ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPhone ಸ್ಟೇಟಸ್ ಐಕಾನ್‌ಗಳ ಅರ್ಥವನ್ನು ತಿಳಿಯಿರಿ

ಸ್ಕ್ರೀನ್‌ನ ಮೇಲ್ಭಾಗದಲ್ಲಿರುವ ಸ್ಟೇಟಸ್ ಬಾರ್‌ನಲ್ಲಿನ ಐಕಾನ್‌ಗಳು iPhone ಬಗ್ಗೆ ಮಾಹಿತಿಯನ್ನು ಒದಗಿಸುತ್ತವೆ. Face ID ಹೊಂದಿರುವ iPhoneನಲ್ಲಿ, ಕಂಟ್ರೋಲ್ ಸೆಂಟರ್‌ನ ಮೇಲೆ ಹೆಚ್ಚುವರಿ ಸ್ಟೇಟಸ್ ಐಕಾನ್‌ಗಳಿರುತ್ತವೆ.

ಗಮನಿಸಿ: ನೀವು ಫೋಕಸ್ ಅನ್ನು ಆನ್ ಮಾಡಿದರೆ, ಅದರ ಐಕಾನ್ ಸ್ಟೇಟಸ್ ಬಾರ್‌ನಲ್ಲಿ ಕಾಣಿಸಿಕೊಳ್ಳುತ್ತದೆ.

ಸ್ಟೇಟಸ್ ಐಕಾನ್

ಅದರ ಅರ್ಥವೇನು

Wi-Fi ಸ್ಟೇಟಸ್ ಐಕಾನ್.

Wi-Fi. iPhone, Wi-Fi ನೆಟ್‌ವರ್ಕ್ ಮೂಲಕ ಇಂಟರ್ನೆಟ್‌ಗೆ ಕನೆಕ್ಟ್ ಆಗಿದೆ. ಲಭ್ಯವಿರುವ ನೆಟ್‌ವರ್ಕ್‌ಗಳನ್ನು ನೋಡಿ ಮತ್ತು Wi-Fiಗೆ ಕನೆಕ್ಟ್ ಮಾಡಿ ಅನ್ನು ನೋಡಿ.

ಮೊಬೈಲ್ ಸಿಗ್ನಲ್ ಸಾಮರ್ಥ್ಯದ ಸ್ಟೇಟಸ್ ಐಕಾನ್ (ನಾಲ್ಕು ಬಾರ್‌ಗಳು).

ಸೆಲ್ ಸಿಗ್ನಲ್. ಬಾರ್‌ಗಳ ಸಂಖ್ಯೆಯು ನಿಮ್ಮ ಮೊಬೈಲ್ ಸೇವೆಯ ಸಿಗ್ನಲ್ ಸಾಮರ್ಥ್ಯವನ್ನು ಸೂಚಿಸುತ್ತದೆ. ಯಾವುದೇ ಸಿಗ್ನಲ್ ಇಲ್ಲದಿದ್ದರೆ, “ಸೇವೆ ಲಭ್ಯವಿಲ್ಲ” ಎಂಬುದು ಕಾಣಿಸಿಕೊಳ್ಳುತ್ತದೆ.

ಎರಡು ಮೊಬೈಲ್ ನೆಟ್‌ವರ್ಕ್‌ಗಳಿಗೆ ಸಿಗ್ನಲ್ ಸಾಮರ್ಥ್ಯದ ಸ್ಟೇಟಸ್ ಐಕಾನ್ (ನಾಲ್ಕು ಬಾರ್‌ಗಳು).

ಡ್ಯುಯಲ್ ಸೆಲ್ ಸಿಗ್ನಲ್‌ಗಳು. ಡ್ಯುಯಲ್ ಸಿಮ್ ಇರುವ ಮಾಡಲ್‌ಗಳಲ್ಲಿ, ಮೇಲಿನ ಸಾಲಿನ ಬಾರ್‌ಗಳು ನೀವು ಮೊಬೈಲ್ ಡೇಟಗಾಗಿ ಬಳಸುವ ಲೈನ್‌ನ ಸಿಗ್ನಲ್ ಬಲವನ್ನು ಸೂಚಿಸುತ್ತವೆ. ಕೆಳಗಿನ ಸಾಲಿನ ಬಾರ್‌ಗಳು ನಿಮ್ಮ ಮತ್ತೊಂದು ಲೈನ್‌ನ ಸಿಗ್ನಲ್ ಬಲವನ್ನು ಸೂಚಿಸುತ್ತದೆ. ಯಾವುದೇ ಸಿಗ್ನಲ್ ಇಲ್ಲದಿದ್ದರೆ, “ಸೇವೆ ಲಭ್ಯವಿಲ್ಲ” ಎಂಬುದು ಕಾಣಿಸಿಕೊಳ್ಳುತ್ತದೆ. ಮೊಬೈಲ್ ಸೇವೆ ಪ್ಲ್ಯಾನ್ ಲೇಬಲ್‌ಗಳು ಮತ್ತು ನೆಟ್‌ವರ್ಕ್ ಪೂರೈಕೆದಾರರ ಹೆಸರುಗಳಿಗೆ ಸಂಬಂಧಿಸಿದ ಸ್ಟೇಟಸ್ ಐಕಾನ್‌ಗಳನ್ನು ನೋಡಲು, ಕಂಟ್ರೋಲ್ ಸೆಂಟರ್ ಅನ್ನು ತೆರೆಯಿರಿ.

