ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPadನಲ್ಲಿ ಇತರ ಸ್ಥಳಗಳಲ್ಲಿನ ಹವಾಮಾನವನ್ನು ಪರಿಶೀಲಿಸುವುದು

ವಿಶ್ವದ ಯಾವುದೇ ಸ್ಥಳದ ಹವಾಮಾನವನ್ನು ನೋಡಿ ಮತ್ತು ನಿಮ್ಮ ಪಟ್ಟಿಯಲ್ಲಿ ನೀವು ಸೇವ್ ಮಾಡುವ ಸ್ಥಳಗಳ ಮುನ್ಸೂಚನೆಗಳನ್ನು ತ್ವರಿತವಾಗಿ ಆ್ಯಕ್ಸೆಸ್ ಮಾಡಿ.

ಸ್ಕ್ರೀನ್‌ನ ಎಡಭಾಗದಲ್ಲಿರುವ ಸೈಡ್‌ಬಾರ್ ಅನ್ನು ತೋರಿಸುತ್ತಿರುವ ಹವಾಮಾನ ಆ್ಯಪ್‌ನ ಸ್ಕ್ರೀನ್. ಸೈಡ್‌ಬಾರ್‌ನಲ್ಲಿ ಪ್ರಸ್ತುತ ಸಮಯ, ತಾಪಮಾನ, ಮುನ್ಸೂಚನೆ ಮತ್ತು ಅಧಿಕ ಮತ್ತು ಕಡಿಮೆ ತಾಪಮಾನಗಳನ್ನು ತೋರಿಸುವ ನಗರಗಳ ಪಟ್ಟಿಯಿದೆ. ಸ್ಕ್ರೀನ್‌ನ ಮೇಲ್ಭಾಗದಲ್ಲಿ, ನನ್ನ ಸ್ಥಳವನ್ನು ಆಯ್ಕೆಮಾಡಲಾಗಿದೆ ಮತ್ತು ಸ್ಕ್ರೀನ್‌ನ ಬಲಭಾಗದಲ್ಲಿ ಆ ಸ್ಥಳಕ್ಕೆ ಸಂಬಂಧಿಸಿದ ಹವಾಮಾನ ಮುನ್ಸೂಚನೆ ಮತ್ತು ಪರಿಸ್ಥಿತಿಗಳಿವೆ.

ಮತ್ತೊಂದು ಸ್ಥಳಕ್ಕಾಗಿ ಹುಡುಕುವುದು

  1. ನಿಮ್ಮ iPadನಲ್ಲಿನ ಹವಾಮಾನ ಆ್ಯಪ್‌ಗೆ ಹೋಗಿ.

  2. ಸೈಡ್‌ಬಾರ್‌ನ ಮೇಲ್ಭಾಗದಲ್ಲಿರುವ ಹುಡುಕಾಟದ ಫೀಲ್ಡ್ ಅನ್ನು ಟ್ಯಾಪ್ ಮಾಡಿ, ನಂತರ ನಗರ, ನೆರೆಹೊರೆಯ ಸ್ಥಳ ಅಥವಾ ಸ್ಥಳದ ಹೆಸರನ್ನು ನಮೂದಿಸಿ.

    ನಿಮಗೆ ಸೈಡ್‌ಬಾರ್ ಕಾಣಿಸದಿದ್ದರೆ, ಸೈಡ್‌ಬಾರ್ ತೋರಿಸಿ ಬಟನ್ ಅನ್ನು ಟ್ಯಾಪ್ ಮಾಡಿ.

    ಸಲಹೆ: ಹುಡುಕಾಟದ ಫಲಿತಾಂಶಗಳಲ್ಲಿ ನಿಮ್ಮ ಮನೆ ಮತ್ತು ಕೆಲಸದ ಸ್ಥಳಗಳನ್ನು ನೋಡಲು, ಸೆಟ್ಟಿಂಗ್ಸ್ ಆ್ಯಪ್  ಆ್ಯಪ್‌ಗಳು > ಹವಾಮಾನ ಎಂಬಲ್ಲಿಗೆ ಹೋಗಿ, ನಂತರ ಮನೆ ಮತ್ತು ಕೆಲಸದ ಸ್ಥಳಗಳನ್ನು ಆನ್ ಮಾಡಿ. ಹವಾಮಾನ ಆ್ಯಪ್‌ಗಾಗಿ ಸ್ಥಳ ಸೇವೆಗಳನ್ನು ಆನ್ ಮಾಡಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.

  3. ಮುನ್ಸೂಚನೆಯನ್ನು ತೋರಿಸಲು ಹುಡುಕಾಟ ಫಲಿತಾಂಶಗಳಲ್ಲಿ ಸ್ಥಳವನ್ನು ಟ್ಯಾಪ್ ಮಾಡಿ.

  4. ಈ ಕೆಳಗಿನವುಗಳಲ್ಲಿ ಒಂದನ್ನು ಮಾಡಿ:

    • ನಿಮ್ಮ ಪಟ್ಟಿಗೆ ಸ್ಥಳವನ್ನು ಸೇರಿಸುವುದು: ಸೇರಿಸಿ ಬಟನ್ ಅನ್ನು ಟ್ಯಾಪ್ ಮಾಡಿ.

    • ಸ್ಥಳವನ್ನು ಸೇರಿಸದೆ ಪಟ್ಟಿಗೆ ಹಿಂತಿರುಗಿ: ಮುಚ್ಚಿ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಮುಚ್ಚಿ ಬಟನ್ ಅನ್ನು ಮತ್ತೊಮ್ಮೆ ಟ್ಯಾಪ್ ಮಾಡಿ.

