ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPadನಲ್ಲಿನ ಕ್ಯಾಲೆಂಡರ್ ಆ್ಯಪ್‌ನಲ್ಲಿ ಆಹ್ವಾನಗಳಿಗೆ ಪ್ರತ್ಯುತ್ತರಿಸುವುದು

ಕ್ಯಾಲೆಂಡರ್ ಆ್ಯಪ್‌ನಲ್ಲಿ, ನೀವು ಸ್ವೀಕರಿಸಿದ ಮೀಟಿಂಗ್ ಮತ್ತು ಇವೆಂಟ್ ಆಹ್ವಾನಗಳಿಗೆ ಪ್ರತ್ಯುತ್ತರಿಸಿ.

ಇವೆಂಟ್ ಆಹ್ವಾನಕ್ಕೆ ಪ್ರತಿಕ್ರಿಯಿಸುವುದು

  1. ಇವೆಂಟ್ ನೋಟಿಫಿಕೇಷನ್ ಒಂದಕ್ಕೆ ಪ್ರತಿಕ್ರಿಯಿಸಲು, ಅದನ್ನು ಟ್ಯಾಪ್ ಮಾಡಿ.

    ಅಥವಾ ಕ್ಯಾಲೆಂಡರ್ ಆ್ಯಪ್‌ನಲ್ಲಿ ಇನ್‌ಬಾಕ್ಸ್ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಆಹ್ವಾನ ಎಂಬುದನ್ನು ಟ್ಯಾಪ್ ಮಾಡಿ.

  2. ನಿಮ್ಮ ಪ್ರತಿಕ್ರಿಯೆಯನ್ನು ಟ್ಯಾಪ್ ಮಾಡಿ—ಸ್ವೀಕರಿಸಿ, ಬಹುಶಃ, ಅಥವಾ ನಿರಾಕರಿಸಿ.

ನೀವು ಈಮೇಲ್ ಮೂಲಕ ಸ್ವೀಕರಿಸಿದ ಆಹ್ವಾನಕ್ಕೆ ಪ್ರತಿಕ್ರಿಯಿಸಲು, ಈಮೇಲ್‌ನಲ್ಲಿರುವ ಅಂಡರ್‌ಲೈನ್ ಮಾಡಲಾದ ಪಠ್ಯವನ್ನು ಟ್ಯಾಪ್ ಮಾಡಿ, ನಂತರ ಕ್ಯಾಲೆಂಡರ್‌ನಲ್ಲಿ ತೋರಿಸಿ ಎಂಬುದನ್ನು ಟ್ಯಾಪ್ ಮಾಡಿ.

ನಿಮ್ಮ ಪ್ರತಿಕ್ರಿಯೆಗೆ ನೀವು ಕಾಮೆಂಟ್‌ಗಳನ್ನು ಸೇರಿಸಿದರೆ, ನಿಮ್ಮ ಕಾಮೆಂಟ್‌ಗಳು ವ್ಯವಸ್ಥಾಪಕರಿಗೆ ಕಾಣಿಸುತ್ತವೆ ಆದರೆ ಭಾಗವಹಿಸುವ ಇತರರಿಗೆ ಕಾಣಿಸುವುದಿಲ್ಲ (ಎಲ್ಲಾ ಕ್ಯಾಲೆಂಡರ್‌ಗಳಿಗೆ ಕಾಮೆಂಟ್‌ಗಳು ಲಭ್ಯವಿಲ್ಲದಿರಬಹುದು). ನೀವು ನಿರಾಕರಿಸಿದ ಇವೆಂಟ್‌ಗಳನ್ನು ನೋಡಲು, ಕ್ಯಾಲೆಂಡರ್ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ’ನಿರಾಕರಿಸಿದ ಇವೆಂಟ್‌ಗಳನ್ನು ತೋರಿಸಿ’ ಅನ್ನು ಆನ್ ಮಾಡಿ.

ಬೇರೊಂದು ಮೀಟಿಂಗ್ ಸಮಯವನ್ನು ಸೂಚಿಸಿ

ನೀವು ಸ್ವೀಕರಿಸಿದ ಮೀಟಿಂಗ್ ಆಹ್ವಾನಕ್ಕಾಗಿ ಬೇರೆ ಸಮಯವನ್ನು ಸೂಚಿಸಬಹುದು.

  1. ನಿಮ್ಮ iPadನಲ್ಲಿ ಕ್ಯಾಲೆಂಡರ್ ಆ್ಯಪ್‌ಗೆ ಹೋಗಿ.

  2. ಮೀಟಿಂಗ್ ಅನ್ನು ಟ್ಯಾಪ್ ಮಾಡಿ, ನಂತರ ಹೊಸ ಸಮಯವನ್ನು ಸೂಚಿಸಿ ಎಂಬುದನ್ನು ಟ್ಯಾಪ್ ಮಾಡಿ.

  3. ಸಮಯವನ್ನು ಟ್ಯಾಪ್ ಮಾಡಿ, ನಂತರ ಹೊಸ ಸಮಯವನ್ನು ನಮೂದಿಸಿ.

  4. ಮುಗಿದಿದೆ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಕಳುಹಿಸಿ ಎಂಬುದನ್ನು ಟ್ಯಾಪ್ ಮಾಡಿ.

ನಿಮ್ಮ ಕ್ಯಾಲೆಂಡರ್ ಸರ್ವರ್‌ನ ಸಾಮರ್ಥ್ಯಗಳನ್ನು ಅವಲಂಬಿಸಿ, ವ್ಯವಸ್ಥಾಪಕರು ನಿಮ್ಮ ಸಲಹೆಯೊಂದಿಗೆ ಕೌಂಟರ್-ಪ್ರಪೊಸಲ್ ಅಥವಾ ಈಮೇಲ್ ಅನ್ನು ಸ್ವೀಕರಿಸುತ್ತಾರೆ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.