ಏರ್‌ಪ್ಲೇನ್ ಮೋಡ್ ಸ್ಟೇಟಸ್ ಐಕಾನ್.

ಏರ್‌ಪ್ಲೇನ್ ಮೋಡ್. ಏರ್‌ಪ್ಲೇನ್ ಮೋಡ್ ಆನ್ ಆಗಿದೆ—ನೀವು ಫೋನ್ ಕರೆಗಳನ್ನು ಮಾಡಲು ಸಾಧ್ಯವಿಲ್ಲ ಮತ್ತು ಇತರ ವೈರ್‌ಲೆಸ್ ಕಾರ್ಯಗಳನ್ನು ನಿಷ್ಕ್ರಿಯಗೊಳಿಸಿರಬಹುದು. ಪ್ರಯಾಣಕ್ಕಾಗಿ ಸೆಟ್ಟಿಂಗ್ಸ್ ಅನ್ನು ಆಯ್ಕೆಮಾಡಿ ಎಂಬುದನ್ನು ನೋಡಿ.

5G ಸ್ಟೇಟಸ್ ಐಕಾನ್.

5G. ನಿಮ್ಮ ನೆಟ್‌ವರ್ಕ್ ಪೂರೈಕೆದಾರರ 5G ನೆಟ್‌ವರ್ಕ್ ಲಭ್ಯವಿದೆ ಮತ್ತು ಬೆಂಬಲಿತ ಮಾಡಲ್‌ಗಳು ಆ ನೆಟ್‌ವರ್ಕ್ ಮೂಲಕ ಇಂಟರ್ನೆಟ್‌ಗೆ ಕನೆಕ್ಟ್ ಆಗಬಹುದು (ಎಲ್ಲಾ ದೇಶಗಳು ಅಥವಾ ಪ್ರದೇಶಗಳಲ್ಲಿ ಲಭ್ಯವಿಲ್ಲ). ನಿಮ್ಮ iPhoneನೊಂದಿಗೆ 5G ಬಳಸಿ ಎಂಬ Apple ಬೆಂಬಲ ಲೇಖನವನ್ನು ನೋಡಿ.

5G ಸ್ಟೇಟಸ್ ಐಕಾನ್.

5G UC. ನಿಮ್ಮ ನೆಟ್‌ವರ್ಕ್ ಪೂರೈಕೆದಾರರ 5G UC ನೆಟ್‌ವರ್ಕ್ ಲಭ್ಯವಿದ್ದು, ಅದು ನಿಮ್ಮ ನೆಟ್‌ವರ್ಕ್ ಪೂರೈಕೆದಾರರ 5Gಯ ಹೆಚ್ಚಿನ ಫ್ರೀಕ್ವೆನ್ಸಿ ಆವೃತ್ತಿಯನ್ನು ಒಳಗೊಂಡಿರುತ್ತದೆ. ಬೆಂಬಲಿತ ಮಾಡಲ್‌ಗಳನ್ನು ಆ ನೆಟ್‌ವರ್ಕ್ ಮೂಲಕ ಇಂಟರ್‌ನೆಟ್‌ಗೆ ಕನೆಕ್ಟ್ ಮಾಡಬಹುದು (ಎಲ್ಲಾ ದೇಶಗಳು ಅಥವಾ ಪ್ರದೇಶಗಳಲ್ಲಿ ಲಭ್ಯವಿಲ್ಲ). ನಿಮ್ಮ iPhoneನೊಂದಿಗೆ 5G ಬಳಸಿ ಎಂಬ Apple ಬೆಂಬಲ ಲೇಖನವನ್ನು ನೋಡಿ.

5G+ ಸ್ಟೇಟಸ್ ಐಕಾನ್.

5G+. ನಿಮ್ಮ ನೆಟ್‌ವರ್ಕ್ ಪೂರೈಕೆದಾರರ 5G+ ನೆಟ್‌ವರ್ಕ್ ಲಭ್ಯವಿದ್ದು, ಅದು ನಿಮ್ಮ ನೆಟ್‌ವರ್ಕ್ ಪೂರೈಕೆದಾರರ 5Gಯ ಹೆಚ್ಚಿನ ಫ್ರೀಕ್ವೆನ್ಸಿ ಆವೃತ್ತಿಯನ್ನು ಒಳಗೊಂಡಿರುತ್ತದೆ. ಬೆಂಬಲಿತ ಮಾಡಲ್‌ಗಳನ್ನು ಆ ನೆಟ್‌ವರ್ಕ್ ಮೂಲಕ ಇಂಟರ್‌ನೆಟ್‌ಗೆ ಕನೆಕ್ಟ್ ಮಾಡಬಹುದು (ಎಲ್ಲಾ ದೇಶಗಳು ಅಥವಾ ಪ್ರದೇಶಗಳಲ್ಲಿ ಲಭ್ಯವಿಲ್ಲ). ನಿಮ್ಮ iPhoneನೊಂದಿಗೆ 5G ಬಳಸಿ ಎಂಬ Apple ಬೆಂಬಲ ಲೇಖನವನ್ನು ನೋಡಿ.

