ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPhoneನಲ್ಲಿ FaceTime ಕರೆಗಳನ್ನು ಸ್ವೀಕರಿಸಿ

FaceTime ಕರೆಗೆ ಉತ್ತರಿಸಿ

FaceTime ಕರೆ ಬಂದಾಗ, ಈ ಕೆಳಗಿನವುಗಳಲ್ಲಿ ಯಾವುದನ್ನಾದರೂ ಮಾಡಿ:

  • ಕರೆಯನ್ನು ಸ್ವೀಕರಿಸಿ: ವೀಡಿಯೊ ಕರೆಗೆ ಉತ್ತರಿಸಲು ವೀಡಿಯೊ ಕರೆಯ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಸೇರಿಕೊಳ್ಳಿ ಎಂಬುದನ್ನು ಟ್ಯಾಪ್ ಮಾಡಿ. ಆಡಿಯೊ ಕರೆಗೆ ಉತ್ತರಿಸಲು, ಆಡಿಯೊ ಕರೆಯ ಬಟನ್ ಅನ್ನು ಟ್ಯಾಪ್ ಮಾಡಿ.

    ಸ್ಲೈಡರ್ ಕಾಣಿಸಿಕೊಂಡರೆ, ಉತ್ತರಿಸಲು ನೀವು ಅದನ್ನು ಬಲಗಡೆಗೆ ಡ್ರ್ಯಾಗ್ ಮಾಡಬಹುದು.

  • ಕರೆಯನ್ನು ನಿರಾಕರಿಸಿ: ನಿರಾಕರಿಸಿ ಅಥವಾ ಕರೆಯನ್ನು ತೊರೆಯಿರಿ ಬಟನ್ ಅನ್ನು ಟ್ಯಾಪ್ ಮಾಡಿ.

    ಹಿಂತಿರುಗಿ ಕರೆ ಮಾಡುವುದಕ್ಕಾಗಿ ರಿಮೈಂಡರ್ ಅನ್ನು ಸೆಟ್ ಮಾಡಲು ‘ನನಗೆ ನೆನಪಿಸಿ’ ಎಂಬುದನ್ನು ಟ್ಯಾಪ್ ಮಾಡಿ, ಅಥವಾ ಪಠ್ಯ ಸಂದೇಶವನ್ನು ಕಳುಹಿಸಲು ಸಂದೇಶ ಆ್ಯಪ್ ಅನ್ನು ಟ್ಯಾಪ್ ಮಾಡಿ. (ಈ ಆಯ್ಕೆಗಳನ್ನು ನೋಡಲು ನೀವು ಒಳಬರುವ ಕರೆಯ ಬ್ಯಾನರ್ ಅನ್ನು ಟ್ಯಾಪ್ ಮಾಡಬೇಕಾಗಬಹುದು.)

  • ಪ್ರಸ್ತುತ ಕರೆಯನ್ನು ಹೋಲ್ಡ್‌ನಲ್ಲಿರಿಸಿ: ಹೋಲ್ಡ್ ಮಾಡಿ ಮತ್ತು ಸ್ವೀಕರಿಸಿ ಎಂಬುದನ್ನು ಟ್ಯಾಪ್ ಮಾಡಿ.

    ಗಮನಿಸಿ: ನೀವು FaceTime ಆಡಿಯೊ ಕರೆಯಲ್ಲಿದ್ದು ನೀವು ಮತ್ತೊಂದು ಒಳಬರುವ FaceTime ಆಡಿಯೊ ಕರೆಯನ್ನು ಸ್ವೀಕರಿಸಿದರೆ ಮಾತ್ರ ಈ ಆಯ್ಕೆಯು ಲಭ್ಯವಿರುತ್ತದೆ. ಇಲ್ಲದಿದ್ದರೆ, ಪ್ರಸ್ತುತ ಕರೆಯನ್ನು ಕೊನೆಗೊಳಿಸಲು ಮತ್ತು ಒಳಬರುವ ಕರೆಗೆ ಉತ್ತರಿಸಲು ನೀವು ಕೊನೆಗೊಳಿಸಿ ಮತ್ತು ಸ್ವೀಕರಿಸಿ ಎಂಬುದನ್ನು ಟ್ಯಾಪ್ ಮಾಡಬಹುದು.

ಸಲಹೆ: ನೀವು Siriಯು ಒಳಬರುವ ಕರೆಗಳನ್ನು ಘೋಷಿಸುವಂತೆ ಮಾಡಬಹುದು. ನಿಮ್ಮ ವಾಯ್ಸ್ ಅನ್ನು ಬಳಸಿಕೊಂಡು ಆ ಕರೆಗಳನ್ನು ನೀವು ಸ್ವೀಕರಿಸಬಹುದು ಅಥವಾ ನಿರಾಕರಿಸಬಹುದು.

