ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPhoneನಲ್ಲಿ ಸೈಡ್ ಅಥವಾ ಹೋಮ್ ಬಟನ್ ಸೆಟ್ಟಿಂಗ್ಸ್ ಅನ್ನು ಸರಿಹೊಂದಿಸುವುದು

ಸೈಡ್ ಬಟನ್‌ಗಾಗಿ (Face ID ಹೊಂದಿರುವ iPhoneನಲ್ಲಿ) ಅಥವಾ ಹೋಮ್ ಬಟನ್‌ಗಾಗಿ (ಇತರ iPhone ಮಾಡಲ್‌ಗಳಲ್ಲಿ) ನೀವು ಆ್ಯಕ್ಸೆಸಬಿಲಿಟಿ ಸೆಟ್ಟಿಂಗ್ಸ್ ಅನ್ನು ಸರಿಹೊಂದಿಸಬಹುದು.

  1. ಸೆಟ್ಟಿಂಗ್ಸ್‌  > ಆ್ಯಕ್ಸೆಸಬಿಲಿಟಿ ಎಂಬಲ್ಲಿಗೆ ಹೋಗಿ, ನಂತರ ಸೈಡ್ ಬಟನ್ (Face ID ಹೊಂದಿರುವ iPhoneನಲ್ಲಿ) ಅಥವಾ ಹೋಮ್ ಬಟನ್ (Touch ID ಹೊಂದಿರುವ iPhoneನಲ್ಲಿ) ಅನ್ನು ಟ್ಯಾಪ್ ಮಾಡಿ.

  2. ಈ ಕೆಳಗಿನವುಗಳಲ್ಲಿ ಯಾವುದಾದರೂ ಒಂದನ್ನು ಸೆಟ್ ಮಾಡಿ:

    • ಕ್ಲಿಕ್ ವೇಗ: ಬಟನ್ ಅನ್ನು ಡಬಲ್-ಕ್ಲಿಕ್ ಮಾಡಲು ಅಥವಾ ಟ್ರಿಪಲ್-ಕ್ಲಿಕ್ ಮಾಡಲು ಅಗತ್ಯವಿರುವ ವೇಗವನ್ನು ಆರಿಸಿ—ಡಿಫಾಲ್ಟ್, ನಿಧಾನ ಅಥವಾ ತುಂಬಾ ನಿಧಾನ.

    • ಮಾತನಾಡಲು ಒತ್ತಿ ಹಿಡಿದುಕೊಳ್ಳಿ: ನೀವು ಬಟನ್ ಒತ್ತಿ ಹಿಡಿದುಕೊಂಡಾಗ Siri ಪ್ರತಿಕ್ರಿಯಿಸಬೇಕೋ ಬೇಡವೋ ಎಂಬುದನ್ನು ಆರಿಸಿ.

    • ತೆರೆಯಲು ಬೆರಳನ್ನು ಇರಿಸಿ: Touch ID ಹೊಂದಿರುವ iPhoneನಲ್ಲಿ, ನಿಮ್ಮ ಬೆರಳನ್ನು Touch ID ಮೇಲೆ ಇರಿಸುವ ಮೂಲಕ ನೀವು iPhone ಅನ್ನು ಅನ್‌ಲಾಕ್ ಮಾಡಬಹುದು ಮತ್ತು ತೆರೆಯಬಹುದು.

    • ಹೋಮ್ ಬಟನ್ ಹ್ಯಾಪ್ಟಿಕ್: Touch ID ಹೊಂದಿರುವ iPhoneನಲ್ಲಿ, ನೀವು ಅದನ್ನು ಒತ್ತಿದಾಗ ಅದು ಯಾವ ರೀತಿಯ ಅನುಭವ ನೀಡಬೇಕು ಎಂಬುದನ್ನು ನೀವು ಆಯ್ಕೆ ಮಾಡಬಹುದು. ಹೋಮ್ ಬಟನ್ ಹ್ಯಾಪ್ಟಿಕ್ ಅನ್ನು ಟ್ಯಾಪ್ ಮಾಡಿ, ಆಯ್ಕೆ ಎಂಬುದನ್ನು ಟ್ಯಾಪ್ ಮಾಡಿ, ನಂತರ ಅದನ್ನು ಪ್ರಯತ್ನಿಸಲು ಹೋಮ್ ಬಟನ್ ಒತ್ತಿರಿ. ನೀವು ಹೆಚ್ಚು ಇಷ್ಟಪಡುವ ಆಯ್ಕೆಯನ್ನು ಆರಿಸಿದಾಗ ಮುಗಿದಿದೆ ಎಂಬುದನ್ನು ಟ್ಯಾಪ್ ಮಾಡಿ.

    • ಸೈಡ್ ಬಟನ್ ದೃಢೀಕರಣ: Face ID ಮೂಲಕ ಪಾವತಿಗಳನ್ನು ದೃಢೀಕರಿಸಲು ಅಥವಾ ಸೈಡ್ ಬಟನ್ ಅನ್ನು ಡಬಲ್-ಕ್ಲಿಕ್ ಮಾಡುವ ಅಗತ್ಯವಿರುವ ಯಾವುದೇ ಸಮಯದಲ್ಲಿ AssistiveTouch ಅಥವಾ ಸ್ವಿಚ್ ಕಂಟ್ರೋಲ್ ಅನ್ನು ಆರಿಸಿ.

Face ID ಹೊಂದಿರುವ iPhoneನಲ್ಲಿ, ಸೈಡ್ ಬಟನ್ ಅನ್ನು ಡಬಲ್ ಕ್ಲಿಕ್ ಮಾಡುವ ಬದಲು Face ID ಮೂಲಕ ಪಾವತಿಗಳನ್ನು ದೃಢೀಕರಿಸಲು ನೀವು AssistiveTouch ಅನ್ನು ಸಹ ಬಳಸಬಹುದು ಅಥವಾ ಸ್ವಿಚ್ ಕಂಟ್ರೋಲ್ ಬಳಸಬಹುದು.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.