ನಿಮ್ಮ ಪಟ್ಟಿಗೆ ನೀವು ಸೇರಿಸಿದ ಸ್ಥಳಗಳಲ್ಲಿನ ಹವಾಮಾನವನ್ನು ಪರಿಶೀಲಿಸಲು, ಎಡಕ್ಕೆ ಅಥವಾ ಬಲಕ್ಕೆ ಸ್ವೈಪ್ ಮಾಡಿ ಅಥವಾ ಸೈಡ್‌ಬಾರ್ ತೋರಿಸಿ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಸ್ಥಳವನ್ನು ಟ್ಯಾಪ್ ಮಾಡಿ.

ನೀವು ಒಂದೇ Apple ಖಾತೆಗೆ ಸೈನ್ ಇನ್ ಮಾಡಿರುವಾಗ, ನಿಮ್ಮ ಸ್ಥಳಗಳ ಪಟ್ಟಿಯು ನಿಮ್ಮ ಸಾಧನಗಳಾದ್ಯಂತ ಅಪ್ ಟು ಡೇಟ್ ಆಗಿರುತ್ತದೆ.

ಗಮನಿಸಿ: ನೆರೆಹೊರೆಯ ಹುಡುಕಾಟದ ಫಲಿತಾಂಶಗಳು ಎಲ್ಲಾ ಸ್ಥಳಗಳಲ್ಲಿ ಲಭ್ಯವಿಲ್ಲ.

ಹವಾಮಾನ ನಕ್ಷೆಯಿಂದ ಸ್ಥಳವನ್ನು ಸೇರಿಸುವುದು

ನಿಮಗೆ ಮುಖ್ಯವಾದ ಸ್ಥಳಗಳ ಹವಾಮಾನವನ್ನು ತ್ವರಿತವಾಗಿ ಪರಿಶೀಲಿಸಲು ನೀವು ಪಟ್ಟಿಗೆ ಸ್ಥಳಗಳನ್ನು ಸೇರಿಸಬಹುದು.

  1. ನಿಮ್ಮ iPadನಲ್ಲಿನ ಹವಾಮಾನ ಆ್ಯಪ್‌ಗೆ ಹೋಗಿ.

  2. ಹವಾಮಾನ ಮುನ್ಸೂಚನೆ ಮತ್ತು ಪರಿಸ್ಥಿತಿಗಳನ್ನು ನೋಡುವಾಗ, ಹವಾಮಾನ ನಕ್ಷೆಯನ್ನು ಟ್ಯಾಪ್ ಮಾಡಿ, ನಂತರ ಹವಾಮಾನ ನಕ್ಷೆಯ ಸ್ಥಳವನ್ನು ಬದಲಾಯಿಸಿ.

  3. ನೀವು ಸ್ಥಳವನ್ನು ಸೇರಿಸಲು ಬಯಸುವ ಕಡೆ ಒತ್ತಿ ಹಿಡಿದುಕೊಳ್ಳಿ, ನಂತರ ಸೇರಿಸಿ ಬಟನ್ ಅನ್ನು ಟ್ಯಾಪ್ ಮಾಡಿ.

ನಿಮ್ಮ ಪಟ್ಟಿಯಲ್ಲಿನ ಸ್ಥಳಗಳನ್ನು ಮರುಜೋಡಿಸಿ

  1. ನಿಮ್ಮ iPadನಲ್ಲಿನ ಹವಾಮಾನ ಆ್ಯಪ್‌ಗೆ ಹೋಗಿ.

  2. ಸೈಡ್‌ಬಾರ್ ಅನ್ನು ಡಿಸ್‌ಪ್ಲೇ ಮಾಡಲು ಸೈಡ್‌ಬಾರ್ ತೋರಿಸಿ ಬಟನ್ ಅನ್ನು ಟ್ಯಾಪ್ ಮಾಡಿ.

  3. ಸ್ಥಳವನ್ನು ಒತ್ತಿ ಹಿಡಿದುಕೊಳ್ಳಿ, ನಂತರ ಅದನ್ನು ಮೇಲಕ್ಕೆ ಅಥವಾ ಕೆಳಕ್ಕೆ ಮೂವ್ ಮಾಡಿ.

ನಿಮ್ಮ ಪಟ್ಟಿಯಿಂದ ಸ್ಥಳವೊಂದನ್ನು ತೆಗೆದುಹಾಕುವುದು

  1. ನಿಮ್ಮ iPadನಲ್ಲಿನ ಹವಾಮಾನ ಆ್ಯಪ್‌ಗೆ ಹೋಗಿ.

  2. ಸೈಡ್‌ಬಾರ್‌ನಲ್ಲಿರುವ ಸ್ಥಳದ ಮೇಲೆ ಎಡಕ್ಕೆ ಸ್ವೈಪ್ ಮಾಡಿ.

    ನಿಮಗೆ ಸೈಡ್‌ಬಾರ್ ಕಾಣಿಸದಿದ್ದರೆ, ಸೈಡ್‌ಬಾರ್ ತೋರಿಸಿ ಬಟನ್ ಅನ್ನು ಟ್ಯಾಪ್ ಮಾಡಿ.

  3. ಡಿಲೀಟ್ ಮಾಡಿ ಬಟನ್ ಅನ್ನು ಟ್ಯಾಪ್ ಮಾಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.