ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPhoneನಲ್ಲಿ FaceTime ಕರೆಗಳನ್ನು ಸ್ವೀಕರಿಸಿ

FaceTime ಆ್ಯಪ್‌ನಲ್ಲಿ, ನೀವು ವೀಡಿಯೊ ಮತ್ತು ಆಡಿಯೊ ಕರೆಗಳಿಗೆ ಉತ್ತರಿಸಬಹುದು, ಕರೆಗಳನ್ನು ನಿರಾಕರಿಸಬಹುದು, ವೀಡಿಯೊ ಸಂದೇಶಗಳನ್ನು ನೋಡಬಹುದು ಅಥವಾ ವಾಯ್ಸ್‌ಮೇಲ್‌ಗಳನ್ನು ಆಲಿಸಬಹುದು ಮತ್ತು ನಿಮ್ಮ ಕರೆ ಇತಿಹಾಸದಿಂದ ಕರೆಗಳನ್ನು ಡಿಲೀಟ್ ಮಾಡಬಹುದು.

ಗಮನಿಸಿ: ಲೈವ್ ವಾಯ್ಸ್‌ಮೇಲ್ ಎಲ್ಲಾ ಭಾಷೆಗಳು ಅಥವಾ ಪ್ರದೇಶಗಳಲ್ಲಿ ಲಭ್ಯವಿಲ್ಲ. iOS ಮತ್ತು iPadOS ಫೀಚರ್ ಲಭ್ಯತೆಯ ವೆಬ್‌ಸೈಟ್ ಅನ್ನು ನೋಡಿ.

FaceTime ಕರೆಗೆ ಉತ್ತರಿಸಿ

FaceTime ಕರೆ ಬಂದಾಗ, ಈ ಕೆಳಗಿನವುಗಳಲ್ಲಿ ಯಾವುದನ್ನಾದರೂ ಮಾಡಿ:

  • ಕರೆಯನ್ನು ಸ್ವೀಕರಿಸಿ: ವೀಡಿಯೊ ಕರೆಗೆ ಉತ್ತರಿಸಲು ಸ್ವೀಕರಿಸಿ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಸೇರಿಕೊಳ್ಳಿ ಬಟನ್ ಎಂಬುದನ್ನು ಟ್ಯಾಪ್ ಮಾಡಿ. ಆಡಿಯೊ ಕರೆಗೆ ಉತ್ತರಿಸಲು, ಸ್ವೀಕರಿಸಿ ಬಟನ್ ಅನ್ನು ಟ್ಯಾಪ್ ಮಾಡಿ.

    ಸ್ಲೈಡರ್ ಕಾಣಿಸಿಕೊಂಡರೆ, ಉತ್ತರಿಸಲು ನೀವು ಅದನ್ನು ಬಲಗಡೆಗೆ ಡ್ರ್ಯಾಗ್ ಮಾಡಬಹುದು.

  • ಕರೆಯನ್ನು ನಿರಾಕರಿಸಿ: ನಿರಾಕರಿಸಿ ಅಥವಾ ಕೊನೆಗೊಳಿಸಿ ಬಟನ್ ಅನ್ನು ಟ್ಯಾಪ್ ಮಾಡಿ.

    FaceTime ವೀಡಿಯೊ ಕರೆಗಳಿಗಾಗಿ, ಪಠ್ಯ ಸಂದೇಶವನ್ನು ಕಳುಹಿಸಲು ಆ್ಯಪ್ ಅನ್ನು ಟ್ಯಾಪ್ ಮಾಡಿ ಅಥವಾ ಮರಳಿ ಕರೆ ಮಾಡುವುದಕ್ಕಾಗಿ ರಿಮೈಂಡರ್ ಅನ್ನು ಸೆಟ್ ಮಾಡಲು ನನಗೆ ನೆನಪಿಸಿ ಎಂಬುದನ್ನು ಟ್ಯಾಪ್ ಮಾಡಿ. FaceTime ಆಡಿಯೊ ಕರೆಗಳಿಗಾಗಿ, ಪಠ್ಯ ಸಂದೇಶವನ್ನು ಕಳುಹಿಸಲು ಸಂದೇಶ ಆ್ಯಪ್ ಅನ್ನು ಟ್ಯಾಪ್ ಮಾಡಿ ಅಥವಾ ಕರೆ ಮಾಡಿದವರಿಗೆ ವಾಯ್ಸ್‌ಮೇಲ್ ಕಳುಹಿಸಲು ವಾಯ್ಸ್‌ಮೇಲ್ ಎಂಬುದನ್ನು ಟ್ಯಾಪ್ ಮಾಡಿ. (ಈ ಆಯ್ಕೆಗಳನ್ನು ನೋಡಲು ನೀವು ಒಳಬರುವ ಕರೆಯ ಬ್ಯಾನರ್ ಅನ್ನು ಟ್ಯಾಪ್ ಮಾಡಬೇಕಾಗಬಹುದು.)

