ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

ನಿಮ್ಮ iPhone ಅನ್ನು Macನಲ್ಲಿ ವೆಬ್‌ಕ್ಯಾಮ್‌ನಂತೆ ಬಳಸುವುದು

ಕಂಟಿನ್ಯುಯಿಟಿ ಕ್ಯಾಮರಾದ ಮೂಲಕ, ನಿಮ್ಮ iPhone ಅನ್ನು ನಿಮ್ಮ Mac ‌ವೆಬ್‌ಕ್ಯಾಮ್ ಅಥವಾ ಮೈಕ್ರೋಫೋನ್ ಆಗಿ ನೀವು ಬಳಸಬಹುದು ಮತ್ತು ಶಕ್ತಿಶಾಲಿ iPhone ಕ್ಯಾಮರಾ ಮತ್ತು ಹೆಚ್ಚುವರಿ ವೀಡಿಯೊ ಎಫೆಕ್ಟ್‌ಗಳ ಪ್ರಯೋಜನ ಪಡೆಯಬಹುದು. ನೀವು ವೈರ್‌ಲೆಸ್ ಆಗಿ ಕನೆಕ್ಟ್ ಮಾಡಬಹುದು ಅಥವಾ ವೈರ್‌ಸಹಿತ ಕನೆಕ್ಷನ್‌ಗಾಗಿ USB ಕೇಬಲ್ ಮೂಲಕ ಕನೆಕ್ಟ್ ಮಾಡಬಹುದು.

iPhone ಮತ್ತು Macನಲ್ಲಿನ ಕಂಟಿನ್ಯುಯಿಟಿ ಕ್ಯಾಮರಾದೊಂದಿಗೆ ನಿಮ್ಮ iPhone ಅನ್ನು ವೆಬ್‌ಕ್ಯಾಮ್ ಆಗಿ ಬಳಸಬಹುದು.

Apple TV 4Kಯಲ್ಲಿ FaceTime ಕರೆ ಮಾಡುವಾಗ ನಿಮ್ಮ iPhone ಕ್ಯಾಮರಾವನ್ನು ವೆಬ್‌ಕ್ಯಾಮ್ ಆಗಿಯೂ ಸಹ ನೀವು ಬಳಸಬಹುದು. ಇನ್ನಷ್ಟು ತಿಳಿಯಲು, Apple TV 4Kಯಲ್ಲಿ (2ನೇ ಜನರೇಷನ್ ಅಥವಾ ನಂತರ) FaceTime ಬಳಸಿ ಅನ್ನು ನೋಡಿ.

MacBook Pro, iPhone ಅನ್ನು ವೆಬ್‌ಕ್ಯಾಮ್ ಆಗಿ ಬಳಸುತ್ತಿದೆ ಮತ್ತು FaceTime ಸಂಭಾಷಣೆಯನ್ನು ತೋರಿಸುತ್ತಿದೆ.

ನೀವು ಪ್ರಾರಂಭಿಸುವ ಮೊದಲು

ಈ ಕೆಳಗಿನವುಗಳನ್ನು ಖಚಿತಪಡಿಸಿಕೊಳ್ಳಿ:

ನೀವು VPN ಅನ್ನು ಬಳಸುತ್ತಿದ್ದರೆ, ಅದರ ಕಾನ್ಫಿಗರೇಶನ್ ಸ್ಥಳೀಯ ನೆಟ್‌ವರ್ಕಿಂಗ್ ಅನ್ನು ತಡೆಯುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ, ಏಕೆಂದರೆ ಇದು ಕೆಲವು ಕಂಟಿನ್ಯುಯಿಟಿ ಫೀಚರ್‌ಗಳಿಗೆ ಅಡ್ಡಿಯಾಗಬಹುದು.

