ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPadನಲ್ಲಿ ಕುಟುಂಬದ ಸದಸ್ಯರೊಂದಿಗೆ ಸ್ಥಳಗಳನ್ನು ಹಂಚಿಕೊಳ್ಳಿ ಮತ್ತು ಕಳೆದುಹೋಗಿರುವ ಅವರ ಸಾಧನಗಳನ್ನು ಪತ್ತೆಹಚ್ಚಿ

ಕುಟುಂಬ ಹಂಚಿಕೆಯ ಮೂಲಕ, ನಿಮ್ಮ ಕುಟುಂಬ ಹಂಚಿಕೆ ಗುಂಪಿನ ಸದಸ್ಯರೊಂದಿಗೆ ನಿಮ್ಮ ಸ್ಥಳವನ್ನು ನೀವು ಹಂಚಿಕೊಳ್ಳಬಹುದು ಮತ್ತು ಕಳೆದುಹೋದ ಸಾಧನಗಳನ್ನು ಹುಡುಕಲು ಅವರಿಗೆ ಸಹಾಯ ಮಾಡಬಹುದು. ಕುಟುಂಬದ ವ್ಯವಸ್ಥಾಪಕರು ಕುಟುಂದ ಹಂಚಿಕೆ ಸೆಟ್ಟಿಂಗ್ಸ್‌ನಲ್ಲಿ ಸ್ಥಳ ಹಂಚಿಕೆಯನ್ನು ಸೆಟಪ್ ಮಾಡಿದಾಗ, ನಂತರ ಸೇರಿಸಲಾದ ಯಾವುದೇ ಹೊಸ ಸದಸ್ಯರನ್ನು ಒಳಗೊಂಡಂತೆ ಕುಟುಂಬದ ಪ್ರತಿಯೊಬ್ಬರೊಂದಿಗೂ ವ್ಯವಸ್ಥಾಪಕರ ಸ್ಥಳವನ್ನು ಸ್ವಯಂಚಾಲಿತವಾಗಿ ಹಂಚಿಕೊಳ್ಳಲಾಗುತ್ತದೆ. ನಂತರ, ಕುಟುಂಬದ ಸದಸ್ಯರು ತಮ್ಮ ಸ್ಥಳವನ್ನು ಹಂಚಿಕೊಳ್ಳಬೇಕೋ ಬೇಡವೋ ಎಂಬುದನ್ನು ಆಯ್ಕೆಮಾಡಬಹುದು.

ನಿಮ್ಮ ಸ್ಥಳವನ್ನು ಕುಟುಂಬದ ಸದಸ್ಯರೊಂದಿಗೆ ಹಂಚಿಕೊಳ್ಳಿ

ನಿಮ್ಮ ಕುಟುಂಬದ ಜೊತೆ ನೀವು ಸ್ಥಳಗಳನ್ನು ಹಂಚಿಕೊಂಡಾಗ, ಅವರು ನಿಮ್ಮ ಸ್ಥಳವನ್ನು ಹುಡುಕಿ ಆ್ಯಪ್‌ನಲ್ಲಿ ನೋಡಬಹುದು. ಕುಟುಂಬದ ಸದಸ್ಯರು ತಮ್ಮ ಸ್ಥಳಗಳನ್ನು ಬದಲಾಯಿಸಿದಾಗ ಸಹ ನೀವು ಸೂಚನೆ ಪಡೆಯಬಹುದು—ಉದಾಹರಣೆಗೆ, ಶಾಲೆಯ ಸಮಯದಲ್ಲಿ ಮಗು ಶಾಲೆಯಿಂದ ಹೊರಟುಹೋದರೆ.

  1. ಸೆಟ್ಟಿಂಗ್ಸ್ > ಕುಟುಂಬ > ಸ್ಥಳ ಹಂಚಿಕೆ ಎಂಬಲ್ಲಿಗೆ ಹೋಗಿ.