5G UW ಸ್ಟೇಟಸ್ ಐಕಾನ್.

5G UW. ನಿಮ್ಮ ನೆಟ್‌ವರ್ಕ್ ಪೂರೈಕೆದಾರರ 5G UW ನೆಟ್‌ವರ್ಕ್ ಲಭ್ಯವಿದ್ದು, ಅದು ನಿಮ್ಮ ನೆಟ್‌ವರ್ಕ್ ಪೂರೈಕೆದಾರರ 5Gಯ ಹೆಚ್ಚಿನ ಫ್ರೀಕ್ವೆನ್ಸಿ ಆವೃತ್ತಿಯನ್ನು ಒಳಗೊಂಡಿರುತ್ತದೆ. ಬೆಂಬಲಿತ ಮಾಡಲ್‌ಗಳನ್ನು ಆ ನೆಟ್‌ವರ್ಕ್ ಮೂಲಕ ಇಂಟರ್‌ನೆಟ್‌ಗೆ ಕನೆಕ್ಟ್ ಮಾಡಬಹುದು (ಎಲ್ಲಾ ದೇಶಗಳು ಅಥವಾ ಪ್ರದೇಶಗಳಲ್ಲಿ ಲಭ್ಯವಿಲ್ಲ). ನಿಮ್ಮ iPhoneನೊಂದಿಗೆ 5G ಬಳಸಿ ಎಂಬ Apple ಬೆಂಬಲ ಲೇಖನವನ್ನು ನೋಡಿ.

5G E ಸ್ಟೇಟಸ್ ಐಕಾನ್.

5G E. ನಿಮ್ಮ ನೆಟ್‌ವರ್ಕ್ ಪೂರೈಕೆದಾರರ 5G E ನೆಟ್‌ವರ್ಕ್ ಲಭ್ಯವಿದೆ ಮತ್ತು ಆ ನೆಟ್‌ವರ್ಕ್ ಮೂಲಕ iPhone ಇಂಟರ್ನೆಟ್‌ಗೆ ಕನೆಕ್ಟ್ ಆಗಬಹುದು (ಎಲ್ಲಾ ದೇಶಗಳು ಅಥವಾ ಪ್ರದೇಶಗಳಲ್ಲಿ ಲಭ್ಯವಿಲ್ಲ). ಮೊಬೈಲ್ ಡೇಟ ಸೆಟ್ಟಿಂಗ್ಸ್ ಅನ್ನು ನೋಡಿ ಅಥವಾ ಬದಲಾಯಿಸಿ ಎಂಬುದನ್ನು ನೋಡಿ.

LTE ಸ್ಟೇಟಸ್ ಐಕಾನ್.

LTE. ನಿಮ್ಮ ನೆಟ್‌ವರ್ಕ್ ಪೂರೈಕೆದಾರರ LTE ನೆಟ್‌ವರ್ಕ್ ಲಭ್ಯವಿದೆ ಮತ್ತು ಆ ನೆಟ್‌ವರ್ಕ್ ಮೂಲಕ iPhone ಇಂಟರ್ನೆಟ್‌ಗೆ ಕನೆಕ್ಟ್ ಆಗಬಹುದು (ಎಲ್ಲಾ ದೇಶಗಳು ಅಥವಾ ಪ್ರದೇಶಗಳಲ್ಲಿ ಲಭ್ಯವಿಲ್ಲ). ಮೊಬೈಲ್ ಡೇಟ ಸೆಟ್ಟಿಂಗ್ಸ್ ಅನ್ನು ನೋಡಿ ಅಥವಾ ಬದಲಾಯಿಸಿ ಎಂಬುದನ್ನು ನೋಡಿ.

4G ಸ್ಟೇಟಸ್ ಐಕಾನ್.

UMTS. ನಿಮ್ಮ ನೆಟ್‌ವರ್ಕ್ ಪೂರೈಕೆದಾರರ 4G UMTS (GSM) ಅಥವಾ LTE ನೆಟ್‌ವರ್ಕ್ ಲಭ್ಯವಿರುತ್ತದೆ (ನೆಟ್‌ವರ್ಕ್ ಪೂರೈಕೆದಾರರನ್ನು ಅವಲಂಬಿಸಿ) ಮತ್ತು ಆ ನೆಟ್‌ವರ್ಕ್ ಮೂಲಕ iPhone ಇಂಟರ್ನೆಟ್‌ಗೆ ಕನೆಕ್ಟ್ ಆಗಬಹುದು (ಎಲ್ಲಾ ದೇಶಗಳು ಅಥವಾ ಪ್ರದೇಶಗಳಲ್ಲಿ ಲಭ್ಯವಿಲ್ಲ). ಮೊಬೈಲ್ ಡೇಟ ಸೆಟ್ಟಿಂಗ್ಸ್ ಅನ್ನು ನೋಡಿ ಅಥವಾ ಬದಲಾಯಿಸಿ ಎಂಬುದನ್ನು ನೋಡಿ.

