iPadನಲ್ಲಿನ ಸಂದೇಶ ಆ್ಯಪ್‌ನಲ್ಲಿ ಜನರ ಸಮೀಕ್ಷೆ ಮಾಡುವುದು

ಏನನ್ನು ತಿನ್ನಬೇಕು, ಯಾವ ಚಲನಚಿತ್ರವನ್ನು ನೋಡಬೇಕು, ಯಾವ ಸ್ಥಳಕ್ಕೆ ಪ್ರಯಾಣಿಸಬೇಕು, ಯಾವಾಗ ಭೇಟಿಯಾಗಬೇಕು ಮತ್ತು ಇನ್ನೂ ಹೆಚ್ಚಿನದನ್ನು ನಿರ್ಧರಿಸಲು ನೀವು ಯಾವುದೇ iMessage ಸಂಭಾಷಣೆಯಲ್ಲಿ ಸಮೀಕ್ಷೆಯನ್ನು ಕಳುಹಿಸಬಹುದು. ಸಂಭಾಷಣೆಯಲ್ಲಿರುವ ಪ್ರತಿಯೊಬ್ಬರೂ ಆಯ್ಕೆಗಳನ್ನು ನೀಡಬಹುದು ಮತ್ತು ವೋಟ್‌ಗಳು ಬರುತ್ತಿರುವುದನ್ನು ವೀಕ್ಷಿಸಬಹುದು.

ಗಮನಿಸಿ: ಸಮೀಕ್ಷೆಯನ್ನು ಪ್ರಾರಂಭಿಸಲು, ನೋಡಲು ಅಥವಾ ವೋಟ್ ಮಾಡಲು ನೀವು iOS 26, iPadOS 26, macOS Tahoe, watchOS 26, visionOS 26, ಅಥವಾ ನಂತರದ ಆವೃತ್ತಿಗಳಲ್ಲಿ iMessage ಅನ್ನು ಬಳಸಬೇಕು.

ಸಂದೇಶ ಆ್ಯಪ್‌ನಲ್ಲಿನ ಸಮೀಕ್ಷೆ.

ಸಮೀಕ್ಷೆಯನ್ನು ಪ್ರಾರಂಭಿಸುವುದು

  1. ನಿಮ್ಮ iPadನಲ್ಲಿರುವ ಸಂದೇಶ ಆ್ಯಪ್‌ಗೆ ಹೋಗಿ.

  2. ಸಂಭಾಷಣೆಯಲ್ಲಿ, ಸೇರಿಸಿ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಸಮೀಕ್ಷೆಗಳು ಎಂಬುದನ್ನು ಟ್ಯಾಪ್ ಮಾಡಿ.

  3. ಆಯ್ಕೆಗಳನ್ನು ಸೇರಿಸಲು ಪ್ರತಿ ಸಾಲನ್ನು ಟ್ಯಾಪ್ ಮಾಡಿ. ಒಂದು ಸಮೀಕ್ಷೆ ಗರಿಷ್ಠ 12 ಆಯ್ಕೆಗಳನ್ನು ಹೊಂದಿರಬಹುದು.

  4. ಕಳುಹಿಸಿ ಬಟನ್ ಅನ್ನು ಟ್ಯಾಪ್ ಮಾಡಿ.

ಸಲಹೆ: ಸಮೀಕ್ಷೆಗಳಿಗಾಗಿ ಸಲಹೆಗಳನ್ನು ಪಡೆಯಲು Apple Intelligence* ಆನ್ ಮಾಡಿ.

ಸಮೀಕ್ಷೆಯಲ್ಲಿ ವೋಟ್ ಮಾಡುವುದು

  1. ನಿಮ್ಮ iPadನಲ್ಲಿರುವ ಸಂದೇಶ ಆ್ಯಪ್‌ಗೆ ಹೋಗಿ.

  2. ಸಮೀಕ್ಷೆ ಇರುವ ಸಂಭಾಷಣೆಯನ್ನು ತೆರೆಯಿರಿ.

  3. ನಿಮ್ಮ ವೋಟ್ ಅನ್ನು ಸೇರಿಸಲು ಆಯ್ಕೆಯನ್ನು ಟ್ಯಾಪ್ ಮಾಡಿ. ನಿಮ್ಮ ವೋಟ್ ಅನ್ನು ತೆಗೆದುಹಾಕಲು ಮತ್ತೊಮ್ಮೆ ಟ್ಯಾಪ್ ಮಾಡಿ. ನೀವು ಯಾವುದಕ್ಕೂ ವೋಟ್ ಮಾಡದೇ ಇರಬಹುದು ಅಥವಾ ಎಲ್ಲಾ ಆಯ್ಕೆಗಳಿಗೆ ವೋಟ್ ಮಾಡಬಹುದು.