ಕಂಟಿನ್ಯುಯಿಟಿ ಕ್ಯಾಮರಾಗಾಗಿ ನಿಮ್ಮ iPhone ಅನ್ನು ಸೆಟಪ್ ಮಾಡಿ

  1. ಲ್ಯಾಂಡ್‌ಸ್ಕೇಪ್ ಒರಿಯೆಂಟೇಷನ್‌ನಲ್ಲಿ iPhone-ಹೊಂದಾಣಿಕೆಯಾಗುವ ಮೌಂಟ್ ಅಥವಾ ಸ್ಟ್ಯಾಂಡ್ ಬಳಸಿಕೊಂಡು ನಿಮ್ಮ iPhone ಅನ್ನು ಮೌಂಟ್ ಮಾಡಿ. ಇದು ನಿಮ್ಮ Mac (30 ಅಡಿಗಳ ಒಳಗೆ) ಹತ್ತಿರದಲ್ಲಿ ಸ್ಥಿರವಾದ ಸ್ಥಿತಿಯಲ್ಲಿರಬೇಕು, ಅದರ ಹಿಂಬದಿಯ ಕ್ಯಾಮರಾ ನಿಮಗೆ ಎದುರಾಗಿರಬೇಕು.

  2. ಕಂಟಿನ್ಯುಯಿಟಿ ಕ್ಯಾಮರಾವನ್ನು ಆನ್ ಮಾಡಲು, ನಿಮ್ಮ iPhoneನಲ್ಲಿ ಸೆಟ್ಟಿಂಗ್ಸ್ ಆ್ಯಪ್‌ಗೆ ಹೋಗಿ.

  3. ಸಾಮಾನ್ಯ ಎಂಬುದನ್ನು ಟ್ಯಾಪ್ ಮಾಡಿ, ನಂತರ AirPlay ಹಾಗೂ ಕಂಟಿನ್ಯುಯಿಟಿ ಎಂಬುದನ್ನು ಟ್ಯಾಪ್ ಮಾಡಿ.

  4. ಕಂಟಿನ್ಯುಯಿಟಿ ಕ್ಯಾಮರಾವನ್ನು ಆನ್ ಮಾಡಿ.

ಕಂಟಿನ್ಯುಯಿಟಿ ಕ್ಯಾಮರಾ ವೈರ್‌ಲೆಸ್ ಆಗಿ ಕೆಲಸ ಮಾಡುತ್ತದೆಯಾದರೂ, USB ಕೇಬಲ್ ಮೂಲಕ ನಿಮ್ಮ iPhone ಅನ್ನು ನಿಮ್ಮ Macಗೆ ಕನೆಕ್ಟ್ ಮಾಡುವ ಮೂಲಕ ಸಹ ನೀವು ಕಂಟಿನ್ಯುಯಿಟಿ ಕ್ಯಾಮರಾವನ್ನು ಬಳಸಬಹುದು. ನಿಮ್ಮ iPhone ಜೊತೆಗೆ ಬಂದಿರುವ ಕೇಬಲ್ ಅನ್ನು ಅಥವಾ ನಿಮ್ಮ iPhone ಮತ್ತು Macನಲ್ಲಿನ ಪೋರ್ಟ್‌ಗಳಿಗೆ ಹೊಂದಾಣಿಕೆಯಾಗುವ ಬೇರೊಂದು ಕೇಬಲ್ ಅನ್ನು ನೀವು ಬಳಸಬಹುದು.

ಗಮನಿಸಿ: ನಿಮ್ಮ iPhone ಮತ್ತು Mac ಅನ್ನು ನೀವು ಒಂದು ಕೇಬಲ್ ಮೂಲಕ ಕನೆಕ್ಟ್ ಮಾಡಿದರೆ ಮತ್ತು ಈ ಕಂಪ್ಯೂಟರ್‌ನ ಮೇಲೆ ವಿಶ್ವಾಸಬಿಡಬೇಕೆ ಎಂದು ನಿಮ್ಮ iPhoneನಲ್ಲಿ ತಿಳಿಸುವ ಅಲರ್ಟ್ ಅನ್ನು ನೋಡಿದರೆ? ವಿಶ್ವಾಸವಿಡಿ ಎಂಬುದನ್ನು ಟ್ಯಾಪ್ ಮಾಡಿ. ಮುಂದುವರಿಸಲು ನಿಮ್ಮ ಸಾಧನದ ಪಾಸ್‌ಕೋಡ್ ಅನ್ನು ನಮೂದಿಸುವಂತೆ ನಿಮ್ಮನ್ನು ಕೇಳಬಹುದು. ನಿಮ್ಮ Macನಲ್ಲಿ “ಆಕ್ಸೆಸರಿಯನ್ನು ಕನೆಕ್ಟ್ ಮಾಡಲು ಅನುಮತಿಸುತ್ತೀರಾ?” ಎಂದು ಕೇಳುವ ಅಲರ್ಟ್ ಅನ್ನು ನೀವು ನೋಡಿದರೆ ಅನುಮತಿಸಿ ಎಂಬುದನ್ನು ಕ್ಲಿಕ್ ಮಾಡಿ.

