ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPadನಲ್ಲಿ ನಿಮ್ಮ VoiceOver ಸೆಟ್ಟಿಂಗ್ಸ್ ಅನ್ನು ಬದಲಾಯಿಸುವುದು

ನೀವು VoiceOverಗೆ ಸಂಬಂಧಿಸಿದ ಆಡಿಯೊ ಆಯ್ಕೆಗಳು, ಭಾಷೆ, ಧ್ವನಿ, ಮಾತನಾಡುವ ವೇಗ ಮತ್ತು ವರ್ಬಾಸಿಟಿಯಂತಹ ಸೆಟ್ಟಿಂಗ್ಸ್ ಅನ್ನು ಕಸ್ಟಮೈಸ್ ಮಾಡಬಹುದು.

VoiceOver ಮಾತು ಮತ್ತು ಸೌಂಡ್‌ಗಳ ವಾಲ್ಯೂಮ್ ಅನ್ನು ಸರಿಹೊಂದಿಸುವುದು

  • VoiceOver ಮಾತು ಮತ್ತು ಸೌಂಡ್‌ಗಳ ವಾಲ್ಯೂಮ್ ಹಾಗೂ ಎಲ್ಲಾ ಇತರೆ iPad ಆಡಿಯೊ ಸೇರಿದಂತೆ ನಿಮ್ಮ iPadನ ವಾಲ್ಯೂಮ್ ಅನ್ನು ಹೆಚ್ಚಿಸಲು ಅಥವಾ ಕಡಿಮೆ ಮಾಡಲು, iPadನಲ್ಲಿರುವ ವಾಲ್ಯೂಮ್ ಬಟನ್‌ಗಳನ್ನು ಒತ್ತಿರಿ.

  • VoiceOver ಮಾತನಾಡುತ್ತಿರುವಾಗ ಇತರ iPad ಆಡಿಯೊ ವಾಲ್ಯೂಮ್ ಅನ್ನು ತಾತ್ಕಾಲಿಕವಾಗಿ ಕಡಿಮೆ ಮಾಡಲು, ಸೆಟ್ಟಿಂಗ್ಸ್  > ಆ್ಯಕ್ಸೆಸಬಿಲಿಟಿ > VoiceOver > ಆಡಿಯೊ ಎಂಬಲ್ಲಿಗೆ ಹೋಗಿ, ಆಡಿಯೊ ಡಕಿಂಗ್ ಎಂಬುದನ್ನು ಟ್ಯಾಪ್ ಮಾಡಿ, ನಂತರ ಮಾತನಾಡುವಾಗ ಎಂಬುದನ್ನು ಆಯ್ಕೆಮಾಡಿ. VoiceOver ಮಾತನಾಡುವಾಗ ಇತರ iPad ಆಡಿಯೊ—ಉದಾಹರಣೆಗೆ, ಮೀಡಿಯಾ ಮತ್ತು ಕರೆಗಳ ವಾಲ್ಯೂಮ್ ಎಷ್ಟು ಕಡಿಮೆಯಾಗುತ್ತದೆ ಎಂಬುದನ್ನು ಸೆಟ್ ಮಾಡಲು ಡಕಿಂಗ್ ಪ್ರಮಾಣದ ಸ್ಲೈಡರ್ ಅನ್ನು ಡ್ರ್ಯಾಗ್ ಮಾಡಿ.

  • ಇತರೆ ಆಡಿಯೊ ಆಯ್ಕೆಗಳನ್ನು ಸೆಟ್ ಮಾಡಲು, ಸೆಟ್ಟಿಂಗ್ಸ್  > ಆ್ಯಕ್ಸೆಸಬಿಲಿಟಿ > VoiceOver > ಆಡಿಯೊ ಎಂಬುದಕ್ಕೆ ಹೋಗಿ, ನಂತರ ಈ ಕೆಳಗಿನವುಗಳಂತಹ ಆಯ್ಕೆಗಳನ್ನು ಸೆಟ್ ಮಾಡಿ:

    • ಸೌಂಡ್‌ಗಳು: ಸೌಂಡ್ ಎಫೆಕ್ಟ್‌ಗಳನ್ನು ಸರಿಹೊಂದಿಸಿ ಮತ್ತು ಪ್ರಿವ್ಯೂ ಮಾಡಿ.

