ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPadನಲ್ಲಿ ಸ್ಕ್ರೀನ್ ಮೇಲಿನ ಚಲನೆಯನ್ನು ಕಸ್ಟಮೈಸ್ ಮಾಡುವುದು

ನೀವು ಸ್ಕ್ರೀನ್‌ನಲ್ಲಿನ ಕೆಲವು ಎಲಿಮೆಂಟ್‌ಗಳ ಚಲನೆಯನ್ನು ಕಸ್ಟಮೈಸ್ ಮಾಡಬಹುದು, ಉದಾಹರಣೆಗೆ:

  • ವಾಲ್‌ಪೇಪರ್, ಆ್ಯಪ್‌ಗಳು ಮತ್ತು ಅಲರ್ಟ್‌ಗಳಿಗಾಗಿ ಚಲನೆಯ ಎಫೆಕ್ಟ್‌ಗಳು

  • ಸ್ಕ್ರೀನ್ ರೂಪಾಂತರಗಳು

  • Siri ಆ್ಯನಿಮೇಶನ್‌ಗಳು

  • ಟೈಪಿಂಗ್ ಸ್ವಯಂಪೂರ್ಣಗೊಳಿಸುವಿಕೆ

  • ಸಂದೇಶ ಆ್ಯಪ್‌ನಲ್ಲಿನ ಆ್ಯನಿಮೇಟೆಡ್ ಫುಲ್-ಸ್ಕ್ರೀನ್ ಮತ್ತು ಬಬಲ್ ಎಫೆಕ್ಟ್‌ಗಳು

  • ವೆಬ್ ಮತ್ತು ಆ್ಯಪ್‌ಗಳಲ್ಲಿನ ಆ್ಯನಿಮೇಟೆಡ್ ಚಿತ್ರಗಳು

ಸ್ಕ್ರೀನ್ ಮೇಲಿನ ಚಲನೆಯನ್ನು ಕಸ್ಟಮೈಸ್ ಮಾಡಿ

  1. ನಿಮ್ಮ iPadನಲ್ಲಿ ಸೆಟ್ಟಿಂಗ್ಸ್ ಆ್ಯಪ್‌ಗೆ  ಹೋಗಿ.

  2. ಆ್ಯಕ್ಸೆಸಬಿಲಿಟಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ಚಲನೆ ಎಂಬುದನ್ನು ಟ್ಯಾಪ್ ಮಾಡಿ.

  3. ಈ ಕೆಳಗಿನವುಗಳಲ್ಲಿ ಯಾವುದಾದರೂ ಒಂದನ್ನು ಮಾಡಿ:

    • ಮೋಷನ್ ಅನ್ನು ಕಡಿಮೆ ಮಾಡಿ: ಆನ್ ಮಾಡಿ. (ಆಫ್ ಆಗಿರುವಾಗ, ನೀವು ಹೆಚ್ಚಿನ ಚಲನೆಯನ್ನು ನೋಡುತ್ತೀರಿ, ಉದಾಹರಣೆಗೆ, Liquid Glassನ ಫ್ಲೂಯಿಡ್ ಮಾರ್ಫಿಂಗ್ ಎಫೆಕ್ಟ್‌ಗಳು.)

    • ವಾಹನ ಚಲನೆಯ ಸೂಚನೆಗಳು: ಆನ್ ಮಾಡಿ. ಪ್ಯಾಟರ್ನ್, ಬಣ್ಣ ಮತ್ತು ಗೋಚರತೆಯನ್ನು ಒಳಗೊಂಡಂತೆ ನೀವು ಸೂಚನೆಗಳ ಗೋಚರತೆಯನ್ನು ಸಹ ಕಸ್ಟಮೈಸ್ ಮಾಡಬಹುದು. (ಆನ್ ಆಗಿರುವಾಗ, ಸ್ಕ್ರೀನ್‌ನ ಮೇಲಿನ ಚಲನೆಯನ್ನು ಕಡಿಮೆ ಮಾಡಲು ಅಥವಾ ನಿಲ್ಲಿಸಲು ಡಾಟ್‌ಗಳು ಸ್ಕ್ರೀನ್‌ನ ಮೇಲೆ ಕಾಣಿಸಿಕೊಳ್ಳುತ್ತವೆ ಮತ್ತು ಮೂವ್ ಆಗುತ್ತವೆ.)

    • ಆ್ಯನಿಮೇಟೆಡ್ ಚಿತ್ರಗಳನ್ನು ಸ್ವಯಂ-ಪ್ಲೇ ಮಾಡಿ: ಆಫ್ ಮಾಡಿ. (ಆನ್ ಆಗಿರುವಾಗ, ಸಂದೇಶ ಆ್ಯಪ್ ಮತ್ತು Safariಯಲ್ಲಿ ಕ್ಷಿಪ್ರ ಆ್ಯನಿಮೇಟೆಡ್ ಚಿತ್ರಗಳು ಮತ್ತು GIFಗಳಂತಹ ಚಲಿಸುವ ಎಲಿಮೆಂಟ್‌ಗಳು ಸ್ವಯಂಚಾಲಿತವಾಗಿ ಪ್ಲೇ ಆಗುತ್ತವೆ.)

