iPadನಲ್ಲಿ ಕರೆಯನ್ನು ರೆಕಾರ್ಡ್ ಮಾಡಿ ಮತ್ತು ಟ್ರಾನ್ಸ್‌ಕ್ರೈಬ್ ಮಾಡಿ

ಕೆಲವು ದೇಶಗಳು ಮತ್ತು ಪ್ರದೇಶಗಳಲ್ಲಿ, ನೀವು ಇನ್ನೊಬ್ಬ ವ್ಯಕ್ತಿಯೊಂದಿಗೆ ಮಾತನಾಡುವಾಗ ಫೋನ್ ಕರೆಯನ್ನು ರೆಕಾರ್ಡ್ ಮಾಡಬಹುದು. ಆಯ್ದ ಪ್ರದೇಶಗಳು ಮತ್ತು ಭಾಷೆಗಳಲ್ಲಿ, ನೀವು ಕರೆಯ ಟ್ರಾನ್ಸ್‌ಕ್ರಿಪ್ಟ್ ಅನ್ನು ಟಿಪ್ಪಣಿ ಆ್ಯಪ್‌ನಲ್ಲಿ ವೀಕ್ಷಿಸಬಹುದು. iOS ಮತ್ತು iPadOS ಫೀಚರ್ ಲಭ್ಯತೆಯ ವೆಬ್‌ಸೈಟ್ ಅನ್ನು ನೋಡಿ.

ಗಮನಿಸಿ: ಕರೆ ರೆಕಾರ್ಡಿಂಗ್ ಪ್ರಸ್ತುತ ಅಜರ್ಬೈಜಾನ್, ಬಹ್ರೇನ್, ಈಜಿಪ್ಟ್, ಯುರೋಪಿಯನ್ ಒಕ್ಕೂಟ, ಇರಾನ್, ಇರಾಕ್, ಜೋರ್ಡಾನ್, ಕುವೈತ್, ಮೊರಾಕೊ, ನೈಜೀರಿಯಾ, ಓಮನ್, ಪಾಕಿಸ್ತಾನ, ಖತಾರ್, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ತುರ್ಕಿಯೆ, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಯೆಮನ್‌ನಲ್ಲಿ ಲಭ್ಯವಿಲ್ಲ.

ಕರೆಯನ್ನು ರೆಕಾರ್ಡ್ ಮಾಡುವುದು

ನೀವು ಪ್ರಾರಂಭಿಸುವ ಮೊದಲು, ನಿಮ್ಮ ಭಾಷೆ ಮತ್ತು ಪ್ರದೇಶದಲ್ಲಿ ಕರೆ ರೆಕಾರ್ಡಿಂಗ್ ಲಭ್ಯವಿದೆಯೇ ಎಂದು ನೋಡಲು iOS ಮತ್ತು iPadOS ಫೀಚರ್ ಲಭ್ಯತೆ ವೆಬ್‌ಸೈಟ್ ಅನ್ನು ಪರಿಶೀಲಿಸಿ ಮತ್ತು ರೆಕಾರ್ಡ್ ಮಾಡುವುದಕ್ಕೆ ಕರೆಯಲ್ಲಿರುವ ಇತರರು ಒಪ್ಪಿಕೊಳ್ಳುವರೇ ಎಂದು ಖಚಿತಪಡಿಸಿಕೊಳ್ಳಿ.

  1. ನಿಮ್ಮ iPadನಲ್ಲಿ ಫೋನ್ ಆ್ಯಪ್‌ಗೆ ಹೋಗಿ.

  2. ಕರೆ ಮಾಡಿ.

  3. ಕರೆಯ ಸಮಯದಲ್ಲಿ, ಇನ್ನಷ್ಟು ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಕರೆ ರೆಕಾರ್ಡಿಂಗ್ ಎಂಬುದನ್ನು ಟ್ಯಾಪ್ ಮಾಡಿ.

    ಕರೆಯಲ್ಲಿ ಭಾಗವಹಿಸುವ ಇಬ್ಬರಿಗೂ ಕರೆಯನ್ನು ರೆಕಾರ್ಡ್ ಮಾಡಲಾಗುತ್ತಿದೆ ಎನ್ನುವ ಆಡಿಯೊ ನೋಟಿಸ್ ಕೇಳಿಸುತ್ತದೆ.

