ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPhoneನಲ್ಲಿನ ಆರೋಗ್ಯ ಆ್ಯಪ್‌ನಲ್ಲಿ ನಿಮ್ಮ ಔಷಧಿಗಳನ್ನು ಟ್ರ್ಯಾಕ್ ಮಾಡುವುದು

ನೀವು ತೆಗೆದುಕೊಳ್ಳುವ ಔಷಧಿಗಳು, ವಿಟಮಿನ್‌ಗಳು ಮತ್ತು ಸಪ್ಲಿಮೆಂಟ್‌ಗಳನ್ನು ನೀವು ಟ್ರ್ಯಾಕ್ ಮಾಡಬಹುದು ಮತ್ತು ನಿರ್ವಹಿಸಬಹುದು.

Siri: ಬೆಂಬಲಿತ ಮಾಡಲ್‌ಗಳಲ್ಲಿ, ಈ ರೀತಿ ಏನಾದರೂ Siriಗೆ ಕೇಳಿ, “Log my 6AM medications as taken” (ಎಲ್ಲಾ ಭಾಷೆಗಳು ಅಥವಾ ಪ್ರದೇಶಗಳಲ್ಲಿ ಲಭ್ಯವಿಲ್ಲ). Siriಯನ್ನು ಬಳಸುವುದು ಹೇಗೆಂದು ತಿಳಿಯಿರಿ.

ಆರೋಗ್ಯ ಆ್ಯಪ್‌ನಲ್ಲಿನ ಔಷಧಿಗಳ ಸ್ಕ್ರೀನ್, ದಿನಾಂಕ ಮತ್ತು ಔಷಧಿಗಳ ಲಾಗ್ ಅನ್ನು ತೋರಿಸುತ್ತದೆ.

ಗಮನಿಸಿ: ಕೆಲವು ಫೀಚರ್‌ಗಳು ಎಲ್ಲಾ ದೇಶಗಳು ಅಥವಾ ಪ್ರದೇಶಗಳಲ್ಲಿ ಲಭ್ಯವಿಲ್ಲ. ಔಷಧಿಗಳು ಫೀಚರ್ ವೃತ್ತಿಪರ ವೈದ್ಯಕೀಯ ನಿರ್ಧಾರಕ್ಕೆ ಬದಲಿಯಾಗಿಲ್ಲ. ನಿಮ್ಮ ಔಷಧಿಗಳ ಲೇಬಲ್‌ಗಳ ಮೇಲೆ ಹೆಚ್ಚುವರಿ ಮಾಹಿತಿ ಲಭ್ಯವಿದೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ನೀವು ನಿಮ್ಮ ಆರೋಗ್ಯ ಪೂರೈಕೆದಾರರೊಂದಿಗೆ ಸಮಾಲೋಚಿಸಬೇಕು.

ಹೊಸ ಔಷಧಿಯನ್ನು ಸೇರಿಸುವುದು ಮತ್ತು ನಿಗದಿಗೊಳಿಸುವುದು

  1. ನಿಮ್ಮ iPhoneನಲ್ಲಿ ಆರೋಗ್ಯ ಆ್ಯಪ್‌ಗೆ ಹೋಗಿ.

  2. ಕೆಳಗಿನ ಬಲಭಾಗದಲ್ಲಿರುವ ಹುಡುಕಾಟ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಔಷಧಿಗಳು ಎಂಬುದನ್ನು ಟ್ಯಾಪ್ ಮಾಡಿ.

  3. ಔಷಧಿ ಸೇರಿಸಿ (ನಿಮ್ಮ ಪಟ್ಟಿಯನ್ನು ಪ್ರಾರಂಭಿಸಲು) ಅಥವಾ ಔಷಧಿ ಸೇರಿಸಿ (ನಿಮ್ಮ ಪಟ್ಟಿಗೆ ಸೇರಿಸಲು) ಎಂಬುದನ್ನು ಟ್ಯಾಪ್ ಮಾಡಿ.

  4. ಔಷಧಿಯನ್ನು ಗುರುತಿಸಲು, ಈ ಕೆಳಗಿನವುಗಳಲ್ಲಿ ಒಂದನ್ನು ಮಾಡಿ:

    • ಹೆಸರನ್ನು ಟೈಪ್ ಮಾಡಿ: ಪಠ್ಯದ ಫೀಲ್ಡ್ ಅನ್ನು ಟ್ಯಾಪ್ ಮಾಡಿ, ಹೆಸರನ್ನು ನಮೂದಿಸಿ, ನಂತರ ಸೇರಿಸಿ ಎಂಬುದನ್ನು ಟ್ಯಾಪ್ ಮಾಡಿ.