Macಗಾಗಿ ನಿಮ್ಮ iPhone ಅನ್ನು ವೆಬ್‌ಕ್ಯಾಮ್ ಆಗಿ ಬಳಸುವುದು

  1. ನಿಮ್ಮ Macನಲ್ಲಿ, FaceTime ಅಥವಾ Photo Booth ರೀತಿಯ, ಕ್ಯಾಮರಾ ಅಥವಾ ಮೈಕ್ರೋಫೋನ್‌ಗೆ ಆ್ಯಕ್ಸೆಸ್ ಹೊಂದಿರುವ ಯಾವುದಾದರೂ ಆ್ಯಪ್ ತೆರೆಯಿರಿ. ಕ್ಯಾಮರಾ ಅಥವಾ ಮೈಕ್ರೋಫೋನ್‌ ಅನ್ನು ಆ್ಯಕ್ಸೆಸ್ ಮಾಡುವ ಹಲವು ಥರ್ಡ್ ಪಾರ್ಟಿ ಆ್ಯಪ್‌ಗಳೊಂದಿಗೂ ನೀವು ಈ ಫೀಚರ್ ಅನ್ನು ಬಳಸಬಹುದು.

  2. ಆ್ಯಪ್‌ನ ಮೆನು ಬಾರ್ ಅಥವಾ ಸೆಟ್ಟಿಂಗ್ಸ್‌ನಲ್ಲಿ, ನಿಮ್ಮ iPhone ಅನ್ನು ಕ್ಯಾಮರಾದಂತೆ ಆಯ್ಕೆಮಾಡಿ.

    ಗಮನಿಸಿ: ಆ್ಯಪ್ ಅನ್ನು ಅವಲಂಬಿಸಿ ಈ ಸೆಟ್ಟಿಂಗ್ಸ್ ಸ್ಥಳ ಬದಲಾಗಬಹುದು. ಉದಾಹರಣೆಗೆ, FaceTimeನಲ್ಲಿ, ಮೆನು ಬಾರ್‌ನಲ್ಲಿ ವೀಡಿಯೊ ಬಟನ್ ಅನ್ನು ಕ್ಲಿಕ್ ಮಾಡಿ, ನಂತರ ನಿಮ್ಮ iPhone ಅನ್ನು ಆರಿಸಿ. ಅಥವಾ ಮ್ಯಾಗ್ನಿಫೈಯರ್‌ನಲ್ಲಿ, ಮೆನು ಬಾರ್‌ನಲ್ಲಿರುವ ಕ್ಯಾಮರಾವನ್ನು ಕ್ಲಿಕ್ ಮಾಡಿ, ನಂತರ ನಿಮ್ಮ iPhone ಅನ್ನು ಆರಿಸಿ. ಇತರೆ ಆ್ಯಪ್‌ಗಳಲ್ಲಿ ಈ ಸೆಟ್ಟಿಂಗ್ಸ್ ಅನ್ನು ಎಲ್ಲಿ ಕಾಣಬಹುದು ಎಂಬುದಕ್ಕೆ ಸಂಬಂಧಿಸಿದ ಮಾರ್ಗದರ್ಶನಕ್ಕಾಗಿ Macನಲ್ಲಿ ಬಾಹ್ಯ ಕ್ಯಾಮರಾವನ್ನು ಆಯ್ಕೆಮಾಡಿ ಎಂಬುದನ್ನು ನೋಡಿ.