  4. ರೆಕಾರ್ಡಿಂಗ್ ಅನ್ನು ನಿಲ್ಲಿಸಲು, ನಿಲ್ಲಿಸಿ ಬಟನ್ ಅನ್ನು ಟ್ಯಾಪ್ ಮಾಡಿ ಅಥವಾ ಹ್ಯಾಂಗ್ ಅಪ್ ಮಾಡಿ.

    iPad, ಟಿಪ್ಪಣಿ ಆ್ಯಪ್‌ನಲ್ಲಿರುವ ಕರೆ ರೆಕಾರ್ಡಿಂಗ್‌ಗಳ ಫೋಲ್ಡರ್‌ಗೆ ಕರೆ ರೆಕಾರ್ಡಿಂಗ್‌ಗಳನ್ನು ಸ್ವಯಂಚಾಲಿತವಾಗಿ ಸೇವ್ ಮಾಡುತ್ತದೆ.

  5. ಟಿಪ್ಪಣಿ ಆ್ಯಪ್‌ನಲ್ಲಿ ಕರೆಯನ್ನು ನೋಡಲು, ಸೇವ್ ಮಾಡಲಾದ ಕರೆಯನ್ನು ನೋಡಿ ಎಂಬುದನ್ನು ಟ್ಯಾಪ್ ಮಾಡಿ.

ರೆಕಾರ್ಡ್ ಮಾಡಲಾದ ಕರೆಯನ್ನು ಪ್ಲೇ ಮಾಡುವುದು

  1. ನಿಮ್ಮ iPadನಲ್ಲಿ ಟಿಪ್ಪಣಿ ಆ್ಯಪ್‌ಗೆ ಹೋಗಿ.

  2. ಕರೆ ರೆಕಾರ್ಡಿಂಗ್‌ಗಳ ಫೋಲ್ಡರ್‌ನಲ್ಲಿ ಟಿಪ್ಪಣಿಯನ್ನು ಟ್ಯಾಪ್ ಮಾಡಿ, ನಂತರ ಪ್ಲೇ ಬಟನ್ ಅನ್ನು ಟ್ಯಾಪ್ ಮಾಡಿ.

ಕರೆ ಟ್ರಾನ್ಸ್‌ಕ್ರಿಪ್ಟ್ ಅನ್ನು ನೋಡುವುದು

ಆಯ್ದ ಪ್ರದೇಶಗಳು ಮತ್ತು ಭಾಷೆಗಳಲ್ಲಿ, ನೀವು ಟಿಪ್ಪಣಿ ಆ್ಯಪ್‌ನಲ್ಲಿ ರೆಕಾರ್ಡ್ ಮಾಡಲಾದ ಕರೆಯ ಟ್ರಾನ್ಸ್‌ಕ್ರಿಪ್ಟ್ ಅನ್ನು ನೋಡಬಹುದು. ಟ್ರಾನ್ಸ್‌ಕ್ರಿಪ್ಟ್ ತಕ್ಷಣವೇ ಲಭ್ಯವಿಲ್ಲದಿರಬಹುದು—ಟ್ರಾನ್ಸ್‌ಕ್ರಿಪ್ಶನ್ ಪ್ರಗತಿಯಲ್ಲಿದೆ ಎಂಬ ಸಂದೇಶವನ್ನು ನೀವು ನೋಡಬಹುದು.

ಗಮನಿಸಿ: ಟ್ರಾನ್ಸ್‌ಕ್ರಿಪ್ಶನ್ ಅನ್ನು ಅವಲಂಬಿಸುವ ಮೊದಲು ಅದರ ನಿಖರತೆಯನ್ನು ಪರಿಶೀಲಿಸಿ. ಇದು ಸಂಭಾಷಣೆಯ ಪರಿಪೂರ್ಣ ನಿರೂಪಣೆ ಆಗಿಲ್ಲದಿರಬಹುದು.

  1. ನಿಮ್ಮ iPadನಲ್ಲಿ ಟಿಪ್ಪಣಿ ಆ್ಯಪ್‌ಗೆ ಹೋಗಿ.

  2. ಕರೆ ರೆಕಾರ್ಡಿಂಗ್‌ಗಳ ಫೋಲ್ಡರ್‌ನಲ್ಲಿ ಟಿಪ್ಪಣಿಯೊಂದನ್ನು ಟ್ಯಾಪ್ ಮಾಡಿ, ನಂತರ ಟ್ರಾನ್ಸ್‌ಕ್ರಿಪ್ಟ್ ಮತ್ತು ಸಾರಾಂಶವನ್ನು ತೋರಿಸಿ ಬಟನ್ ಅನ್ನು ಟ್ಯಾಪ್ ಮಾಡಿ.

