ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPadನಲ್ಲಿನ ಆರೋಗ್ಯ ಆ್ಯಪ್‌ನಲ್ಲಿ ಋತುಚಕ್ರದ ಅಂದಾಜು ದಿನಾಂಕ ಮತ್ತು ಇತಿಹಾಸವನ್ನು ನೋಡುವುದು

ನೀವು ನಿಮ್ಮ ಋತುಚಕ್ರವನ್ನು ಲಾಗ್ ಮಾಡಿದರೆ, ನಿಮ್ಮ ಮುಂದಿನ ಮುಟ್ಟಿನ ಅಂದಾಜು ದಿನಾಂಕವನ್ನು ಅಥವಾ ಫಲವತ್ತತೆಯ ಅವಧಿಯನ್ನು ನೀವು ನೋಡಬಹುದು, ನಿಮ್ಮ ಮುಂದಿನ ಮುಟ್ಟಿನ ದಿನಾಂಕ ಅಥವಾ ಫಲವತ್ತತೆಯ ಅವಧಿಯು ಸಮೀಪಿಸುವಾಗ ನೋಟಿಫಿಕೇಷನ್‌ಗಳನ್ನು ಸ್ವೀಕರಿಸಬಹುದು, ನಿಮ್ಮ ಋತುಚಕ್ರದ ಇತಿಹಾಸದ ಬಗ್ಗೆ ವಿವರಗಳನ್ನು ನೋಡಬಹುದು ಮತ್ತು ಇನ್ನೂ ಹೆಚ್ಚಿನ ಮಾಹಿತಿಗಳನ್ನು ಪಡೆಯಬಹುದು.

ನಿಮ್ಮ ಸೈಕಲ್ ಟೈಮ್‌ಲೈನ್ ಅನ್ನು ನೋಡುವುದು

ಹುಡುಕಾಟ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಸೈಕಲ್ ಟ್ರ್ಯಾಕಿಂಗ್ ಎಂಬುದನ್ನು ಟ್ಯಾಪ್ ಮಾಡಿ.

ಸ್ಕ್ರೀನ್‌ನ ಮೇಲ್ಭಾಗದಲ್ಲಿ, ಟೈಮ್‌ಲೈನ್ ಕೆಳಗಿನ ಐಕಾನ್‌ಗಳನ್ನು ತೋರಿಸುತ್ತದೆ.

ಐಕಾನ್

ವಿವರಣೆ

ತಿಳಿ ಕೆಂಪು ವೃತ್ತ

ಅಂದಾಜು ಮುಟ್ಟಿನ ದಿನ.

ತಿಳಿ ನೀಲಿ ಅಂಡಾಕಾರ

ನಿಮ್ಮ ಫಲವತ್ತತೆಯ ಅವಧಿಯ ಅಂದಾಜು ದಿನ.

ತಿಳಿ ನೇರಳೆ ಬಣ್ಣದ ಅಂಡಾಕಾರ

ನೀವು ಬಹುಶಃ ಅಂಡೋತ್ಪತ್ತಿಯಾದ ದಿನ (Apple Watch Series 8 ಅಥವಾ ನಂತರದ ಆವೃತ್ತಿ ಅಥವಾ Apple Watch ಅಲ್ಟ್ರಾ ಮಾಡಲ್ ಅನ್ನು ನಿಮ್ಮ iPhoneನೊಂದಿಗೆ ಪೇರ್ ಮಾಡಬೇಕಾಗುತ್ತದೆ; ಎಲ್ಲಾ ಪ್ರದೇಶಗಳಲ್ಲಿ ಲಭ್ಯವಿಲ್ಲ).

ಗಾಢ ಕೆಂಪು ವೃತ್ತ

ಮುಟ್ಟಿನ ದಿನವನ್ನು ಲಾಗ್ ಮಾಡಿದ ದಿನ.

ನೇರಳೆ ಬಣ್ಣದ ಡಾಟ್

ನೀವು ಮಾಹಿತಿಯನ್ನು ಸೇರಿಸಿದ ದಿನ (ಉದಾಹರಣೆಗೆ, ತಲೆನೋವು ಅಥವಾ ಸೆಳೆತವನ್ನು ಗಮನಿಸಿರುವುದು).

ಬೇರೆಬೇರೆ ದಿನಗಳನ್ನು ಆಯ್ಕೆ ಮಾಡಲು, ಟೈಮ್‌ಲೈನ್ ಅನ್ನು ಸ್ವೈಪ್ ಮಾಡಿ.