    ನಿಮ್ಮ iPhone ಹಿಂಬದಿಯ ಕ್ಯಾಮರಾದಿಂದ ನಿಮ್ಮ Macಗೆ ಆಡಿಯೊ ಅಥವಾ ವೀಡಿಯೊವನ್ನು ಸ್ಟ್ರೀಮ್ ಮಾಡಲು ಪ್ರಾರಂಭಿಸುತ್ತದೆ.

  3. ವೀಡಿಯೊ ಅಥವಾ ಆಡಿಯೊವನ್ನು ನಿಯಂತ್ರಿಸಲು, ಈ ಕೆಳಗಿನವುಗಳಲ್ಲಿ ಯಾವುದನ್ನಾದರೂ ಮಾಡಿ:

    • ವೀಡಿಯೊ ಅಥವಾ ಆಡಿಯೊವನ್ನು ವಿರಾಮಗೊಳಿಸಿ: ನಿಮ್ಮ iPhoneನಲ್ಲಿ, ವಿರಾಮಗೊಳಿಸಿ ಅನ್ನು ಟ್ಯಾಪ್ ಮಾಡಿ. ನೀವು ಮೇಲಕ್ಕೆ ಸ್ವೈಪ್ ಮಾಡುವ ಮೂಲಕ ವೀಡಿಯೊ ಅಥವಾ ಆಡಿಯೊವನ್ನು ವಿರಾಮಗೊಳಿಸಲು ನಿಮ್ಮ iPhone ಅನ್ನು ಅನ್‌ಲಾಕ್ ಮಾಡಬಹುದು.

    • ವೀಡಿಯೊ ಅಥವಾ ಆಡಿಯೊವನ್ನು ಪುನರಾರಂಭಿಸಿ: ನಿಮ್ಮ iPhoneನಲ್ಲಿ, ಪುನರಾರಂಭಿಸಿ ಟ್ಯಾಪ್ ಮಾಡಿ. ನಿಮ್ಮ iPhone ಅನ್ನು ಲಾಕ್ ಮಾಡುವ ಮೂಲಕ ಸಹ ನೀವು ಪುನರಾರಂಭಿಸಬಹುದು.

    • ನಿಮ್ಮ iPhone ಅನ್ನು ವೆಬ್‌ಕ್ಯಾಮ್ ಅಥವಾ ಮೈಕ್ರೋಫೋನ್ ಆಗಿ ಬಳಸುವುದನ್ನು ನಿಲ್ಲಿಸಿ: ನಿಮ್ಮ Macನಲ್ಲಿ, ಆ್ಯಪ್ ಅನ್ನು ತೊರೆಯಿರಿ.

      ಗಮನಿಸಿ: ಕಂಟಿನ್ಯುಯಿಟಿ ಕ್ಯಾಮರಾ ಆನ್ ಆಗಿರುವಾಗ ನಿಮ್ಮ iPhone ಅನ್ನು ನೀವು ಚಾರ್ಜ್ ಮಾಡಬೇಕಿದ್ದರೆ, ಅತ್ಯುತ್ತಮ ಫಲಿತಾಂಶಗಳಿಗಾಗಿ USB ಕೇಬಲ್ ಬಳಸಿ.

ವೀಡಿಯೊ ಅಥವಾ ಆಡಿಯೊವನ್ನು ಸ್ಟ್ರೀಮ್ ಮಾಡುವಾಗ, ನಿಮ್ಮ iPhone ಅನ್ನು ನೀವು ಮೂವ್ ಮಾಡಬಹುದು ಮತ್ತು ಅದರ ಓರಿಯೆಂಟೇಷನ್ ಅನ್ನು ಬದಲಾಯಿಸಬಹುದು. ಹಾಗಿದ್ದರೂ, ಅತ್ಯುತ್ತಮ ಫಲಿತಾಂಶಗಳಿಗಾಗಿ, ನಿಮ್ಮ iPhone ಅನ್ನು ಮೌಂಟ್ ಮಾಡಿ ಮತ್ತು ಲ್ಯಾಂಡ್‌ಸ್ಕೇಪ್ ಓರಿಯೆಂಟೇಷನ್‌ನಲ್ಲಿ ಇಡುವುದನ್ನು ಮರೆಯದಿರಿ.

