯಾವ ವ್ಯಕ್ತಿಯ ಬಗ್ಗೆ ಸೂಚನೆ ಪಡೆಯಲು ಬಯಸುತ್ತೀರೋ ಆ ವ್ಯಕ್ತಿಯ ಹೆಸರನ್ನು ಟ್ಯಾಪ್ ಮಾಡಿ.

  3. ನೋಟಿಫಿಕೇಷನ್‌ಗಳ ಕೆಳಗೆ, ಸೇರಿಸಿ ಅನ್ನು ಟ್ಯಾಪ್ ಮಾಡಿ, ನಂತರ ನನಗೆ ಸೂಚಿಸಿ ಎಂಬುದನ್ನು ಟ್ಯಾಪ್ ಮಾಡಿ.

  4. ಯಾವಾಗ ಎಂಬುದರ ಕೆಳಗೆ, [ನಿಮ್ಮ ಸ್ನೇಹಿತನ ಹೆಸರು] ಇಲ್ಲಿ ಇಲ್ಲದಿರುವಾಗ ಎಂಬುದನ್ನು ಟ್ಯಾಪ್ ಮಾಡಿ.

  5. ಸ್ಥಳವನ್ನು ಆಯ್ಕೆಮಾಡಿ ಅಥವಾ ಹೊಸ ಸ್ಥಳವನ್ನು ರಚಿಸಲು ಮತ್ತು ಸ್ಥಳದ ತ್ರಿಜ್ಯವನ್ನು ಸೆಟ್ ಮಾಡಲು ಹೊಸ ಸ್ಥಳವನ್ನು ಟ್ಯಾಪ್ ಮಾಡಿ.

    ದೊಡ್ಡ ತ್ರಿಜ್ಯದೊಂದಿಗೆ, ನಿಮ್ಮ ಸ್ನೇಹಿತರು ಸ್ಥಳದಲ್ಲಿಯೆ ಇರುವ ಬದಲು, ಆ ಸ್ಥಳದ ಹತ್ತಿರದಲ್ಲಿದ್ದಾಗ ನಿಮಗೆ ಸೂಚಿಸಲಾಗುತ್ತದೆ.

  6. ನಿಮಗೆ ಯಾವಾಗ ಸೂಚಿಸಬೇಕು ಎಂಬುದನ್ನು ಆಯ್ಕೆಮಾಡಿ.

    • ಸಮಯ: ಪ್ರಾರಂಭ ಮತ್ತು ಅಂತ್ಯದ ಸಮಯವನ್ನು ಆಯ್ಕೆಮಾಡಿ.

    • ದಿನಗಳು: ವಾರದ ದಿನಗಳನ್ನು ಆಯ್ಕೆಮಾಡಿ.

  7. ಸೇರಿಸಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ಸರಿ ಎಂಬುದನ್ನು ಟ್ಯಾಪ್ ಮಾಡಿ.

    ಈ ನೋಟಿಫಿಕೇಷನ್ ಅನ್ನು ಸೆಟ್ ಮಾಡುವ ಮೊದಲು ಅದನ್ನು ನಿಮ್ಮ ಸ್ನೇಹಿತರು ಅನುಮೋದಿಸಬೇಕು. ನೋಟಿಫಿಕೇಷನ್‌ಗಳು ಪ್ರಾರಂಭವಾಗುವ ಸಮಯ ಮತ್ತು ದಿನದಂದು ಅನುಮೋದನೆಗಾಗಿ ಕೇಳುವ ಅಲರ್ಟ್ ಒಂದನ್ನು ಅವರು ಪಡೆಯುತ್ತಾರೆ.

ನೀವು ಸೆಟ್ ಮಾಡಿದ ನೋಟಿಫಿಕೇಷನ್ ಅನ್ನು ಬದಲಾಯಿಸಿ ಅಥವಾ ಆಫ್ ಮಾಡಿ

  1. ನಿಮ್ಮ iPadನಲ್ಲಿನ ಹುಡುಕಿ ಆ್ಯಪ್‌ಗೆ ಹೋಗಿ.

  2. ಸ್ಕ್ರೀನ್‌ನ ಕೆಳ ಎಡಭಾಗದಲ್ಲಿರುವ ಜನರು ಎಂಬುದನ್ನು ಟ್ಯಾಪ್ ಮಾಡಿ, ನಂತರ ನೀವು ಯಾರ ನೋಟಿಫಿಕೇಷನ್ ಅನ್ನು ಬದಲಾಯಿಸಲು ಅಥವಾ ಆಫ್ ಮಾಡಲು ಬಯಸುತ್ತೀರೋ ಆ ವ್ಯಕ್ತಿಯ ಹೆಸರನ್ನು ಟ್ಯಾಪ್ ಮಾಡಿ.

    ಇದು ಸ್ನೇಹಿತರ ಬಗ್ಗೆ ನೀವು ಸ್ವೀಕರಿಸುವ ನೋಟಿಫಿಕೇಷನ್ ಆಗಿರಬಹುದು ಅಥವಾ ನಿಮ್ಮ ಸ್ನೇಹಿತರು ನಿಮ್ಮ ಬಗ್ಗೆ ಸ್ವೀಕರಿಸುವ ನೋಟಿಫಿಕೇಷನ್ ಆಗಿರಬಹುದು.

  3. ನೋಟಿಫಿಕೇಷನ್‌ಗಳ ಕೆಳಗೆ, ನೋಟಿಫಿಕೇಷನ್ ಅನ್ನು ಟ್ಯಾಪ್ ಮಾಡಿ.

  4. ಈ ಕೆಳಗಿನವುಗಳಲ್ಲಿ ಯಾವುದಾದರೂ ಒಂದನ್ನು ಮಾಡಿ:

    • ನೋಟಿಫಿಕೇಷನ್ ಅನ್ನು ಬದಲಾಯಿಸಿ: ಯಾವುದೇ ವಿವರಗಳನ್ನು ಬದಲಾಯಿಸಿ, ನಂತರ ಮುಗಿದಿದೆ ಎಂಬುದನ್ನು ಟ್ಯಾಪ್ ಮಾಡಿ.

    • ನೋಟಿಫಿಕೇಷನ್ ಅನ್ನು ಆಫ್ ಮಾಡಿ: ನೋಟಿಫಿಕೇಷನ್ ಡಿಲೀಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ನೋಟಿಫಿಕೇಷನ್ ಡಿಲೀಟ್ ಮಾಡಿ ಎಂಬುದನ್ನು ಮತ್ತೊಮ್ಮೆ ಟ್ಯಾಪ್ ಮಾಡಿ.

ನೀವು ಗರಿಷ್ಠ 25 “ನನಗೆ ತಿಳಿಸಿ” ನೋಟಿಫಿಕೇಷನ್‌ಗಳನ್ನು ರಚಿಸಬಹುದು.

ಗಮನಿಸಿ: ಎರಡು ಅಂಶದ ದೃಢೀಕರಣವನ್ನು ಹೊಂದಿರುವ ಸ್ನೇಹಿತರಿಗಾಗಿ ಮಾತ್ರ ನೀವು ಮರುಕಳಿಸುವ ನೋಟಿಫಿಕೇಷನ್‌ಗಳನ್ನು ರಚಿಸಬಹುದು.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.