    • HDMIಗೆ ಕಳುಹಿಸಿ: ಇನ್‌ಸ್ಟ್ರುಮೆಂಟ್ ಆ್ಯಂಪ್ಲಿಫೈಯರ್ ಅಥವಾ DJ ಮಿಕ್ಸರ್ ರೀತಿಯ ಬಾಹ್ಯವಾಗಿ ಕನೆಕ್ಟ್ ಮಾಡಲಾದ ಸಾಧನಗಳಿಗೆ ಆಡಿಯೊ ರೂಟ್ ಮಾಡಿ.

VoiceOver ಭಾಷೆಯನ್ನು ಸೆಟ್ ಮಾಡುವುದು

  • ಪ್ರಾಥಮಿಕ ಭಾಷೆಯನ್ನು ಬದಲಾಯಿಸಿ: ನಿಮ್ಮ iPadಗಾಗಿ ನೀವು ಆಯ್ಕೆಮಾಡುವ ಭಾಷೆಯನ್ನೇ VoiceOver ಬಳಸುತ್ತದೆ. ಬೇರೊಂದು ಪ್ರಾಥಮಿಕ ಭಾಷೆಯನ್ನು ಆಯ್ಕೆ ಮಾಡಲು, ಸೆಟ್ಟಿಂಗ್ಸ್ ಆ್ಯಪ್  > ಸಾಮಾನ್ಯ > ಭಾಷೆ ಮತ್ತು ಪ್ರದೇಶ ಎಂಬುದಕ್ಕೆ ಹೋಗಿ, ನಂತರ ‘ಭಾಷೆಯನ್ನು ಸೇರಿಸಿ’ ಎಂಬುದನ್ನು ಟ್ಯಾಪ್ ಮಾಡಿ.

  • ರೋಟರ್ ಬಳಸಿಕೊಂಡು ಭಾಷೆಗಳನ್ನು ಸ್ವಿಚ್ ಮಾಡಿ: ಮತ್ತೊಂದು ಭಾಷೆಯ ವಾಯ್ಸ್‌ಗೆ ಸ್ವಿಚ್ ಮಾಡಲು ರೋಟರ್ ಅನ್ನು ಬಳಸಿ.

  • ಭಾಷೆಗಳನ್ನು ಸ್ವಯಂಚಾಲಿತವಾಗಿ ಸ್ವಿಚ್ ಮಾಡಿ: ಬೇರೊಂದು ಭಾಷೆಯಲ್ಲಿರುವ ಪಠ್ಯವನ್ನು VoiceOver ಪತ್ತೆಹಚ್ಚಬಲ್ಲದು ಮತ್ತು ಆ ಭಾಷೆಯ ಧ್ವನಿಗೆ ಸ್ವಯಂಚಾಲಿತವಾಗಿ ಸ್ವಿಚ್ ಆಗಬಲ್ಲದು. ಸೆಟ್ಟಿಂಗ್ಸ್ > ಆ್ಯಕ್ಸೆಸಬಿಲಿಟಿ > VoiceOver > ಮಾತು ಎಂಬುದಕ್ಕೆ ಹೋಗಿ, ನಂತರ ‘ಭಾಷೆಗಳನ್ನು ಪತ್ತೆಮಾಡಿ’ ಎಂಬುದನ್ನು ಆನ್ ಮಾಡಿ.

ಗಮನಿಸಿ: VoiceOver ಎಲ್ಲಾ ಭಾಷೆಗಳಲ್ಲಿ ಲಭ್ಯವಿಲ್ಲ. VoiceOverನಿಂದ ಬೆಂಬಲಿತವಾಗಿರುವ ಭಾಷೆಗಳು ಎಂಬ Apple ಬೆಂಬಲ ಲೇಖನವನ್ನು ನೋಡಿ.

