ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

ಕಸ್ಟಮ್ iPhone ಲಾಕ್ ಸ್ಕ್ರೀನ್ ಅನ್ನು ರಚಿಸಿ

ಕಸ್ಟಮೈಸ್ ಮಾಡಿದ iPhone ಲಾಕ್ ಸ್ಕ್ರೀನ್.

ವಾಲ್‌ಪೇಪರ್ ಅನ್ನು ಆರಿಸುವ ಮೂಲಕ, ಮೆಚ್ಚಿನ ಫೋಟೋ ಒಂದನ್ನು ಪ್ರದರ್ಶಿಸುವ ಮೂಲಕ, ಸಮಯದ ಫಾಂಟ್ ಅನ್ನು ಬದಲಾಯಿಸುವ ಮೂಲಕ, ವಿಜೆಟ್‌ಗಳನ್ನು ಸೇರಿಸುವ ಮೂಲಕ ಮತ್ತು ಇತ್ಯಾದಿಗಳ ಮೂಲಕ ನಿಮ್ಮ ಲಾಕ್ ಸ್ಕ್ರೀನ್ ಅನ್ನು ನೀವು ವೈಯಕ್ತೀಕರಿಸಬಹುದು.

ನೀವು ಒಂದಕ್ಕಿಂತ ಹೆಚ್ಚು ಲಾಕ್ ಸ್ಕ್ರೀನ್‌ಗಳನ್ನು ರಚಿಸಬಹುದು, ಲಾಕ್ ಸ್ಕ್ರೀನ್‌ಗಳ ನಡುವೆ ಬದಲಿಸಬಹುದು ಮತ್ತು ಲಾಕ್ ಸ್ಕ್ರೀನ್ ಅನ್ನು ಫೋಕಸ್‌ಗೆ ಲಿಂಕ್ ಸಹ ಮಾಡಬಹುದು. ಆದ್ದರಿಂದ, ಉದಾಹರಣೆಗೆ, ನೀವು ಕೆಲಸದ ಮೇಲೆ ಗಮನಹರಿಸಲು ಬಯಸಿದಾಗ ನೀವು ನಿರ್ದಿಷ್ಟ ಲಾಕ್ ಸ್ಕ್ರೀನ್ ಅನ್ನು ಸೆಟ್ ಮಾಡಬಹುದು.

ನಿಮ್ಮ ಲಾಕ್ ಸ್ಕ್ರೀನ್ ಅನ್ನು ಎಡಿಟ್ ಮಾಡುವುದು ಅಥವಾ ಹೊಸದನ್ನು ರಚಿಸುವುದು

  1. ನಿಮ್ಮ iPhoneನಲ್ಲಿ ಸೈಡ್ ಬಟನ್ ಅನ್ನು ಎರಡು ಬಾರಿ ಒತ್ತಿ.

  2. ಲಾಕ್ ಸ್ಕ್ರೀನ್ ಅನ್ನು ಒತ್ತಿ ಹಿಡಿಯಿರಿ, ನಂತರ ಹೊಸ ಲಾಕ್ ಸ್ಕ್ರೀನ್ ಅನ್ನು ರಚಿಸಲು ಹೊಸ ಲಾಕ್ ಸ್ಕ್ರೀನ್ ವಾಲ್‌ಪೇಪರ್ ಸೇರಿಸಿ ಬಟನ್ ಅನ್ನು ಟ್ಯಾಪ್ ಮಾಡಿ. (ಹೊಸ ಲಾಕ್ ಸ್ಕ್ರೀನ್ ವಾಲ್‌ಪೇಪರ್ ಸೇರಿಸಿ ಬಟನ್ ನಿಮಗೆ ಕಾಣಿಸದಿದ್ದರೆ, ಲಾಕ್ ಸ್ಕ್ರೀನ್ ಅನ್ನು ಮತ್ತೊಮ್ಮೆ ಒತ್ತಿ ಹಿಡಿದುಕೊಳ್ಳಿ, ನಂತರ ನಿಮ್ಮ ಪಾಸ್‌ಕೋಡ್ ಅನ್ನು ನಮೂದಿಸಿ.)

