iPhoneನಲ್ಲಿರುವ ಪ್ರಿವ್ಯೂನಲ್ಲಿ PDFಗಳನ್ನು ಲಾಕ್ ಮಾಡುವುದು

ನಿಮ್ಮ ಕೆಲಸವನ್ನು ಇತರರು ಎಡಿಟ್ ಮಾಡುವುದನ್ನು ಅಥವಾ ಡಿಲೀಟ್ ಮಾಡುವುದನ್ನು ತಡೆಯಲು ನೀವು ಪಾಸ್‌ವರ್ಡ್‌ ಬಳಸಿ PDF ಡಾಕ್ಯುಮಂಟ್ ಅನ್ನು ಲಾಕ್ ಮಾಡಬಹುದು.

ಪಾಸ್‌ವರ್ಡ್ ಫೀಲ್ಡ್ ಅನ್ನು ತೋರಿಸುತ್ತಿರುವ ಲಾಕ್ ಮಾಡಲಾದ PDF ಫಾರ್ಮ್. ಸ್ಕ್ರೀನ್‌ನ ಕೆಳಭಾಗದಲ್ಲಿ, ಮಾರ್ಕಪ್, ಮಾಹಿತಿ ಮತ್ತು ಹಂಚಿಕೊಳ್ಳಿ ಬಟನ್‌ಗಳಿವೆ.
  1. ನಿಮ್ಮ iPhoneನಲ್ಲಿ ಪ್ರಿವ್ಯೂ ಆ್ಯಪ್‌ಗೆ ಹೋಗಿ.

  2. PDF ಅನ್ನು ತೆರೆಯಿರಿ.

    ಪ್ರಮುಖ ಸೂಚನೆ: ಪಾಸ್‌ವರ್ಡ್ ಸುರಕ್ಷಿತವಲ್ಲದ ಕಾಪಿಯನ್ನು ಇರಿಸಿಕೊಳ್ಳಲು, ಆ್ಯಕ್ಷನ್‌ಗಳ ಮೆನು ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಡ್ಯೂಪ್ಲಿಕೇಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

  3. ಫೈಲ್ ಹೆಸರು ಎಂಬುದರ ಪಕ್ಕದಲ್ಲಿರುವ ಆ್ಯಕ್ಷನ್‌ಗಳ ಮೆನು ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಲಾಕ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

  4. ಪಾಸ್‌ವರ್ಡ್ ಅಗತ್ಯವಿದೆ ಎಂಬುದನ್ನು ಆನ್ ಮಾಡಿ, ನಂತರ ಅದೇ ಪಾಸ್‌ವರ್ಡ್ ಅನ್ನು ಪಾಸ್‌ವರ್ಡ್ ಮತ್ತು ದೃಢೀಕರಿಸಿ ಫೀಲ್ಡ್‌ಗಳಲ್ಲಿ ನಮೂದಿಸಿ.

  5. ಮುಗಿದಿದೆ ಎಂಬುದನ್ನು ಟ್ಯಾಪ್ ಮಾಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.