  • ಒಳಬರುವ ಕರೆಯನ್ನು ಸ್ವೀಕರಿಸಿ ಮತ್ತು ಪ್ರಸ್ತುತ ಕರೆಯನ್ನು ಹೋಲ್ಡ್‌ನಲ್ಲಿರಿಸಿ: ಸ್ವೀಕರಿಸಿ ಬಟನ್ ಅನ್ನು ಟ್ಯಾಪ್ ಮಾಡಿ.

    ಗಮನಿಸಿ: ನೀವು FaceTime ಆಡಿಯೊ ಕರೆಯಲ್ಲಿದ್ದು ನೀವು ಮತ್ತೊಂದು ಒಳಬರುವ FaceTime ಆಡಿಯೊ ಕರೆಯನ್ನು ಸ್ವೀಕರಿಸಿದರೆ ಮಾತ್ರ ಈ ಆಯ್ಕೆಯು ಲಭ್ಯವಿರುತ್ತದೆ. ಇಲ್ಲದಿದ್ದರೆ, ಒಳಬರುವ ಕರೆಯನ್ನು ಸ್ವೀಕರಿಸುವುದರಿಂದ ಪ್ರಸ್ತುತ ಕರೆಯು ಕೊನೆಗೊಳ್ಳುತ್ತದೆ.

ಸಲಹೆ: ನೀವು Siriಯು ಒಳಬರುವ ಕರೆಗಳನ್ನು ಘೋಷಿಸುವಂತೆ ಮಾಡಬಹುದು. ನಿಮ್ಮ ವಾಯ್ಸ್ ಅನ್ನು ಬಳಸಿಕೊಂಡು ಆ ಕರೆಗಳನ್ನು ನೀವು ಸ್ವೀಕರಿಸಬಹುದು ಅಥವಾ ನಿರಾಕರಿಸಬಹುದು.

ವೀಡಿಯೊ ಸಂದೇಶವನ್ನು ನೋಡಿ ಅಥವಾ ವಾಯ್ಸ್‌ಮೇಲ್ ಅನ್ನು ಆಲಿಸಿ

ನೀವು ಒಳಬರುವ ವೀಡಿಯೊ ಕರೆಯನ್ನು ಮಿಸ್ ಮಾಡಿಕೊಂಡರೆ ಮತ್ತು ಕರೆ ಮಾಡುವವರು ವೀಡಿಯೊ ಸಂದೇಶವನ್ನು ಕಳುಹಿಸಿದರೆ, ನೀವು ವೀಡಿಯೊ ಸಂದೇಶದ ಕುರಿತು ನೋಟಿಫಿಕೇಷನ್ ಸ್ವೀಕರಿಸುತ್ತೀರಿ. ವೀಡಿಯೊದ ಥಂಬ್‌ನೇಲ್ ಚಿತ್ರವು ನಿಮ್ಮ FaceTime ಕರೆ ಇತಿಹಾಸದಲ್ಲಿ ಸಹ ಕಾಣಿಸಿಕೊಳ್ಳುತ್ತದೆ. ವೀಡಿಯೊ ಸಂದೇಶವನ್ನು ನೋಡಲು ನೀವು ನೋಟಿಫಿಕೇಷನ್ ಅಥವಾ ಚಿತ್ರವನ್ನು ಟ್ಯಾಪ್ ಮಾಡಬಹುದು.

ಗಮನಿಸಿ: ನೀವು ಸೇವ್ ಮಾಡಿರುವ ಸಂಪರ್ಕಗಳು, ನೀವು ಕರೆ ಮಾಡಿದ ಜನರು ಮತ್ತು Siri ಸೂಚಿಸಿದ ಜನರಿಂದ ಮಾತ್ರ ನೀವು ವೀಡಿಯೊ ಸಂದೇಶಗಳನ್ನು ಸ್ವೀಕರಿಸಬಹುದು.

