ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

ನಿಮ್ಮ iPadನಿಂದ ನಿಮ್ಮ ಇತರೆ Apple ಸಾಧನಗಳಿಗೆ FaceTime ಕರೆಯನ್ನು ವರ್ಗಾಯಿಸುವುದು

ನಿಮ್ಮ iPadನಲ್ಲಿ ನೀವು FaceTime ಕರೆಯನ್ನು ಪ್ರಾರಂಭಿಸಬಹುದು ಮತ್ತು ನೀವು ಅದೇ Apple ಖಾತೆಗೆ ಸೈನ್ ಇನ್ ಮಾಡಿರುವ ಇನ್ನೊಂದು ಸಾಧನಕ್ಕೆ ಕರೆಯನ್ನು ವರ್ಗಾಯಿಸಬಹುದು.

ಕಂಟಿನ್ಯುಯಿಟಿ ಕ್ಯಾಮರಾ ಮತ್ತು ಮೈಕ್ ಮೂಲಕ, ನಿಮ್ಮ Mac ಅಥವಾ Apple TV 4Kಯಲ್ಲಿ FaceTime ಕರೆಗಳಿಗಾಗಿ ನೀವು iPad ಅನ್ನು ವೆಬ್‌ಕ್ಯಾಮ್ ಮತ್ತು ಮೈಕ್ರೋಫೋನ್‌ನಂತೆ ಸಹ ಬಳಸಬಹುದು. Apple TV 4Kನಲ್ಲಿ FaceTime ಬಳಸಿ ಎಂಬುದನ್ನು ನೋಡಿ.

ಗಮನಿಸಿ: ಸೆಟ್ಟಿಂಗ್ಸ್ ಆ್ಯಪ್  > ಆ್ಯಪ್‌ಗಳು > FaceTime ಎಂಬಲ್ಲಿ ತೋರಿಸುವ, ಕರೆಗಾಗಿ ನೀವು ಆಯ್ಕೆಮಾಡಿರುವ ಸಂಪರ್ಕದ ಮಾಹಿತಿಯು ನೀವು ಯಾವ ಸಾಧನಕ್ಕೆ ಕರೆಯನ್ನು ವರ್ಗಾಯಿಸಲು ಬಯಸುತ್ತೀರೋ ಅದರಲ್ಲಿನ ಸೆಟ್ಟಿಂಗ್ಸ್ ಆ್ಯಪ್ > ಆ್ಯಪ್‌ಗಳು > FaceTime ಎಂಬಲ್ಲಿ ಆಯ್ಕೆಮಾಡಿದ ಸಂಪರ್ಕ ಮಾಹಿತಿಗೆ ಹೋಲಿಕೆಯಾಗಬೇಕು.

iPadನಿಂದ iPhone ಅಥವಾ Macಗೆ FaceTime ಕರೆಯನ್ನು ವರ್ಗಾಯಿಸುವುದು

ನಿಮ್ಮ iPadನಲ್ಲಿ FaceTime ಕರೆಯಲ್ಲಿದ್ದಾಗ, ನೀವು ಕರೆಯನ್ನು ನಿಮ್ಮ iPhoneಗೆ (iOS 16 ಅಥವಾ ನಂತರದ ಆವೃತ್ತಿಯ) ಅಥವಾ Macಗೆ(macOS 13 ಅಥವಾ ನಂತರದ ಆವೃತ್ತಿಯ) ವರ್ಗಾಯಿಸಬಹುದು. ನೀವು ಎರಡೂ ಸಾಧನಗಳಲ್ಲಿ ಒಂದೇ Apple ಖಾತೆಗೆ ಸೈನ್ ಇನ್ ಆಗಿರಬೇಕು.

  1. ನಿಮ್ಮ iPadನಲ್ಲಿನ FaceTime ಆ್ಯಪ್‌ನಲ್ಲಿ ಕರೆಯಲ್ಲಿರುವಾಗ, ನಿಮ್ಮ ಇನ್ನೊಂದು ಸಾಧನದಲ್ಲಿ ಈ ಕೆಳಗಿನವುಗಳಲ್ಲಿ ಒಂದನ್ನು ಮಾಡಿ:

    • "ಈ [ಸಾಧನಕ್ಕೆ] ಕರೆಯನ್ನು ಮೂವ್ ಮಾಡಿ” ಎಂಬ ಸಲಹೆಯನ್ನು ಹೊಂದಿರುವ ನೋಟಿಫಿಕೇಷನ್ ಅನ್ನು ಟ್ಯಾಪ್ ಮಾಡಿ.