    ಅಸ್ತಿತ್ವದಲ್ಲಿರುವ ಲಾಕ್ ಸ್ಕ್ರೀನ್‌ನಲ್ಲಿ ಬದಲಾವಣೆಗಳನ್ನು ಮಾಡಲು, ನೀವು ಬದಲಾಯಿಸಲು ಬಯಸುವ ಸ್ಕ್ರೀನ್‌ಗೆ ಸ್ವೈಪ್ ಮಾಡಿ, ನಂತರ ಕಸ್ಟಮೈಸ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

  3. ನೀವು ಹೊಸ ಲಾಕ್ ಸ್ಕ್ರೀನ್ ಅನ್ನು ರಚಿಸುತ್ತಿದ್ದರೆ, ವಾಲ್‌ಪೇಪರ್ ಆಯ್ಕೆಗಳಲ್ಲಿ ಒಂದನ್ನು ಟ್ಯಾಪ್ ಮಾಡಿ. iPhone 12 ಮತ್ತು ನಂತರದ ಮಾಡಲ್‌ಗಳಲ್ಲಿ, ನೀವು 3D ಎಫೆಕ್ಟ್‌ಗಾಗಿ ಸ್ಪೇಷಿಯಲ್ ದೃಶ್ಯವನ್ನು ಬಳಸಿ ನೋಡಬಹುದು ಹಾಗೂ ನಿಮ್ಮ ಫೋಟೋ ವಾಲ್‌ಪೇಪರ್ ಮತ್ತು ನೋಟಿಫಿಕೇಶನ್‌ಗಳಿಗೆ ಸಮಯವು ಡೈನಾಮಿಕ್ ಆಗಿ ಹೊಂದಿಕೊಳ್ಳುವ ಆಯ್ಕೆಗಳನ್ನು ಪ್ರಯತ್ನಿಸಬಹುದು.

    ಗಮನಿಸಿ: ನಿಮಗೆ ಬಳಸಲು ಬೇಕಾದ ವಾಲ್‌ಪೇಪರ್ ಆಯ್ಕೆಗಳು (ಉದಾಹರಣೆಗೆ, ಹವಾಮಾನ ಅಥವಾ ಖಗೋಳಶಾಸ್ತ್ರ) ನಿಮಗೆ ಕಾಣಿಸದಿದ್ದರೆ, ಹೆಚ್ಚಿನ ಆಯ್ಕೆಗಳನ್ನು ನೋಡಲು ಕೆಳಕ್ಕೆ ಸ್ಕ್ರೋಲ್ ಮಾಡಿ, ನಂತರ ನೀವು ಇಷ್ಟಪಡುವ ಆಯ್ಕೆಯ ಕೆಳಗಿರುವ ‘ಪಡೆಯಿರಿ’ ಎಂಬುದನ್ನು ಟ್ಯಾಪ್ ಮಾಡಿ.

    ಎಡಿಟ್ ಆಗುತ್ತಿರುವ ಕಸ್ಟಮ್ ಲಾಕ್ ಸ್ಕ್ರೀನ್. ಕಸ್ಟಮೈಸೇಶನ್‌ಗೆ ಲಭ್ಯವಿರುವ ಎಲಿಮೆಂಟ್‌ಗಳನ್ನು ಆಯ್ಕೆಮಾಡಲಾಗಿದೆ—ದಿನಾಂಕ, ಸಮಯ ಮತ್ತು ವಿಜೆಟ್‌ಗಳನ್ನು ಸೇರಿಸುವ ಬಟನ್.
  4. ನಿಮ್ಮ ಲಾಕ್‌ಸ್ಕ್ರೀನ್ ಅನ್ನು ಕಸ್ಟಮೈಸ್ ಮಾಡಲು ಕೆಲವು ಮಾರ್ಗಗಳು ಇಲ್ಲಿವೆ (ನೀವು ಆಯ್ಕೆಮಾಡುವ ವಾಲ್‌ಪೇಪರ್‌ಗೆ ಅನುಗುಣವಾಗಿ ಆಯ್ಕೆಗಳು ಬದಲಾಗುತ್ತವೆ):

    • ಗಡಿಯಾರದ ನೋಟವನ್ನು ಬದಲಾಯಿಸಿ: ಎತ್ತರವನ್ನು ಹೆಚ್ಚಿಸಲು ಕೆಳಗಿನ ಬಲ ಮೂಲೆಯನ್ನು ಡ್ರ್ಯಾಗ್ ಮಾಡಿ, ನಂತರ ಫಾಂಟ್ ಅನ್ನು ಬದಲಾಯಿಸಲು ಸಮಯ ಎಂಬುದರ ಮೇಲೆ ಟ್ಯಾಪ್ ಮಾಡಿ, ಹೆಚ್ಚು ಪಾರದರ್ಶಕ ನೋಟಕ್ಕೆ ಬದಲಾಯಿಸಿ ಮತ್ತು ಇನ್ನಷ್ಟು ಚಟುವಟಿಕೆಗಳನ್ನು ನಿರ್ವಹಿಸಿ.

