ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPhoneನಲ್ಲಿ ಆರೋಗ್ಯ ಆ್ಯಪ್ ಬಳಕೆಯನ್ನು ಪ್ರಾರಂಭಿಸಿ

iPhoneನಲ್ಲಿನ ಆರೋಗ್ಯ ಆ್ಯಪ್ ವಿವಿಧ ಮೂಲಗಳಿಂದ ಆರೋಗ್ಯ ಡೇಟವನ್ನು ಸಂಗ್ರಹಿಸುತ್ತದೆ: ನಿಮ್ಮ iPhone, iPad, Apple Watch ಮತ್ತು ಬೆಂಬಲಿತ ಆ್ಯಪ್‌ಗಳು ಮತ್ತು ಥರ್ಡ್-ಪಾರ್ಟಿ ಸಾಧನಗಳು. ನೀವು ನಿದ್ರೆಯ ವೇಳಾಪಟ್ಟಿಯನ್ನು ಸೆಟಪ್ ಮಾಡಬಹುದು, ನಿಮ್ಮ ಹೆಡ್‌ಫೋನ್ ಮಟ್ಟವನ್ನು ಪರಿಶೀಲಿಸಬಹುದು, ನಿಮ್ಮ ಔಷಧಿಗಳನ್ನು ಯಾವಾಗ ತೆಗೆದುಕೊಳ್ಳಬೇಕು ಎಂಬುದನ್ನು ನಿಗದಿಪಡಿಸುವುದು ಸೇರಿದಂತೆ ಇನ್ನೂ ಹೆಚ್ಚಿನ ಚಟುವಟಿಕೆಗಳನ್ನು ನಿರ್ವಹಿಸಬಹುದು.

ಆರೋಗ್ಯ ಆ್ಯಪ್‌ನಲ್ಲಿ ಸಾರಾಂಶ ಸ್ಕ್ರೀನ್. ಚಟುವಟಿಕೆ, ಸ್ಲೀಪ್ ಸ್ಕೋರ್, ಮಾನಸಿಕ ಸ್ಥಿತಿ ಮತ್ತು ಔಷಧಿಗಳ ಬಗೆಗಿನ ಮಾಹಿತಿಯು ಪಿನ್ ಮಾಡಿರುವುದು ಎಂಬುದರ ಕೆಳಗೆ ಕಾಣಿಸುತ್ತದೆ.

ನಿಮ್ಮ ಆರೋಗ್ಯ ಡೇಟವನ್ನು ಒಂದೇ ಸ್ಥಳದಲ್ಲಿ ಕಂಡುಕೊಳ್ಳಿ

ಮೊಬಿಲಿಟಿ ಡೇಟ, ನಿದ್ರೆಯ ಇತಿಹಾಸ ಮತ್ತು ನಿಮ್ಮ ವೈದ್ಯಕೀಯ ಪೂರೈಕೆದಾರರಿಂದ ಪಡೆದ ಆರೋಗ್ಯ ದಾಖಲೆಗಳನ್ನು ಒಳಗೊಂಡಂತೆ ಮೌಲ್ಯಯುತವಾದ ಆರೋಗ್ಯ ಡೇಟವನ್ನು iPhone ಸ್ವಯಂಚಾಲಿತವಾಗಿ ಸಂಗ್ರಹಿಸುತ್ತದೆ ಮತ್ತು ವಿಶ್ಲೇಷಿಸುತ್ತದೆ. ನೀವು ತೆಗೆದುಕೊಳ್ಳುತ್ತಿರುವ ಔಷಧಿಗಳು, ನಿಮ್ಮ ಋತುಚಕ್ರ ಮತ್ತು ಇನ್ನೂ ಹೆಚ್ಚಿನವುಗಳ ಮಾಹಿತಿಯನ್ನು ನೀವು ಹಸ್ತಚಾಲಿತವಾಗಿ ಸೇರಿಸಬಹುದು. ನಿಮ್ಮ ಎಲ್ಲಾ ಆರೋಗ್ಯ ಡೇಟವನ್ನು ತೋರಿಸಲು, ಆರೋಗ್ಯ ಆ್ಯಪ್‌ಗೆ ಹೋಗಿ ಮತ್ತು ಹೈಲೈಟ್‌ಗಳನ್ನು ನೋಡಲು ಕೆಳಗೆ ಸ್ಕ್ರೋಲ್ ಮಾಡಿ.

ಹೆಸರು, ಹುಟ್ಟಿದ ದಿನಾಂಕ, ರಕ್ತದ ಗುಂಪು ಮತ್ತು ಇತರ ಮಾಹಿತಿಯ ಫೀಲ್ಡ್‌ಗಳನ್ನು ಒಳಗೊಂಡಿರುವ ಆರೋಗ್ಯ ವಿವರಗಳ ಸ್ಕ್ರೀನ್.

ನಿಮ್ಮ ಆರೋಗ್ಯದ ವಿವರಗಳನ್ನು ಭರ್ತಿ ಮಾಡಿ

ನಿಮ್ಮ ಅನುಭವವನ್ನು ವೈಯಕ್ತೀಕರಿಸಲು, ನಿಮ್ಮ ಹೆಸರು, ಹುಟ್ಟಿದ ದಿನಾಂಕ, ಲಿಂಗ ಮತ್ತು ಇತರ ಮೂಲ ಮಾಹಿತಿಯನ್ನು ಆರೋಗ್ಯ ವಿವರಗಳಿಗೆ ಸೇರಿಸಿ. ನಿಮ್ಮ ಆರೋಗ್ಯ ವಿವರಗಳನ್ನು ಎಡಿಟ್ ಮಾಡಲು, ಸಾರಾಂಶ ಎಂಬುದನ್ನು ಟ್ಯಾಪ್ ಮಾಡಿ, ಮೇಲಿನ ಬಲಭಾಗದಲ್ಲಿರುವ ನಿಮ್ಮ ಚಿತ್ರ ಅಥವಾ ಹೆಸರಿನ ಮೊದಲಕ್ಷರಗಳನ್ನು ಟ್ಯಾಪ್ ಮಾಡಿ, ಆರೋಗ್ಯ ವಿವರಗಳು ಎಂಬುದನ್ನು ಟ್ಯಾಪ್ ಮಾಡಿ, ನಂತರ ಎಡಿಟ್ ಎಂಬುದನ್ನು ಟ್ಯಾಪ್ ಮಾಡಿ.