3G ಸ್ಟೇಟಸ್ ಐಕಾನ್.

UMTS/EV-DO. ನಿಮ್ಮ ನೆಟ್‌ವರ್ಕ್ ಪೂರೈಕೆದಾರರ 3G UMTS (GSM) ಅಥವಾ EV-DO (CDMA) ನೆಟ್‌ವರ್ಕ್ ಲಭ್ಯವಿದೆ ಮತ್ತು iPhone ಅನ್ನು ಆ ನೆಟ್‌ವರ್ಕ್ ಮೂಲಕ ಇಂಟರ್ನೆಟ್‌ಗೆ ಕನೆಕ್ಟ್ ಮಾಡಬಹುದು. ಮೊಬೈಲ್ ಡೇಟ ಸೆಟ್ಟಿಂಗ್ಸ್ ಅನ್ನು ನೋಡಿ ಅಥವಾ ಬದಲಾಯಿಸಿ ಎಂಬುದನ್ನು ನೋಡಿ.

EDGE ಸ್ಟೇಟಸ್ ಐಕಾನ್ (“E”).

EDGE. ನಿಮ್ಮ ನೆಟ್‌ವರ್ಕ್ ಪೂರೈಕೆದಾರರ EDGE (GSM) ನೆಟ್‌ವರ್ಕ್ ಲಭ್ಯವಿದೆ ಮತ್ತು iPhone ಆ ನೆಟ್‌ವರ್ಕ್ ಮೂಲಕ ಇಂಟರ್ನೆಟ್‌ಗೆ ಕನೆಕ್ಟ್ ಆಗಬಹುದು. ಮೊಬೈಲ್ ಡೇಟ ಸೆಟ್ಟಿಂಗ್ಸ್ ಅನ್ನು ನೋಡಿ ಅಥವಾ ಬದಲಾಯಿಸಿ ಎಂಬುದನ್ನು ನೋಡಿ.

GPRS ಸ್ಟೇಟಸ್ ಐಕಾನ್ (“G”).

GPRS/1xRTT. ನಿಮ್ಮ ನೆಟ್‌ವರ್ಕ್ ಪೂರೈಕೆದಾರರ GPRS (GSM) ಅಥವಾ 1xRTT (CDMA) ನೆಟ್‌ವರ್ಕ್ ಲಭ್ಯವಿದೆ ಮತ್ತು iPhone ಆ ನೆಟ್‌ವರ್ಕ್ ಮೂಲಕ ಇಂಟರ್ನೆಟ್‌ಗೆ ಕನೆಕ್ಟ್ ಆಗಬಹುದು. ಮೊಬೈಲ್ ಡೇಟ ಸೆಟ್ಟಿಂಗ್ಸ್ ಅನ್ನು ನೋಡಿ ಅಥವಾ ಬದಲಾಯಿಸಿ ಎಂಬುದನ್ನು ನೋಡಿ.

SOS ಸ್ಟೇಟಸ್ ಐಕಾನ್.

SOS ಮಾತ್ರ. ನಿಮ್ಮ ಮೊಬೈಲ್ ಸೇವಾ ಪೂರೈಕೆದಾರರಿಂದ ಪೂರ್ಣ ಪ್ರಮಾಣದ ಸೇವೆ ಲಭ್ಯವಿಲ್ಲ, ಆದರೆ ಇತರ ನೆಟ್‌ವರ್ಕ್ ಪೂರೈಕೆದಾರರ ನೆಟ್‌ವರ್ಕ್‌ಗಳ ಮೂಲಕ ತುರ್ತು ಕರೆಗಳನ್ನು ಮಾಡಲು ಸಾಧ್ಯವಾಗಬಹುದು (ಎಲ್ಲಾ ದೇಶಗಳು ಅಥವಾ ಪ್ರದೇಶಗಳಲ್ಲಿ ಲಭ್ಯವಿಲ್ಲ). ತುರ್ತು ಸೇವೆಗಳನ್ನು ಸಂಪರ್ಕಿಸಲು SOS ಅನ್ನು ಬಳಸಿ ಎಂಬುದನ್ನು ನೋಡಿ.

ಸ್ಯಾಟಲೈಟ್ ಸ್ಥಿತಿಯ ಐಕಾನ್.