ಮಾತನಾಡುವ ಧ್ವನಿಯನ್ನು ಬದಲಾಯಿಸಿ

ನೀವು VoiceOverನ ಮಾತನಾಡುವ ವಾಯ್ಸ್ ಅನ್ನು ಬದಲಾಯಿಸಬಹುದು ಅಥವಾ ಇನ್ನೊಂದು ಧ್ವನಿಯನ್ನು ಸೇರಿಸಬಹುದು, ಅಗತ್ಯಕ್ಕೆ ತಕ್ಕಂತೆ ಧ್ವನಿಗಳ ನಡುವೆ ಸ್ವಿಚ್ ಮಾಡಲು ರೋಟರ್ ಅನ್ನು ಬಳಸಬಹುದು.

  1. ಸೆಟ್ಟಿಂಗ್ಸ್  > ಆ್ಯಕ್ಸೆಸಬಿಲಿಟಿ > VoiceOver ಎಂಬುದಕ್ಕೆ ಹೋಗಿ.

  2. ಮಾತು ಎಂಬುದನ್ನು ಟ್ಯಾಪ್ ಮಾಡಿ, ನಂತರ ಈ ಕೆಳಗಿನವುಗಳಲ್ಲಿ ಒಂದನ್ನು ಮಾಡಿ:

    • ಪ್ರಾಥಮಿಕ ಧ್ವನಿಯನ್ನು ಬದಲಾಯಿಸಿ: ಪ್ರಸ್ತುತ ಪ್ರಾಥಮಿಕ ಧ್ವನಿಯ ಹೆಸರನ್ನು ಟ್ಯಾಪ್ ಮಾಡಿ, ನಂತರ ಧ್ವನಿ ಎಂಬುದನ್ನು ಟ್ಯಾಪ್ ಮಾಡಿ.

    • ಮತ್ತೊಂದು ಧ್ವನಿಯನ್ನು ಸೇರಿಸಿ: ರೋಟರ್ ಧ್ವನಿಯನ್ನು ಸೇರಿಸಿ ಎಂಬುದನ್ನು ಟ್ಯಾಪ್ ಮಾಡಿ.

  3. ಧ್ವನಿಯನ್ನು ಆಯ್ಕೆಮಾಡಿ. ವರ್ಧಿತ ಧ್ವನಿಯನ್ನು ಆಯ್ಕೆಮಾಡಲು, ಮೊದಲು ಡೌನ್‌ಲೋಡ್ ಬಟನ್ ಅನ್ನು ಟ್ಯಾಪ್ ಮಾಡಿ.

ಮಾತನಾಡುವ ಧ್ವನಿಯನ್ನು ಸರಿಹೊಂದಿಸುವುದು

ಸೆಟ್ಟಿಂಗ್ಸ್  > ಆ್ಯಕ್ಸೆಸಬಿಲಿಟಿ > VoiceOver ಎಂಬಲ್ಲಿಗೆ ಹೋಗಿ, ನಂತರ ಕೆಳಗಿನ ಯಾವುದನ್ನಾದರೂ ಮಾಡಿ:

  • ಮಾತನಾಡುವ ವೇಗವನ್ನು ಸರಿಹೊಂದಿಸಿ: ಮಾತನಾಡುವ ವೇಗದ ಸ್ಲೈಡರ್ ಅನ್ನು ಡ್ರ್ಯಾಗ್ ಮಾಡಿ.

  • ಪಿಚ್ ಅನ್ನು ಸರಿಹೊಂದಿಸಿ: ಮಾತು ಎಂಬುದನ್ನು ಟ್ಯಾಪ್ ಮಾಡಿ, ಒಂದು ಧ್ವನಿಯನ್ನು ಟ್ಯಾಪ್ ಮಾಡಿ, ನಂತರ ಸ್ಲೈಡರ್ ಅನ್ನು ಡ್ರ್ಯಾಗ್ ಮಾಡಿ. ಒಂದು ಗುಂಪಿನ (ಪಟ್ಟಿ ಅಥವಾ ಟೇಬಲ್ ರೀತಿಯದ್ದು) ಮೊದಲ ಐಟಮ್ ಅನ್ನು ಮಾತಿನಲ್ಲಿ ಹೇಳುವಾಗ VoiceOver ಎತ್ತರಿಸಿದ ಪಿಚ್ ಅನ್ನು ಬಳಸಲು ಮತ್ತು ಆ ಗುಂಪಿನ ಕೊನೆಯ ಐಟಮ್ ಅನ್ನು ಮಾತಿನಲ್ಲಿ ಹೇಳುವಾಗ ತಗ್ಗಿದ ಪಿಚ್ ಅನ್ನು ಬಳಸಲು ‘ಪಿಚ್ ಬದಲಾಯಿಸಿ’ ಎಂಬುದನ್ನು ಅನ್ನು ಸಹ ನೀವು ಆನ್ ಮಾಡಬಹುದು.

