ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPadನಲ್ಲಿನ ಆರೋಗ್ಯ ಆ್ಯಪ್‌ನಲ್ಲಿ ಮಾನಸಿಕ ಆರೋಗ್ಯದ ಮೌಲ್ಯಮಾಪನವನ್ನು ತೆಗೆದುಕೊಳ್ಳುವುದು

ನಿಮಗೆ ಏನನ್ನಿಸುತ್ತಿದೆ ಎಂಬ ಪ್ರಶ್ನೆಗಳಿಗೆ ಉತ್ತರಿಸಲು ಮತ್ತು ಖಿನ್ನತೆ ಅಥವಾ ಆತಂಕದ ನಿಮ್ಮ ಪ್ರಸ್ತುತ ಅಪಾಯವನ್ನು ನೋಡಲು ವಯಸ್ಸಿಗೆ ಸೂಕ್ತವಾದ ಪ್ರಮಾಣೀಕೃತ ಮಾನಸಿಕ ಆರೋಗ್ಯ ಮೌಲ್ಯಮಾಪನಗಳನ್ನು ತೆಗೆದುಕೊಳ್ಳಬಹುದು. ಈ ಪ್ರಶ್ನಾವಳಿಗಳು ನೀವು ನಿಮ್ಮ ವೈದ್ಯರೊಂದಿಗೆ ಮಾತನಾಡಬೇಕೇ ಅಥವಾ ಬೇಡವೇ ಎಂಬುದನ್ನು ಅರ್ಥಮಾಡಿಕೊಳ್ಳಲು ನಿಮಗೆ ಸಹಾಯ ಮಾಡುತ್ತವೆ ಮತ್ತು ನೀವು ಹಂಚಿಕೊಳ್ಳಬಹುದಾದ ಫಲಿತಾಂಶಗಳ PDF ಅನ್ನು ಹೊಂದಿರುತ್ತೀರಿ. ಫಲಿತಾಂಶಗಳು ಮತ್ತು ಸಂಪನ್ಮೂಲಗಳನ್ನು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಒದಗಿಸಲಾಗಿದೆ ಮತ್ತು ವೈದ್ಯರು ಅಥವಾ ಇತರ ಅರ್ಹ ಆರೋಗ್ಯ ವೃತ್ತಿಪರರು ನೀಡುವ ಸಲಹೆಗೆ ಇದು ಬದಲಿಯಾಗಿರುವುದಿಲ್ಲ.

ಗಮನಿಸಿ: 13 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಆತಂಕದ ಅಪಾಯದ ಮೌಲ್ಯಮಾಪನ ಲಭ್ಯವಿದೆ. 18 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಖಿನ್ನತೆಯ ಅಪಾಯದ ಮೌಲ್ಯಮಾಪನ ಲಭ್ಯವಿದೆ.

ಮಾನಸಿಕ ಆರೋಗ್ಯದ ಮೌಲ್ಯಮಾಪನವನ್ನು ತೆಗೆದುಕೊಳ್ಳಿ

ಮಾನಸಿಕ ಆರೋಗ್ಯದ ಪ್ರಶ್ನಾವಳಿಯ ಫಲಿತಾಂಶಗಳನ್ನು ತೋರಿಸುವ ಆರೋಗ್ಯ ಆ್ಯಪ್‌ನಲ್ಲಿನ ಸ್ಕ್ರೀನ್.
  1. ನಿಮ್ಮ iPadನಲ್ಲಿ ಆರೋಗ್ಯ ಆ್ಯಪ್‌ಗೆ ಹೋಗಿ.

  2. ಹುಡುಕಾಟ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಮಾನಸಿಕ ಯೋಗಕ್ಷೇಮ ಎಂಬುದನ್ನು ಟ್ಯಾಪ್ ಮಾಡಿ.

  3. ಈ ಕೆಳಗಿನವುಗಳಲ್ಲಿ ಒಂದನ್ನು ಮಾಡಿ:

    • ಆತಂಕ ಅಥವಾ ಖಿನ್ನತೆಗೆ ಮೌಲ್ಯಮಾಪನವನ್ನು ತೆಗೆದುಕೊಳ್ಳಿ: ಆತಂಕದ ಅಪಾಯ ಅಥವಾ ಖಿನ್ನತೆಯ ಅಪಾಯ ಎಂಬುದನ್ನು ಟ್ಯಾಪ್ ಮಾಡಿ, ನಂತರ ಪ್ರಶ್ನಾವಳಿಯನ್ನು ತೆಗೆದುಕೊಳ್ಳಿ ಎಂಬುದನ್ನು ಟ್ಯಾಪ್ ಮಾಡಿ.