ಸ್ಯಾಟಲೈಟ್ ಫೀಚರ್‌ಗಳು. ತುರ್ತು SOS, ಹುಡುಕಿ, ರಸ್ತೆಬದಿಯ ಸಹಾಯ ಮತ್ತು ಸ್ಯಾಟಲೈಟ್ ಮೂಲಕ ಸಂದೇಶಗಳು ನಿಮ್ಮ ಸ್ಥಳದಲ್ಲಿ ಲಭ್ಯವಿದೆ (iPhone 14 ಮತ್ತು ನಂತರದ ಆವೃತ್ತಿಯಲ್ಲಿ ಬೆಂಬಲಿತವಾಗಿದೆ). ಸ್ಯಾಟಲೈಟ್ ಮೂಲಕ ತುರ್ತು SOS ಅನ್ನು ಬಳಸಿ ಎಂಬುದನ್ನು ನೋಡಿ.

SAT ಸ್ಟೇಟಸ್ ಐಕಾನ್.

ನೆಟ್‌ವರ್ಕ್ ಪೂರೈಕೆದಾರರ ಸ್ಯಾಟಲೈಟ್ ಫೀಚರ್‌ಗಳು. ನಿಮ್ಮ ಸಾಧನವು ನೆಟ್‌ವರ್ಕ್ ಪೂರೈಕೆದಾರರು ಒದಗಿಸಿದ ಸ್ಯಾಟಲೈಟ್ ಫೀಚರ್ ಅನ್ನು ಬಳಸುತ್ತಿದೆ. iPhoneನಲ್ಲಿ ನೆಟ್‌ವರ್ಕ್ ಪೂರೈಕೆದಾರರು ಒದಗಿಸಿದ ಸ್ಯಾಟಲೈಟ್ ಫೀಚರ್‌ಗಳ ಬಗ್ಗೆ ಎಂಬ Apple ಬೆಂಬಲ ಲೇಖನವನ್ನು ನೋಡಿ.

Wi-Fi ಕರೆ ಸ್ಟೇಟಸ್ ಐಕಾನ್.

Wi-Fi ಕರೆಮಾಡುವಿಕೆ. Wi-Fi ಕರೆಮಾಡುವಿಕೆಗಾಗಿ iPhone ಅನ್ನು ಸೆಟಪ್ ಮಾಡಲಾಗಿದೆ. iPhone ಐಕಾನ್ ಮುಂದಿರುವ ಮೊಬೈಲ್ ಸೇವಾ ಪೂರೈಕೆದಾರರು ಹೆಸರನ್ನು ಸಹ ಪ್ರದರ್ಶಿಸುತ್ತದೆ. Wi-Fi ಬಳಸಿ ಕರೆಗಳನ್ನು ಮಾಡಿ ಎಂಬುದನ್ನು ನೋಡಿ.

ವೈಯಕ್ತಿಕ ಹಾಟ್‌ಸ್ಪಾಟ್ ಸ್ಟೇಟಸ್ ಐಕಾನ್.

ವೈಯಕ್ತಿಕ ಹಾಟ್‌ಸ್ಪಾಟ್ ಕನೆಕ್ಷನ್. iPhone ಮತ್ತೊಂದು ಸಾಧನದ ವೈಯಕ್ತಿಕ ಹಾಟ್‌ಸ್ಪಾಟ್ ಮೂಲಕ ಇಂಟರ್ನೆಟ್‌ಗೆ ಕನೆಕ್ಟ್ ಆಗಿದೆ. ವೈಯಕ್ತಿಕ ಹಾಟ್‌ಸ್ಪಾಟ್‌ಗೆ ಸೇರಿಕೊಳ್ಳುವುದು ಅನ್ನು ನೋಡಿ.

VPN ಸ್ಟೇಟಸ್ ಐಕಾನ್.

VPN. iPhone ಅನ್ನು VPN ಬಳಸಿಕೊಂಡು ನೆಟ್‌ವರ್ಕ್‌ಗೆ ಕನೆಕ್ಟ್ ಮಾಡಲಾಗಿದೆ.

ನ್ಯಾವಿಗೇಷನ್ ಇಂಡಿಕೇಟರ್ ಐಕಾನ್.

ನ್ಯಾವಿಗೇಷನ್. iPhone ಹಂತ ಹಂತವಾಗಿ ನಿರ್ದೇಶನಗಳನ್ನು ಒದಗಿಸುತ್ತಿದೆ. ಡ್ರೈವಿಂಗ್ ನಿರ್ದೇಶನಗಳನ್ನು ಪಡೆಯಿರಿ ಎಂಬುದನ್ನು ನೋಡಿ.

ವೈಯಕ್ತಿಕ ಹಾಟ್‌ಸ್ಪಾಟ್ ಇಂಡಿಕೇಟರ್ ಐಕಾನ್.

ವೈಯಕ್ತಿಕ ಹಾಟ್‌ಸ್ಪಾಟ್. iPhone ವೈಯಕ್ತಿಕ ಹಾಟ್‌ಸ್ಪಾಟ್ ಅನ್ನು ಒದಗಿಸುತ್ತಿದೆ. ವೈಯಕ್ತಿಕ ಹಾಟ್‌ಸ್ಪಾಟ್ ಮೂಲಕ ನಿಮ್ಮ ಇಂಟರ್ನೆಟ್ ಕನೆಕ್ಷನ್ ಹಂಚಿಕೊಳ್ಳಿ ಎಂಬುದನ್ನು ನೋಡಿ.