  • ನಿರ್ದಿಷ್ಟ ಪದಗಳ ಉಚ್ಚಾರಣೆಯನ್ನು ನಿರ್ದಿಷ್ಟವಾಗಿ ಸೂಚಿಸಿ: ಮಾತು > ಉಚ್ಚಾರಣೆಗಳು ಎಂಬುದನ್ನು ಟ್ಯಾಪ್ ಮಾಡಿ, ಸೇರಿಸಿ ಬಟನ್ ಅನ್ನು ಟ್ಯಾಪ್ ಮಾಡಿ, ಫ್ರೇಸ್ ಒಂದನ್ನು ನಮೂದಿಸಿ, ಆ ಫ್ರೇಸ್ ಅನ್ನು ಹೇಗೆ ಉಚ್ಚರಿಸಬೇಕು ಎಂದು ನೀವು ಬಯಸುತ್ತೀರಿ ಎಂಬುದನ್ನು ಡಿಕ್ಟೇಟ್ ಮಾಡಿ ಅಥವಾ ಹೇಳಿ.

    ಗಮನಿಸಿ: ಸೆಟ್ಟಿಂಗ್ಸ್ ಆ್ಯಪ್ > ಸಾಮಾನ್ಯ > ಕೀಬೋರ್ಡ್‌ಗಳು ಎಂಬುದರಲ್ಲಿ ‘ಡಿಕ್ಟೇಷನ್ ಸಕ್ರಿಯಗೊಳಿಸಿ’ ಎಂಬುದನ್ನು ನೀವು ಆನ್ ಮಾಡಿದ್ದರೆ ಮಾತ್ರ ನೀವು ಡಿಕ್ಟೇಟ್ ಮಾಡಬಹುದು.

VoiceOver ನಿಮಗೆ ಎಷ್ಟು ಹೇಳಬೇಕು ಎಂಬುದನ್ನು ಸೆಟ್ ಮಾಡುವುದು

ಸೆಟ್ಟಿಂಗ್ಸ್  > ಆ್ಯಕ್ಸೆಸಬಿಲಿಟಿ > VoiceOver > ವರ್ಬಾಸಿಟಿ ಎಂಬಲ್ಲಿಗೆ ಹೋಗಿ, ನಂತರ ಕೆಳಗಿನ ಯಾವುದನ್ನಾದರೂ ಮಾಡಿ:

  • VoiceOver ವಿರಾಮಚಿಹ್ನೆಯನ್ನು ಹೇಗೆ ಹೇಳುತ್ತದೆ ಎಂಬುದನ್ನು ಬದಲಾಯಿಸಿ: ವಿರಾಮಚಿಹ್ನೆಯನ್ನು ಟ್ಯಾಪ್ ಮಾಡಿ, ನಂತರ ಒಂದು ಗುಂಪನ್ನು ಆರಿಸಿ. ನೀವು ಹೊಸ ಗುಂಪುಗಳನ್ನು ಸಹ ರಚಿಸಬಹುದು. ಉದಾಹರಣೆಗೆ, “[” ಅನ್ನು “ಎಡ ಆವರಣ ಚಿಹ್ನೆ” ಎಂದು ಹೇಳುವ ಪ್ರೋಗ್ರಾಮಿಂಗ್ ಗುಂಪು.

