ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

ನಿಮ್ಮ iPadನಿಂದ Macನಲ್ಲಿ ಸ್ಕೆಚ್‌ಗಳು, ಫೋಟೋಗಳು ಮತ್ತು ಸ್ಕ್ಯಾನ್‌ಗಳನ್ನು ಸೇರಿಸುವುದು

ಕಂಟಿನ್ಯುಯಿಟಿ ಕ್ಯಾಮರಾ ಮತ್ತು ಕಂಟಿನ್ಯುಯಿಟಿ ಸ್ಕೆಚ್ ಫೀಚರ್‌ಗಳ ಮೂಲಕ, ನಿಮ್ಮ ಸಮೀಪದಲ್ಲಿರುವ iPad ಅನ್ನು ಬಳಸಿಕೊಂಡು ನೀವು ಸ್ಕೆಚ್ ಬಿಡಿಸಬಹುದು, ಫೋಟೋ ತೆಗೆದುಕೊಳ್ಳಬಹುದು ಅಥವಾ ಡಾಕ್ಯುಮಂಟ್ ಅನ್ನು ಸ್ಕ್ಯಾನ್ ಮಾಡಬಹುದು ಹಾಗೂ ಅದನ್ನು ಕೂಡಲೇ ನಿಮ್ಮ Macನಲ್ಲಿ, ನಿಮಗೆ ಅದು ಎಲ್ಲಿರಬೇಕೋ ನಿಖರವಾಗಿ ಅಲ್ಲೇ ಕಾಣಿಸುವಂತೆ ಮಾಡಬಹುದು. ಉದಾಹರಣೆಗೆ ಈಮೇಲ್‌ನಲ್ಲಿ, ಟಿಪ್ಪಣಿಯಲ್ಲಿ ಅಥವಾ ಫೋಲ್ಡರ್‌ನಲ್ಲಿ. ಕಂಟಿನ್ಯುಯಿಟಿ ಮಾರ್ಕಪ್ ಅನ್ನು ಬಳಸಿಕೊಂಡು ನಿಮ್ಮ iPad ಮೂಲಕ ನಿಮ್ಮ Macನಲ್ಲಿ ನೀವು ಫೈಲ್ ಅನ್ನು ಮಾರ್ಕಪ್ ಸಹ ಮಾಡಬಹುದು.

iPad ಮತ್ತು Mac ಜೊತೆಗೆ ನೀವು ಕಂಟಿನ್ಯುಯಿಟಿ ಕ್ಯಾಮರಾ, ಕಂಟಿನ್ಯುಯಿಟಿ ಸ್ಕೆಚ್ ಮತ್ತು ಕಂಟಿನ್ಯುಯಿಟಿ ಮಾರ್ಕಪ್ ಅನ್ನು ಬಳಸಬಹುದು.

ಟಿಪ್ಪಣಿಯಲ್ಲಿ ಸ್ಕೆಚ್ ಕಾಣಿಸಿಕೊಳ್ಳುವ Macನ ಪಕ್ಕದಲ್ಲಿ, iPad ಸ್ಕೆಚ್ ಅನ್ನು ತೋರಿಸುತ್ತಿದೆ.

ನೀವು ಪ್ರಾರಂಭಿಸುವ ಮೊದಲು

ಈ ಕೆಳಗಿನವುಗಳನ್ನು ಖಚಿತಪಡಿಸಿಕೊಳ್ಳಿ:

ನೀವು VPN ಅನ್ನು ಬಳಸುತ್ತಿದ್ದರೆ, ಅದರ ಕಾನ್ಫಿಗರೇಶನ್ ಸ್ಥಳೀಯ ನೆಟ್‌ವರ್ಕಿಂಗ್ ಅನ್ನು ತಡೆಯುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ, ಏಕೆಂದರೆ ಇದು ಕೆಲವು ಕಂಟಿನ್ಯುಯಿಟಿ ಫೀಚರ್‌ಗಳಿಗೆ ಅಡ್ಡಿಯಾಗಬಹುದು.