ನಿಮ್ಮ ಅಂದಾಜು ಮುಂದಿನ ಮುಟ್ಟಿನ ದಿನಾಂಕಗಳನ್ನು ಮತ್ತು ನಿಮ್ಮ ವರದಿಯಾದ ಕೊನೆಯ ಮುಟ್ಟಿನ ದಿನಾಂಕಗಳನ್ನು ನೋಡಿ

  1. ನಿಮ್ಮ iPadನಲ್ಲಿ ಆರೋಗ್ಯ ಆ್ಯಪ್‌ಗೆ ಹೋಗಿ.

  2. ಹುಡುಕಾಟ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಸೈಕಲ್ ಟ್ರ್ಯಾಕಿಂಗ್ ಎಂಬುದನ್ನು ಟ್ಯಾಪ್ ಮಾಡಿ.

  3. ನಿಮ್ಮ ಮುಂದಿನ ಮುಟ್ಟು ಯಾವಾಗ ಪ್ರಾರಂಭವಾಗುವ ಸಾಧ್ಯತೆ ಇದೆ ಎಂಬುದನ್ನು ತಿಳಿಯಲು ಹೈಲೈಟ್‌ಗಳು ಎಂಬಲ್ಲಿಗೆ ಸ್ಕ್ರೋಲ್ ಮಾಡಿ.

    ನಿಮಗೆ ಅಂದಾಜು ದಿನಾಂಕ ಕಾಣಿಸದಿದ್ದರೆ, ಹೈಲೈಟ್‌ಗಳು ಎಂಬುದರ ಪಕ್ಕದಲ್ಲಿರುವ ಎಲ್ಲವನ್ನೂ ತೋರಿಸಿ ಎಂಬುದನ್ನು ಟ್ಯಾಪ್ ಮಾಡಿ.

  4. ನಿಮ್ಮ ಕೊನೆಯ ಮುಟ್ಟಿನ ದಿನಾಂಕ ಮತ್ತು ನಿಮ್ಮ ಸಾಮಾನ್ಯ ಋತುಚಕ್ರದ ಅವಧಿಯನ್ನು ನೋಡಲು ಸಾರಾಂಶ ಎಂಬುದಕ್ಕೆ ಸ್ಕ್ರೋಲ್ ಮಾಡಿ.

ನಿಮಗೆ ಮುಟ್ಟಿನ ಅಂದಾಜು ಕಾಣಿಸದಿದ್ದರೆ, ನೀವು ಆಯ್ಕೆಗಳಲ್ಲಿ ಮುಟ್ಟಿನ ಅಂದಾಜುಗಳನ್ನು ಆನ್ ಮಾಡಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.

ನಿಮ್ಮ ಋತುಚಕ್ರದ ಇತಿಹಾಸವನ್ನು ನೋಡಿ

  1. ನಿಮ್ಮ iPadನಲ್ಲಿ ಆರೋಗ್ಯ ಆ್ಯಪ್‌ಗೆ ಹೋಗಿ.

  2. ಹುಡುಕಾಟ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಸೈಕಲ್ ಟ್ರ್ಯಾಕಿಂಗ್ ಎಂಬುದನ್ನು ಟ್ಯಾಪ್ ಮಾಡಿ.

  3. ನಿಮ್ಮ ಕೊನೆಯ ಮೂರು ಋತುಚಕ್ರಗಳ ಸಾರಾಂಶವನ್ನು ನೋಡಲು, ನಿಮ್ಮ ಋತುಚಕ್ರಗಳ ಇತಿಹಾಸ ಎಂಬಲ್ಲಿಗೆ ಸ್ಕ್ರೋಲ್ ಮಾಡಿ.

  4. ಹಿಂದಿನ ಎಲ್ಲಾ ಋತುಚಕ್ರಗಳ ಸಾರಾಂಶಗಳನ್ನು ನೋಡಲು, ಋತುಚಕ್ರವೊಂದನ್ನು ಟ್ಯಾಪ್ ಮಾಡಿ.

    ನಿಮ್ಮ ಋತುಚಕ್ರದ ಇತಿಹಾಸ ಹೊಂದಿರುವ PDF ಅನ್ನು ಕಳುಹಿಸಲು ಅಥವಾ ಸೇವ್ ಮಾಡಲು, PDF ಅನ್ನು ಎಕ್ಸ್‌ಪೋರ್ಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ, ಹಂಚಿಕೊಳ್ಳಿ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಆಯ್ಕೆಯೊಂದನ್ನು ಆರಿಸಿ.

  5. ಋತುಚಕ್ರದ ಕುರಿತ ವಿವರಗಳನ್ನು ನೋಡಲು, ಅದನ್ನು ಟ್ಯಾಪ್ ಮಾಡಿ.