ನಿಮ್ಮ iPhone ಅನ್ನು ವೆಬ್‌ಕ್ಯಾಮ್ ಆಗಿ ಬಳಸುವಾಗ, ಪೋರ್ಟ್ರೇಟ್ ಮೋಡ್, Edge Light ಮತ್ತು Center Stage ರೀತಿಯ ವೀಡಿಯೊ ಎಫೆಕ್ಟ್‌ಗಳನ್ನು ನೀವು ಬಳಸಬಹುದು. Macನಲ್ಲಿ ವೀಡಿಯೊ ಕಾನ್ಫರೆನ್ಸಿಂಗ್ ಫೀಚರ್‌ಗಳನ್ನು ಬಳಸಿ ಎಂಬುದನ್ನು ನೋಡಿ.

ಡೆಸ್ಕ್ ವೀಕ್ಷಣೆಯನ್ನು ಆನ್ ಮಾಡಿ

ವೀಡಿಯೊವನ್ನು ಬೆಂಬಲಿಸುವ ಆ್ಯಪ್ ಅನ್ನು ನೀವು ಬಳಸುತ್ತಿರುವಾಗ ಮತ್ತು ನಿಮ್ಮ iPhone ಅನ್ನು ವೆಬ್‌ಕ್ಯಾಮ್ ಆಗಿ ಸೆಟಪ್ ಮಾಡಿರುವಾಗ ನೀವು ಡೆಸ್ಕ್ ವೀಕ್ಷಣೆ ಮತ್ತು ಇತರ ವೀಡಿಯೊ ಎಫೆಕ್ಟ್‌ಗಳನ್ನು ಬಳಸಬಹುದು.

  1. ನಿಮ್ಮ Macನಲ್ಲಿ, ಈ ಕೆಳಗಿನವುಗಳಲ್ಲಿ ಯಾವುದಾದರೂ ಒಂದನ್ನು ಮಾಡಿ:

    • FaceTime: ನಿಮ್ಮ ವೀಡಿಯೊ ಕರೆಯನ್ನು ಪ್ರಾರಂಭಿಸಿ, ವೀಡಿಯೊ ವಿಂಡೋದ ಕೆಳಗಿನ ಇನ್ನಷ್ಟು ಬಟನ್ ಅನ್ನು ಕ್ಲಿಕ್ ಮಾಡಿ, ನಂತರ ಡೆಸ್ಕ್ ವ್ಯೂ ಎಂಬುದನ್ನು ಆರಿಸಿ.

    • ವೀಡಿಯೊ ಬೆಂಬಲಿಸುವ ಇತರ ಆ್ಯಪ್‌ಗಳು: ಮೆನು ಬಾರ್‌ನಲ್ಲಿ ವೀಡಿಯೊ ಬಟನ್ ಅನ್ನು ಕ್ಲಿಕ್ ಮಾಡಿ, ನಂತರ ಡೆಸ್ಕ್ ವೀಕ್ಷಣೆ ಬಟನ್ ಅನ್ನು ಕ್ಲಿಕ್ ಮಾಡಿ.

  2. ಡೆಸ್ಕ್ ವ್ಯೂ ಹಂಚಿಕೊಳ್ಳಿ ಎಂಬುದನ್ನು ಕ್ಲಿಕ್ ಮಾಡಿ.

    ಡೆಸ್ಕ್ ವೀಕ್ಷಣೆ ತೆರೆಯುತ್ತದೆ, ಇದು ಓವರ್‌ಹೆಡ್ ಕ್ಯಾಮರಾವನ್ನು ಅನುಕರಿಸುತ್ತದೆ ಮತ್ತು ನಿಮ್ಮ ಡೆಸ್ಕ್‌ನ ಟಾಪ್-ಡೌನ್ ವೀಕ್ಷಣೆಯನ್ನು ತೋರಿಸುತ್ತದೆ.