  2. ನಿಮ್ಮ ಸ್ಥಳವನ್ನು ನೀವು ಯಾವ ಕುಟುಂಬದ ಸದಸ್ಯರೊಂದಿಗೆ ಹಂಚಿಕೊಳ್ಳಲು ಬಯಸುತ್ತೀರೋ ಅವರಿಗಾಗಿ ಸ್ಥಳ ಹಂಚಿಕೊಳ್ಳುವಿಕೆಯನ್ನು ಆನ್ ಮಾಡಿ.

    ನಿಮ್ಮ ಸ್ಥಳವನ್ನು ನೀವು ಹಂಚಿಕೊಳ್ಳಲು ಬಯಸುವ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗಾಗಿ ನೀವು ಈ ಹಂತವನ್ನು ಪುನರಾವರ್ತಿಸಬಹುದು. ಕುಟುಂಬದ ಪ್ರತಿ ಸದಸ್ಯರು, ನಿಮ್ಮ ಸ್ಥಳವನ್ನು ನೀವು ಹಂಚಿಕೊಳ್ಳುತ್ತಿದ್ದೀರಿ ಎಂಬ ಸಂದೇಶವನ್ನು ಸ್ವೀಕರಿಸುತ್ತಾರೆ ಮತ್ತು ಅವರು ತಮ್ಮ ಸ್ಥಳವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಆಯ್ಕೆ ಮಾಡಿಕೊಳ್ಳಬಹುದು.

    ಕುಟುಂಬದ ಯಾವುದೇ ಸದಸ್ಯರೊಂದಿಗೆ ನಿಮ್ಮ ಸ್ಥಳವನ್ನು ಹಂಚಿಕೊಳ್ಳುವುದನ್ನು ನೀವು ಯಾವಾಗ ಬೇಕಾದರೂ ನಿಲ್ಲಿಸಬಹುದು.

  3. ನಂತರ ಸೇರಿಕೊಳ್ಳುವ ಹೊಸ ಸದಸ್ಯರೊಂದಿಗೆ ನಿಮ್ಮ ಸ್ಥಳವನ್ನು ಹಂಚಿಕೊಳ್ಳಲು ನೀವು ಬಯಸಿದರೆ, ಸ್ವಯಂಚಾಲಿತವಾಗಿ ಸ್ಥಳವನ್ನು ಹಂಚಿಕೊಳ್ಳಿ ಎಂಬುದನ್ನು ಆನ್ ಮಾಡಿ.

ಗಮನಿಸಿ: ಸ್ಕ್ರೀನ್ ಟೈಮ್ ಆನ್ ಆಗಿರುವ ಮಕ್ಕಳು ಮತ್ತು ಹದಿಹರೆಯದವರಿಗೆ ತಮ್ಮ ಸ್ವಂತ ಸ್ಥಳ ಹಂಚಿಕೆ ಸೆಟ್ಟಿಂಗ್ಸ್ ಅನ್ನು ಬದಲಾಯಿಸಲು ಸಾಧ್ಯವಾಗದಿರಬಹುದು.

ನಿಮ್ಮ ಸ್ಥಳವನ್ನು ಹಂಚಿಕೊಳ್ಳಲು, ನೀವು ಸೆಟ್ಟಿಂಗ್ಸ್ > ಗೌಪ್ಯತೆ ಮತ್ತು ಭದ್ರತೆ ಎಂಬಲ್ಲಿ ಸ್ಥಳ ಸೇವೆಗಳನ್ನು ಆನ್ ಮಾಡಿರಬೇಕು. ನೀವು ಹಂಚಿಕೊಳ್ಳುವ ಸ್ಥಳದ ಮಾಹಿತಿಯನ್ನು ನಿಯಂತ್ರಿಸಿ ಎಂಬುದನ್ನು ನೋಡಿ.

