iPadನಲ್ಲಿ ಮಾರ್ಗ ನಿರ್ದೇಶನಗಳನ್ನು ಪಡೆಯಲು Siriಯನ್ನು ಬಳಸುವುದು

ಪ್ರಯಾಣದ ಮಾರ್ಗ ನಿರ್ದೇಶನಗಳನ್ನು ಪಡೆಯಲು, ಟ್ರಾಫಿಕ್ ಘಟನೆಗಳನ್ನು ವರದಿ ಮಾಡಲು, ನಿಮ್ಮ ಆಗಮನದ ಅಂದಾಜು ಸಮಯವನ್ನು (ETA) ಹಂಚಿಕೊಳ್ಳಲು, ಹತ್ತಿರದ ಆಕರ್ಷಣೆಗಳನ್ನು ಕಂಡುಕೊಳ್ಳಲು ಮತ್ತು ಇನ್ನೂ ಹೆಚ್ಚಿನ ಚಟುವಟಿಕೆಗಳನ್ನು ಮಾಡಲು ನೀವು Siriಯನ್ನು ಕೇಳಬಹುದು. ಸ್ಥಳ ಸೇವೆಗಳನ್ನು ಆನ್ ಮಾಡಿದಾಗ, Siriಯು ನಿಮ್ಮ ಸ್ಥಳವನ್ನು ಆಧರಿಸಿದ ಮಾಹಿತಿಯನ್ನು ಸಹ ಒದಗಿಸುತ್ತದೆ—ಉದಾಹರಣೆಗೆ ನೀವು ನಿರ್ದಿಷ್ಟ ಸ್ಥಳದಿಂದ ಹೊರಟಾಗ ನಿಮಗೆ ಏನನ್ನಾದರೂ ನೆನಪಿಸುವುದು.

ಪ್ರಯಾಣದ ಮಾರ್ಗ ನಿರ್ದೇಶನಗಳನ್ನು ಪಡೆಯುವುದು

ಮಾರ್ಗ ನಿರ್ದೇಶನಗಳನ್ನು ಪಡೆಯಲು ನೀವು Siriಯನ್ನು ಬಳಸಿಕೊಂಡು ರಸ್ತೆಯ ಮೇಲೆ ನಿಮ್ಮ ಗಮನವನ್ನು ಕೇಂದ್ರೀಕರಿಸಬಹುದು. ಮತ್ತು ಮಾತಿನ ರೂಪದಲ್ಲಿರುವ ಟರ್ನ್-ಬೈ-ಟರ್ನ್ ಮಾರ್ಗ ನಿರ್ದೇಶನಗಳನ್ನು ಆಲಿಸುವ ಮೂಲಕ, ನಿಮ್ಮ iPad ಅನ್ನು ನೋಡದೆಯೇ ನೀವು ಡ್ರೈವಿಂಗ್, ಸೈಕ್ಲಿಂಗ್ ಮತ್ತು ನಡಿಗೆಯ ಮಾರ್ಗ ನಿರ್ದೇಶನಗಳನ್ನು ಅನುಸರಿಸಬಹುದು.

Siri: ನಿಮ್ಮ iPadನಲ್ಲಿ, ಈ ರೀತಿ ಏನಾದರೂ Siriಗೆ ಕೇಳಿ, “Give me directions home” ಅಥವಾ ನೀವು ಮಾಡಬಹುದಾದ ವಿನಂತಿಗಳಿಗಾಗಿ ಕೆಳಗಿನ ಐಡಿಯಾಗಳನ್ನು ನೋಡಿ.

ಡ್ರೈವಿಂಗ್ ಮಾರ್ಗ ನಿರ್ದೇಶನಗಳನ್ನು ಪಡೆಯುವುದು

  • “Give me driving directions home”

ನಡಿಗೆಯ ಮಾರ್ಗ ನಿರ್ದೇಶನಗಳನ್ನು ಪಡೆಯುವುದು

  • “Give me walking directions home”

ಸಾರಿಗೆಯ ಮಾರ್ಗ ನಿರ್ದೇಶನಗಳನ್ನು ಪಡೆಯುವುದು

  • “Give me transit directions to the Ferry Building”