    ಗಮನಿಸಿ: ಬೆಂಬಲಿತ ಭಾಷೆಗಳಲ್ಲಿ ಮಾತನಾಡುವ ಪದಗಳನ್ನು ಸ್ವಯಂಚಾಲಿತವಾಗಿ ಟ್ರಾನ್ಸ್‌ಕ್ರೈಬ್ ಮಾಡಲಾಗುತ್ತದೆ. ನಿಮಗೆ ಟ್ರಾನ್ಸ್‌ಕ್ರಿಪ್ಟ್ ಕಾಣಿಸದಿದ್ದರೆ, ನಿಮ್ಮ iPad ಕನಿಷ್ಠ ಅವಶ್ಯಕತೆಗಳನ್ನು ಪೂರೈಸುತ್ತಿಲ್ಲ ಅಥವಾ ಬೆಂಬಲಿತ ಭಾಷೆಯನ್ನು ಪತ್ತೆಹಚ್ಚುತ್ತಿಲ್ಲ ಎಂದರ್ಥ.

    ಟ್ರಾನ್ಸ್‌ಕ್ರಿಪ್ಟ್‌ನಲ್ಲಿ, ಪ್ರತಿ ಹೇಳಿಕೆ ಹೇಳಿದವರನ್ನು ಗುರುತಿಸಲಾಗುತ್ತದೆ.

  3. ಟ್ರಾನ್ಸ್‌ಕ್ರಿಪ್ಟ್ ಅನ್ನು ನೋಡುವಾಗ, ನೀವು ಈ ಕೆಳಗಿನವುಗಳಲ್ಲಿ ಯಾವುದಾದರೂ ಒಂದನ್ನು ಮಾಡಬಹುದು:

    • ನಿರ್ದಿಷ್ಟ ಹಂತದಲ್ಲಿ ಆಡಿಯೊವನ್ನು ಪ್ಲೇ ಮಾಡಿ: ನೀವು ಕೇಳಲು ಬಯಸುವ ಪಠ್ಯವನ್ನು ಆಯ್ಕೆಮಾಡಿ.

    • ಟ್ರಾನ್ಸ್‌ಕ್ರಿಪ್ಟ್ ಅನ್ನು ಹುಡುಕಿ: ಇನ್ನಷ್ಟು ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಟ್ರಾನ್ಸ್‌ಕ್ರಿಪ್ಟ್‌ನಲ್ಲಿ ಹುಡುಕಿ ಎಂಬುದನ್ನು ಟ್ಯಾಪ್ ಮಾಡಿ.

    • ಟ್ರಾನ್ಸ್‌ಕ್ರಿಪ್ಟ್ ಅನ್ನು ಕಾಪಿ ಮಾಡಿ: ಇನ್ನಷ್ಟು ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಟಿಪ್ಪಣಿಗೆ ಟ್ರಾನ್ಸ್‌ಕ್ರಿಪ್ಟ್ ಅನ್ನು ಸೇರಿಸಿ ಅಥವಾ ಟ್ರಾನ್ಸ್‌ಕ್ರಿಪ್ಟ್ ಅನ್ನು ಕಾಪಿ ಮಾಡಿ ಎಂಬುದನ್ನು ಆರಿಸಿ.

    • ಆಡಿಯೊ ರೆಕಾರ್ಡಿಂಗ್ ಅನ್ನು ಸೇವ್ ಮಾಡಿ: ಇನ್ನಷ್ಟು ಬಟನ್ ಅನ್ನು ಟ್ಯಾಪ್ ಮಾಡಿ, ಆಡಿಯೊವನ್ನು ಫೈಲ್ಸ್ ಆ್ಯಪ್‌ಗೆ ಸೇವ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ಆಯ್ಕೆಯೊಂದನ್ನು ಆರಿಸಿ.

    • ರೆಕಾರ್ಡಿಂಗ್‌ನ ವೇವ್‌ಫಾರ್ಮ್ ಅನ್ನು ನೋಡಿ: ಟ್ರಾನ್ಸ್‌ಕ್ರಿಪ್ಟ್ ಅನ್ನು ಮರೆಮಾಡಿ ಬಟನ್ ಅನ್ನು ಟ್ಯಾಪ್ ಮಾಡಿ.

Apple Intelligence* ಆನ್ ಆಗಿದ್ದರೆ, ನೀವು ಫೋನ್ ಆ್ಯಪ್‌ನಲ್ಲಿ ರೆಕಾರ್ಡ್ ಮಾಡಿದ ಫೋನ್ ಕರೆಯ ಸಾರಾಂಶವನ್ನು ಪಡೆಯಬಹುದು. ಫೋನ್ ಆ್ಯಪ್‌ನಲ್ಲಿ Apple Intelligence ಅನ್ನು ಬಳಸಿ ಎಂಬುದನ್ನು ನೋಡಿ.