    ಋತುಚಕ್ರಕ್ಕೆ ಸಂಬಂಧಿಸಿದ ಯಾವುದೇ ವಿವರಗಳನ್ನು ಬದಲಾಯಿಸಲು, ಎಡಿಟ್ ಎಂಬುದನ್ನು ಟ್ಯಾಪ್ ಮಾಡಿ.

    ಋತುಚಕ್ರಕ್ಕೆ ಸಂಬಂಧಿಸಿದ ವಿವರಗಳನ್ನು ಹೊಂದಿರುವ PDF ಅನ್ನು ಕಳುಹಿಸಲು ಅಥವಾ ಸೇವ್ ಮಾಡಲು, PDF ಅನ್ನು ಎಕ್ಸ್‌ಪೋರ್ಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ, ಹಂಚಿಕೊಳ್ಳಿ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಆಯ್ಕೆಯೊಂದನ್ನು ಆರಿಸಿ.

ನಿಮ್ಮ ಋತುಚಕ್ರದ ವ್ಯತ್ಯಾಸಕ್ಕೆ ಸಂಬಂಧಿಸಿದ ನೋಟಿಫಿಕೇಷನ್ ಅನ್ನು ನೀವು ಸ್ವೀಕರಿಸಿದರೆ

ನಿಮ್ಮ ಲಾಗ್ ಮಾಡಿರುವ ಋತುಚಕ್ರದ ಇತಿಹಾಸವು ಸಂಭವನೀಯ ಋತುಚಕ್ರದ ವ್ಯತ್ಯಾಸಗಳನ್ನು ತೋರಿಸಿದರೆ, ನೀವು ನೋಟಿಫಿಕೇಷನ್ ಅನ್ನು ಸ್ವೀಕರಿಸಬಹುದು. ಅನಿಯಮಿತ ಮುಟ್ಟು, ವಿರಳವಾದ ಮುಟ್ಟಿನ ಅವಧಿಗಳು, ದೀರ್ಘಕಾಲದ ಮುಟ್ಟಿನ ಅವಧಿಗಳು ಮತ್ತು ನಿರಂತರವಾದ ಕುರುಹುಗಳು ಸಾಮಾನ್ಯ ಋತುಚಕ್ರದ ವ್ಯತ್ಯಾಸಗಳಾಗಿದ್ದು, ಇದು ಒಂದು ಮೂಲಭೂತ ಸ್ಥಿತಿಯನ್ನು ಸೂಚಿಸಬಹುದು ಅಥವಾ ಇತರ ಅಂಶಗಳಿಂದಾಗಿರಬಹುದು.

ನೀವು ನೋಟಿಫಿಕೇಷನ್ ಅನ್ನು ಸ್ವೀಕರಿಸಿದಾಗ, ನಿಮ್ಮ ಲಾಗ್ ಮಾಡಲಾದ ಋತುಚಕ್ರದ ಇತಿಹಾಸವನ್ನು ಪರಿಶೀಲಿಸಲು ಈ ಕೆಳಗಿನವುಗಳನ್ನು ಮಾಡಿ:

  1. ನಿಮ್ಮ iPadನಲ್ಲಿ ಆರೋಗ್ಯ ಆ್ಯಪ್‌ಗೆ ಹೋಗಿ.

  2. ಸಂಭವನೀಯ ಋತುಚಕ್ರದ ವ್ಯತ್ಯಾಸಗಳ ನೋಟಿಫಿಕೇಷನ್‌ನಲ್ಲಿ ಋತುಚಕ್ರದ ಇತಿಹಾಸವನ್ನು ಪರಿಶೀಲಿಸಿ ಎಂಬುದನ್ನು ಟ್ಯಾಪ್ ಮಾಡಿ.

  3. ನಿಮ್ಮ ಋತುಚಕ್ರದ ಇತಿಹಾಸದಲ್ಲಿನ ಡೇಟವನ್ನು ದೃಢೀಕರಿಸಲು, ಸೇರಿಸಲು ಅಥವಾ ಎಡಿಟ್ ಮಾಡಲು ಸ್ಕ್ರೀನ್ ಮೇಲಿನ ಸೂಚನೆಗಳನ್ನು ಅನುಸರಿಸಿ.

ಋತುಚಕ್ರದಲ್ಲಿ ವ್ಯತ್ಯಾಸ ಪತ್ತೆಯಾದರೆ, ಮುಂದೆ ಏನು ಮಾಡಬೇಕೆಂದು ಸ್ಕ್ರೀನ್ ಸೂಚಿಸುತ್ತದೆ.