ಕರೆ ಇಂಡಿಕೇಟರ್ ಐಕಾನ್.

ಫೋನ್ ಕರೆ. iPhone ಫೋನ್ ಕರೆಯಲ್ಲಿದೆ. ಫೋನ್ ಕರೆಗಳನ್ನು ಮಾಡಿ ಎಂಬುದನ್ನು ನೋಡಿ.

FaceTime ಇಂಡಿಕೇಟರ್ ಐಕಾನ್.

FaceTime. iPhone, FaceTime ಕರೆಯಲ್ಲಿದೆ. FaceTime ಕರೆಗಳನ್ನು ಮಾಡಿ ಎಂಬುದನ್ನು ನೋಡಿ.

ರೆಕಾರ್ಡಿಂಗ್ ಇಂಡಿಕೇಟರ್ ಐಕಾನ್.

ಸ್ಕ್ರೀನ್ ರೆಕಾರ್ಡಿಂಗ್. iPhone ನಿಮ್ಮ ಸ್ಕ್ರೀನ್ ಅನ್ನು ರೆಕಾರ್ಡ್ ಮಾಡುತ್ತಿದೆ. ಸ್ಕ್ರೀನ್ ರೆಕಾರ್ಡಿಂಗ್ ತೆಗೆದುಕೊಳ್ಳಿ ಎಂಬುದನ್ನು ನೋಡಿ.

ಕ್ಯಾಮರಾ ಬಳಕೆಯಲ್ಲಿದೆ ಎಂಬ ಐಕಾನ್.

ಬಳಕೆಯಲ್ಲಿರುವ ಕ್ಯಾಮರಾ. ಆ್ಯಪ್‌ವೊಂದು ನಿಮ್ಮ ಕ್ಯಾಮರಾವನ್ನು ಬಳಸುತ್ತಿದೆ. ನಿಮ್ಮ iPhoneನಲ್ಲಿ ಯಾವ ಆ್ಯಪ್‌ಗಳು ಕ್ಯಾಮರಾ ಮತ್ತು ಮೈಕ್ರೋಫೋನ್‌ಗೆ ಆ್ಯಕ್ಸೆಸ್ ಹೊಂದಿವೆ ಎಂಬುದನ್ನು ನಿಯಂತ್ರಿಸಿ ಅನ್ನು ನೋಡಿ.

ಮೈಕ್ರೋಫೋನ್ ಬಳಕೆಯಲ್ಲಿದೆ ಎಂಬ ಐಕಾನ್.

ಮೈಕ್ರೋಫೋನ್ ಬಳಕೆಯಲ್ಲಿದೆ. ಆ್ಯಪ್‌ವೊಂದು ನಿಮ್ಮ ಮೈಕ್ರೋಫೋನ್ ಅನ್ನು ಬಳಸುತ್ತಿದೆ. ನಿಮ್ಮ iPhoneನಲ್ಲಿ ಯಾವ ಆ್ಯಪ್‌ಗಳು ಕ್ಯಾಮರಾ ಮತ್ತು ಮೈಕ್ರೋಫೋನ್‌ಗೆ ಆ್ಯಕ್ಸೆಸ್ ಹೊಂದಿವೆ ಎಂಬುದನ್ನು ನಿಯಂತ್ರಿಸಿ ಅನ್ನು ನೋಡಿ.

ಸಿಂಕ್ ಆಗುತ್ತಿರುವ ಸ್ಟೇಟಸ್ ಐಕಾನ್.

ಸಿಂಕ್ ಆಗುತ್ತಿದೆ. iPhone ನಿಮ್ಮ ಕಂಪ್ಯೂಟರ್‌ನೊಂದಿಗೆ ಸಿಂಕ್ ಆಗುತ್ತಿದೆ. ನಿಮ್ಮ iPhone ಅನ್ನು ಇತರ ಸಾಧನಗಳೊಂದಿಗೆ ಸಿಂಕ್ ಮಾಡುವುದು ಅನ್ನು ನೋಡಿ.

ನೆಟ್‌ವರ್ಕ್ ಚಟುವಟಿಕೆ ಸ್ಟೇಟಸ್ ಐಕಾನ್.

ನೆಟ್‌ವರ್ಕ್ ಚಟುವಟಿಕೆ. ನೆಟ್‌ವರ್ಕ್ ಚಟುವಟಿಕೆ ಇದೆ ಎಂಬುದನ್ನು ತೋರಿಸುತ್ತದೆ. ಕೆಲವು ಥರ್ಡ್ ಪಾರ್ಟಿ ಆ್ಯಪ್‌ಗಳು ಸಕ್ರಿಯ ಪ್ರಕ್ರಿಯೆಯನ್ನು ತೋರಿಸಲು ಸಹ ಇದನ್ನು ಬಳಸಬಹುದು. ಇಂಟರ್ನೆಟ್‌ಗೆ ಕನೆಕ್ಟ್ ಮಾಡಿ ಎಂಬುದನ್ನು ನೋಡಿ.

