ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPad ಅನ್ನು ಅಳಿಸಿ

ನಿಮ್ಮ iPadನಿಂದ ನಿಮ್ಮ ವೈಯಕ್ತಿಕ ಮಾಹಿತಿ, ಕಂಟೆಂಟ್ ಮತ್ತು ಸೆಟ್ಟಿಂಗ್ಸ್ ಅನ್ನು (ಗೌಪ್ಯತೆ ಮತ್ತು ನೆಟ್‌ವರ್ಕ್ ಸೆಟ್ಟಿಂಗ್‌ಗಳಂತಹವು) ನೀವು ಸುರಕ್ಷಿತವಾಗಿ ಅಳಿಸಬಹುದು. ನಿಮ್ಮ iPad ಅನ್ನು ನೀವು ಅಳಿಸಿದಾಗ, ಅದನ್ನು ಫ್ಯಾಕ್ಟರಿ ಸೆಟ್ಟಿಂಗ್ಸ್‌ಗೆ ರಿಸ್ಟೋರ್ ಮಾಡಲಾಗುತ್ತದೆ. ನಿಮ್ಮ ವೈಯಕ್ತಿಕ ಕಂಟೆಂಟ್ ಅನ್ನು ಉಳಿಸಿಕೊಂಡು ನಿಮ್ಮ iPad ಸೆಟ್ಟಿಂಗ್ಸ್ ಅನ್ನು ರೀಸೆಟ್ ಮಾಡಲು, iPad ಸೆಟ್ಟಿಂಗ್ಸ್ ಅನ್ನು ಅವುಗಳ ಡಿಫಾಲ್ಟ್‌ಗಳಿಗೆ ರೀಸೆಟ್ ಮಾಡಿ ಅನ್ನು ನೋಡಿ.

ಈ iPad ಅನ್ನು ಅಳಿಸಿ ಸ್ಕ್ರೀನ್.

ನೀವು ಪ್ರಾರಂಭಿಸುವ ಮೊದಲು

ನಿಮ್ಮ iPad ಅನ್ನುಬ್ಯಾಕಪ್ ಮಾಡಿ, ನಂತರದಲ್ಲಿ ಬೇರೊಂದು ಸಾಧನದಲ್ಲಿ ನಿಮ್ಮ ಡೇಟವನ್ನು ರಿಸ್ಟೋರ್ ಮಾಡಿಕೊಳ್ಳಬಹುದು.

ಸೆಟ್ಟಿಂಗ್ಸ್ ಆ್ಯಪ್‌ ಬಳಸಿಕೊಂಡು iPad ಅನ್ನು ಅಳಿಸಿ

  1. ನಿಮ್ಮ iPadನಲ್ಲಿ ಸೆಟ್ಟಿಂಗ್ಸ್ ಆ್ಯಪ್‌ಗೆ ಹೋಗಿ.

  2. ಸಾಮಾನ್ಯ ಎಂಬುದನ್ನು ಟ್ಯಾಪ್ ಮಾಡಿ, ನಂತರ iPad ಅನ್ನು ವರ್ಗಾಯಿಸಿ ಅಥವಾ ರೀಸೆಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

  3. ಎಲ್ಲಾ ಕಂಟೆಂಟ್ ಮತ್ತು ಸೆಟ್ಟಿಂಗ್‌ಗಳನ್ನು ಅಳಿಸಿ ಎಂಬುದನ್ನು ಟ್ಯಾಪ್ ಮಾಡಿ.

  4. ನಿಮ್ಮ iPad ಪಾಸ್‌ಕೋಡ್ ಅಥವಾ Apple ಖಾತೆ ಪಾಸ್‌ವರ್ಡ್ ಅನ್ನು ಕೇಳಿದರೆ ನಮೂದಿಸಿ.

  5. ದೃಢೀಕರಿಸುವುದನ್ನು ಮುಂದುವರಿಸಲು ಟ್ಯಾಪ್ ಮಾಡಿ.

