iPadನಲ್ಲಿ Safariಯಲ್ಲಿನ ಸೈಡ್‌ಬಾರ್‌ನಲ್ಲಿ ಒಂದಕ್ಕಿಂತ ಹೆಚ್ಚು ಟ್ಯಾಬ್‌ಗಳೊಂದಿಗೆ ಕೆಲಸ ಮಾಡುವುದು

ಸೈಡ್‌ಬಾರ್‌ನಲ್ಲಿ ನೀವು ಏಕಕಾಲದಲ್ಲಿ ಹಲವಾರು ಟ್ಯಾಬ್‌ಗಳೊಂದಿಗೆ ಕೆಲಸ ಮಾಡಬಹುದು.

  1. ನಿಮ್ಮ iPadನಲ್ಲಿನ Safari ಆ್ಯಪ್‌ಗೆ ಹೋಗಿ

  2. ಸೈಡ್‌ಬಾರ್ ಅನ್ನು ತೆರೆಯಲು ಸೈಡ್‌ಬಾರ್ ತೋರಿಸಿ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಸೈಡ್‌ಬಾರ್‌ನಲ್ಲಿ ಟ್ಯಾಬ್ ಒಂದನ್ನು ಒತ್ತಿ ಹಿಡಿದುಕೊಳ್ಳಿ.

  3. ಟ್ಯಾಬ್‌ಗಳನ್ನು ಆಯ್ಕೆಮಾಡಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ನೀವು ಕೆಲಸ ಮಾಡಲು ಬಯಸುವ ಟ್ಯಾಬ್‌ಗಳನ್ನು ಆಯ್ಕೆಮಾಡಿ.

  4. ಆಯ್ಕೆಮಾಡಿದ ಟ್ಯಾಬ್‌ಗಳಲ್ಲಿ ಒಂದನ್ನು ಒತ್ತಿ ಹಿಡಿದುಕೊಳ್ಳಿ, ನಂತರ ಈ ಕೆಳಗಿನ ಯಾವುದನ್ನಾದರೂ ಮಾಡಿ:

    • ಬೇರೆ ಕಡೆ ಪೇಸ್ಟ್ ಮಾಡಲು ಟ್ಯಾಬ್‌ಗಳನ್ನು ಕಾಪಿ ಮಾಡಿ: [x] ಲಿಂಕ್‌ಗಳನ್ನು ಕಾಪಿ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

    • ಟ್ಯಾಬ್‌ಗಳನ್ನು ಅದೇ ಸ್ಥಳದಲ್ಲಿ ಡ್ಯೂಪ್ಲಿಕೇಟ್ ಮಾಡಲು: [x] ಟ್ಯಾಬ್‌ಗಳನ್ನು ಡ್ಯೂಪ್ಲಿಕೇಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

    • ಟ್ಯಾಬ್‌ಗಳನ್ನು ಮತ್ತೊಂದು ವಿಂಡೋಗೆ ಮೂವ್ ಮಾಡಿ: [x] ಟ್ಯಾಬ್‌ಗಳನ್ನು ಹೊಸ ವಿಂಡೋಗೆ ಮೂವ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

    • ಟ್ಯಾಬ್‌ಗಳನ್ನು ಟ್ಯಾಬ್ ಗುಂಪಿಗೆ ಮೂವ್ ಮಾಡಿ: ಟ್ಯಾಬ್ ಗುಂಪಿಗೆ ಮೂವ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ಟ್ಯಾಪ್ ಗುಂಪೊಂದನ್ನು ಟ್ಯಾಪ್ ಮಾಡಿ.

    • ಟ್ಯಾಬ್‌ಗಳನ್ನು ಮುಚ್ಚಿ: [x] ಟ್ಯಾಬ್‌ಗಳನ್ನು ಮುಚ್ಚಿ.

  5. ಮುಗಿದಿದೆ ಬಟನ್ ಅನ್ನು ಟ್ಯಾಪ್ ಮಾಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.