    • 3D ಎಫೆಕ್ಟ್ ಸೇರಿಸಿ: ಸ್ಪೇಷಿಯಲ್ ಎಫೆಕ್ಟ್‌ಗಳನ್ನು ಬೆಂಬಲಿಸುವ ಫೋಟೋವೊಂದನ್ನು ನೀವು ಸೇರಿಸಿದ್ದರೆ, ಸ್ಪೇಷಿಯಲ್ ಕ್ಯಾಪ್ಚರ್ ಬಟನ್ ಅನ್ನು ಟ್ಯಾಪ್ ಮಾಡಿ (iPhone 12 ಮತ್ತು ನಂತರದ ಮಾಡಲ್‌ಗಳಲ್ಲಿ).

    • ವಿಜೆಟ್‌ಗಳನ್ನು ಸೇರಿಸಿ ಅಥವಾ ಬದಲಾಯಿಸಿ: ನಿಮ್ಮ ಅಸ್ತಿತ್ವದಲ್ಲಿರುವ ವಿಜೆಟ್‌ಗಳನ್ನು ಟ್ಯಾಪ್ ಮಾಡಿ ಅಥವಾ ವಿಜೆಟ್‌ಗಳನ್ನು ಸೇರಿಸಿ ಎಂಬುದನ್ನು ಟ್ಯಾಪ್ ಮಾಡಿ.

    • ಕಂಟ್ರೋಲ್‌ಗಳನ್ನು ಸ್ವ್ಯಾಪ್ ಮಾಡಿ (ಉದಾಹರಣೆಗೆ ಫ್ಲ್ಯಾಶ್‌ಲೈಟ್‌): ಕಂಟ್ರೋಲ್‌ಗಳಲ್ಲಿ ಒಂದರಲ್ಲಿ ತೆಗೆದುಹಾಕಿ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ತ್ವರಿತ ಕ್ರಿಯೆಯನ್ನು ಸೇರಿಸಿ ಬಟನ್ ಅನ್ನು ಟ್ಯಾಪ್ ಮಾಡಿ.

    • ನಿಮ್ಮ ಫೋಟೋದ ಸ್ಥಾನವನ್ನು ಬದಲಾಯಿಸಿ: ಝೂಮ್ ಇನ್ ಮಾಡಲು ಪಿಂಚ್ ಮಾಡಿ ತೆರೆಯಿರಿ, ಚಿತ್ರವನ್ನು ಮೂವ್ ಮಾಡಲು ಎರಡು ಬೆರಳುಗಳಿಂದ ಡ್ರ್ಯಾಗ್ ಮಾಡಿ, ನಂತರ ಝೂಮ್ ಔಟ್ ಮಾಡಲು ಪಿಂಚ್ ಮಾಡಿ ಮುಚ್ಚಿ.

    • ಮಲ್ಟಿಲೇಯರ್ಡ್ ಎಫೆಕ್ಟ್ ರಚಿಸಿ: ಡೆಪ್ತ್ ಎಫೆಕ್ಟ್ ಬಟನ್ ಅನ್ನು ಟ್ಯಾಪ್ ಮಾಡಿ. ಅಥವಾ ಲೇಯರಿಂಗ್ ಅನ್ನು ಬೆಂಬಲಿಸುವ ಫೋಟೋವನ್ನು ನೀವು ಹೊಂದಿದ್ದರೆ, ಇನ್ನಷ್ಟು ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಡೆಪ್ತ್ ಎಫೆಕ್ಟ್ ಅನ್ನು ಆರಿಸಿ.

    • ಶೈಲಿಯನ್ನು ಬದಲಿಸಿ: ಬೇರೆ ಬಣ್ಣದ ಫಿಲ್ಟರ್‌ಗಳನ್ನು ಪ್ರಯತ್ನಿಸಲು ಎಡಕ್ಕೆ ಅಥವಾ ಬಲಕ್ಕೆ ಸ್ವೈಪ್ ಮಾಡಿ.

    • Live Photo ಮೂಲಕ ಮೋಷನ್ ಎಫೆಕ್ಟ್ ರಚಿಸಿ: ನೀವು ಸ್ಲೋ ಮೋಷನ್ ಆಗಿ ಬದಲಿಸಬಹುದಾದ Live Photoವನ್ನು ಆಯ್ಕೆಮಾಡಿದರೆ, ಸಾಧನವು ಎಚ್ಚರಗೊಂಡಾಗ Live Photoವನ್ನು ಪ್ಲೇ ಮಾಡಲು Live photo ಬಟನ್ ಅನ್ನು ಟ್ಯಾಪ್ ಮಾಡಿ.