  • ನೋಟಿಫಿಕೇಷನ್‌ಗಳನ್ನು VoiceOver ಹೇಗೆ ಓದುತ್ತದೆ ಎಂಬುದನ್ನು ಬದಲಾಯಿಸಿ: ಸಿಸ್ಟಂ ನೋಟಿಫಿಕೇಷನ್‌ಗಳು ಎಂಬುದನ್ನು ಟ್ಯಾಪ್ ಮಾಡಿ. iPad ಲಾಕ್ ಆಗಿದ್ದರೂ, ಒಳಬರುವ ಪಠ್ಯ ಸಂದೇಶಗಳು ಸೇರಿದಂತೆ ನೋಟಿಫಿಕೇಷನ್‌ಗಳನ್ನು VoiceOver ನೈಜಸಮಯದಲ್ಲಿ ಡಿಫಾಲ್ಟ್ ಆಗಿ ಓದುತ್ತದೆ. ನೀವು iPad ಅನ್ನು ಅನ್‌ಲಾಕ್ ಮಾಡಿದಾಗ ಅದುವರೆಗೂ ನೋಡಿರದ ನೋಟಿಫಿಕೇಷನ್‌ಗಳನ್ನು ಪುನರಾವರ್ತಿಸಲಾಗುತ್ತದೆ.

  • ಹೆಚ್ಚುವರಿ ಆಯ್ಕೆಗಳನ್ನು ಆರಿಸಿ: ಸುಳಿವುಗಳು, ಅಪ್ಪರ್‌ಕೇಸ್ ಅಕ್ಷರಗಳು, ಎಂಬೆಡ್ ಮಾಡಲಾದ ಲಿಂಕ್‌ಗಳು ಮತ್ತು ಹೆಚ್ಚಿನವುಗಳನ್ನು VoiceOver ಮಾತನಾಡುವಂತೆ ಮಾಡಿ. VoiceOver ರೋಟರ್ ಆ್ಯಕ್ಷನ್‌ಗಳನ್ನು ಸಹ ಖಚಿತಪಡಿಸಬಲ್ಲದು ಮತ್ತು ಫ್ಲ್ಯಾಶ್‌ಲೈಟ್ ಆನ್ ಆಗಿರುವಾಗ ನಿಮಗೆ ತಿಳಿಸಬಲ್ಲದು.

ಚಟುವಟಿಕೆಯೊಂದಕ್ಕಾಗಿ VoiceOver ಸೆಟ್ಟಿಂಗ್ಸ್ ಅನ್ನು ಕಸ್ಟಮೈಸ್ ಮಾಡಿ

ಪ್ರೋಗ್ರಾಮಿಂಗ್ ರೀತಿಯ ಚಟುವಟಿಕೆಯೊಂದಕ್ಕಾಗಿ ನೀವು VoiceOver ಸೆಟ್ಟಿಂಗ್ಸ್ ಗುಂಪನ್ನು ಕಸ್ಟಮೈಸ್ ಮಾಡಬಹುದು. ನಂತರ, ನೀವು ನಿರ್ದಿಷ್ಟ ಆ್ಯಪ್‌ಗಳನ್ನು ತೆರೆದಾಗ ಅಥವಾ ರೋಟರ್ ಅನ್ನು ಸರಿಹೊಂದಿಸಿದಾಗ ಮಾತು, ಆಡಿಯೊ, ವರ್ಬಾಸಿಟಿ, ಟೈಪಿಂಗ್, ನ್ಯಾವಿಗೇಷನ್ ಮತ್ತು ಬ್ರೇಲ್‌ಗಾಗಿ ಆ ಸೆಟ್ಟಿಂಗ್ಸ್ ಅನ್ನು ಸ್ವಯಂಚಾಲಿತವಾಗಿ ಅನ್ವಯಿಸಲಾಗುತ್ತದೆ.

  1. ಸೆಟ್ಟಿಂಗ್ಸ್  > ಆ್ಯಕ್ಸೆಸಬಿಲಿಟಿ > VoiceOver > ಚಟುವಟಿಕೆಗಳು ಎಂಬುದಕ್ಕೆ ಹೋಗಿ.