  3. ನಿಮ್ಮ ಡೆಸ್ಕ್ ಅನ್ನು ಕ್ಯಾಮರಾದೊಂದಿಗೆ ಸರಿಹೊಂದಿಸಲು ನಿಮ್ಮ Macನಲ್ಲಿರುವ ಡೆಸ್ಕ್ ವೀಕ್ಷಣೆ ಸೆಟಪ್ ವಿಂಡೋವನ್ನು ಬಳಸಿ. ಝೂಮ್ ಇನ್ ಅಥವಾ ಝೂಮ್ ಔಟ್ ಮಾಡಲು, ವಿಂಡೋದ ಕೆಳಭಾಗದಲ್ಲಿರುವ ಆನ್‌ಸ್ಕ್ರೀನ್ ಕಂಟ್ರೋಲ್ ಅನ್ನು ಡ್ರ್ಯಾಗ್ ಮಾಡಿ. ವೀಡಿಯೊ ಕರೆಯಲ್ಲಿ ನಿಮ್ಮ ಡೆಸ್ಕ್ ವೀಕ್ಷಣೆಯನ್ನು ಹಂಚಿಕೊಳ್ಳಲು ನೀವು ಸಿದ್ಧರಾದಾಗ, ಡೆಸ್ಕ್ ವೀಕ್ಷಣೆಯನ್ನು ಹಂಚಿಕೊಳ್ಳಿ ಎಂಬುದನ್ನು ಕ್ಲಿಕ್ ಮಾಡಿ.

    ಗಮನಿಸಿ: ನಿಮ್ಮ ಡೆಸ್ಕ್‌ನಲ್ಲಿರುವುದನ್ನು ಥರ್ಡ್ ಪಾರ್ಟಿ ಆ್ಯಪ್‌ನಲ್ಲಿ ಹಂಚಿಕೊಳ್ಳಲು, ಹಂಚಿಕೊಳ್ಳುವುದಕ್ಕಾಗಿ ಡೆಸ್ಕ್ ವೀಕ್ಷಣೆ ವಿಂಡೋವನ್ನು ಆಯ್ಕೆಮಾಡಲು ಆ್ಯಪ್‌ನ ಸ್ಕ್ರೀನ್ ಹಂಚಿಕೆ ಫೀಚರ್ ಬಳಸಿ. ಹೇಗೆ ಎಂಬುದನ್ನು ತಿಳಿಯಲು, ಡೆವಲಪರ್ ಸೂಚನೆಗಳನ್ನು ನೋಡಿ ಅಥವಾ ಆ್ಯಪ್‌ನ ಮೆನುಗಳು ಮತ್ತು ಸೆಟ್ಟಿಂಗ್ಸ್ ಅನ್ನು ಅನ್ವೇಷಿಸಿ.

  4. ಡೆಸ್ಕ್ ವ್ಯೂವನ್ನು ಆಫ್ ಮಾಡುವುದಕ್ಕಾಗಿ, ವಿಂಡೋವನ್ನು ಮುಚ್ಚಲು ಮುಚ್ಚಿ ಬಟನ್ ಅನ್ನು ಕ್ಲಿಕ್ ಮಾಡಿ.

ನಿಮ್ಮ Macಗಾಗಿ ನಿಮ್ಮ iPhone ಅನ್ನು ಮೈಕ್ರೋಫೋನ್ ಆಗಿ ಬಳಸುವುದು

ನಿಮ್ಮ iPhone ಅನ್ನು ನೀವು ಅಂತರ್ನಿರ್ಮಿತ ಅಥವಾ ಬಾಹ್ಯ ಮೈಕ್ರೋಫೋನ್‌ ಇಲ್ಲದ Macನಲ್ಲಿ ಮೈಕ್ರೋಫೋನ್ ಆಗಿ ಬಳಸಬಹುದು.