ನೀವು ಒಳಬರುವ ಆಡಿಯೊ ಕರೆಯನ್ನು ಮಿಸ್ ಮಾಡಿಕೊಂಡರೆ, ನೀವು ಸೆಟ್ಟಿಂಗ್ಸ್ ಆ್ಯಪ್ ಆ್ಯಪ್‌ಗಳು > ಫೋನ್ ಎಂಬಲ್ಲಿ ಲೈವ್ ವಾಯ್ಸ್‌ಮೇಲ್ ಅನ್ನು ಆನ್ ಮಾಡಿದ್ದರೆ, ಕಾಲರ್ ವಾಯ್ಸ್‌ಮೇಲ್ ಅನ್ನು ಕಳುಹಿಸಬಹುದು. ಕರೆಮಾಡಿದವರು ವಾಯ್ಸ್‌ಮೇಲ್‌ ಸಂದೇಶವನ್ನು ಕಳುಹಿಸುತ್ತಿರುವಾಗಲೇ ನೀವು ವಾಯ್ಸ್‌ಮೇಲ್‌ನ ನೈಜ-ಸಮಯದ ಟ್ರಾನ್ಸ್‌ಕ್ರಿಪ್ಟ್ ಅನ್ನು ನೋಡಬಹುದು ಮತ್ತು ಕರೆಗೆ ಉತ್ತರಿಸಬಹುದು. ಕರೆಗೆ ಉತ್ತರಿಸದೆಯೇ ಅಥವಾ ಬ್ಲಾಕ್ ಮಾಡದೆಯೇ ಒಳಬರುವ ವಾಯ್ಸ್‌ಮೇಲ್ ಅನ್ನು ನಿಲ್ಲಿಸಲು, ನಿಲ್ಲಿಸಿ ಎಂಬುದನ್ನು ಟ್ಯಾಪ್ ಮಾಡಿ. ಲೈವ್ ವಾಯ್ಸ್‌ಮೇಲ್ ಅನ್ನು ಆನ್ ಮಾಡಿ ಅನ್ನು ನೋಡಿ.

ಸಲಹೆ: ನಿರ್ದಿಷ್ಟ ಸಂಪರ್ಕದಿಂದ ಬರುವ ಎಲ್ಲಾ ವಾಯ್ಸ್‌ಮೇಲ್‌ಗಳು ಅಥವಾ ವೀಡಿಯೊ ಸಂದೇಶಗಳನ್ನು ತ್ವರಿತವಾಗಿ ಆ್ಯಕ್ಸೆಸ್ ಮಾಡಲು, ಕರೆ ಇತಿಹಾಸದಲ್ಲಿ ಅವರ ಹೆಸರನ್ನು ಟ್ಯಾಪ್ ಮಾಡಿ, ನಂತರ ವಾಯ್ಸ್‌ಮೇಲ್‌ಗಳು ಬಟನ್ ಅಥವಾ ವೀಡಿಯೊಗಳು ಬಟನ್ ಅನ್ನು ಟ್ಯಾಪ್ ಮಾಡಿ.

ಸೂಚಿಸಿರುವ ಸಂಪರ್ಕ, ರೆಕಾರ್ಡ್ ಮಾಡಿದ ವೀಡಿಯೊ ಸಂದೇಶ, ವಾಯ್ಸ್‌ಮೇಲ್ ಮತ್ತು ಗುಂಪು FaceTime ವೀಡಿಯೊ ಕರೆಯನ್ನು ತೋರಿಸುತ್ತಿರುವ FaceTime ಕರೆ ಇತಿಹಾಸ.

ನಿಮ್ಮ ಕರೆ ಇತಿಹಾಸದಿಂದ ಕರೆಯನ್ನು ಡಿಲೀಟ್ ಮಾಡಿ

  1. ನಿಮ್ಮ iPhoneನಲ್ಲಿ FaceTime ಆ್ಯಪ್‌ಗೆ  ಹೋಗಿ.

  2. ನಿಮ್ಮ ಕರೆಯ ಇತಿಹಾಸದಲ್ಲಿರುವ ಕರೆ ಎಂಬುದನ್ನು ಒತ್ತಿ ಹಿಡಿದುಕೊಳ್ಳಿ, ನಂತರ ಡಿಲೀಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.