  2. ಈಗಾಗಲೇ ಇರುವ ಚಟುವಟಿಕೆಯೊಂದನ್ನು ಆಯ್ಕೆಮಾಡಿ ಅಥವಾ ಚಟುವಟಿಕೆಯನ್ನು ಸೇರಿಸಿ ಎಂಬುದನ್ನು ಟ್ಯಾಪ್ ಮಾಡಿ.

  3. ಸೆಟ್ಟಿಂಗ್ಸ್ ಅನ್ನು ಸರಿಹೊಂದಿಸಿ, ನಂತರ ಸ್ವಯಂಚಾಲಿತ ಸ್ವಿಚ್ ಆಗುವಿಕೆ ಎಂಬುದರ ಕೆಳಗೆ, ಈ ಕೆಳಗಿನವುಗಳಲ್ಲಿ ಯಾವುದಾದರೂ ಒಂದನ್ನು ಮಾಡಿ:

    • ನಿರ್ದಿಷ್ಟ ಆ್ಯಪ್‌ಗಳಿಗೆ ಸೆಟ್ಟಿಂಗ್ಸ್ ಅನ್ನು ಅನ್ವಯಿಸಿ: ಆ್ಯಪ್‌ಗಳು ಎಂಬುದನ್ನು ಟ್ಯಾಪ್ ಮಾಡಿ, ನಂತರ ಈ ಸೆಟ್ಟಿಂಗ್ ಅನ್ನು ಅನ್ವಯಿಸಲು ನೀವು ಬಯಸುವ ಆ್ಯಪ್‌ಗಳನ್ನು ಆಯ್ಕೆಮಾಡಿ.

    • ನಿರ್ದಿಷ್ಟ ಸಂದರ್ಭಗಳಿಗೆ ಸೆಟ್ಟಿಂಗ್ಸ್ ಅನ್ನು ಅನ್ವಯಿಸಿ: ಸಂದರ್ಭ ಎಂಬುದನ್ನು ಟ್ಯಾಪ್ ಮಾಡಿ, ನಂತರ ವರ್ಡ್ ಪ್ರಾಸೆಸಿಂಗ್, ಸಂದೇಶ ಕಳುಹಿಸುವಿಕೆ ಅಥವಾ ಕನ್ಸೋಲ್ ರೀತಿಯ ಒಂದು ಅಥವಾ ಹೆಚ್ಚಿನ ಸಂದರ್ಭಗಳನ್ನು ಆಯ್ಕೆಮಾಡಿ.

ಫ್ಲ್ಯಾಟ್ ಅಥವಾ ಗುಂಪು ಮಾಡಲಾದ ನ್ಯಾವಿಗೇಷನ್ ಅನ್ನು ಬಳಸುವುದು

ಸೆಟ್ಟಿಂಗ್ಸ್  > ಆ್ಯಕ್ಸೆಸಬಿಲಿಟಿ > VoiceOver > ನ್ಯಾವಿಗೇಷನ್ ಶೈಲಿ ಎಂಬಲ್ಲಿಗೆ ಹೋಗಿ, ನಂತರ ಕೆಳಗಿನ ಯಾವುದಾದರೂ ಒಂದನ್ನು ಆಯ್ಕೆಮಾಡಿ:

  • ಫ್ಲ್ಯಾಟ್: ಮುಂದಕ್ಕೆ ಮತ್ತು ಹಿಂದಕ್ಕೆ ಮೂವ್ ಮಾಡುವ ಕಮಾಂಡ್‌ಗಳನ್ನು ನೀವು ಬಳಸುವಾಗ ViceOver, ಸ್ಕ್ರೀನ್ ಮೇಲಿನ ಪ್ರತಿಯೊಂದು ಐಟಮ್‌ನ ಮೂಲಕ ಅನುಕ್ರಮವಾಗಿ ಮೂವ್ ಆಗುತ್ತದೆ.