ಸೈಕ್ಲಿಂಗ್ ಮಾರ್ಗ ನಿರ್ದೇಶನಗಳನ್ನು ಪಡೆಯುವುದು

  • “Give me cycling directions home”

ಸಲಹೆ: Siriಯನ್ನು ಬಳಸುವಾಗ ಅಥವಾ ನಕ್ಷೆ ಆ್ಯಪ್‌ನಲ್ಲಿ ಹುಡುಕುವಾಗ ನಿಮ್ಮ ಮನೆ, ಕೆಲಸ ಅಥವಾ ಶಾಲೆಯ ವಿಳಾಸಕ್ಕೆ ನೀವು ದಾರಿಗಳನ್ನು ಕೇಳಬಹುದು. ನಿಮ್ಮ ಮನೆ, ಕೆಲಸ ಅಥವಾ ಶಾಲೆಯ ವಿಳಾಸವನ್ನು ಸೆಟ್ ಮಾಡುವುದು ಅನ್ನು ನೋಡಿ.

ಪ್ರಯಾಣಿಸುತ್ತಿರುವಾಗ Siriಯನ್ನು ಬಳಸುವುದು

ನೀವು ಪ್ರಯಾಣಿಸುತ್ತಿರುವಾಗ ಟ್ರಾಫಿಕ್ ಘಟನೆಗಳನ್ನು ವರದಿ ಮಾಡಲು, ಆಯ್ದ ದೇಶಗಳು ಅಥವಾ ಪ್ರದೇಶಗಳಲ್ಲಿ ಟ್ರಾಫಿಕ್ ಘಟನೆಗಳ ಸ್ಥಿತಿಯನ್ನು ವರದಿ ಮಾಡಲು, ನಿಮ್ಮ ಆಗಮನದ ಅಂದಾಜು ಸಮಯವನ್ನು (ETA) ಹಂಚಿಕೊಳ್ಳಲು ಮತ್ತು ಇನ್ನೂ ಹೆಚ್ಚಿನದನ್ನು ಮಾಡಲು ನೀವು Siriಯನ್ನು ಬಳಸಬಹುದು.

Siri: ನಿಮ್ಮ iPadನಲ್ಲಿ, Siriಯನ್ನು ಸಕ್ರಿಯಗೊಳಿಸಿ, ನಂತರ ನೀವು ಮಾಡಬಹುದಾದ ವಿನಂತಿಗಳಿಗಾಗಿ ಕೆಳಗಿನ ಐಡಿಯಾಗಳನ್ನು ನೋಡಿ.

ನಿಮ್ಮ ETA ಅನ್ನು ಹಂಚಿಕೊಳ್ಳಿ

  • “Share my ETA”

ಟ್ರಾಫಿಕ್ ಘಟನೆಗಳನ್ನು ವರದಿ ಮಾಡುವುದು

  • “Report an accident”

  • “There’s something on the road”

  • “There’s a speed check here”

ಅಪಾಯ ಅಥವಾ ಅಪಘಾತದ ಸ್ಥಿತಿಯ ಕುರಿತು ವರದಿ ಮಾಡುವುದು

  • “The hazard is gone”

  • “Clear the accident”

ನೀವು ತಲುಪುವ ಮುನ್ನವೇ ಮಾರ್ಗ ನಿರ್ದೇಶನಗಳನ್ನು ಕೊನೆಗೊಳಿಸುವುದು

  • “Stop navigating”

ಸಮೀಪದ ಆಕರ್ಷಣೆಗಳು, ರೆಸ್ಟೋರೆಂಟ್‌ಗಳು ಮತ್ತು ಸೇವೆಗಳನ್ನು ಹುಡುಕುವುದು

Siri: ನಿಮ್ಮ iPadನಲ್ಲಿ, Siriಯನ್ನು ಸಕ್ರಿಯಗೊಳಿಸಿ, ನಂತರ ನೀವು ಮಾಡಬಹುದಾದ ವಿನಂತಿಗಳಿಗಾಗಿ ಕೆಳಗಿನ ಐಡಿಯಾಗಳನ್ನು ನೋಡಿ.

  • “Find coffee near me”

  • “Find a gas station”

  • “Find a charging station”

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.