ರೆಕಾರ್ಡ್ ಮಾಡಲಾದ ಕರೆಯನ್ನು ಡಿಲೀಟ್ ಮಾಡುವುದು

  1. ನಿಮ್ಮ iPadನಲ್ಲಿ ಟಿಪ್ಪಣಿ ಆ್ಯಪ್‌ಗೆ ಹೋಗಿ.

  2. ಕರೆ ರೆಕಾರ್ಡಿಂಗ್‌ಗಳ ಫೋಲ್ಡರ್‌ನಲ್ಲಿ ಟಿಪ್ಪಣಿಯೊಂದನ್ನು ಟ್ಯಾಪ್ ಮಾಡಿ, ಇನ್ನಷ್ಟು ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಡಿಲೀಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

    ಗಮನಿಸಿ: ಆಡಿಯೊ ರೆಕಾರ್ಡಿಂಗ್ ಅನ್ನು ಡಿಲೀಟ್ ಮಾಡುವುದರಿಂದ ಟ್ರಾನ್ಸ್‌ಕ್ರಿಪ್ಟ್ ಅನ್ನು ಸಹ ಡಿಲೀಟ್ ಮಾಡುತ್ತದೆ.

ಕರೆ ರೆಕಾರ್ಡಿಂಗ್ ಅನ್ನು ಆಫ್ ಮಾಡುವುದು

ಕರೆ ರೆಕಾರ್ಡಿಂಗ್ ಡಿಫಾಲ್ಟ್ ಆಗಿ ಆನ್ ಆಗಿರುತ್ತದೆ, ಆದರೆ ನೀವು ಅದನ್ನು ಆಫ್ ಮಾಡಬಹುದು.

  1. ನಿಮ್ಮ iPadನಲ್ಲಿ ಸೆಟ್ಟಿಂಗ್ಸ್ ಆ್ಯಪ್‌ಗೆ  ಹೋಗಿ.

  2. ಆ್ಯಪ್‌ಗಳು ಎಂಬುದನ್ನು ಟ್ಯಾಪ್ ಮಾಡಿ, ನಂತರ ಫೋನ್ ಎಂಬುದನ್ನು ಟ್ಯಾಪ್ ಮಾಡಿ.

  3. ಕರೆ ರೆಕಾರ್ಡಿಂಗ್ ಎಂಬುದನ್ನು ಟ್ಯಾಪ್ ಮಾಡಿ, ನಂತರ ಕರೆ ರೆಕಾರ್ಡಿಂಗ್ ಅನ್ನು ಆಫ್ ಮಾಡಿ.

*Apple Intelligence ಈ ಕೆಳಗಿನ ಭಾಷೆಗಳಿಗೆ ಬೆಂಬಲದೊಂದಿಗೆ ಬೀಟಾದಲ್ಲಿ ಲಭ್ಯವಿದೆ: ಇಂಗ್ಲಿಷ್, ಡ್ಯಾನಿಶ್, ಡಚ್, ಫ್ರೆಂಚ್, ಜರ್ಮನ್, ಇಟಾಲಿಯನ್, ನಾರ್ವೇಜಿಯನ್, ಪೋರ್ಚುಗೀಸ್, ಸ್ಪ್ಯಾನಿಷ್, ಸ್ವೀಡಿಷ್, ಟರ್ಕಿಶ್, ಚೈನೀಸ್ (ಸರಳೀಕೃತ), ಚೈನೀಸ್ (ಸಾಂಪ್ರದಾಯಿಕ), ಜಾಪನೀಸ್, ಕೊರಿಯನ್ ಮತ್ತು ವಿಯೆಟ್ನಾಮೀಸ್. ಕೆಲವು ಫೀಚರ್‌ಗಳು ಎಲ್ಲಾ ಭಾಷೆಗಳು ಅಥವಾ ಪ್ರದೇಶಗಳಲ್ಲಿ ಲಭ್ಯವಿಲ್ಲದಿರಬಹುದು. ಭಾಷೆ ಮತ್ತು ಫೀಚರ್ ಲಭ್ಯತೆ ಮತ್ತು ಸಿಸ್ಟಂ ಅವಶ್ಯಕತೆಗಳ ಕುರಿತ ಹೆಚ್ಚಿನ ಮಾಹಿತಿಗಾಗಿ, Apple Intelligence ಅನ್ನು ಪಡೆಯುವುದು ಹೇಗೆ? ಎಂಬ Apple ಬೆಂಬಲ ಲೇಖನವನ್ನು ನೋಡಿ.
Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.