ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

ನಿಮ್ಮ iPad ಕ್ಯಾಮರಾ ಬಳಸಿ QR ಕೋಡ್ ಸ್ಕ್ಯಾನ್ ಮಾಡಿ

ವೆಬ್‌ಸೈಟ್‌ಗಳು, ಆ್ಯಪ್‌ಗಳು, ಕೂಪನ್‌ಗಳು, ಟಿಕೆಟ್‌ಗಳು ಮತ್ತು ಹೆಚ್ಚಿನವುಗಳಿಗಾಗಿ ಕ್ವಿಕ್ ರೆಸ್ಪಾನ್ಸ್ (QR) ಕೋಡ್‌ಗಳನ್ನು ಸ್ಕ್ಯಾನ್ ಮಾಡಲು ನೀವು ಕ್ಯಾಮರಾ ಅಥವಾ ಕಂಟ್ರೋಲ್ ಸೆಂಟರ್ ಅನ್ನು ಬಳಸಬಹುದು.

QR ಕೋಡ್ ಸ್ಕ್ಯಾನ್ ಮಾಡಲು ಕ್ಯಾಮರಾವನ್ನು ಬಳಸುವುದು

  1. ನಿಮ್ಮ iPadನಲ್ಲಿ ಕ್ಯಾಮರಾ ಕ್ಯಾಮರಾ ತೆರೆಯಿರಿ.

  2. ಫೋಟೋ ಮೋಡ್‌ನಲ್ಲಿ, ಕ್ಯಾಮರಾ ಫ್ರೇಮ್ ಒಳಗೆ QR ಕೋಡ್ ಕಾಣಿಸಿಕೊಳ್ಳುವಂತೆ iPad ಅನ್ನು ಇರಿಸಿ.

  3. ಸ್ಕ್ರೀನ್‌ನ ಕೆಳಭಾಗದಲ್ಲಿ ಕಾಣಿಸಿಕೊಳ್ಳುವ ಲಿಂಕ್ ಅನ್ನು ಟ್ಯಾಪ್ ಮಾಡಿ.

QR ಕೋಡ್ ಸ್ಕ್ಯಾನ್ ಮಾಡಲು ಕಂಟ್ರೋಲ್ ಸೆಂಟರ್ ಅನ್ನು ಬಳಸುವುದು

  1. ನಿಮ್ಮ iPadನಲ್ಲಿ ಕಂಟ್ರೋಲ್ ಸೆಂಟರ್ ಅನ್ನು ತೆರೆಯಿರಿ.

  2. ನಿಮಗೆ ಸ್ಕ್ಯಾನ್ ಕೋಡ್ ಕಂಟ್ರೋಲ್ ಕೋಡ್ ಸ್ಕ್ಯಾನ್ ಮಾಡಿ ಬಟನ್ ಕಾಣಿಸದಿದ್ದರೆ, ಅದನ್ನು ಕಂಟ್ರೋಲ್ ಸೆಂಟರ್‌ಗೆ ಸೇರಿಸಿ (ಕಂಟ್ರೋಲ್‌ಗಳನ್ನು ಕಸ್ಟಮೈಸ್ ಮಾಡಿ ಅನ್ನು ನೋಡಿ).

  3. ಕೋಡ್ ಸ್ಕ್ಯಾನ್ ಮಾಡಿ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಸ್ಕ್ರೀನ್ ಮೇಲೆ ಕೋಡ್ ಕಾಣಿಸಿಕೊಳ್ಳುವಂತೆ iPad ಅನ್ನು ಇರಿಸಿ.

    ಸಲಹೆ: ಹೆಚ್ಚು ಬೆಳಕನ್ನು ಒದಗಿಸಲು ಫ್ಲ್ಯಾಶ್‌ಲೈಟ್ ಅನ್ನು ಟ್ಯಾಪ್ ಮಾಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.