      U.Sನಲ್ಲಿ ಮಾತ್ರ, ನೀವು ಟೈಪ್ ಮಾಡಲು ಪ್ರಾರಂಭಿಸಿದಾಗ ಸಲಹೆಗಳು ಕಾಣಿಸಿಕೊಳ್ಳುತ್ತವೆ. ನೀವು ಸಲಹೆಯನ್ನು ಆಯ್ಕೆ ಮಾಡಬಹುದು ಅಥವಾ ಹೆಸರನ್ನು ಟೈಪ್ ಮಾಡುವುದನ್ನು ಪೂರ್ಣಗೊಳಿಸಬಹುದು, ನಂತರ ಸೇರಿಸಿ ಎಂಬುದನ್ನು ಟ್ಯಾಪ್ ಮಾಡಿ.

    • ಕ್ಯಾಮರಾವನ್ನು ಬಳಸಿ: (U. S. ಮಾತ್ರ) ಪಠ್ಯ ಫೀಲ್ಡ್‌ನ ಪಕ್ಕದಲ್ಲಿರುವ ಕ್ಯಾಮರಾ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಸ್ಕ್ರೀನ್ ಮೇಲಿನ ಸೂಚನೆಗಳನ್ನು ಅನುಸರಿಸಿ.

      ಹೊಂದಾಣಿಕೆಯು ಕಂಡುಬರದಿದ್ದರೆ, ಹೆಸರಿನ ಪ್ರಕಾರ ಹುಡುಕಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ಹೆಸರನ್ನು ಟೈಪ್ ಮಾಡಿ (ಮೇಲೆ ವಿವರಿಸಿರುವಂತೆ).

  5. ಈ ಕೆಳಗಿನವುಗಳನ್ನು ಮಾಡಿ:

    • ಔಷಧಿಯ ಪ್ರಕಾರವನ್ನು ಆರಿಸಿ: ಆಯ್ಕೆಯೊಂದನ್ನು ಟ್ಯಾಪ್ ಮಾಡಿ, ನಂತರ ಮುಂದಿನದು ಎಂಬುದನ್ನು ಟ್ಯಾಪ್ ಮಾಡಿ.

    • ಔಷಧದ ಸಾಮರ್ಥ್ಯವನ್ನು ಆರಿಸಿ: ಆಯ್ಕೆಯೊಂದನ್ನು ಟ್ಯಾಪ್ ಮಾಡಿ, ನಂತರ ಮುಂದಿನದು ಎಂಬುದನ್ನು ಟ್ಯಾಪ್ ಮಾಡಿ.

    • ವೇಳಾಪಟ್ಟಿಯನ್ನು ಸೆಟ್ ಮಾಡಿ: ನಿಮ್ಮ ನಿಗದಿತ ಔಷಧಿಯ ಫ್ರೀಕ್ವೆನ್ಸಿ ಮತ್ತು ಅವಧಿಯನ್ನು ಸೆಟ್ ಮಾಡಲು ಸ್ಕ್ರೀನ್ ಮೇಲಿನ ಸೂಚನೆಗಳನ್ನು ಅನುಸರಿಸಿ, ನಂತರ ಮುಂದಿನದು ಎಂಬುದನ್ನು ಟ್ಯಾಪ್ ಮಾಡಿ.

      “ನೀವು ಇದನ್ನು ಯಾವಾಗ ತೆಗೆದುಕೊಳ್ಳುವಿರಿ?” ಎಂಬುದರ ಕೆಳಗೆ ಬದಲಾಯಿಸಿ ಎಂಬುದನ್ನು ಟ್ಯಾಪ್ ಮಾಡಿ ವಿಭಿನ್ನ ವೇಳಾಪಟ್ಟಿಯ ಪ್ರಕಾರವನ್ನು ಆಯ್ಕೆ ಮಾಡಲು, ಉದಾಹರಣೆಗೆ ಆವರ್ತಕ ವೇಳಾಪಟ್ಟಿ ಅಥವಾ ಪ್ರತಿ ಕೆಲವು ದಿನಗಳಿಗೊಮ್ಮೆ.

    • ಆಕಾರವನ್ನು ಆರಿಸಿ (ಐಚ್ಛಿಕ): ಆಯ್ಕೆಯೊಂದನ್ನು ಟ್ಯಾಪ್ ಮಾಡಿ, ನಂತರ ಮುಂದಿನದು ಎಂಬುದನ್ನು ಟ್ಯಾಪ್ ಮಾಡಿ.