ಸಮೀಕ್ಷೆಗೆ ಆಯ್ಕೆಯನ್ನು ಸೇರಿಸುವುದು

ಸಮೀಕ್ಷೆಯಲ್ಲಿ ಭಾಗವಹಿಸುವ ಯಾರಾದರೂ ಅದಕ್ಕೆ ಆಯ್ಕೆಯನ್ನು ಸೇರಿಸಬಹುದು.

  1. ನಿಮ್ಮ iPadನಲ್ಲಿರುವ ಸಂದೇಶ ಆ್ಯಪ್‌ಗೆ ಹೋಗಿ.

  2. ಸಮೀಕ್ಷೆ ಇರುವ ಸಂಭಾಷಣೆಯನ್ನು ತೆರೆಯಿರಿ.

  3. ಆಯ್ಕೆಯನ್ನು ಸೇರಿಸಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ಮತ್ತೊಂದು ಆಯ್ಕೆಯನ್ನು ನಮೂದಿಸಿ.

  4. ಸಮೀಕ್ಷೆಗೆ ಆಯ್ಕೆಯನ್ನು ಸೇರಿಸಲು ಕಳುಹಿಸಿ ಬಟನ್ ಅನ್ನು ಟ್ಯಾಪ್ ಮಾಡಿ.

    ಗಮನಿಸಿ: ವೋಟ್‌ಗಳಿಲ್ಲದೆ ಆಯ್ಕೆಗಳನ್ನು ಸೇರಿಸಲಾಗುತ್ತದೆ. ನೀವು ಸೇರಿಸುವ ಯಾವುದೇ ಆಯ್ಕೆಗಾಗಿ ವೋಟ್ ಮಾಡಲು ಟ್ಯಾಪ್ ಮಾಡಿ.

ಸಮೀಕ್ಷೆಯ ಫಲಿತಾಂಶಗಳನ್ನು ಪರಿಶೀಲಿಸುವುದು

ಜನರು ಹೇಗೆ ವೋಟ್ ಮಾಡಿದ್ದಾರೆ ಅಥವಾ ಇನ್ನೂ ವೋಟ್ ಮಾಡದವರು ಯಾರು ಎಂಬುದನ್ನು ನೀವು ನೋಡಬಹುದು.

  1. ನಿಮ್ಮ iPadನಲ್ಲಿರುವ ಸಂದೇಶ ಆ್ಯಪ್‌ಗೆ ಹೋಗಿ.

  2. ಸಮೀಕ್ಷೆ ಇರುವ ಸಂಭಾಷಣೆಯನ್ನು ತೆರೆಯಿರಿ.

  3. ಸಮೀಕ್ಷೆ ಎಂಬುದನ್ನು ಒತ್ತಿ ಹಿಡಿದುಕೊಳ್ಳಿ, ನಂತರ ಸಮೀಕ್ಷೆಯ ವಿವರಗಳು ಎಂಬುದನ್ನು ಟ್ಯಾಪ್ ಮಾಡಿ.

*Apple Intelligence ಈ ಕೆಳಗಿನ ಭಾಷೆಗಳಿಗೆ ಬೆಂಬಲದೊಂದಿಗೆ ಬೀಟಾದಲ್ಲಿ ಲಭ್ಯವಿದೆ: ಇಂಗ್ಲಿಷ್, ಡ್ಯಾನಿಶ್, ಡಚ್, ಫ್ರೆಂಚ್, ಜರ್ಮನ್, ಇಟಾಲಿಯನ್, ನಾರ್ವೇಜಿಯನ್, ಪೋರ್ಚುಗೀಸ್, ಸ್ಪ್ಯಾನಿಷ್, ಸ್ವೀಡಿಷ್, ಟರ್ಕಿಶ್, ಚೈನೀಸ್ (ಸರಳೀಕೃತ), ಚೈನೀಸ್ (ಸಾಂಪ್ರದಾಯಿಕ), ಜಾಪನೀಸ್, ಕೊರಿಯನ್ ಮತ್ತು ವಿಯೆಟ್ನಾಮೀಸ್. ಕೆಲವು ಫೀಚರ್‌ಗಳು ಎಲ್ಲಾ ಭಾಷೆಗಳು ಅಥವಾ ಪ್ರದೇಶಗಳಲ್ಲಿ ಲಭ್ಯವಿಲ್ಲದಿರಬಹುದು. ಭಾಷೆ ಮತ್ತು ಫೀಚರ್ ಲಭ್ಯತೆ ಮತ್ತು ಸಿಸ್ಟಂ ಅವಶ್ಯಕತೆಗಳ ಕುರಿತ ಹೆಚ್ಚಿನ ಮಾಹಿತಿಗಾಗಿ, Apple Intelligence ಅನ್ನು ಪಡೆಯುವುದು ಹೇಗೆ? ಎಂಬ Apple ಬೆಂಬಲ ಲೇಖನವನ್ನು ನೋಡಿ.
Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.