    ನೀವು eSIM ಹೊಂದಿದ್ದರೆ, ನಿಮ್ಮ eSIM ಅನ್ನು ನೀವು ಅಳಿಸಿಹಾಕಬಹುದು ಅಥವಾ ಅದನ್ನು ಇಟ್ಟುಕೊಳ್ಳಬಹುದು. ನಿಮ್ಮ eSIM ಅನ್ನು ನೀವು ಅಳಿಸಿದರೆ, ನಿಮ್ಮ ಮೊಬೈಲ್ ಪ್ಲ್ಯಾನ್ ಅನ್ನು ಮರುಸಕ್ರಿಯಗೊಳಿಸಲು ನೀವು ನಿಮ್ಮ ನೆಟ್‌ವರ್ಕ್ ಪೂರೈಕೆದಾರರನ್ನು ಸಂಪರ್ಕಿಸಬೇಕಾಗುತ್ತದೆ.

ನಿಮ್ಮ Mac ಅಥವಾ Windows ಸಾಧನವನ್ನು ಬಳಸಿಕೊಂಡು iPad ಅನ್ನು ಅಳಿಸಿ

  1. USB ಅಥವಾ USB-C ಕೇಬಲ್ ಮೂಲಕ ನಿಮ್ಮ iPad ಅನ್ನು ಕಂಪ್ಯೂಟರ್‌ಗೆ ಕನೆಕ್ಟ್ ಮಾಡಿ.

  2. ನಿಮ್ಮ Macನಲ್ಲಿ, Finder ವಿಂಡೋವನ್ನು ತೆರೆಯಲು Finder ಐಕಾನ್ ಅನ್ನು ಕ್ಲಿಕ್ ಮಾಡಿ ಅಥವಾ ನಿಮ್ಮ Windows ಸಾಧನದಲ್ಲಿ Apple ಸಾಧನಗಳ ಆ್ಯಪ್ ಅನ್ನು ತೆರೆಯಿರಿ.

    ನಿಮ್ಮ Mac macOS 10.14 ಅಥವಾ ಅದಕ್ಕಿಂತ ಮೊದಲಿನ ಆವೃತ್ತಿಯನ್ನು ಬಳಸುತ್ತಿದ್ದರೆ ಅಥವಾ ನಿಮ್ಮ Windows ಸಾಧನವು Apple ಸಾಧನಗಳ ಆ್ಯಪ್ ಅನ್ನು ಹೊಂದಿಲ್ಲದಿದ್ದರೆ, ಅದರ ಬದಲು iTunes ಅನ್ನು ತೆರೆಯಿರಿ.

  3. Finder ಸೈಡ್‌ಬಾರ್‌ನಲ್ಲಿರುವ (ಸ್ಥಳಗಳು ಎಂಬುದರ ಕೆಳಗೆ) iPad ಐಕಾನ್ ಅನ್ನು ಕ್ಲಿಕ್ ಮಾಡಿ, ನಂತರ ವಿಂಡೋದ ಮೇಲ್ಭಾಗದಲ್ಲಿರುವ ಸಾಮಾನ್ಯ ಎಂಬುದನ್ನು ಕ್ಲಿಕ್ ಮಾಡಿ.

  4. iPad ಅನ್ನು ರಿಸ್ಟೋರ್ ಮಾಡಿ ಎಂಬುದನ್ನು ಕ್ಲಿಕ್ ಮಾಡಿ, ನಂತರ ದೃಢೀಕರಿಸಲು ರಿಸ್ಟೋರ್ ಮಾಡಿ ಎಂಬುದನ್ನು ಕ್ಲಿಕ್ ಮಾಡಿ.

    ಗಮನಿಸಿ: ನೀವು “ಹುಡುಕಿ” ಆ್ಯಪ್‌ಗೆ ಸೈನ್ ಇನ್ ಮಾಡಿದ್ದರೆ, “ರಿಸ್ಟೋರ್ ಮಾಡಿ” ಎಂಬುದನ್ನು ಕ್ಲಿಕ್ ಮಾಡುವ ಮೊದಲು ನೀವು ಸೈನ್ ಔಟ್ ಮಾಡಬೇಕಾಗುತ್ತದೆ.

ದೋಷನಿವಾರಣೆಗಾಗಿ ನಿಮ್ಮ iPhone, iPad ಅಥವಾ iPod ಅನ್ನು ಫ್ಯಾಕ್ಟರಿ ಸೆಟ್ಟಿಂಗ್‌ಗಳಿಗೆ ರಿಸ್ಟೋರ್ ಮಾಡಿ ಎಂಬ Apple ಬೆಂಬಲ ಲೇಖನವನ್ನು ನೋಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.