  1. ನಿಮ್ಮ Macನಲ್ಲಿ, ಸಿಸ್ಟಮ್ ಸೆಟ್ಟಿಂಗ್ಸ್ ಆ್ಯಪ್‌ಗೆ ಹೋಗಿ.

  2. ಸೈಡ್‌ಬಾರ್‌ನಲ್ಲಿ ಸೌಂಡ್ ಅನ್ನು ಕ್ಲಿಕ್ ಮಾಡಿ. (ನೀವು ಕೆಳಗೆ ಸ್ಕ್ರೋಲ್ ಮಾಡಬೇಕಾಗಬಹುದು.)

  3. ಇನ್‌ಪುಟ್ ಅನ್ನು ಕ್ಲಿಕ್ ಮಾಡಿ, ನಂತರ ಸೌಂಡ್ ಇನ್‌ಪುಟ್ ಸಾಧನಗಳ ಪಟ್ಟಿಯಲ್ಲಿ ನಿಮ್ಮ iPhone ಅನ್ನು ಆಯ್ಕೆಮಾಡಿ.

    ಗಮನಿಸಿ: Macನಲ್ಲಿ ನಿಮ್ಮ iPhone ಅನ್ನು ಮೈಕ್ರೋಫೋನ್ ಆಗಿ ಬಳಸುವಂತಾಗಲು, iPhone ಲ್ಯಾಂಡ್‌ಸ್ಕೇಪ್ ಓರಿಯೆಂಟೇಷನ್‌ನಲ್ಲಿರಬೇಕು ಮತ್ತು ಸ್ಥಿರವಾಗಿರಬೇಕು, ಜೊತೆಗೆ ಅದರ ಸ್ಕ್ರೀನ್ ಆಫ್ ಆಗಿರಬೇಕು.

ನಿಮ್ಮ Macಗಾಗಿ ನಿಮ್ಮ iPhone ಅನ್ನು ವೆಬ್‌ಕ್ಯಾಮ್ ಅಥವಾ ಮೈಕ್ರೋಫೋನ್ ಆಯ್ಕೆಯಾಗಿ ತೆಗೆದುಹಾಕಿ

ನಿಮ್ಮ iPhoneನಲ್ಲಿ, ಡಿಸ್‌ಕನೆಕ್ಟ್ ಅನ್ನು ಟ್ಯಾಪ್ ಮಾಡಿ, ನಂತರ ನೀವು ಡಿಸ್‌ಕನೆಕ್ಟ್ ಮಾಡಲು ಬಯಸುತ್ತೀರಿ ಎಂದು ಖಚಿತಪಡಿಸಿ.

ನಿಮ್ಮ iPhone ಅನ್ನು ಆ್ಯಪ್‌ಗಳಲ್ಲಿನ ಕ್ಯಾಮರಾ ಮತ್ತು ಮೈಕ್ರೋಫೋನ್ ಪಟ್ಟಿಗಳಿಂದ ಮತ್ತು ಸೌಂಡ್ ಸೆಟ್ಟಿಂಗ್ಸ್‌ನಲ್ಲಿನ ಸೌಂಡ್ ಇನ್‌ಪುಟ್ ಸಾಧನಗಳ ಪಟ್ಟಿಯಿಂದಲೂ ತೆಗೆದುಹಾಕಲಾಗಿದೆ.

ನಿಮ್ಮ iPhone ಅನ್ನು ವೆಬ್‌ಕ್ಯಾಮ್ ಅಥವಾ ಮೈಕ್ರೋಫೋನ್ ಆಗಿ ರೀಕನೆಕ್ಟ್ ಮಾಡಲು, USB ಕೇಬಲ್ ಮೂಲಕ ಅದನ್ನು ನಿಮ್ಮ Macಗೆ ಕನೆಕ್ಟ್ ಮಾಡಿ, ನಂತರ ಮೇಲಿರುವ ನಿಮ್ಮ iPhone ಅನ್ನು ವೆಬ್‌ಕ್ಯಾಮ್ ಆಗಿ ಬಳಸಲು ಅಥವಾ ನಿಮ್ಮ iPhone ಅನ್ನು ಮೈಕ್ರೋಫೋನ್ ಆಗಿ ಬಳಸಲು ಹಂತಗಳನ್ನು ಅನುಸರಿಸಿ.