ಆರೋಗ್ಯ ಆ್ಯಪ್‌ನಲ್ಲಿನ ಔಷಧಿಗಳ ಸ್ಕ್ರೀನ್, ದಿನಾಂಕ ಮತ್ತು ಔಷಧಿಗಳ ಲಾಗ್ ಅನ್ನು ತೋರಿಸುತ್ತದೆ.

ನಿಮ್ಮ ಔಷಧಿಗಳನ್ನು ನಿಗದಿಗೊಳಿಸಿ

ನೀವು ತೆಗೆದುಕೊಳ್ಳುತ್ತಿರುವ ಔಷಧಿಗಳ ಪಟ್ಟಿಯನ್ನು ರಚಿಸಿ, ಅವುಗಳನ್ನು ಯಾವಾಗ ತೆಗೆದುಕೊಳ್ಳಬೇಕು ಎಂಬುದನ್ನು ನಿಗದಿಗೊಳಿಸಿ ಮತ್ತು ನೀವು ಯಾವಾಗ ತೆಗೆದುಕೊಳ್ಳುತ್ತೀರೋ ಆಗ ಲಾಗ್ ಮಾಡಿ. ಹೊಸ ಔಷಧಿಯನ್ನು ಸೇರಿಸಲು, ಹುಡುಕಾಟ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಔಷಧಿಗಳು ಎಂಬುದನ್ನು ಟ್ಯಾಪ್ ಮಾಡಿ, ನಂತರ ಔಷಧಿಯನ್ನು ಸೇರಿಸಿ ಎಂಬುದನ್ನು ಟ್ಯಾಪ್ ಮಾಡಿ.

ಸ್ಕ್ರೀನ್‌ನ ಮೇಲ್ಭಾಗದಲ್ಲಿ ಒಂದು ವಾರದ ಟೈಮ್‌ಲೈನ್ ಅನ್ನು ತೋರಿಸುವ ಸೈಕಲ್ ಟ್ರ್ಯಾಕಿಂಗ್ ಸ್ಕ್ರೀನ್. ದಟ್ಟ ಕೆಂಪು ಬಣ್ಣದ ವೃತ್ತಗಳು ಮತ್ತು ನೇರಳೆ ಬಣ್ಣದ ಡಾಟ್‌ಗಳು, ಟೈಮ್‌ಲೈನ್‌ನಲ್ಲಿ ಮೊದಲ 5 ದಿನಗಳನ್ನು ಗುರುತಿಸುತ್ತವೆ. ಟೈಮ್‌ಲೈನ್‌ನ ಕೆಳಗೆ ಋತುಚಕ್ರ, ರೋಗಲಕ್ಷಣಗಳು ಮತ್ತು ಹೆಚ್ಚಿನ ಮಾಹಿತಿಯನ್ನು ಸೇರಿಸುವ ಆಯ್ಕೆಗಳಿವೆ.

ನಿಮ್ಮ ಋತುಚಕ್ರವನ್ನು ಟ್ರ್ಯಾಕ್ ಮಾಡಿ

ಸೈಕಲ್ ಟ್ರ್ಯಾಕಿಂಗ್ ಮೂಲಕ, ನೀವು ನಿಮ್ಮ ಋತುಚಕ್ರವನ್ನು ಲಾಗ್ ಮಾಡಬಹುದು, ಸೆಳೆತದಂತಹ ರೋಗಲಕ್ಷಣಗಳನ್ನು ದಾಖಲಿಸಬಹುದು ಮತ್ತು ಹಾಲುಣಿಸುವಿಕೆಯಂತಹ ಸೈಕಲ್ ಫ್ಯಾಕ್ಟರ್‌ಗಳನ್ನು ಟ್ರ್ಯಾಕ್ ಮಾಡಬಹುದು. ನಿಮ್ಮ ಮುಂದಿನ ಋತುಚಕ್ರ ಅಥವಾ ಫಲವತ್ತತೆಯ ಅವಧಿ ಯಾವಾಗ ಪ್ರಾರಂಭವಾಗುತ್ತದೆ ಎಂಬುದನ್ನು ಊಹಿಸುವುದಕ್ಕೆ ಸಹಾಯ ಮಾಡಲು ಸಹ ನೀವು ಇದನ್ನು ಬಳಸಬಹುದು. ಸೈಕಲ್ ಟ್ರ್ಯಾಕಿಂಗ್ ಅನ್ನು ಸೆಟಪ್ ಮಾಡಲು, ಹುಡುಕಾಟ ಬಟನ್ ಅನ್ನು ಟ್ಯಾಪ್ ಮಾಡಿ, ಸೈಕಲ್ ಟ್ರ್ಯಾಕಿಂಗ್ ಎಂಬುದನ್ನು ಟ್ಯಾಪ್ ಮಾಡಿ, ನಂತರ ಸೈಕಲ್ ಟ್ರ್ಯಾಕಿಂಗ್ ಅನ್ನು ಸೆಟಪ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

ಇನ್ನಷ್ಟು ತಿಳಿದುಕೊಳ್ಳಲು ಬಯಸುವಿರಾ?

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.