    • ಸ್ಕ್ರೀನ್‌ನ ಮೇಲ್ಭಾಗದಲ್ಲಿರುವ ವೀಡಿಯೊ Handoff ಬಟನ್ ಅಥವಾ ವೀಡಿಯೊ Handoff ಬಟನ್ ಅನ್ನು ಟ್ಯಾಪ್ ಮಾಡಿ.

  2. ಸ್ವಿಚ್ ಮಾಡಿ ಅಥವಾ ಸೇರಿ ಎಂಬುದನ್ನು ಟ್ಯಾಪ್ ಮಾಡಿ.

    ಕರೆಯು ಹೊಸ ಸಾಧನಕ್ಕೆ ಮೂವ್ ಆಗುತ್ತದೆ. ಮೂಲ ಸಾಧನದಲ್ಲಿ, ಸ್ವಿಚ್ ಬಟನ್ ಜೊತೆಗೆ, ಕರೆಯನ್ನು ಬೇರೆಡೆ ಮುಂದುವರಿಸಲಾಗಿದೆ ಎಂದು ದೃಢೀಕರಿಸುವ ಬ್ಯಾನರ್ ಕಾಣಿಸಿಕೊಳ್ಳುತ್ತದೆ. ನೀವು ಕರೆಯನ್ನು ಮರಳಿ ತರಲು ಬಯಸಿದರೆ ಆ ಸ್ವಿಚ್ ಬಟನ್ ಅನ್ನು ಟ್ಯಾಪ್ ಮಾಡಬಹುದು.

ನಿಮ್ಮ iPadನಿಂದ Apple TV 4Kಗೆ FaceTime ಕರೆಯನ್ನು ವರ್ಗಾಯಿಸುವುದು

ನಿಮ್ಮ iPad ಮತ್ತು Apple TV 4K ಈ ಎರಡೂ ಸಾಧನಗಳಲ್ಲಿ ನೀವು ಒಂದೇ Apple ಖಾತೆಗೆ ಸೈನ್ ಇನ್ ಮಾಡಿರುವಾಗ ನಿಮ್ಮ iPadನಲ್ಲಿ ನೀವು FaceTime ಕರೆಯನ್ನು ಪ್ರಾರಂಭಿಸಿ (ಅಥವಾ ಸ್ವೀಕರಿಸಿ) Apple TV 4K (2ನೇ ಜನರೇಷನ್ ಅಥವಾ ನಂತರದ ಮಾಡಲ್‌ನ) ದೊಡ್ಡ ಸ್ಕ್ರೀನ್‌ಗೆ ಕರೆಯನ್ನು ವರ್ಗಾಯಿಸಬಹುದು. ನೀವು ಕರೆಯನ್ನು ವರ್ಗಾಯಿಸಿದ ನಂತರ, ಅದು Apple TV 4Kಯಲ್ಲಿ ಮುಂದುವರಿಯುತ್ತದೆ, ಜೊತೆಗೆ ಕರೆಯು ಚಾಲ್ತಿಯಲ್ಲಿರುವವರೆಗೆ ನಿಮ್ಮ iPad, Apple TV 4Kಯ ವೆಬ್‌ಕ್ಯಾಮ್ ಮತ್ತು ಮೈಕ್ರೋಫೋನ್‌ನಂತೆ ಕೆಲಸ ಮಾಡುತ್ತದೆ. ಬೆಂಬಲಿತ iPad ಮಾಡಲ್‌ಗಳಲ್ಲಿApple TV 4K (2ನೇ ಜನರೇಷನ್ ಅಥವಾ ನಂತರದ ಆವೃತ್ತಿಗಳಲ್ಲಿ) ಕಂಟಿನ್ಯುಯಿಟಿ ಕ್ಯಾಮರಾ ಲಭ್ಯವಿದೆ.

Apple TV 4Kಯಲ್ಲಿ (2ನೇ ಜನರೇಷನ್) ಕರೆಯನ್ನು ವರ್ಗಾಯಿಸುವುದು ಮತ್ತು ಮುಂದುವರಿಸುವುದು ಹೇಗೆಂಬ ಸೂಚನೆಗಳಿಗಾಗಿ, Apple TV 4Kಯಲ್ಲಿ (2ನೇ ಜನರೇಷನ್ ಅಥವಾ ನಂತರದ ಮಾಡಲ್‌ಗಳಲ್ಲಿ) FaceTime ಬಳಸುವುದು ಎಂಬುದನ್ನು ನೋಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.