ಕಂಟಿನ್ಯುಯಿಟಿ ಕ್ಯಾಮರಾ ಕಾರ್ಯನಿರ್ವಹಿಸದಿದ್ದರೆ

  • ನಿಮ್ಮ iPhone ಮತ್ತು Macನಲ್ಲಿ Wi-Fi ಮತ್ತು Bluetooth ಅನ್ನು ಆನ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

  • ನಿಮ್ಮ ಸಾಧನಗಳು ಒಂದಕ್ಕೊಂದು 30 ಅಡಿ (10 ಮೀಟರ್) ಅಂತರದೊಳಗೆ ಇರಬೇಕು ಮತ್ತು ಅತ್ಯುತ್ತಮ ಫಲಿತಾಂಶಗಳಿಗಾಗಿ, ನಿಮ್ಮ iPhone ಅನ್ನು ಮೌಂಟ್ ಮಾಡಿರಬೇಕು ಮತ್ತು ಲ್ಯಾಂಡ್‌ಸ್ಕೇಪ್ ಓರಿಯೆಂಟೇಷನ್‌ನಲ್ಲಿರಬೇಕು.

  • USB ಕೇಬಲ್ ಮೂಲಕ ನಿಮ್ಮ iPhone ಅನ್ನು ನಿಮ್ಮ Macಗೆ ಕನೆಕ್ಟ್ ಮಾಡಿ ಮತ್ತು ಪುನಃ ಪರಿಶೀಲಿಸಿ. (ಇದು ಈಗಾಗಲೇ ಕೇಬಲ್ ಮೂಲಕ ಕನೆಕ್ಟ್ ಆಗಿದ್ದರೆ, ಅದನ್ನು ಡಿಸ್‌ಕನೆಕ್ಟ್ ಮಾಡಿ ಮತ್ತು ರೀಕನೆಕ್ಟ್ ಮಾಡಿ.) ನಿಮ್ಮ iPhone ಕಂಪ್ಯೂಟರ್ ಮೇಲೆ ವಿಶ್ವಾಸವಿಡಬೇಕೇ ಎಂದು ಅಥವಾ ನಿಮ್ಮ Mac ಆ್ಯಕ್ಸೆಸರಿಯನ್ನು ಅನುಮತಿಸುವಂತೆ ನಿಮಗೆ ಕೇಳಿದಾಗ, ಅನುಮತಿ ನೀಡುವುದನ್ನು ಖಚಿತಪಡಿಸಿಕೊಳ್ಳಿ.

  • ನೀವು iPhone ಮಿರರಿಂಗ್ ರೀತಿಯ ಬೇರೆ ಕಂಟಿನ್ಯುಯಿಟಿ ಫೀಚರ್ ಅನ್ನು ನೀವು ಬಳಸುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.

  • ನಿಮ್ಮ ಸಾಧನಗಳು ಕಂಟಿನ್ಯುಯುಟಿ ಕ್ಯಾಮರಾಗಾಗಿ ಅಗತ್ಯವಿರುವ ಕನಿಷ್ಠ ಸಿಸ್ಟಂ ಅವಶ್ಯಕತೆಗಳನ್ನು ಪೂರೈಸುತ್ತವೆ ಎಂಬುದನ್ನು ಪರಿಶೀಲಿಸಿ.

  • ಹೆಚ್ಚುವರಿ ಟ್ರಬಲ್‌ಶೂಟಿಂಗ್‌ ಹಂತಗಳಿಗಾಗಿ, ಕಂಟಿನ್ಯುಯಿಟಿ ಕ್ಯಾಮರಾ ಎಂಬ Apple ಬೆಂಬಲ ಲೇಖನದ ಕೆಳಭಾಗದಲ್ಲಿ “ನಿಮಗೆ ಸಹಾಯ ಬೇಕಾದರೆ” ಎಂಬುದನ್ನು ನೋಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.