    • ಬಣ್ಣಗಳನ್ನು ಆರಿಸಿ (ಐಚ್ಛಿಕ): ಆಯ್ಕೆಯೊಂದನ್ನು ಟ್ಯಾಪ್ ಮಾಡಿ, ನಂತರ ಮುಂದಿನದು ಎಂಬುದನ್ನು ಟ್ಯಾಪ್ ಮಾಡಿ.

  6. ಪೂರ್ಣಗೊಂಡ ನಂತರ, ಮುಗಿದಿದೆ ಎಂಬುದನ್ನು ಟ್ಯಾಪ್ ಮಾಡಿ.

ಫಾಲೋ ಅಪ್ ‌ರಿಮೈಂಡರ್‌ಗಳು ಮತ್ತು ಫಾಲೋ ಅಪ್ ‌ರಿಮೈಂಡರ್‌ಗಳನ್ನು ಆನ್ ಮಾಡುವುದು

ನೀವು ಔಷಧಿಯ ವೇಳಾಪಟ್ಟಿಯನ್ನು ಸೆಟ್ ಮಾಡಿದರೆ, ಆರೋಗ್ಯ ಆ್ಯಪ್‌ನಿಂದ ಔಷಧಿಗಳನ್ನು ಲಾಗ್ ಮಾಡುವುದನ್ನು ನೆನಪಿಸುವ ನೋಟಿಫಿಕೇಷನ್‌ಗಳನ್ನು ಪಡೆಯುತ್ತೀರಿ ನಿಗದಿತ ಸಮಯದ 30 ನಿಮಿಷಗಳ ನಂತರ ಔಷಧಿಯನ್ನು ಲಾಗ್ ಮಾಡದಿದ್ದರೆ ನೀವು ಫಾಲೋ ಅಪ್ ರಿಮೈಂಡರ್‌ಗಳನ್ನು ಸ್ವೀಕರಿಸಬಹುದು.

  1. ನಿಮ್ಮ iPhoneನಲ್ಲಿ ಆರೋಗ್ಯ ಆ್ಯಪ್‌ಗೆ ಹೋಗಿ.

  2. ಕೆಳಗಿನ ಬಲಭಾಗದಲ್ಲಿರುವ ಹುಡುಕಾಟ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಔಷಧಿಗಳು ಎಂಬುದನ್ನು ಟ್ಯಾಪ್ ಮಾಡಿ.

  3. ಸ್ಕ್ರೀನ್‌ನ ಕೆಳಭಾಗದಲ್ಲಿರುವ ಆಯ್ಕೆಗಳು ಎಂಬುದನ್ನು ಟ್ಯಾಪ್ ಮಾಡಿ, ನಂತರ ಫಾಲೋ ಅಪ್ ರಿಮೈಂಡರ್‌ಗಳನ್ನು ಆನ್ ಮಾಡಿ.

    ಫಾಲೋ ಅಪ್ ರಿಮೈಂಡರ್‌ಗಳನ್ನು ಆನ್ ಮಾಡಿದಾಗ, ನಿಮ್ಮ ಪ್ರತಿಯೊಂದು ಔಷಧಿಗಳಿಗೂ ನೀವು ಮಹತ್ವಪೂರ್ಣ ಅಲರ್ಟ್‌ಗಳನ್ನು ಸಹ ಆನ್ ಮಾಡಬಹುದು. ಮಹತ್ವಪೂರ್ಣ ಅಲರ್ಟ್‌ಗಳು ಲಾಕ್ ಸ್ಕ್ರೀನ್‌ನಲ್ಲಿ ಕಾಣಿಸುತ್ತವೆ ಮತ್ತು (ಫೋಕಸ್ ಆನ್ ಆಗಿದ್ದರೂ ಅಥವಾ iPhone ಮ್ಯೂಟ್ ಆಗಿದ್ದರೂ) ಸೌಂಡ್ ಅನ್ನು ಪ್ಲೇ ಮಾಡುತ್ತವೆ.

  4. ಮಹತ್ವಪೂರ್ಣ ಅಲರ್ಟ್‌ಗಳು ಎಂಬುದನ್ನು ಟ್ಯಾಪ್ ಮಾಡಿ, ಔಷಧಿ ಎಂಬುದರ ಪಕ್ಕದಲ್ಲಿರುವ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಅನುಮತಿಸಿ ಟ್ಯಾಪ್ ಮಾಡಿ.