ನಿಮ್ಮ ಋತುಚಕ್ರದ ಸಾರಾಂಶವನ್ನು ನೋಡುವುದು

ನಿಮ್ಮ ಕೊನೆಯ ಮುಟ್ಟಿನ ಅವಧಿ, ಮುಟ್ಟಿನ ಸಾಮಾನ್ಯ ಅವಧಿ, ಋತುಚಕ್ರದ ಸಾಮಾನ್ಯ ಕಾಲಾವಧಿ, ಪ್ರಸ್ತುತ ಅಂಶಗಳು ಮತ್ತು ಹೆಚ್ಚಿನವುಗಳ ಸಾರಾಂಶವನ್ನು ನೀವು ನೋಡಬಹುದು.

  1. ನಿಮ್ಮ iPadನಲ್ಲಿ ಆರೋಗ್ಯ ಆ್ಯಪ್‌ಗೆ ಹೋಗಿ.

  2. ಹುಡುಕಾಟ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಸೈಕಲ್ ಟ್ರ್ಯಾಕಿಂಗ್ ಎಂಬುದನ್ನು ಟ್ಯಾಪ್ ಮಾಡಿ.

  3. ಕೆಳಕ್ಕೆ ಸ್ಕ್ರೋಲ್ ಮಾಡಿ, ನಂತರ ಸಾರಾಂಶ ಎಂಬುದನ್ನು ಟ್ಯಾಪ್ ಮಾಡಿ.

  4. ನಿಮ್ಮ ಕಳೆದ ವರ್ಷದ ಡೇಟದ ಅಂಕಿಅಂಶಗಳನ್ನು ನೋಡಲು ಸ್ಕ್ರೋಲ್ ಮಾಡಿ.

ಸೈಕಲ್ ಟ್ರ್ಯಾಕಿಂಗ್ ನೋಟಿಫಿಕೇಷನ್‌ಗಳು, ಸೈಕಲ್ ಪ್ರಿಡಿಕ್ಷನ್ ಡಿಸ್‌ಪ್ಲೇಗಳು ಮತ್ತು ಇತರ ಆಯ್ಕೆಗಳನ್ನು ಬದಲಾಯಿಸಿ

ಮುಟ್ಟಿನ ಅವಧಿ, ಫಲವತ್ತತೆ ಮತ್ತು ಋತುಚಕ್ರದ ವ್ಯತ್ಯಾಸಗಳ ನೋಟಿಫಿಕೇಷನ್‌ಗಳನ್ನು ನೀವು ಆಫ್ ಮಾಡಬಹುದು, ಮುಟ್ಟಿನ ಅವಧಿ ಮತ್ತು ಫಲವತ್ತತೆಯ ಅಂದಾಜು ದಿನಗಳನ್ನು ಮರೆಮಾಡಬಹುದು ಮತ್ತು ಇನ್ನೂ ಹೆಚ್ಚಿನ ಚಟುವಟಿಕೆಗಳನ್ನು ನಿರ್ವಹಿಸಬಹುದು. ನೀವು ಇವುಗಳನ್ನು ಯಾವಾಗ ಬೇಕಾದರೂ ಪುನಃ ಆನ್ ಮಾಡಬಹುದು.

  1. ನಿಮ್ಮ iPadನಲ್ಲಿ ಆರೋಗ್ಯ ಆ್ಯಪ್‌ಗೆ ಹೋಗಿ.

  2. ಹುಡುಕಾಟ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಸೈಕಲ್ ಟ್ರ್ಯಾಕಿಂಗ್ ಎಂಬುದನ್ನು ಟ್ಯಾಪ್ ಮಾಡಿ.

  3. ಕೆಳಕ್ಕೆ ಸ್ಕ್ರೋಲ್ ಮಾಡಿ, ಆಯ್ಕೆಗಳು ಎಂಬುದನ್ನು ಟ್ಯಾಪ್ ಮಾಡಿ, ನಂತರ ಆಯ್ಕೆಗಳನ್ನು ಆನ್ ಅಥವಾ ಆಫ್ ಮಾಡಿ.