    • ಆತಂಕ ಮತ್ತು ಖಿನ್ನತೆ ಎರಡಕ್ಕೂ ಮೌಲ್ಯಮಾಪನವನ್ನು ತೆಗೆದುಕೊಳ್ಳಿ: ಆರೋಗ್ಯ ಆ್ಯಪ್‌ನಿಂದ ಹೆಚ್ಚಿನ ಮಾಹಿತಿಯನ್ನು ಪಡೆಯಲು ಕೆಳಕ್ಕೆ ಸ್ಕ್ರೋಲ್ ಮಾಡಿ, ನಂತರ ಪ್ರಶ್ನಾವಳಿಯನ್ನು ತೆಗೆದುಕೊಳ್ಳಿ ಎಂಬುದನ್ನು ಟ್ಯಾಪ್ ಮಾಡಿ.

  4. ಪ್ರಾರಂಭಿಸಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ಪ್ರಾಂಪ್ಟ್‌ಗಳಿಗೆ ಉತ್ತರಿಸಿ.

  5. ಪೂರ್ಣಗೊಂಡ ನಂತರ, ಮುಗಿದಿದೆ ಎಂಬುದನ್ನು ಟ್ಯಾಪ್ ಮಾಡಿ. ನಂತರ ನೀವು ಈ ಕೆಳಗಿನವುಗಳಲ್ಲಿ ಯಾವುದನ್ನಾದರೂ ಮಾಡಬಹುದು:

    • ನಿಮ್ಮ ಫಲಿತಾಂಶಗಳ ಕುರಿತು ಇನ್ನಷ್ಟು ತಿಳಿಯಿರಿ: ನಿಮ್ಮ ಮಟ್ಟ ಅಥವಾ ಅಪಾಯದ ಪಕ್ಕದಲ್ಲಿರುವ ಹೆಚ್ಚಿನ ಮಾಹಿತಿ ಬಟನ್ ಅನ್ನು ಟ್ಯಾಪ್ ಮಾಡಿ.

    • ನಿಮ್ಮ ಫಲಿತಾಂಶಗಳನ್ನು ಒಂದು PDF ಆಗಿ ಎಕ್ಸ್‌ಪೋರ್ಟ್ ಮಾಡಿ: PDF ಎಕ್ಸ್‌ಪೋರ್ಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

    • ಲೇಖನಗಳು ಮತ್ತು ಬಿಕ್ಕಟ್ಟಿನ ಸಂಪನ್ಮೂಲಗಳಿಗೆ ಆ್ಯಕ್ಸೆಸ್ ಪಡೆಯಿರಿ: ಇನ್ನಷ್ಟು ತಿಳಿಯಿರಿ ಎಂಬುದಕ್ಕಾಗಿ ಕೆಳಕ್ಕೆ ಸ್ಕ್ರೋಲ್ ಮಾಡಿ, ನಂತರ ಆಯ್ಕೆಯನ್ನು ಟ್ಯಾಪ್ ಮಾಡಿ.

  6. ನಿಮ್ಮ ಫಲಿತಾಂಶಗಳನ್ನು ನೀವು ನೋಡುವುದನ್ನು ಪೂರ್ಣಗೊಳಿಸಿದ ನಂತರ, ಮುಗಿದಿದೆ ಎಂಬುದನ್ನು ಟ್ಯಾಪ್ ಮಾಡಿ.

ಗಮನಿಸಿ: ರೋಗಿಯ ಆರೋಗ್ಯ ಪ್ರಶ್ನಾವಳಿ-9 (PHQ-9) ಮತ್ತು ಸಾಮಾನ್ಯ ಆತಂಕದ ಅಸ್ವಸ್ಥತೆ-7 (GAD-7) ಅನ್ನು ವೈದ್ಯರು ಅಭಿವೃದ್ಧಿಪಡಿಸಿದ್ದಾರೆ. ರಾಬರ್ಟ್ ಎಲ್. ಸ್ಪಿಟ್ಜರ್, ಜಾನೆಟ್ B. W. ವಿಲಿಯಮ್ಸ್, ಕರ್ಟ್ ಕ್ರೊಯೆಂಕೆ ಮತ್ತು ಸಹೋದ್ಯೋಗಿಗಳು, Pfizer Inc.,ನಿಂದ ಶೈಕ್ಷಣಿಕ ಅನುದಾನದೊಂದಿಗೆ, ಇವು ನೀವು ಖಿನ್ನತೆ ಮತ್ತು/ಅಥವಾ ಆತಂಕದ ಅಪಾಯದಲ್ಲಿದ್ದೀರಾ ಎಂಬುದನ್ನು ಗುರುತಿಸಲು ಸಹಾಯ ಮಾಡುವಂತಹ ಉಪಯುಕ್ತ ಸಾಧನಗಳಾಗಬಹುದು. ಅವುಗಳನ್ನು ಆರೋಗ್ಯ ಆ್ಯಪ್‌ನಲ್ಲಿ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಒದಗಿಸಲಾಗಿದೆ ಮತ್ತು ಫಲಿತಾಂಶಗಳು ವೈದ್ಯಕೀಯ ರೋಗನಿರ್ಣಯವಲ್ಲ. ಈ ಮೌಲ್ಯಮಾಪನಗಳನ್ನು ಕೆಲವು ನಿರ್ದಿಷ್ಟ ದೇಶಗಳು ಮತ್ತು ಭಾಷೆಗಳಲ್ಲಿ ಮಾತ್ರ ವೈದ್ಯಕೀಯವಾಗಿ ದೃಢೀಕರಿಸಲಾಗಿದೆ. ನಿಮ್ಮ ಮಾನಸಿಕ ಆರೋಗ್ಯದ ಬಗ್ಗೆ ನಿಮಗೆ ಕಾಳಜಿಗಳಿದ್ದರೆ, ನೀವು ವೈದ್ಯರನ್ನು ಸಂಪರ್ಕಿಸಬೇಕು.