    ಮಹತ್ವಪೂರ್ಣ ಅಲರ್ಟ್‌ಗಳನ್ನು ಆಫ್ ಮಾಡಲು, ಸೆಟ್ಟಿಂಗ್ಸ್  > ಆ್ಯಪ್‌ಗಳು > ಆರೋಗ್ಯ > ನೋಟಿಫಿಕೇಷನ್‌ಗಳು ಎಂಬಲ್ಲಿಗೆ ಹೋಗಿ, ನಂತರ ಮಹತ್ವಪೂರ್ಣ ಅಲರ್ಟ್‌ಗಳ ಪಕ್ಕದಲ್ಲಿರುವ ಬಟನ್ ಅನ್ನು ಟ್ಯಾಪ್ ಮಾಡಿ.

ಔಷಧಿಗಾಗಿ ವೇಳಾಪಟ್ಟಿಯನ್ನು ಬದಲಾಯಿಸಿ ಅಥವಾ ಇತರ ಮಾಹಿತಿಯನ್ನು ಅಪ್‌ಡೇಟ್ ಮಾಡಿ

ಆರೋಗ್ಯ ಆ್ಯಪ್‌ನಲ್ಲಿನ ಔಷಧಿಗಳ ಸ್ಕ್ರೀನ್, ಔಷಧಿಗಳ ವೇಳಾಪಟ್ಟಿಯನ್ನು ಬದಲಾಯಿಸುವ ಆಯ್ಕೆಗಳನ್ನು ತೋರಿಸುತ್ತದೆ.
  1. ನಿಮ್ಮ iPhoneನಲ್ಲಿ ಆರೋಗ್ಯ ಆ್ಯಪ್‌ಗೆ ಹೋಗಿ.

  2. ಕೆಳಗಿನ ಬಲಭಾಗದಲ್ಲಿರುವ ಹುಡುಕಾಟ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಔಷಧಿಗಳು ಎಂಬುದನ್ನು ಟ್ಯಾಪ್ ಮಾಡಿ.

  3. ನಿಮ್ಮ ಔಷಧಿಗಳು ಎಂಬಲ್ಲಿಗೆ ಸ್ಕ್ರೋಲ್ ಮಾಡಿ, ನಂತರ ಈ ಕೆಳಗಿನ ಯಾವುದನ್ನಾದರೂ ಮಾಡಿ:

    • ಔಷಧಿಗಾಗಿ ವೇಳಾಪಟ್ಟಿಯನ್ನು ಬದಲಾಯಿಸಿ: ಔಷಧಿ ಎಂಬುದನ್ನು ಟ್ಯಾಪ್ ಮಾಡಿ, ವೇಳಾಪಟ್ಟಿಗಾಗಿ ಕೆಳಕ್ಕೆ ಸ್ಕ್ರೋಲ್ ಮಾಡಿ, ಎಡಿಟ್ ಎಂಬುದನ್ನು ಟ್ಯಾಪ್ ಮಾಡಿ, ನಂತರ ಅದನ್ನು ಬದಲಾಯಿಸಲು ಫೀಲ್ಡ್ ಅನ್ನು ಟ್ಯಾಪ್ ಮಾಡಿ.

    • ಔಷಧಿಯ ಐಕಾನ್, ಅಡ್ಡಹೆಸರು ಅಥವಾ ಟಿಪ್ಪಣಿಗಳನ್ನು ಬದಲಾಯಿಸಿ: ಔಷಧಿ ಎಂಬುದನ್ನು ಟ್ಯಾಪ್ ಮಾಡಿ, ವಿವರಗಳಿಗೆ ಸ್ಕ್ರೋಲ್ ಮಾಡಿ, ಐಕಾನ್ ಅನ್ನು ಬದಲಾಯಿಸಲು ಎಡಿಟ್ ಎಂಬುದನ್ನು ಟ್ಯಾಪ್ ಮಾಡಿ ಅಥವಾ ಪಠ್ಯ ಕ್ಷೇತ್ರಗಳೆರಡರಲ್ಲಿ ಯಾವುದಾದರೂ ಒಂದನ್ನು ಟ್ಯಾಪ್ ಮಾಡಿ, ನಂತರ ನಿಮ್ಮ ಬದಲಾವಣೆಗಳನ್ನು ಮಾಡಿ.