  • ಗುಂಪು ಮಾಡಿರುವುದು: ಸ್ಕ್ರೀನ್ ಮೇಲಿನ ಐಟಮ್‌ಗಳು ಹಾಗೂ ಐಟಮ್‌ಗಳ ಗುಂಪುಗಳ ಮೂಲಕ VoiceOver ಮೂವ್ ಆಗುತ್ತದೆ. ಗುಂಪಿಗೆ ಮೂವ್ ಮಾಡಲು, ಎರಡು ಬೆರಳುಗಳಿಂದ ಬಲಕ್ಕೆ ಸ್ವೈಪ್ ಮಾಡಿ. ಗುಂಪಿನಿಂದ ಹೊರಗೆ ಮೂವ್ ಮಾಡಲು, ಎರಡು ಬೆರಳುಗಳಿಂದ ಎಡಕ್ಕೆ ಸ್ವೈಪ್ ಮಾಡಿ.

ಸ್ಕ್ರೀನ್ ಅನ್ನು ಸ್ಪರ್ಶಿಸುವ ಮತ್ತು ಐಟಮ್ ಅನ್ನು ಆಯ್ಕೆಮಾಡುವ ನಡುವಿನ ವಿಳಂಬವನ್ನು ಸೆಟ್ ಮಾಡುವುದು

ನೀವು ಸ್ಕ್ರೀನ್ ಅನ್ನು ಸ್ಪರ್ಶಿಸುವ ಮತ್ತು VoiceOver ನೀವು ಸ್ಪರ್ಶಿಸಿದ ಐಟಮ್ ಅನ್ನು ಆಯ್ಕೆಮಾಡುವ ನಡುವಿನ ಸಮಯವನ್ನು ನೀವು ನಿಯಂತ್ರಿಸಬಹುದು. ಈ ಮೌಲ್ಯವನ್ನು ಹೆಚ್ಚಿಸುವುದರಿಂದ ಆಕಸ್ಮಿಕ ಸ್ಪರ್ಶಗಳನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು.

ಸೆಟ್ಟಿಂಗ್ಸ್  > ಆ್ಯಕ್ಸೆಸಬಿಲಿಟಿ > VoiceOver ಎಂಬಲ್ಲಿಗೆ ಹೋಗಿ, ‘ಆಯ್ಕೆಗೂ ಮೊದಲು ವಿಳಂಬ’ ಎಂಂಬುದನ್ನು ಟ್ಯಾಪ್ ಮಾಡಿ, ನಂತರ ವಿಳಂಬವನ್ನು ಹೆಚ್ಚಿಸಲು ಅಥವಾ ಕಡಿಮೆ ಮಾಡಲು ಇಂಕ್ರೀಮೆಂಟ್ ಬಟನ್ ಅಥವಾ ಡಿಕ್ರೀಮೆಂಟ್ ಬಟನ್ ಅನ್ನು ಟ್ಯಾಪ್ ಮಾಡಿ.

VoiceOver ವಿಷುವಲ್‌ಗಳನ್ನು ಸರಿಹೊಂದಿಸುವುದು

ಸೆಟ್ಟಿಂಗ್ಸ್  > ಆ್ಯಕ್ಸೆಸಬಿಲಿಟಿ > VoiceOver ಎಂಬಲ್ಲಿಗೆ ಹೋಗಿ, ನಂತರ ಕೆಳಗಿನ ಯಾವುದಾದರೂ ಒಂದನ್ನು ಆನ್ ಮಾಡಿ:

  • ದೊಡ್ಡ ಕರ್ಸರ್: ಆಯ್ಕೆಮಾಡಿದ ಐಟಮ್ ಸುತ್ತಲಿನ ಔಟ್‌ಲೈನ್ ಅನ್ನು ನೋಡಲು ನಿಮಗೆ ಕಷ್ಟವಾಗುತ್ತಿದ್ದರೆ, ನೀವು ಔಟ್‌ಲೈನ್ ಅನ್ನು ದೊಡ್ಡದಾಗಿಸಬಹುದು ಮತ್ತು ದಪ್ಪವಾಗಿಸಬಹುದು.