ಫೋಟೋ ಅಥವಾ ಸ್ಕ್ಯಾನ್ ಅನ್ನು ಎಲ್ಲಿ ಸೇರಿಸಲಾಗಿದೆ ಎಂಬುದರ ಆಧಾರದ ಮೇಲೆ, ನೀವು ಅದನ್ನು ಗುರುತು ಮಾಡಬಹುದು ಅಥವಾ ಅದನ್ನು ಕ್ರಾಪ್ ಮಾಡುವುದು ಅಥವಾ ಫಿಲ್ಟರ್ ಅನ್ನು ಅನ್ವಯಿಸುವಂತಹ ಇತರ ಅಂಶಗಳನ್ನು ಸರಿಹೊಂದಿಸಬಹುದು.

ನಿಮ್ಮ iPadನಿಂದ ಸ್ಕೆಚ್, ಫೋಟೋ ಅಥವಾ ಸ್ಕ್ಯಾನ್ ಅನ್ನು ಸೇರಿಸುವುದು

ನಿಮ್ಮ iPadನಲ್ಲಿ ನೀವು ಸ್ಕೆಚ್ ಬಿಡಿಸಬಹುದು ಮತ್ತು ಕಂಟಿನ್ಯುಯಿಟಿ ಸ್ಕೆಚ್ ಮೂಲಕ ಅದು ನಿಮ್ಮ Macನಲ್ಲಿ ಕಾಣಿಸುವಂತೆ ಮಾಡಬಹುದು ಅಥವಾ ನಿಮ್ಮ iPadನಲ್ಲಿ ಫೋಟೋ ತೆಗೆದುಕೊಳ್ಳಬಹುದು ಅಥವಾ ಡಾಕ್ಯುಮಂಟ್ ಸ್ಕ್ಯಾನ್ ಮಾಡಬಹುದು ಮತ್ತು ಕಂಟಿನ್ಯುಯಿಟಿ ಕ್ಯಾಮರಾ ಮೂಲಕ ಅದು ನಿಮ್ಮ Macನಲ್ಲಿ ಕಾಣಿಸುವಂತೆ ಮಾಡಬಹುದು.

  1. ನಿಮ್ಮ Macನಲ್ಲಿ, ನೀವು ಸ್ಕೆಚ್ ಅಥವಾ ಫೋಟೋ ಸೇರಿಸಲು ಬಯಸುವ ಕಡೆ ಕಂಟ್ರೋಲ್-ಕ್ಲಿಕ್ ಮಾಡಿ—ಉದಾಹರಣೆಗೆ, ಟಿಪ್ಪಣಿ ಅಥವಾ ಈಮೇಲ್ ಸಂದೇಶದಂತಹ ತೆರೆದ ವಿಂಡೋದಲ್ಲಿ.

    ನೀವು Finder ವಿಂಡೋದಲ್ಲಿ ಡೆಸ್ಕ್‌ಟಾಪ್ ಅಥವಾ ಫೋಲ್ಡರ್ ಅನ್ನು ಸಹ ಕಂಟ್ರೋಲ್-ಕ್ಲಿಕ್ ಮಾಡಬಹುದು.

  2. ಪಾಪ್-ಅಪ್ ಮೆನುವಿನಿಂದ ಆಯ್ಕೆಯನ್ನು ಆರಿಸಿ.

    ಆಯ್ಕೆಗಳನ್ನು ನೋಡುವ ಮೊದಲು ನೀವು “iPhone ಅಥವಾ iPadನಿಂದ ಸೇರಿಸಿ" ಎಂಬುದನ್ನು ಕ್ಲಿಕ್ ಮಾಡಬೇಕಾಗಬಹುದು.

  3. ಈ ಕೆಳಗಿನವುಗಳಲ್ಲಿ ಯಾವುದಾದರೂ ಒಂದನ್ನು ಮಾಡಿ:

    • ಸ್ಕೆಚ್ ಸೇರಿಸಿ: ನಿಮ್ಮ iPadನಲ್ಲಿ, ನಿಮ್ಮ ಬೆರಳನ್ನು ಬಳಸಿಕೊಂಡು ಸ್ಕೆಚ್ ಬಿಡಿಸಿ.

      iPadನಲ್ಲಿ, ನೀವು Apple Pencil ಅನ್ನು ಸಹ ಬಳಸಬಹುದು.