    • ವೀಡಿಯೊ ಪ್ರಿವ್ಯೂಗಳನ್ನು ಸ್ವಯಂ-ಪ್ಲೇ ಮಾಡಿ: ಆಫ್ ಮಾಡಿ. (ಆನ್ ಆಗಿರುವಾಗ, ಇದು App Store ರೀತಿಯ ಆ್ಯಪ್‌ಗಳಿಗೆ ವೀಡಿಯೊ ಪ್ರಿವ್ಯೂಗಳನ್ನು ಸ್ವಯಂಚಾಲಿತವಾಗಿ ಪ್ಲೇ ಮಾಡಲು ಅನುಮತಿಸುತ್ತದೆ.)

    • ಸಂದೇಶದ ಎಫೆಕ್ಟ್‌ಗಳನ್ನು ಸ್ವಯಂ-ಪ್ಲೇ ಮಾಡಿ: ಆಫ್ ಮಾಡಿ. (ಆನ್ ಆಗಿರುವಾಗ, ಸಂದೇಶ ಆ್ಯಪ್ ಸ್ವಯಂಚಾಲಿತವಾಗಿ ಫುಲ್ ಸ್ಕ್ರೀನ್ ಎಫೆಕ್ಟ್‌ಗಳನ್ನು ಪ್ಲೇ ಮಾಡುತ್ತದೆ. ನೀವು ಈ ಸೆಟ್ಟಿಂಗ್ ಅನ್ನು ಆಫ್ ಮಾಡಿದ್ದರೂ, ಸಂದೇಶ ಬಬಲ್ ಕೆಳಗಿನ ‘ಮತ್ತೆ ಪ್ಲೇ ಮಾಡಿ’ ಎಂಬುದನ್ನು ಟ್ಯಾಪ್ ಮಾಡುವ ಮೂಲಕ ನೀವು ಹಸ್ತಚಾಲಿತವಾಗಿ ಎಫೆಕ್ಟ್‌ಗಳನ್ನು ಪ್ಲೇ ಮಾಡಬಹುದು.)

    • ಬ್ಲಿಂಕ್ ಆಗದ ಕರ್ಸರ್‌ಗೆ ಆದ್ಯತೆ ನೀಡಿ: ಆನ್ ಮಾಡಿ. (ನೀವು ಟೈಪ್ ಮಾಡುತ್ತಿರುವ ಇನ್ಸರ್ಷನ್ ಪಾಯಿಂಟ್‌ನಲ್ಲಿ ಕಾಣಿಸುವ ಲಂಬ ಬಾರ್ ಬ್ಲಿಂಕ್ ಆಗುವುದನ್ನು ನಿಲ್ಲಿಸಿ. ನೀವು ಬ್ರೇಲ್ ಡಿಸ್‌ಪ್ಲೇ ಹೊಂದಿರುವ iPad ಅನ್ನು ಬಳಸುತ್ತಿದ್ದರೆ, ಡಿಸ್‌ಪ್ಲೇಯಲ್ಲಿರುವ ಕರ್ಸರ್ ಇಂಡಿಕೇಟರ್ ಕೂಡ ಬ್ಲಿಂಕ್ ಆಗುವುದನ್ನು ನಿಲ್ಲಿಸುತ್ತದೆ.)

    • ಫ್ರೇಮ್ ರೇಟ್ ಅನ್ನು ಮಿತಿಗೊಳಿಸಿ: ಆನ್ ಮಾಡಿ. (ProMotion ಡಿಸ್‌ಪ್ಲೇ ತಂತ್ರಜ್ಞಾನ ಇರುವ ಮಾಡಲ್‌ಗಳಲ್ಲಿ, ಡಿಸ್‌ಪ್ಲೇಯ ಗರಿಷ್ಠ ಫ್ರೇಮ್ ರೇಟ್ ಅನ್ನು ಇದು ಪ್ರತಿ ಸೆಕಂಡ್‌ಗೆ 60 ಫ್ರೇಮ್‌ಗಳಿಗೆ ಮಿತಿಗೊಳಿಸುತ್ತದೆ.

ವೀಡಿಯೊಗಳಲ್ಲಿ ಫ್ಲ್ಯಾಷಿಂಗ್ ಮತ್ತು ಸ್ಟ್ರೋಬಿಂಗ್ ಲೈಟ್‌ಗಳನ್ನು ಕಡಿಮೆ ಮಾಡುವುದು

  1. ನಿಮ್ಮ iPadನಲ್ಲಿ ಸೆಟ್ಟಿಂಗ್ಸ್ ಆ್ಯಪ್‌ಗೆ  ಹೋಗಿ.