ಕರೆ ಫಾರ್ವರ್ಡಿಂಗ್ ಸ್ಟೇಟಸ್ ಐಕಾನ್.

ಕರೆ ಫಾರ್ವರ್ಡಿಂಗ್. ಕರೆ ಫಾರ್ವರ್ಡಿಂಗ್ ಅನ್ನು ಸೆಟಪ್ ಮಾಡಲಾಗಿದೆ. ಕರೆ ಫಾರ್ವರ್ಡಿಂಗ್ ಅನ್ನು ಸೆಟಪ್ ಮಾಡಿ ಎಂಬುದನ್ನು ನೋಡಿ.

ಲಾಕ್ ಸ್ಟೇಟಸ್ ಐಕಾನ್.

ಲಾಕ್. iPhone ಅನ್ನು ಲಾಕ್ ಮಾಡಲಾಗಿದೆ. iPhone ಅನ್ನು ವೇಕ್ ಮಾಡಿ ಮತ್ತು ಅನ್‌ಲಾಕ್ ಮಾಡಿ ಎಂಬುದನ್ನು ನೋಡಿ.

ಅಡಚಣೆ ಮಾಡಬೇಡಿ ಸ್ಟೇಟಸ್ ಐಕಾನ್.

ಅಡಚಣೆ ಮಾಡಬೇಡಿ. ಅಡಚಣೆ ಮಾಡಬೇಡಿ ಎಂಬುದನ್ನು ಆನ್ ಮಾಡಲಾಗಿದೆ. ಫೋಕಸ್ ಅನ್ನು ಆನ್ ಮಾಡಿ ಅಥವಾ ನಿಗದಿಪಡಿಸಿ ಎಂಬುದನ್ನು ನೋಡಿ.

ಪೋರ್ಟ್ರೇಟ್ ಓರಿಯೆಂಟೇಶನ್ ಲಾಕ್ ಸ್ಟೇಟಸ್ ಐಕಾನ್.

ಪೋರ್ಟ್ರೇಟ್ ಓರಿಯೆಂಟೇಶನ್ ಲಾಕ್. iPhone ಸ್ಕ್ರೀನ್ ಪೋರ್ಟ್ರೇಟ್ ಓರಿಯೆಂಟೇಷನ್‌ನಲ್ಲಿ ಲಾಕ್ ಆಗಿದೆ. ಸ್ಕ್ರೀನ್ ಓರಿಯೆಂಟೇಶನ್ ಅನ್ನು ಬದಲಾಯಿಸಿ ಅಥವಾ ಲಾಕ್ ಮಾಡಿ ಎಂಬುದನ್ನು ನೋಡಿ.

ಸ್ಥಳ ಸೇವೆಗಳ ಸ್ಟೇಟಸ್ ಐಕಾನ್.

ಸ್ಥಳ ಸೇವೆಗಳು. ಆ್ಯಪ್‌ವೊಂದು ಸ್ಥಳ ಸೇವೆಗಳನ್ನು ಬಳಸುತ್ತಿದೆ. ನಿಮ್ಮ iPhoneನ ಸ್ಥಳವನ್ನು ಯಾವ ಆ್ಯಪ್‌ಗಳು ಬಳಸಬಹುದು ಎಂಬುದನ್ನು ನಿಯಂತ್ರಿಸಿ ಅನ್ನು ನೋಡಿ.

ಅಲಾರಂ ಸ್ಟೇಟಸ್ ಐಕಾನ್.

ಅಲಾರಂ. ಅಲಾರಂ ಅನ್ನು ಸೆಟ್ ಮಾಡಲಾಗಿದೆ. ಅಲಾರಂ ಅನ್ನು ಸೆಟ್ ಮಾಡಿ ಎಂಬುದನ್ನು ನೋಡಿ.

ಹೆಡ್‌ಫೋನ್‌ಗಳು ಕನೆಕ್ಟ್ ಆಗಿವೆ ಎಂಬ ಸ್ಟೇಟಸ್ ಐಕಾನ್.

ಹೆಡ್‌ಫೋನ್‌ಗಳನ್ನು ಕನೆಕ್ಟ್ ಮಾಡಲಾಗಿದೆ. ಆನ್ ಆಗಿರುವ ಮತ್ತು Bluetooth ವ್ಯಾಪ್ತಿಯಲ್ಲಿರುವ Bluetooth® ಹೆಡ್‌ಫೋನ್‌ಗಳೊಂದಿಗೆ iPhone ಅನ್ನು ಪೇರ್ ಮಾಡಲಾಗಿದೆ. Bluetooth ಹೆಡ್‌ಫೋನ್‌ಗಳನ್ನು ಸೆಟಪ್ ಮಾಡಿ ಮತ್ತು ಆಲಿಸಿ ಎಂಬುದನ್ನು ನೋಡಿ.