ನಿಮ್ಮ ಆರೋಗ್ಯ ಡೇಟ ಮತ್ತು ಗೌಪ್ಯತೆಯ ಕುರಿತು

ಆರೋಗ್ಯ ಆ್ಯಪ್‌ನಲ್ಲಿ ನಿಮ್ಮ ಬಗ್ಗೆ ನೀವು ಸೇರಿಸುವ ಮಾಹಿತಿಯು ನಿಮಗೆ ಮಾತ್ರ ಸಂಬಂಧಿಸಿದ್ದು, ಇದನ್ನು ನೀವು ಬಳಸಬಹುದು ಮತ್ತು ಹಂಚಿಕೊಳ್ಳಬಹುದು. ಆರೋಗ್ಯ ಆ್ಯಪ್‌ನಲ್ಲಿ ಯಾವ ಮಾಹಿತಿಯನ್ನು ಸಂಗ್ರಹಿಸಬೇಕು ಮತ್ತು ನಿಮ್ಮ ಡೇಟವನ್ನು ಯಾರೆಲ್ಲಾ ಆ್ಯಕ್ಸೆಸ್ ಮಾಡಬಹುದು ಎಂಬುದನ್ನು ನೀವು ನಿರ್ಧರಿಸಬಹುದು.

ನಿಮ್ಮ iPad ಅನ್ನು Face ID, Touch ID ಅಥವಾ ಪಾಸ್‌ಕೋಡ್ ಮೂಲಕ ಲಾಕ್ ಮಾಡಿರುವಾಗ, ನಿಮ್ಮ ಮೆಡಿಕಲ್ IDಯನ್ನು ಹೊರತುಪಡಿಸಿ ಆರೋಗ್ಯ ಆ್ಯಪ್‌ನಲ್ಲಿರುವ ನಿಮ್ಮ ಎಲ್ಲಾ ಆರೋಗ್ಯ ಮತ್ತು ಫಿಟ್‌ನೆಸ್ ಡೇಟ ಎನ್‌ಕ್ರಿಪ್ಟ್ ಆಗಿರುತ್ತವೆ. iCloudಗೆ ಸಿಂಕ್ ಆಗಿರುವ ಯಾವುದೇ ಆರೋಗ್ಯ ಡೇಟವನ್ನು ವರ್ಗಾವಣೆ ಸಮಯದಲ್ಲಿ ಮತ್ತು Apple ಸರ್ವರ್‌ಗಳಲ್ಲಿ ಎನ್‌ಕ್ರಿಪ್ಟ್ ಮಾಡಲಾಗಿದೆ. ಮತ್ತು ನೀವು ಡಿಫಾಲ್ಟ್ ಎರಡು ಅಂಶದ ದೃಢೀಕರಣ ಮತ್ತು ಪಾಸ್‌ಕೋಡ್‌ನೊಂದಿಗೆ iPadOS, iOS ಮತ್ತು watchOS ಆವೃತ್ತಿಯನ್ನು ಹೊಂದಿದ್ದರೆ (ನೀವು ಸೈಕಲ್ ಟ್ರ್ಯಾಕಿಂಗ್‌ಗಾಗಿ iPhone ಮತ್ತು Apple Watch ಬಳಸುತ್ತಿದ್ದರೆ), ನಿಮ್ಮ ಆರೋಗ್ಯ ಮತ್ತು ಚಟುವಟಿಕೆಯ ಡೇಟವನ್ನು Appleಗೆ ಓದಲು ಸಾಧ್ಯವಾಗದ ರೀತಿಯಲ್ಲಿ ಸಂಗ್ರಹಿಸಲಾಗುತ್ತದೆ.

ಇದರರ್ಥ ನೀವು ಸೈಕಲ್ ಟ್ರ್ಯಾಕಿಂಗ್ ಫೀಚರ್ ಮತ್ತು ಎರಡು ಅಂಶದ ದೃಢೀಕರಣವನ್ನು ಬಳಸುವಾಗ, iCloudಗೆ ಸಿಂಕ್ ಮಾಡಲಾದ ನಿಮ್ಮ ಆರೋಗ್ಯ ಡೇಟ ಎಂಡ್ ಟು ಎಂಡ್ ಎನ್‌ಕ್ರಿಪ್ಟ್ ಆಗಿರುತ್ತದೆ. ಡೇಟವನ್ನು ಡಿಕ್ರಿಪ್ಟ್ ಮಾಡುವ ಯಾವುದೇ ಕೀಯನ್ನು Apple ಹೊಂದಿಲ್ಲದಿರುವುದರಿಂದ ಅದನ್ನು ಓದಲು ಸಾಧ್ಯವಿಲ್ಲ.

* ರಿಟ್ರೋಸ್ಪೆಕ್ಟಿವ್ ಅಂಡೋತ್ಪತ್ತಿ ಅಂದಾಜು ಫೀಚರ್ ಲಭ್ಯತೆಯ ಕುರಿತ ಮಾಹಿತಿಗಾಗಿ, watchOS ಫೀಚರ್ ಲಭ್ಯತೆ ಎಂಬುದನ್ನು ನೋಡಿ.
Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.