    • ಶಫಲ್ ಫ್ರೀಕ್ವೆನ್ಸಿಯನ್ನು ಸೆಟ್ ಮಾಡಿ: ನೀವು ಫೋಟೋ ಶಫಲ್ ಅನ್ನು ಆರಿಸಿದ್ದರೆ, ಫೋಟೋ ಆಯ್ಕೆಯನ್ನು ಬದಲಾಯಿಸಲು ಫೋಟೋ ಥಂಬ್‌ನೇಲ್ ಅನ್ನು ಟ್ಯಾಪ್ ಮಾಡಿ ಅಥವಾ ಇನ್ನಷ್ಟು ಬಟನ್ ಅನ್ನು ಟ್ಯಾಪ್ ಮಾಡುವ ಮೂಲಕ ಶಫಲ್ ಫ್ರೀಕ್ವನ್ಸಿಯನ್ನು ಬದಲಾಯಿಸಿ.

    • ಲೈಟ್ ಮತ್ತು ಡಾರ್ಕ್ ಗೋಚರತೆಯ ನಡುವೆ ಬದಲಿಸಿ ನೀವು ಆಯ್ಕೆ ಮಾಡಿದ ಹಿನ್ನೆಲೆಯು ಲೈಟ್ ಮೋಡ್ ಮತ್ತು ಡಾರ್ಕ್ ಮೋಡ್ ಆಯ್ಕೆಯನ್ನು ಹೊಂದಿದ್ದರೆ, ಗೋಚರತೆ ಬಟನ್ ಅನ್ನು ಟ್ಯಾಪ್ ಮಾಡಿ.

  5. ಸೇರಿಸಿ ಅಥವಾ ಮುಗಿದಿದೆ ಎಂಬುದನ್ನು ಟ್ಯಾಪ್ ಮಾಡಿ, ನಂತರ ವಾಲ್‌ಪೇಪರ್ ಪೇರ್ ಆಗಿ ಸೆಟ್ ಮಾಡಿ ಅಥವಾ ಹೋಮ್ ಸ್ಕ್ರೀನ್ ಕಸ್ಟಮೈಸ್ ಮಾಡಿ ಎಂಬುದನ್ನು ಆಯ್ಕೆಮಾಡಿ.

ನಿಮ್ಮ ಲಾಕ್ ಸ್ಕ್ರೀನ್‌ಗೆ ಫೋಕಸ್ ಅನ್ನು ಲಿಂಕ್ ಮಾಡಿ

ಅಡಚಣೆಗಳನ್ನು ಕಡಿಮೆ ಮಾಡುವ ಮೂಲಕ ಕೆಲಸದ ಮೇಲೆ ಗಮನ ಕೇಂದ್ರೀಕರಿಸಲು ಫೋಕಸ್ ನಿಮಗೆ ಸಹಾಯ ಮಾಡುತ್ತದೆ. ನೀವು ಫೋಕಸ್ ಅನ್ನು ಸೆಟಪ್ ಮಾಡಿದ ನಂತರ, ನೀವು ಅದನ್ನು ನಿಮ್ಮ ಲಾಕ್ ಸ್ಕ್ರೀನ್‌ಗೆ ಲಿಂಕ್ ಮಾಡಬಹುದು — ಇದರಿಂದ ನೀವು ಆ ನಿರ್ದಿಷ್ಟ ಲಾಕ್ ಸ್ಕ್ರೀನ್ ಅನ್ನು ಬಳಸಿದಾಗಲೆಲ್ಲಾ ನಿಮ್ಮ ಫೋಕಸ್ ಸೆಟ್ಟಿಂಗ್ಸ್ ಅನ್ವಯಿಸುತ್ತವೆ ಮತ್ತು ಆ ಫೋಕಸ್ ಆನ್ ಆಗಿರುವಾಗಲೆಲ್ಲಾ ಆ ಲಾಕ್ ಸ್ಕ್ರೀನ್ ಕಾಣಿಸಿಕೊಳ್ಳುತ್ತದೆ.

  1. ನಿಮ್ಮ iPhoneನಲ್ಲಿ ಸೈಡ್ ಬಟನ್ ಒತ್ತಿ.

  2. ಸ್ಕ್ರೀನ್‌ನ ಕೆಳಭಾಗದಲ್ಲಿ ಕಸ್ಟಮೈಸ್ ಬಟನ್ ಕಾಣಿಸುವವರೆಗೂ ಲಾಕ್ ಸ್ಕ್ರೀನ್ ಅನ್ನು ಒತ್ತಿ ಹಿಡಿಯಿರಿ.

