ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

ನಿಮ್ಮ iPhoneನಲ್ಲಿ ಸ್ಯಾಟಲೈಟ್ ಮೂಲಕ ರಸ್ತೆಬದಿಯ ಸಹಾಯಕ್ಕಾಗಿ ವಿನಂತಿಸಿ

ಬೆಂಬಲಿತ ಮಾಡಲ್‌ಗಳಲ್ಲಿ, ನೀವು ಮೊಬೈಲ್ ಸೇವೆ ಮತ್ತು Wi-Fi ಕವರೇಜ್ ಇಲ್ಲದಿರುವಾಗ ಸ್ಯಾಟಲೈಟ್ ಮೂಲಕ ರಸ್ತೆಬದಿಯ ಸಹಾಯಕ್ಕಾಗಿ ವಿನಂತಿಸಬಹುದು. ಸ್ಯಾಟಲೈಟ್ ಮೂಲಕ ರಸ್ತೆಬದಿಯ ಸಹಾಯಕ್ಕೆ ಸಕ್ರಿಯ ಸಿಮ್‌ನ ಅಗತ್ಯವಿದೆ.

ಗಮನಿಸಿ: ಸ್ಯಾಟಲೈಟ್ ಮೂಲಕ ರಸ್ತೆಬದಿ ಸಹಾಯ ಸೌಕರ್ಯವು ಎಲ್ಲಾ ದೇಶಗಳು ಅಥವಾ ಪ್ರದೇಶಗಳಲ್ಲಿ ಲಭ್ಯವಿಲ್ಲ. ಹೆಚ್ಚಿನ ಮಾಹಿತಿಗಾಗಿ, ನಿಮ್ಮ iPhoneನಲ್ಲಿ ಸ್ಯಾಟಲೈಟ್ ಮೂಲಕ ರಸ್ತೆಬದಿ ಸಹಾಯವನ್ನು ವಿನಂತಿಸಿ ಎಂಬ Apple ಬೆಂಬಲ ಲೇಖನವನ್ನು ನೋಡಿ.

ನಿಮ್ಮ iPhoneನಲ್ಲಿ ಸ್ಯಾಟಲೈಟ್ ಮೂಲಕ ರಸ್ತೆಬದಿಯ ಸಹಾಯಕ್ಕಾಗಿ ವಿನಂತಿಸಿ

  1. ನಿಮ್ಮ iPhoneನಲ್ಲಿ ಸಂದೇಶ ಆ್ಯಪ್ ಅನ್ನು ತೆರೆಯಿರಿ.

  2. ಸ್ಕ್ರೀನ್ ಮೇಲ್ಭಾಗದಲ್ಲಿರುವ ರಚಿಸಿ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ವಿಳಾಸದ ಫೀಲ್ಡ್‌ನಲ್ಲಿ “ರಸ್ತೆಬದಿ” ಎಂದು ಟೈಪ್ ಮಾಡಿ.

    “ರಸ್ತೆಬದಿ” ಎಂಬುದನ್ನು ಉದ್ದೇಶಿಸುವ ಹೊಸ ಸಂದೇಶ. ಇದರ ಕೆಳಗೆ ಸ್ಯಾಟಲೈಟ್ ಮೂಲಕ ರಸ್ತೆಬದಿ ಸಹಾಯಕ್ಕಾಗಿ ಲಿಂಕ್ ಇದೆ.
  3. ರಸ್ತೆಬದಿ ಸಹಾಯ ಎಂಬುದನ್ನು ಟ್ಯಾಪ್ ಮಾಡಿ ಮತ್ತು ಸ್ಕ್ರೀನ್ ಮೇಲಿನ ಸೂಚನೆಗಳನ್ನು ಅನುಸರಿಸಿ.

