ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPadನಲ್ಲಿನ ಸಂದೇಶ ಆ್ಯಪ್‌ನಲ್ಲಿ iMessage ಆ್ಯಪ್‌ಗಳನ್ನು ಬಳಸುವುದು

ಸಂದೇಶ ಆ್ಯಪ್‌ನಿಂದ ಹೊರಹೋಗದೇ ಸಮೀಕ್ಷೆಯನ್ನು ಕಳುಹಿಸುವುದು, ಗೇಮ್ ಒಂದನ್ನು ಆಡುವುದು, ಆಡಿಯೊ ಸಂದೇಶಗಳನ್ನು ರೆಕಾರ್ಡ್ ಮಾಡುವುದು, ಹಾಡುಗಳನ್ನು ಹಂಚಿಕೊಳ್ಳುವುದು ಮತ್ತು ಇನ್ನೂ ಹೆಚ್ಚಿನ ಕ್ರಿಯೆಗಳೆಲ್ಲವೂ iMessage ಆ್ಯಪ್‌ಗಳಿಂದ ಸಾಧ್ಯವಿದೆ. ನಿಮ್ಮ ಲಭ್ಯವಿರುವ ಆ್ಯಪ್‌ಗಳ ಪಟ್ಟಿಯನ್ನು ನೀವು ಕಸ್ಟಮೈಸ್ ಮಾಡಬಹುದು ಅಥವಾ App Storeನಲ್ಲಿ ನೀವು ಕಾಣುವ iMessage ಆ್ಯಪ್‌ಗಳನ್ನು ಸೇರಿಸಬಹುದು.

ಸಂದೇಶ ಆ್ಯಪ್‌ನಲ್ಲಿನ ಸಂಭಾಷಣೆಯಲ್ಲಿ ಸೇರಿಸಿ ಬಟನ್ ಅನ್ನು ಟ್ಯಾಪ್ ಮಾಡಿದ ನಂತರ, ನಿಮ್ಮ ಸಂದೇಶಕ್ಕೆ ಸೇರಿಸಬಹುದಾದ ಫೀಚರ್‌ಗಳ ಪಟ್ಟಿ ಕಾಣಿಸಿಕೊಳ್ಳುತ್ತದೆ.

iMessage ಆ್ಯಪ್‌ಗಳನ್ನು ಮರುವ್ಯವಸ್ಥಿತಗೊಳಿಸಿ

  1. ನಿಮ್ಮ iPadನಲ್ಲಿರುವ ಸಂದೇಶ ಆ್ಯಪ್‌ಗೆ ಹೋಗಿ.

  2. ಸಂಭಾಷಣೆಯಲ್ಲಿ ಸೇರಿಸಿ ಬಟನ್ ಅನ್ನು ಟ್ಯಾಪ್ ಮಾಡಿ.

  3. ಪಟ್ಟಿಯಲ್ಲಿರುವ ಯಾವುದೇ ಆ್ಯಪ್ ಐಕಾನ್ ಸ್ವಲ್ಪ ಕುಗ್ಗುವವರೆಗೆ ಅದನ್ನು ಒತ್ತಿ ಹಿಡಿದುಕೊಳ್ಳಿ, ನಂತರ ಅದನ್ನು ನೀವು ಬಯಸುವ ಸ್ಥಳಕ್ಕೆ ಡ್ರ್ಯಾಗ್ ಮಾಡಿ.

    ಆ್ಯಪ್ ಐಕಾನ್ ಅನ್ನು ಬೇರೊಂದು ಪುಟಕ್ಕೆ ಮೂವ್ ಮಾಡಲು, ಅದನ್ನು ಸ್ಕ್ರೀನ್‌ನ ಮೇಲಿನ ಅಥವಾ ಕೆಳಗಿನ ಅಂಚಿಗೆ ಡ್ರ್ಯಾಗ್ ಮಾಡಿ. ಹೊಸ ಪುಟ ಕಾಣಿಸಿಕೊಳ್ಳಲು ನೀವು ಸ್ವಲ್ಪ ಸಮಯ ಕಾಯಬೇಕಾಗಬಹುದು.

iMessage ಆ್ಯಪ್‌ಗಳನ್ನು ಸೇರಿಸಿ

ಫೋಟೋಗಳು, ವೀಡಿಯೊಗಳು, ಆಡಿಯೊ ಸಂದೇಶಗಳು, ಪಾವತಿಗಳು, ಸ್ಟಿಕ್ಕರ್‌ಗಳು ಮತ್ತು ಇತ್ಯಾದಿಗಳನ್ನು ಕಳುಹಿಸಲು ನೀವು ಬಳಸಬಹುದಾದ iMessage ಆ್ಯಪ್‌ಗಳನ್ನು ಸಂದೇಶ ಆ್ಯಪ್ ಒಳಗೊಂಡಿರುತ್ತದೆ. ಇನ್ನೂ ಹೆಚ್ಚಿನ ಆಯ್ಕೆಗಳಿಗಾಗಿ ನೀವು ಹೆಚ್ಚುವರಿ iMessage ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಬಹುದು.

  1. ನಿಮ್ಮ iPadನಲ್ಲಿರುವ ಸಂದೇಶ ಆ್ಯಪ್‌ಗೆ ಹೋಗಿ.

  2. ಸಂಭಾಷಣೆಯಲ್ಲಿ ಸೇರಿಸಿ ಬಟನ್ ಅನ್ನು ಟ್ಯಾಪ್ ಮಾಡಿ.

  3. iMessageಗಾಗಿ App Store ಅನ್ನು ತೆರೆಯಲು ಸ್ಟೋರ್ ಅನ್ನು ಟ್ಯಾಪ್ ಮಾಡಿ.

  4. ಹೆಚ್ಚಿನ ವಿವರಗಳು ಮತ್ತು ವಿಮರ್ಶೆಗಳನ್ನು ನೋಡಲು ಆ್ಯಪ್ ಒಂದನ್ನು ಟ್ಯಾಪ್ ಮಾಡಿ, ನಂತರ ಈ ಕೆಳಗಿನವುಗಳಲ್ಲಿ ಒಂದನ್ನು ಮಾಡಿ:

    • ಆ್ಯಪ್ ಒಂದನ್ನು ಖರೀದಿಸಿ: ಬೆಲೆಯನ್ನು ಟ್ಯಾಪ್ ಮಾಡಿ. ನಿಮ್ಮ Apple ಖಾತೆಯೊಂದಿಗೆ ಸಂಯೋಜಿಸಲಾದ ವಿಧಾನವನ್ನು ಬಳಸಿಕೊಂಡು ಪಾವತಿಗಳನ್ನು ಮಾಡಲಾಗುತ್ತದೆ.

    • ಉಚಿತ ಆ್ಯಪ್ ಅನ್ನು ಡೌನ್‌ಲೋಡ್ ಮಾಡಿ: ಪಡೆಯಿರಿ ಎಂಬುದನ್ನು ಟ್ಯಾಪ್ ಮಾಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.