  3. ಫೋಕಸ್ ಆಯ್ಕೆಗಳನ್ನು ನೋಡಲು ವಾಲ್‌ಪೇಪರ್‌ನ ಕೆಳಗಿರುವ ಫೋಕಸ್ ಅನ್ನು ಟ್ಯಾಪ್ ಮಾಡಿ—ಉದಾಹರಣೆಗೆ, ಅಡಚಣೆ ಮಾಡಬೇಡಿ, ವೈಯಕ್ತಿಕ, ನಿದ್ರೆ ಮತ್ತು ಕೆಲಸ.

  4. ಫೋಕಸ್ ಅನ್ನು ಆಯ್ಕೆಮಾಡಿ, ನಂತರ ಮುಚ್ಚಿ ಬಟನ್ ಅನ್ನು ಟ್ಯಾಪ್ ಮಾಡಿ.

ಲಾಕ್ ಸ್ಕ್ರೀನ್‌ಗಳ ನಡುವೆ ಬದಲಾಯಿಸಿ

ನೀವು ಒಂದಕ್ಕಿಂತ ಹೆಚ್ಚು ಕಸ್ಟಮ್ ಲಾಕ್ ಸ್ಕ್ರೀನ್‌ಗಳನ್ನು ರಚಿಸಬಹುದು ಮತ್ತು ದಿನವಿಡೀ ಅವುಗಳ ನಡುವೆ ಬದಲಾಯಿಸಬಹುದು.

  1. ನಿಮ್ಮ iPhoneನಲ್ಲಿ ಸೈಡ್ ಬಟನ್ ಒತ್ತಿ.

  2. ಸ್ಕ್ರೀನ್‌ನ ಕೆಳಭಾಗದಲ್ಲಿ ಕಸ್ಟಮೈಸ್ ಬಟನ್ ಕಾಣಿಸುವವರೆಗೂ ಲಾಕ್ ಸ್ಕ್ರೀನ್ ಅನ್ನು ಒತ್ತಿ ಹಿಡಿಯಿರಿ.

  3. ನೀವು ಬಳಸಲು ಬಯಸುವ ಲಾಕ್ ಸ್ಕ್ರೀನ್‌ಗೆ ಸ್ವೈಪ್ ಮಾಡಿ, ನಂತರ ಅದನ್ನು ಟ್ಯಾಪ್ ಮಾಡಿ.

ಗಮನಿಸಿ: ಒಂದು ಲಾಕ್ ಸ್ಕ್ರೀನ್ ನಿರ್ದಿಷ್ಟ ಫೋಕಸ್‌ಗೆ ಲಿಂಕ್ ಆಗಿದ್ದರೆ, ಆ ಲಾಕ್ ಸ್ಕ್ರೀನ್‌ನಿಂದ ಇನ್ನೊಂದಕ್ಕೆ ಬದಲಾಯಿಸುವುದರಿಂದ ನಿಮ್ಮ ಫೋಕಸ್ ಸಹ ಬದಲಾಗುತ್ತದೆ.

ಲಾಕ್ ಸ್ಕ್ರೀನ್ ಅನ್ನು ಡಿಲೀಟ್ ಮಾಡುವುದು

ನಿಮಗೆ ಅಗತ್ಯವಿಲ್ಲದ ಲಾಕ್ ಸ್ಕ್ರೀನ್‌ಗಳನ್ನು ನೀವು ಡಿಲೀಟ್ ಮಾಡಬಹುದು.

  1. ನಿಮ್ಮ iPhoneನಲ್ಲಿ ಸೈಡ್ ಬಟನ್ ಒತ್ತಿ.

  2. ಸ್ಕ್ರೀನ್‌ನ ಕೆಳಭಾಗದಲ್ಲಿ ಕಸ್ಟಮೈಸ್ ಬಟನ್ ಕಾಣಿಸುವವರೆಗೂ ಲಾಕ್ ಸ್ಕ್ರೀನ್ ಅನ್ನು ಒತ್ತಿ ಹಿಡಿಯಿರಿ.

  3. ನೀವು ಡಿಲೀಟ್ ಮಾಡಲು ಬಯಸುವ ಲಾಕ್ ಸ್ಕ್ರೀನ್‌ಗೆ ಹೋಗಲು ಸ್ವೈಪ್ ಮಾಡಿ, ಸ್ಕ್ರೀನ್ ಮೇಲೆ ಸ್ವೈಪ್ ಮಾಡಿ, ಟ್ರ್ಯಾಶ್ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ “ಈ ವಾಲ್‌ಪೇಪರ್ ಅನ್ನು ಡಿಲೀಟ್ ಮಾಡಿ” ಎಂಬುದನ್ನು ಟ್ಯಾಪ್ ಮಾಡಿ

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.