ಮಾನಸಿಕ ಆರೋಗ್ಯ ಮೌಲ್ಯಮಾಪನದ ಸೆಟ್ಟಿಂಗ್ಸ್ ಅನ್ನು ನಿರ್ವಹಿಸಿ

  1. ನಿಮ್ಮ iPadನಲ್ಲಿ ಆರೋಗ್ಯ ಆ್ಯಪ್‌ಗೆ ಹೋಗಿ.

  2. ಹುಡುಕಾಟ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಮಾನಸಿಕ ಯೋಗಕ್ಷೇಮ ಎಂಬುದನ್ನು ಟ್ಯಾಪ್ ಮಾಡಿ.

  3. ಆತಂಕದ ಅಪಾಯ ಅಥವಾ ಖಿನ್ನತೆಯ ಅಪಾಯ ಎಂಬುದನ್ನು ಟ್ಯಾಪ್ ಮಾಡಿ, ಸ್ಕ್ರೀನ್‌ನ ಕೆಳಭಾಗಕ್ಕೆ ಸ್ಕ್ರೋಲ್ ಮಾಡಿ, ನಂತರ PDF ಎಕ್ಸ್‌ಪೋರ್ಟ್ ಎಂಬುದರ ಕೆಳಗಿರುವ ಆಯ್ಕೆಗಳು ಎಂಬುದನ್ನು ಟ್ಯಾಪ್ ಮಾಡಿ.

  4. ಈ ಕೆಳಗಿನವುಗಳಲ್ಲಿ ಯಾವುದಾದರೂ ಒಂದನ್ನು ಮಾಡಿ:

    • ನೀವು ಎಷ್ಟು ದಿನಗಳಿಗೊಮ್ಮೆ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಪ್ರಶ್ನಾವಳಿಗಳನ್ನು ತೆಗೆದುಕೊಳ್ಳಲು ಬಯಸುತ್ತೀರಿ ಎಂಬುದನ್ನು ಬದಲಾಯಿಸಿ: ಫ್ರೀಕ್ವೆನ್ಸಿ ಎಂಬುದನ್ನು ಟ್ಯಾಪ್ ಮಾಡಿ ನಂತರ ಆಯ್ಕೆಯೊಂದನ್ನು ಆರಿಸಿ.

    • ಪ್ರಶ್ನಾವಳಿಯನ್ನು ತೆಗೆದುಕೊಳ್ಳಲು ಸೂಚಿಸಬೇಕೆ ಎಂಬುದನ್ನು ಆರಿಸಿ: ನೋಟಿಫಿಕೇಷನ್‌ಗಳನ್ನು ಆನ್ ಅಥವಾ ಆಫ್ ಮಾಡಿ.

    • ಅಹಿತಕರ ಮನಸ್ಥಿತಿಗಳ ಮಾದರಿಯ ನಂತರ ಪ್ರಶ್ನಾವಳಿಯನ್ನು ತೆಗೆದುಕೊಳ್ಳಲು ಪ್ಪ್ರಾಂಪ್ಟ್‌ಗಳನ್ನು ಸ್ವೀಕರಿಸಿ: ಅಹಿತಕರ ಲಾಗಿಂಗ್ ಅನ್ನು ಆನ್ ಅಥವಾ ಆಫ್ ಮಾಡಿ.

ನೀವು ನಿಯತಕಾಲಿಕ ಪ್ರಶ್ನಾವಳಿಗಳು ಮತ್ತು ಅಹಿತಕರ ಲಾಗಿಂಗ್ ಅನ್ನು ಆನ್ ಮಾಡಿದಾಗ, ವರ್ಷಕ್ಕೆ ಒಂದೆರಡು ಬಾರಿ ಅಥವಾ ನೀವು ಅಹಿತಕರ ಮನಸ್ಸಿನ ಸ್ಥಿತಿಗಳನ್ನು ಹೊಂದಿರುವಾಗ ಪ್ರಶ್ನಾವಳಿಯನ್ನು ತೆಗೆದುಕೊಳ್ಳುವಂತೆ ನೀವು ಪ್ರಾಂಪ್ಟ್ ಅನ್ನು ಸ್ವೀಕರಿಸುತ್ತೀರಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.