    • ಫೋಟೋವನ್ನು ತೆಗೆದುಕೊಳ್ಳಿ: ನಿಮ್ಮ iPadನಲ್ಲಿ, ಫೋಟೋ ತೆಗೆದುಕೊಳ್ಳಿ, ನಂತರ ಫೋಟೋ ಬಳಸಿ ಅಥವಾ ಪುನಃ ತೆಗೆದುಕೊಳ್ಳಿ ಎಂಬುದನ್ನು ಟ್ಯಾಪ್ ಮಾಡಿ.

    • ಡಾಕ್ಯುಮಂಟ್ ಅನ್ನು ಸ್ಕ್ಯಾನ್ ಮಾಡಿ: ನಿಮ್ಮ iPadನಲ್ಲಿ, ಡಾಕ್ಯುಮಂಟ್ ಒಂದನ್ನು ಸ್ಕ್ಯಾನ್ ಮಾಡಿ. ನಿಮ್ಮ iPad ಡಾಕ್ಯುಮಂಟ್‌ನ ಅಂಚುಗಳನ್ನು ಪತ್ತೆಹಚ್ಚುತ್ತದೆ ಮತ್ತು ಚಿತ್ರದ ಯಾವುದೇ ವಕ್ರತೆಯನ್ನು ಸ್ವಯಂಚಾಲಿತವಾಗಿ ಸರಿಪಡಿಸುತ್ತದೆ. ಸ್ಕ್ಯಾನ್‌ನಲ್ಲಿ ಸೇರಿಸಲಾದ ಪ್ರದೇಶವನ್ನು ಸರಿಹೊಂದಿಸಲು ನೀವು ಬಯಸಿದರೆ, ಫ್ರೇಮ್ ಅಥವಾ ಅದರ ಅಂಚುಗಳನ್ನು ಡ್ರ್ಯಾಗ್ ಮಾಡಿ. ನೀವು ಸಿದ್ಧರಾದಾಗ, ’ಸ್ಕ್ಯಾನ್ ಮಾಡುತ್ತಿರಿ’ ಅಥವಾ ’ಪುನಃತೆಗೆದುಕೊಳ್ಳಿ’ ಅನ್ನು ಟ್ಯಾಪ್ ಮಾಡಿ. ನೀವು ಪೂರ್ಣಗೊಳಿಸುವವರೆಗೆ ನೀವು ಡಾಕ್ಯುಮಂಟ್‌ಗಳನ್ನು ಸ್ಕ್ಯಾನ್ ಮಾಡುವುದನ್ನು ಮುಂದುವರಿಸಬಹುದು, ನಂತರ ಸೇವ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

ಫೋಟೋ ಅಥವಾ ಸ್ಕ್ಯಾನ್ ಅನ್ನು ಎಲ್ಲಿ ಸೇರಿಸಲಾಗಿದೆ ಎಂಬುದರ ಆಧಾರದ ಮೇಲೆ, ನೀವು ಅದನ್ನು ಗುರುತು ಮಾಡಬಹುದು ಅಥವಾ ಅದನ್ನು ಕ್ರಾಪ್ ಮಾಡುವುದು ಅಥವಾ ಫಿಲ್ಟರ್ ಅನ್ನು ಅನ್ವಯಿಸುವಂತಹ ಇತರ ಅಂಶಗಳನ್ನು ಸರಿಹೊಂದಿಸಬಹುದು.

ಗಮನಿಸಿ: ನಿಮ್ಮ iPadನಲ್ಲಿ ನೀವು ತೆಗೆದುಕೊಳ್ಳುವ ಸ್ಯ್ಯಾನ್‌ಗಳನ್ನು ಸಾಧನದಲ್ಲಿ ಸೇವ್ ಮಾಡಲಾಗುವುದಿಲ್ಲ.