  • ಕ್ಯಾಪ್ಶನ್ ಪ್ಯಾನೆಲ್: VoiceOver ಮಾತನಾಡುವ ಪಠ್ಯವನ್ನು ಸ್ಕ್ರೀನ್‌ನ ಕೆಳಭಾಗದಲ್ಲಿ ಪ್ರದರ್ಶಿಸಲಾಗುತ್ತದೆ.

iPadನಲ್ಲಿ ಎಲ್ಲಿಂದಲೇ VoiceOver ಅನ್ನು ಸರಿಹೊಂದಿಸಲು ತ್ವರಿತ ಸೆಟ್ಟಿಂಗ್ಸ್ ಬಳಸುವುದು

VoiceOver ಆನ್ ಆಗಿರುವಾಗ, ನೀವು ಎರಡು ಬೆರಳಿನಿಂದ ನಾಲ್ಕು ಬಾರಿ ಟ್ಯಾಪ್ ಮಾಡುವ ಮೂಲಕ ತ್ವರಿತ ಸೆಟ್ಟಿಂಗ್ಸ್ ಅನ್ನು ಆ್ಯಕ್ಸೆಸ್ ಮಾಡಬಹುದು.

ತ್ವರಿತ ಸೆಟ್ಟಿಂಗ್ಸ್ ಅನ್ನು ಕಸ್ಟಮೈಸ್ ಮಾಡಲು, ಈ ಕೆಳಗಿನವುಗಳನ್ನು ಮಾಡಿ:

  1. ಸೆಟ್ಟಿಂಗ್ಸ್  > ಆ್ಯಕ್ಸೆಸಬಿಲಿಟಿ > VoiceOver > ತ್ವರಿತ ಸೆಟ್ಟಿಂಗ್ಸ್ ಎಂಬುದಕ್ಕೆ ಹೋಗಿ.

  2. ನಿಮಗೆ ಬೇಕಾದ ಸೆಟ್ಟಿಂಗ್ಸ್ ಅನ್ನು ಆರಿಸಿ ಅಥವಾ ಸೆಟ್ಟಿಂಗ್ಸ್ ಅನ್ನು ಮರುಕ್ರಮಗೊಳಿಸಲು ಮರುಕ್ರಮಗೊಳಿಸಿ ಬಟನ್ ಅನ್ನು ಡ್ರ್ಯಾಗ್ ಮಾಡಿ.

VoiceOver ಸೆಟ್ಟಿಂಗ್ಸ್ ಅನ್ನು ರೀಸೆಟ್ ಮಾಡುವುದು

  1. ನಿಮ್ಮ iPadನಲ್ಲಿ ಸೆಟ್ಟಿಂಗ್ಸ್ ಆ್ಯಪ್‌ಗೆ ಹೋಗಿ.

  2. ಆ್ಯಕ್ಸೆಸಬಿಲಿಟಿ ಎಂಬುದನ್ನು ಟ್ಯಾಪ್ ಮಾಡಿ, ನಂತರ VoiceOver ಅನ್ನು ಟ್ಯಾಪ್ ಮಾಡಿ.

  3. VoiceOver ಸೆಟ್ಟಿಂಗ್ಸ್ ಅನ್ನು ರೀಸೆಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ. (ನೀವು ಕೆಳಗೆ ಸ್ಕ್ರೋಲ್ ಮಾಡಬೇಕಾಗಬಹುದು.)

VoiceOver ಕಮಾಂಡ್‌ಗಳನ್ನು ರೀಸೆಟ್ ಮಾಡುವುದು

  1. ನಿಮ್ಮ iPadನಲ್ಲಿ ಸೆಟ್ಟಿಂಗ್ಸ್ ಆ್ಯಪ್‌ಗೆ ಹೋಗಿ.

  2. ಆಕ್ಸೆಸಬಿಲಿಟಿಯನ್ನು ಟ್ಯಾಪ್ ಮಾಡಿ, ನಂತರ VoiceOver ಎಂಬುದನ್ನು ಟ್ಯಾಪ್ ಮಾಡಿ, ನಂತರ ಕಮಾಂಡ್‌ಗಳು ಎಂಬುದನ್ನು ಟ್ಯಾಪ್ ಮಾಡಿ.

  3. VoiceOver ಕಮಾಂಡ್‌ಗಳನ್ನು ರೀಸೆಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.