ವೀಡಿಯೊ ಸಂದೇಶ ಅಥವಾ ಲೈವ್ ವಾಯ್ಸ್‌ಮೇಲ್ ಅನ್ನು ಆಲಿಸಿ

ನೀವು ಒಳಬರುವ ವೀಡಿಯೊ ಕರೆಯನ್ನು ಮಿಸ್ ಮಾಡಿಕೊಂಡರೆ ಮತ್ತು ಕರೆ ಮಾಡುವವರು ವೀಡಿಯೊ ಸಂದೇಶವನ್ನು ಕಳುಹಿಸಿದರೆ, ನೀವು ವೀಡಿಯೊ ಸಂದೇಶದ ಕುರಿತು ನೋಟಿಫಿಕೇಷನ್ ಸ್ವೀಕರಿಸುತ್ತೀರಿ, ಅದನ್ನು ನೋಡಲು ನೀವು ಟ್ಯಾಪ್ ಮಾಡಬಹುದು. ನೀವು ಸೇವ್ ಮಾಡಿರುವ ಸಂಪರ್ಕಗಳು, ನೀವು ಕರೆ ಮಾಡಿದ ಜನರು ಮತ್ತು Siri ಸೂಚಿಸಿದ ಜನರಿಂದ ಮಾತ್ರ ನೀವು ವೀಡಿಯೊ ಸಂದೇಶಗಳನ್ನು ಸ್ವೀಕರಿಸಬಹುದು.

ನೀವು ಒಳಬರುವ ಆಡಿಯೊ ಕರೆಯನ್ನು ಮಿಸ್ ಮಾಡಿಕೊಂಡರೆ ಮತ್ತು ನೀವು ಸೆಟ್ಟಿಂಗ್ಸ್  > ಆ್ಯಪ್‌ಗಳು > ಫೋನ್ ಎಂಬಲ್ಲಿ ಲೈವ್ ವಾಯ್ಸ್‌ಮೇಲ್ ಅನ್ನು ಆನ್ ಮಾಡಿದ್ದರೆ, ಕರೆ ಮಾಡುವವರಿಗೆ ವಾಯ್ಸ್‌ಮೇಲ್ ಕಳುಹಿಸುವಂತೆ ಪ್ರಾಂಪ್ಟ್ ಮಾಡಲಾಗುತ್ತದೆ. ನೀವು ವಾಯ್ಸ್‌ಮೇಲ್‌ನ ನೈಜ-ಸಮಯದ ಟ್ರಾನ್ಸ್‌ಕ್ರಿಪ್ಶನ್ ಅನ್ನು ನೋಡಬಹುದು ಮತ್ತು ಅವರು ಸಂದೇಶವನ್ನು ಕಳುಹಿಸುತ್ತಿರುವಾಗಲೇ ಕರೆಗೆ ಉತ್ತರಿಸಬಹುದು. ಕರೆಗೆ ಉತ್ತರಿಸದೆಯೇ ಅಥವಾ ಬ್ಲಾಕ್ ಮಾಡದೆಯೇ ಒಳಬರುವ ವಾಯ್ಸ್‌ಮೇಲ್ ಅನ್ನು ನಿಲ್ಲಿಸಲು, ನಿಲ್ಲಿಸಿ ಎಂಬುದನ್ನು ಟ್ಯಾಪ್ ಮಾಡಿ. ಲೈವ್ ವಾಯ್ಸ್‌ಮೇಲ್ ಅನ್ನು ಆನ್ ಮಾಡಿ ಅನ್ನು ನೋಡಿ.

ಕರೆ ಮಾಡುವವರು ವೀಡಿಯೊ ಸಂದೇಶ ಅಥವಾ ವಾಯ್ಸ್‌ಮೇಲ್ ಅನ್ನು ಕಳುಹಿಸಿದ ನಂತರ, ಅದರ ಲಿಂಕ್ ನಿಮ್ಮ FaceTime ಕರೆ ಇತಿಹಾಸದಲ್ಲಿ ಅವರ ಕರೆಯ ಕೆಳಗೆ ಕಾಣಿಸಿಕೊಳ್ಳುತ್ತದೆ.

ರೆಕಾರ್ಡ್ ಮಾಡಲಾದ ವೀಡಿಯೊ ಸಂದೇಶ ಮತ್ತು ವಾಯ್ಸ್‌ಮೇಲ್‌ನ ಲಿಂಕ್‌ಗಳನ್ನು ಹೊಂದಿರುವ FaceTime ಕರೆಯ ಇತಿಹಾಸ.

ಗಮನಿಸಿ: ಲೈವ್ ವಾಯ್ಸ್‌ಮೇಲ್ ಎಲ್ಲಾ ಭಾಷೆಗಳು ಅಥವಾ ಪ್ರದೇಶಗಳಲ್ಲಿ ಲಭ್ಯವಿಲ್ಲ. iOS ಮತ್ತು iPadOS ಫೀಚರ್ ಲಭ್ಯತೆಯ ವೆಬ್‌ಸೈಟ್ ಅನ್ನು ನೋಡಿ.

ನಿಮ್ಮ ಕರೆ ಇತಿಹಾಸದಿಂದ ಕರೆಯನ್ನು ಡಿಲೀಟ್ ಮಾಡಿ

FaceTime ಆ್ಯಪ್  ಅನ್ನು ತೆರೆಯಿರಿ, ನಿಮ್ಮ ಕರೆ ಇತಿಹಾಸದಲ್ಲಿ ಕರೆಯ ಮೇಲೆ ಎಡಕ್ಕೆ ಸ್ವೈಪ್ ಮಾಡಿ, ನಂತರ ಡಿಲೀಟ್ ಮಾಡಿ ಬಟನ್ ಅನ್ನು ಟ್ಯಾಪ್ ಮಾಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.