iPad ನಿಮ್ಮ ಹೆಸರನ್ನು ಕರೆದಾಗ ನಿಮಗೆ ಅಲರ್ಟ್ ಬರುವಂತೆ ಮಾಡುವುದು

ನೀವು iPad ಅನ್ನು ನಿಮ್ಮ ಹೆಸರಿಗಾಗಿ ನಿರಂತರವಾಗಿ ಆಲಿಸುವಂತೆ ಮತ್ತು ಅದನ್ನು ಗುರುತಿಸಿದಾಗ ನಿಮಗೆ ತಿಳಿಸುವಂತೆ ಮಾಡಬಹುದು. iPad ನಿಮ್ಮ ಹೆಸರನ್ನು ಗುರುತಿಸುವುದಕ್ಕೆ ಸಹಾಯ ಮಾಡಲು ನೀವು ಅಥವಾ ಬೇರೆಯವರು ನಿಮ್ಮ ಹೆಸರನ್ನು ಹೇಗೆ ಹೇಳುತ್ತಾರೆ ಎಂಬುದನ್ನು ನೀವು ರೆಕಾರ್ಡ್ ಸಹ ಮಾಡಬಹುದು.

ಗಮನಿಸಿ: ಹೆಸರು ಗುರುತಿಸುವಿಕೆಯು iPadOS 26 ಮತ್ತು ನಂತರದ ಆವೃತ್ತಿಗಳಲ್ಲಿ ಲಭ್ಯವಿದೆ. ಹೆಸರು ಗುರುತಿಸುವಿಕೆಯು ಇಂಗ್ಲಿಷ್‌ನಲ್ಲಿ ಮಾತ್ರ ಲಭ್ಯವಿದೆ ನಿಮಗೆ ಹಾನಿಯಾಗಬಹುದಾದ ಅಥವಾ ನೀವು ಗಾಯಗೊಳ್ಳಬಹುದಾದ, ಹೆಚ್ಚಿನ ಅಪಾಯವಿರುವ ಅಥವಾ ತುರ್ತು ಸಂದರ್ಭಗಳಲ್ಲಿ ಅಥವಾ ನ್ಯಾವಿಗೇಷನ್‌ಗಾಗಿ ನಿಮ್ಮ ಹೆಸರನ್ನು ಗುರುತಿಸಲು ನಿಮ್ಮ iPad ಅನ್ನು ಅವಲಂಬಿಸಬೇಡಿ.

ಹೆಸರು ಗುರುತಿಸುವಿಕೆಯು ಅದು ಹೆಸರಾಗಿರಬಹುದಾದ ಸೌಂಡ್ ಅನ್ನು ಗುರುತಿಸಿದೆ ಎಂದು iPadನಲ್ಲಿ ನೋಟಿಫಿಕೇಷನ್ ಅನ್ನು ತೋರಿಸಲಾಗುತ್ತದೆ.

ಹೆಸರು ಗುರುತಿಸುವಿಕೆಯನ್ನು ಸೆಟಪ್ ಮಾಡುವುದು

  1. ನಿಮ್ಮ iPadನಲ್ಲಿ ಸೆಟ್ಟಿಂಗ್ಸ್ ಆ್ಯಪ್‌ಗೆ  ಹೋಗಿ.

  2. ಆ್ಯಕ್ಸೆಸಬಿಲಿಟಿ ಎಂಬುದನ್ನು ಟ್ಯಾಪ್ ಮಾಡಿ, ಸೌಂಡ್ ಮತ್ತು ಹೆಸರು ಗುರುತಿಸುವಿಕೆ ಎಂಬುದನ್ನು ಟ್ಯಾಪ್ ಮಾಡಿ, ಹೆಸರು ಗುರುತಿಸುವಿಕೆ ಎಂಬುದನ್ನು ಟ್ಯಾಪ್ ಮಾಡಿ, ನಂತರ ಹೆಸರು ಗುರುತಿಸುವಿಕೆಯನ್ನು ಸೆಟಪ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

  3. ಸ್ಕ್ರೀನ್ ಮೇಲಿನ ಸೂಚನೆಗಳನ್ನು ಅನುಸರಿಸಿ.

ಹೆಸರು ಗುರುತಿಸುವಿಕೆಗೆ ಒಂದಕ್ಕಿಂತ ಹೆಚ್ಚು ಹೆಸರನ್ನು ಸೇರಿಸುವುದು

ನೀವು ಒಂದಕ್ಕಿಂತ ಹೆಚ್ಚು ಹೆಸರುಗಳಿಂದ ನಿಮ್ಮನ್ನು ಗುರುತಿಸಿಕೊಂಡರೆ, iPad ಅನೇಕ ಹೆಸರುಗಳನ್ನು ಗುರುತಿಸುವಂತೆ ಮಾಡಬಹುದು.

  1. ನಿಮ್ಮ iPadನಲ್ಲಿ ಸೆಟ್ಟಿಂಗ್ಸ್ ಆ್ಯಪ್‌ಗೆ  ಹೋಗಿ.

  2. ಆ್ಯಕ್ಸೆಸಬಿಲಿಟಿ ಎಂಬುದನ್ನು ಟ್ಯಾಪ್ ಮಾಡಿ, ಸೌಂಡ್ ಮತ್ತು ಹೆಸರು ಗುರುತಿಸುವಿಕೆ ಎಂಬುದನ್ನು ಟ್ಯಾಪ್ ಮಾಡಿ, ಹೆಸರು ಗುರುತಿಸುವಿಕೆ ಎಂಬುದನ್ನು ಟ್ಯಾಪ್ ಮಾಡಿ, ನಂತರ ಹೆಸರನ್ನು ಸೇರಿಸಿ ಎಂಬುದನ್ನು ಟ್ಯಾಪ್ ಮಾಡಿ.

  3. ಸ್ಕ್ರೀನ್ ಮೇಲಿನ ಸೂಚನೆಗಳನ್ನು ಅನುಸರಿಸಿ.

ಸಲಹೆ: ಹೆಸರು ಗುರುತಿಸುವಿಕೆಯನ್ನು ತ್ವರಿತವಾಗಿ ಆನ್ ಅಥವಾ ಆಫ್ ಮಾಡಲು, ಅದನ್ನು ಕಂಟ್ರೋಲ್ ಸೆಂಟರ್‌ಗೆ ಸೇರಿಸಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.