ನಿಮ್ಮ Macನಲ್ಲಿ ಫೈಲ್ ಅನ್ನು ಮಾರ್ಕಪ್ ಮಾಡಲು ನಿಮ್ಮ iPad ಅನ್ನು ಬಳಸುವುದು

ನಿಮ್ಮ Macನಲ್ಲಿ ಪಠ್ಯವನ್ನು ಸೇರಿಸಲು, ಡ್ರಾಯಿಂಗ್‌ಗಳನ್ನು ಮಾಡಲು, ತಿರುಗಿಸಲು ಹಾಗೂ ಚಿತ್ರಗಳನ್ನು, PDF ಡಾಕ್ಯುಮಂಟ್‌ಗಳನ್ನು ಮತ್ತು ಇತ್ಯಾದಿಗಳನ್ನು ಕ್ರಾಪ್ ಮಾಡಲು ಕಂಟಿನ್ಯುಯಿಟಿ ಮಾರ್ಕಪ್ ಎಂದು ಕರೆಯಲಾಗುವ ಫೀಚರ್ ಅನ್ನು ಬಳಸುವುದಕ್ಕಾಗಿ ನಿಮ್ಮ iPad ಅನ್ನು ಬಳಸಿ.

  1. ನಿಮ್ಮ Macನಲ್ಲಿ, Finder ಅನ್ನು ತೆರೆಯಲು ಡೆಸ್ಕ್‌ಟಾಪ್ ಅನ್ನು ಕ್ಲಿಕ್ ಮಾಡಿ.

  2. ನೀವು ಮಾರ್ಕಪ್ ಮಾಡಲು ಬಯಸುವ ಫೈಲ್ ಅನ್ನು ಕಂಟ್ರೋಲ್-ಕ್ಲಿಕ್ ಮಾಡಿ, ತ್ವರಿತ ಕ್ರಿಯೆಗಳನ್ನು ಆಯ್ಕೆಮಾಡಿ, ನಂತರ ಮಾರ್ಕಪ್ ಅನ್ನು ಆಯ್ಕೆಮಾಡಿ.

    ಫೈಲ್ ತೆರೆಯುತ್ತದೆ.

  3. ಟೂಲ್‌ಬಾರ್‌ನಲ್ಲಿ, iPad ಬಟನ್ ಅನ್ನು ಕ್ಲಿಕ್ ಮಾಡಿ ಅಥವಾ ಮಾರ್ಕಪ್ ಬಟನ್ ಅನ್ನು ಕ್ಲಿಕ್ ಮಾಡಿ (ಬಟನ್‌ನ ಪಕ್ಕದಲ್ಲಿ ಆ್ಯರೋ ಇರಬಹುದು) ನಂತರ ನಿಮ್ಮ ಸಾಧನವನ್ನು ಆಯ್ಕೆಮಾಡಿ.

  4. ಚಿತ್ರ ಬಿಡಿಸಲು, ಪಠ್ಯ ಅಥವಾ ಆಕಾರಗಳನ್ನು ಸೇರಿಸಲು ಮತ್ತು ಇನ್ನೂ ಹೆಚ್ಚಿನ ಚಟುವಟಿಕೆಗಳನ್ನು ನಿರ್ವಹಿಸಲು ಮಾರ್ಕಪ್ ಟೂಲ್‌ಗಳನ್ನು ಬಳಸಿ.

    iPadನಲ್ಲಿ, ನೀವು Apple Pencil ಅನ್ನು ಸಹ ಬಳಸಬಹುದು.

  5. ನೀವು ಪೂರ್ಣಗೊಳಿಸಿದಾಗ, ನಿಮ್ಮ iPadನಲ್ಲಿ ‘ಮುಗಿದಿದೆ’ ಎಂಬುದನ್ನು ಟ್ಯಾಪ್ ಮಾಡಿ.

  6. ನಿಮ್ಮ ಬದಲಾವಣೆಗಳನ್ನು ಸೇವ್ ಮಾಡಲು, ನಿಮ್ಮ Macನಲ್ಲಿ ‘ಮುಗಿದಿದೆ’ ಎಂಬುದನ್ನು ಕ್ಲಿಕ್ ಮಾಡಿ.

ಕಂಟಿನ್ಯುಯಿಟಿ ಕ್ಯಾಮರಾ, ಕಂಟಿನ್ಯುಯಿಟಿ ಸ್ಕೆಚ್ ಅಥವಾ ಕಂಟಿನ್ಯುಯಿಟಿ ಮಾರ್ಕಪ್ ಕಾರ್ಯನಿರ್ವಹಿಸದಿದ್ದರೆ

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.