ಪ್ರಮುಖ ಸೂಚನೆ: ಸ್ಯಾಟಲೈಟ್‌ಗೆ ಕನೆಕ್ಟ್ ಮಾಡಲು ನಿಮಗೆ ಸಹಾಯ ಮಾಡುವುದಕ್ಕೆ, ನಿಮ್ಮ ಫೋನ್ ಅನ್ನು ಸಹಜವಾದ ರೀತಿಯಲ್ಲಿ ನಿಮ್ಮ ಕೈಯಲ್ಲಿ ಹಿಡಿದಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ—ನೀವು ನಿಮ್ಮ ಕೈಯನ್ನು ಮೇಲಕ್ಕೆ ಎತ್ತಬೇಕಾಗಿಲ್ಲ ಅಥವಾ ನಿಮ್ಮ ಫೋನ್ ಅನ್ನು ಮೇಲಕ್ಕೆ ಎತ್ತಿ ಹಿಡಿಯಬೇಕಿಲ್ಲ, ಆದರೆ ನಿಮ್ಮ ಫೋನ್ ಆಕಾಶದೆಡೆಗೆ ಸ್ಪಷ್ಟವಾದ ನೋಟವನ್ನು ಹೊಂದಿದೆ ಎಂದು ಖಚಿತಪಡಿಸಿಕೊಳ್ಳಿ. ನೀವು ದಟ್ಟವಾದ ಎಲೆಗಳ ಅಡಿಯಲ್ಲಿದ್ದರೆ ಅಥವಾ ಇತರ ಅಡಚಣೆಗಳ ಮಧ್ಯದಲ್ಲಿದ್ದರೆ, ಸ್ಯಾಟಲೈಟ್‌ಗೆ ಕನೆಕ್ಟ್ ಮಾಡಲು ನಿಮಗೆ ಸಾಧ್ಯವಾಗದಿರಬಹುದು.

ನೀವು ಕನೆಕ್ಟ್ ಆದ ನಂತರ, ನಿಮ್ಮ ಕಾರ್‌ನ ಮಾಡಲ್ ಮತ್ತು ನೀವು ಎದುರಿಸುತ್ತಿರುವ ಸಮಸ್ಯೆಯಂತಹ ಪ್ರಮುಖ ಮಾಹಿತಿಯನ್ನು ನಿಮಗೆ ಕೇಳಲಾಗುತ್ತದೆ.

ನೀವು ಪ್ರಶ್ನೆಗಳಿಗೆ ಉತ್ತರಿಸಿದ ನಂತರ, ನಿಮಗೆ ಸ್ಯಾಟಲೈಟ್‌ಗೆ ಕನೆಕ್ಟ್ ಮಾಡಲು ಮತ್ತು ರಸ್ತೆಬದಿಯ ಸಹಾಯ ಪೂರೈಕೆದಾರರಿಗೆ ನೇರವಾಗಿ ಸಂದೇಶಗಳನ್ನು ಕಳುಹಿಸಲು ಮಾರ್ಗದರ್ಶನ ನೀಡಲಾಗುತ್ತದೆ. ಅವರು ನಿಮಗೆ ಸರಿಯಾದ ರೀತಿಯ ಸಹಾಯವನ್ನು ಕಳುಹಿಸುತ್ತಿದ್ದಾರೆ ಎಂದು ಖಚಿತಪಡಿಸಿಕೊಳ್ಳಲು ಅವರು ಫಾಲೋ ಅಪ್ ಪ್ರಶ್ನೆಗಳನ್ನು ಕೇಳಬಹುದು. ಸಹಾಯಕ್ಕಾಗಿ ನಿಮ್ಮನ್ನು ಯಾರಾದರೂ ತಲುಪಲು ಅಂದಾಜು ಎಷ್ಟು ಸಮಯವಾಗುತ್ತದೆ ಮತ್ತು ಸೇವೆಗೆ ಸಂಬಂಧಿಸಿದ ಯಾವುದೇ ಶುಲ್ಕಗಳ ಕುರಿತು ನೀವು ಅವರೊಂದಿಗೆ ಯಾವುದೇ ಪ್ರಶ್ನೆಗಳನ್ನು ಸಂದೇಶದಲ್ಲಿ ಫಾಲೋ ಅಪ್ ಮಾಡಬಹುದು.

ಸ್ಯಾಟಲೈಟ್ ಸ್ಕ್ರೀನ್ ಮೂಲಕ ರಸ್ತೆಬದಿ ಸಹಾಯ. ‘ಸಹಾಯಕ್ಕಾಗಿ ವಿನಂತಿಸಿ’ ಎಂಬ ಬಟನ್ ಸ್ಕ್ರೀನ್‌ನ ಕೆಳಭಾಗದಲ್ಲಿದೆ.
Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.