ಕುಟುಂಬದ ಸದಸ್ಯರ ಸಾಧನವನ್ನು ಪತ್ತೆಮಾಡಿ

ನಿಮ್ಮ ಕುಟುಂಬ ಹಂಚಿಕೆ ಗುಂಪಿನ ಸದಸ್ಯರೊಂದಿಗೆ ನೀವು ನಿಮ್ಮ ಸ್ಥಳವನ್ನು ಹಂಚಿಕೊಂಡ ನಂತರ, ಅವರು ಹುಡುಕಿ ಆ್ಯಪ್‌ಗೆ ಸೇರಿಸಲಾದ ಕಾಣೆಯಾಗಿರುವ ಸಾಧನವನ್ನು ಪತ್ತೆಹಚ್ಚಲು ಸಹಾಯ ಮಾಡಬಲ್ಲರು.

ಹುಡುಕಿ ಆ್ಯಪ್‌ನಲ್ಲಿ ಸಾಧನವೊಂದನ್ನು ಪತ್ತೆಮಾಡಿ ಎಂಬುದನ್ನು ನೋಡಿ.

ನಿಮ್ಮ ಸಾಧನಗಳು ಪಟ್ಟಿಯ ಮೇಲ್ಭಾಗದಲ್ಲಿವೆ ಮತ್ತು ನಿಮ್ಮ ಕುಟುಂಬದ ಸದಸ್ಯರ ಸಾಧನಗಳು ನಿಮ್ಮ ಸಾಧನಗಳ ಕೆಳಭಾಗದಲ್ಲಿವೆ.

AirTag ಅನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಕುಟುಂಬದ ಸದಸ್ಯರೊಬ್ಬರಿಗೆ ಹೇಳಿ

ಹುಡುಕಿ ಆ್ಯಪ್‌ನಲ್ಲಿ ನೀವು AirTag ನಿಮ್ಮ ಬಳಿ ಪತ್ತೆಯಾಗಿದೆ ಅಥವಾ ಅಪರಿಚಿತ AirTag ಎಂದು ಹೇಳುವ ನೋಟಿಫಿಕೇಷನ್ ಅನ್ನು ಸ್ವೀಕರಿಸಿದರೆ, ಅದರ ಮಾಲೀಕತ್ವ ಹೊಂದಿರುವ ಕುಟುಂಬದ ಸದಸ್ಯರನ್ನು AirTag ಅನ್ನು ನಿಮ್ಮೊಂದಿಗೆ ಹಂಚಿಕೊಳ್ಳುವಂತೆ ನೀವು ಕೇಳಿಕೊಳ್ಳಬಹುದು.

  1. ನೋಟಿಫಿಕೇಷನ್‌ನಲ್ಲಿ, AirTag ಅನ್ನು ಹಂಚಿಕೊಳ್ಳಲು ಮಾಲೀಕರನ್ನು ಕೇಳಿ ಎಂಬುದನ್ನು ಟ್ಯಾಪ್ ಮಾಡಿ.

  2. ಸ್ಕ್ರೀನ್‌ನ ಕೆಳಭಾಗದಲ್ಲಿರುವ ಮಾಲೀಕರನ್ನು ಕೇಳಿ ಎಂಬುದನ್ನು ಟ್ಯಾಪ್ ಮಾಡಿ.

ಕುಟುಂಬದ ಸದಸ್ಯರ ಕಾಣೆಯಾದ ಸಾಧನವನ್ನು ಪತ್ತೆಹಚ್ಚಲು iCloud.comನಲ್ಲಿ ಸಾಧನಗಳನ್ನು ಹುಡುಕಿ ಎಂಬುದನ್ನು ಸಹ ನೀವು ಬಳಸಬಹುದು. iCloud ಬಳಕೆದಾರರ ಮಾರ್ಗದರ್ಶಿಯಲ್ಲಿ iCloud.comನಲ್ಲಿ ಸಾಧನಗಳನ್ನು ಹುಡುಕಿ ಎಂಬಲ್ಲಿ ಸಾಧನವೊಂದರ ಸ್ಥಳವನ್ನು ಪತ್ತೆಮಾಡಿ ಎಂಬುದನ್ನು ನೋಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.