  2. ಆ್ಯಕ್ಸೆಸಬಿಲಿಟಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ಡಿಸ್‌ಪ್ಲೇ ಮತ್ತು ಪಠ್ಯದ ಗಾತ್ರ ಎಂಬುದನ್ನು ಟ್ಯಾಪ್ ಮಾಡಿ.

  3. ಫ್ಲ್ಯಾಷಿಂಗ್ ಲೈಟ್‌ಗಳನ್ನು ಡಿಮ್ ಮಾಡಿ ಎಂಬುದನ್ನು ಆನ್ ಮಾಡಿ.

ಆನ್‌ಸ್ಕ್ರೀನ್ ಎಲಿಮೆಂಟ್‌ಗಳ ಬ್ರೈಟ್ ಎಫೆಕ್ಟ್‌ಗಳನ್ನು ಕಡಿಮೆ ಮಾಡಿ

ಕೀಬೋರ್ಡ್‌ನಂತಹ ಕೆಲವು ಆನ್‌ಸ್ಕ್ರೀನ್ ಅಂಶಗಳೊಂದಿಗೆ ಸಂವಹನ ನಡೆಸುವಾಗ ಕಾಣಿಸಿಕೊಳ್ಳಬಹುದಾದ ಹೈಲೈಟ್ ಮಾಡುವಿಕೆ ಮತ್ತು ಫ್ಲ್ಯಾಶ್ ಮಾಡುವಿಕೆ ಎಫೆಕ್ಟ್‌ಗಳನ್ನು ನೀವು ಕಡಿಮೆ ಮಾಡಬಹುದು.

  1. ನಿಮ್ಮ iPadನಲ್ಲಿ ಸೆಟ್ಟಿಂಗ್ಸ್ ಆ್ಯಪ್‌ಗೆ  ಹೋಗಿ.

  2. ಆ್ಯಕ್ಸೆಸಬಿಲಿಟಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ಡಿಸ್‌ಪ್ಲೇ ಮತ್ತು ಪಠ್ಯದ ಗಾತ್ರ ಎಂಬುದನ್ನು ಟ್ಯಾಪ್ ಮಾಡಿ.

  3. ಬ್ರೈಟ್ ಎಫೆಕ್ಟ್‌ಗಳನ್ನು ಕಡಿಮೆ ಮಾಡಿ ಎಂಬದನ್ನು ಆನ್ ಮಾಡಿ.

ನಿರ್ದಿಷ್ಟ ಆ್ಯಪ್‌ಗಳಿಗೆ ಈ ಎಫೆಕ್ಟ್‌ಗಳನ್ನು ಅನ್ವಯಿಸಲು, ನಿರ್ದಿಷ್ಟ ಆ್ಯಪ್‌ಗಳಿಗೆ ವಿಷುವಲ್ ಆ್ಯಕ್ಸೆಸಬಿಲಿಟಿ ಸೆಟ್ಟಿಂಗ್ಸ್ ಕಸ್ಟಮೈಸ್ ಮಾಡಿ ಎಂಬುದನ್ನು ನೋಡಿ.

ಪ್ರಮುಖ ಸೂಚನೆ: ನಿಮ್ಮ iPad ಬೆಂಬಲಿತ ಮೀಡಿಯಾದಲ್ಲಿನ ಫ್ಲ್ಯಾಶ್ಂಗ್ ಅಥವಾ ಸ್ಟ್ರೋಬಿಂಗ್ ಲೈಟ್‌ಗಳನ್ನು ಪತ್ತೆಹಚ್ಚಲು ಆನ್-ಡಿವೈಸ್ ಆಲ್ಗರಿದಮ್ ಅನ್ನು ಬಳಸುತ್ತದೆ ಮತ್ತು ಅವುಗಳನ್ನು ನಿಮ್ಮ iPadನಲ್ಲಿ ನೈಜ ಸಮಯದಲ್ಲಿ ಸ್ವಯಂಚಾಲಿತವಾಗಿ ಡಿಮ್ ಮಾಡುತ್ತದೆ. ಹೆಚ್ಚಿನ ಅಪಾಯದ ಸಂದರ್ಭಗಳಲ್ಲಿ ಅಥವಾ ಯಾವುದೇ ವೈದ್ಯಕೀಯ ಸ್ಥಿತಿಯ ಚಿಕಿತ್ಸೆಗಾಗಿ ಚಲನೆಯ ಸೆಟ್ಟಿಂಗ್ಸ್ ಅನ್ನು ಅವಲಂಬಿಸಬಾರದು.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.