ಬ್ಯಾಟರಿ ಸ್ಟೇಟಸ್ ಐಕಾನ್.

ಬ್ಯಾಟರಿ. iPhone ಬ್ಯಾಟರಿ ಮಟ್ಟವನ್ನು ತೋರಿಸುತ್ತದೆ. ಐಕಾನ್ ಹಳದಿ ಬಣ್ಣದಲ್ಲಿರುವಾಗ, ಕಡಿಮೆ ಪವರ್ ಮೋಡ್ ಆನ್ ಆಗಿರುತ್ತದೆ. iPhone ಬ್ಯಾಟರಿಯ ಪ್ರಮಾಣವನ್ನು ತೋರಿಸಿ ಅನ್ನು ನೋಡಿ.

ಬ್ಯಾಟರಿ ಚಾರ್ಜಿಂಗ್ ಐಕಾನ್.

ಬ್ಯಾಟರಿ ಚಾರ್ಜಿಂಗ್. iPhone ಬ್ಯಾಟರಿ ಚಾರ್ಜ್ ಆಗುತ್ತಿದೆ. ಐಕಾನ್ ಬೂದು ಬಣ್ಣದಲ್ಲಿದ್ದಾಗ, ಚಾರ್ಜಿಂಗ್ ಅನ್ನು ವಿರಾಮಗೊಂಡಿದೆ ಎಂದರ್ಥ. ಬ್ಯಾಟರಿ ಚಾರ್ಜ್ ಮಾಡಿ ಎಂಬುದನ್ನು ನೋಡಿ.

Bluetooth ಬ್ಯಾಟರಿ ಸ್ಟೇಟಸ್ ಐಕಾನ್.

Bluetooth ಬ್ಯಾಟರಿ. ಪೇರ್ ಮಾಡಲಾದ Bluetooth ಸಾಧನದ ಬ್ಯಾಟರಿ ಮಟ್ಟವನ್ನು ತೋರಿಸುತ್ತದೆ. Bluetooth ಆಕ್ಸೆಸರಿಗಳಿಗೆ ಕನೆಕ್ಟ್ ಮಾಡಿ ಎಂಬುದನ್ನು ನೋಡಿ.

AirPlay ಸ್ಟೇಟಸ್ ಐಕಾನ್.

AirPlay. AirPlay ಆನ್ ಆಗಿದೆ. ವೀಡಿಯೊಗಳು ಮತ್ತು ಫೋಟೋಗಳನ್ನು ಸ್ಟ್ರೀಮ್ ಮಾಡಿ ಎಂಬುದನ್ನು ನೋಡಿ.

ವಾಯ್ಸ್ ಕಂಟ್ರೋಲ್ ಐಕಾನ್.

ವಾಯ್ಸ್ ಕಂಟ್ರೋಲ್. ಸೆಟ್ಟಿಂಗ್ಸ್ ಆ್ಯಪ್‌ >ಆಕ್ಸೆಸಿಬಿಲಿಟಿ ಎಂಬುದರಲ್ಲಿ ವಾಯ್ಸ್ ಕಂಟ್ರೋಲ್ ಅನ್ನು ಆನ್ ಮಾಡಲಾಗಿದೆ ಮತ್ತು ನೀವು iPhoneನೊಂದಿಗೆ ಸಂವಹನ ನಡೆಸಲು ನಿಮ್ಮ ಧ್ವನಿಯನ್ನು ಬಳಸಬಹುದು.

TTY ಸ್ಟೇಟಸ್ ಐಕಾನ್.

TTY. ಸಾಫ್ಟ್‌ವೇರ್ RTT/TTY ಅಥವಾ ಹಾರ್ಡ್‌ವೇರ್ TTY ಅನ್ನು ಆನ್ ಮಾಡಲಾಗಿದೆ. RTT ಮತ್ತು TTY ಅನ್ನು ಸೆಟಪ್ ಮಾಡಿ ಹಾಗೂ ಬಳಸಿ ಎಂಬುದನ್ನು ನೋಡಿ.

CarPlay ಐಕಾನ್.

CarPlay. iPhone ಅನ್ನು CarPlayಗೆ ಕನೆಕ್ಟ್ ಮಾಡಲಾಗಿದೆ. CarPlayಗೆ ಕನೆಕ್ಟ್ ಮಾಡಿ ಎಂಬುದನ್ನು ನೋಡಿ.

Siri Eyes Free ಐಕಾನ್.

Siri Eyes Free. ನಿಮ್ಮ ಕಾರಿನಲ್ಲಿ ನೀವು Siriಗೆ ಪ್ರಶ್ನೆಯನ್ನು ಕೇಳಬಹುದು ಅಥವಾ ವಿನಂತಿಸಬಹುದು. iPhoneನಲ್ಲಿ ನಿಮ್ಮ ಕಾರಿನಲ್ಲಿ Siriಯನ್ನು ಬಳಸುವುದು ಅನ್ನು ನೋಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.