iPadನಲ್ಲಿ ಜರ್ನಲ್‌ನ ಬಳಕೆಯನ್ನು ಪ್ರಾರಂಭಿಸುವುದು

ನಿಮ್ಮ ಅನುಭವಗಳನ್ನು ದಾಖಲಿಸಲು iPadನಲ್ಲಿ ಜರ್ನಲ್ ಆ್ಯಪ್ ಅನ್ನು ಹೇಗೆ ಬಳಸುವುದು ಎಂಬುದನ್ನು ತಿಳಿಯಿರಿ. ನೀವು ಫೋಟೋಗಳು, ಸಂಗೀತ, ಡ್ರಾಯಿಂಗ್‌ಗಳು, ಆಡಿಯೊ ರೆಕಾರ್ಡಿಂಗ್‌ಗಳು ಮತ್ತು ನಿಮ್ಮ ಪ್ರಸ್ತುತ ಮಾನಸಿಕ ಸ್ಥಿತಿಯನ್ನು ಸಹ ಸೇರಿಸಬಹುದು. ನೀವು Apple Pencilನಿಂದ (ಹೊಂದಾಣಿಕೆ ನೋಡಿ) ಅಥವಾ ನಿಮ್ಮ ಬೆರಳಿನಿಂದ ಸ್ಕೆಚ್ ಮಾಡಬಹುದು ಅಥವಾ ನಿಮ್ಮ ನಮೂದುಗಳನ್ನು ಕೈಬರಹದಲ್ಲಿ ಬರೆಯಬಹುದು.

ಜರ್ನಲ್ ಆ್ಯಪ್‌ನ ಸುಸ್ವಾಗತ ಸ್ಕ್ರೀನ್.

ಜರ್ನಲ್ ಅನ್ನು ಸೆಟಪ್ ಮಾಡಿ

ನೀವು ಮೊದಲ ಬಾರಿಗೆ ಜರ್ನಲ್ ಅನ್ನು ತೆರೆದಾಗ, ಸೆಟಪ್ ಮಾಡಲು ಸ್ಕ್ರೀನ್ ಮೇಲಿನ ಸೂಚನೆಗಳನ್ನು ಅನುಸರಿಸಿ. ನೀವು ಒಂದೇ Apple ಖಾತೆಗೆ ಸೈನ್ ಇನ್ ಆಗಿರುವಾಗ, ನೀವು iPhoneನಿಂದ iPadಗೆ ಜರ್ನಲಿಂಗ್ ಸಲಹೆಗಳನ್ನು ಸಿಂಕ್ ಮಾಡಬಹುದು. ಸೆಟ್ಟಿಂಗ್ಸ್ ಎಂಬಲ್ಲಿಗೆ ಹೋಗಿ, ನಂತರ ಗೌಪ್ಯತೆ ಮತ್ತು ಭದ್ರತೆ ಎಂಬುದನ್ನು ಟ್ಯಾಪ್ ಮಾಡಿ. ಜರ್ನಲಿಂಗ್ ಸಲಹೆಗಳು ಎಂಬುದನ್ನು ಟ್ಯಾಪ್ ಮಾಡಿ, ಜರ್ನಲಿಂಗ್ ಸಲಹೆಗಳನ್ನು ಆನ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ, ನಂತರ iPadಗೆ ಸಿಂಕ್ ಆಗಲು ಅನುಮತಿಸಿ ಎಂಬುದನ್ನು ಆನ್ ಮಾಡಿ.

ನಮೂದನ್ನು ರಚಿಸಲು ಜರ್ನಲ್ ಆ್ಯಪ್‌ನಲ್ಲಿನ ಸ್ಕ್ರೀನ್.

ಜರ್ನಲ್ ನಮೂದನ್ನು ರಚಿಸಿ

ಸ್ಕ್ರೀನ್‌ನ ಮೇಲ್ಭಾಗದಲ್ಲಿರುವ ನಮೂದು ರಚಿಸಿ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಬರೆಯಲು ಪ್ರಾರಂಭಿಸಿ ಎಂಬುದನ್ನು ಟ್ಯಾಪ್ ಮಾಡಿ. ಡ್ರಾಯಿಂಗ್ ಅನ್ನು ಸೇರಿಸಲು ಡ್ರಾಯಿಂಗ್ ಅನ್ನು ಸೇರಿಸಿ ಬಟನ್ ಅನ್ನು ಟ್ಯಾಪ್ ಮಾಡಿ.

ಮೇಲಿನ ಬಲಭಾಗದಲ್ಲಿ ಹುಡುಕಾಟ ಬಟನ್ ಜೊತೆಗೆ ಜರ್ನಲ್ ನಮೂದುಗಳನ್ನು ತೋರಿಸುವ ಜರ್ನಲ್ ಆ್ಯಪ್‌ನ ಸ್ಕ್ರೀನ್.

ನಿಮ್ಮ ಜರ್ನಲ್ ನಮೂದುಗಳನ್ನು ಪರಿಶೀಲಿಸಿ

ಹಿಂದಿನ ನಮೂದುಗಳನ್ನು ನೋಡಲು ನಿಮ್ಮ ಜರ್ನಲ್‌ನಲ್ಲಿ ಸ್ಕ್ರೋಲ್ ಮಾಡಿ. ನಿರ್ದಿಷ್ಟ ಪ್ರಕಾರದ ನಮೂದುಗಳನ್ನು ಮಾತ್ರ ನೋಡಲು, ಹುಡುಕಾಟ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಫೋಟೋಗಳು ಅಥವಾ ಡ್ರಾಯಿಂಗ್‌ಗಳಂತಹ ವರ್ಗವನ್ನು ಆಯ್ಕೆಮಾಡಿ ಅಥವಾ ನೀವು ಹುಡುಕುತ್ತಿರುವ ಪಠ್ಯವನ್ನು ಟೈಪ್ ಮಾಡಿ.

ನಿಮ್ಮ ಜರ್ನಲ್ ಅನ್ನು ಅನ್‌ಲಾಕ್ ಮಾಡುವುದಕ್ಕಾಗಿ ನಿಮಗೆ Touch ID ಬಳಸುವಂತೆ ಕೇಳುವ ಜರ್ನಲ್ ಆ್ಯಪ್‌ನ ಸ್ಕ್ರೀನ್.

ನಿಮ್ಮ ಜರ್ನಲ್ ಅನ್ನು ಖಾಸಗಿಯಾಗಿ ಇರಿಸಿ

Face ID, Touch ID ಅಥವಾ ನಿಮ್ಮ ಪಾಸ್‌ಕೋಡ್ ಮೂಲಕ ನೀವು ಮಾತ್ರ ಆ್ಯಕ್ಸೆಸ್ ಮಾಡಲು ಸಾಧ್ಯವಾಗುವಂತೆ ನಿಮ್ಮ ಜರ್ನಲ್ ಅನ್ನು ರಕ್ಷಿಸಿ.

ಇನ್ನಷ್ಟು ತಿಳಿದುಕೊಳ್ಳಲು ಬಯಸುವಿರಾ?

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.