    • ನಿಮ್ಮ ಪಟ್ಟಿಯನ್ನು ಮರುಕ್ರಮಗೊಳಿಸಿ: ನಿಮ್ಮ ಔಷಧಿಗಳ ಪಟ್ಟಿಯ ಮೇಲಿರುವ ಎಡಿಟ್ ಎಂಬುದನ್ನು ಟ್ಯಾಪ್ ಮಾಡಿ, ಔಷಧಿಗಾಗಿ ಮರುಕ್ರಮಗೊಳಿಸಿ ಬಟನ್ ಅನ್ನು ಒತ್ತಿ ಹಿಡಿದುಕೊಳ್ಳಿ, ನಂತರ ಅದನ್ನು ಹೊಸ ಸ್ಥಾನಕ್ಕೆ ಡ್ರ್ಯಾಗ್ ಮಾಡಿ, ನಂತರ ಮುಗಿದಿದೆ ಬಟನ್ ಅನ್ನು ಟ್ಯಾಪ್ ಮಾಡಿ.

    • ಔಷಧಿಯನ್ನು ಆರ್ಕೈವ್ ಮಾಡಿ: ನಿಮ್ಮ ಔಷಧಿಗಳ ಪಟ್ಟಿಯಲ್ಲಿ ಅದರ ಹೆಸರಿನ ಮೇಲೆ ಎಡಕ್ಕೆ ಸ್ವೈಪ್ ಮಾಡಿ, ನಂತರ ಆರ್ಕೈವ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

    • ಆರ್ಕೈವ್ ಮಾಡಿದ ಔಷಧಿಯನ್ನು ನಿಮ್ಮ ಔಷಧಿಗಳ ಪಟ್ಟಿಯಲ್ಲಿ ಮತ್ತೆ ಕಾಣಿಸಿಕೊಳ್ಳುವಂತೆ ಮಾಡಿ: ನಿಮ್ಮ ಔಷಧಿಗಳ ಪಟ್ಟಿಯ ಮೇಲಿರುವ ಎಡಿಟ್ ಎಂಬುದನ್ನು ಟ್ಯಾಪ್ ಮಾಡಿ, ನಂತರ ಔಷಧಿಯ ಹೆಸರಿನ ಪಕ್ಕದಲ್ಲಿರುವ ಸೇರಿಸಿ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಮುಗಿದಿದೆ ಬಟನ್ ಅನ್ನು ಟ್ಯಾಪ್ ಮಾಡಿ. ನೀವು ಈ ಹಿಂದೆ ಸೆಟ್ ಮಾಡಿರುವ ಯಾವುದೇ ವೇಳಾಪಟ್ಟಿಯನ್ನು ಸಂರಕ್ಷಿಸಲಾಗುವುದಿಲ್ಲ.

    • ಔಷಧಿಯನ್ನು ಡಿಲೀಟ್ ಮಾಡಿ: ಔಷಧಿಯನ್ನು ಟ್ಯಾಪ್ ಮಾಡಿ, ಕೆಳಕ್ಕೆ ಸ್ಕ್ರೋಲ್ ಮಾಡಿ, ನಂತರ ಔಷಧಿಯನ್ನು ಡಿಲೀಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

    • ಔಷಧಿಗಳನ್ನು ತೆಗೆದುಕೊಳ್ಳುವುದರ ಕುರಿತು ನೀವು ಸ್ವೀಕರಿಸುವ ನೋಟಿಫಿಕೇಷನ್‌ಗಳ ವಿಧಾನವನ್ನು ಬದಲಾಯಿಸಿ: ನೋಟಿಫಿಕೇಷನ್‌ಗಳನ್ನು ನೋಡಿ ಮತ್ತು ಅವುಗಳಿಗೆ ಪ್ರತಿಕ್ರಿಯಿಸಿ ಮತ್ತು ನೋಟಿಫಿಕೇಷನ್ ಸೆಟ್ಟಿಂಗ್ಸ್ ಅನ್ನು ಬದಲಾಯಿಸಿ ಎಂಬುದನ್ನು ನೋಡಿ.

ನೀವು ಔಷಧಿಯನ್ನು ತೆಗೆದುಕೊಳ್ಳುವಾಗ ಲಾಗ್ ಮಾಡಿ

ನಿಗದಿಪಡಿಸಿದ ಅಥವಾ ನಿಗದಿಪಡಿಸದ ಔಷಧಿಗಳನ್ನು ನೀವು ಯಾವುದೇ ಸಮಯದಲ್ಲಿ ಲಾಗ್ ಮಾಡಬಹುದು. ಡಿಫಾಲ್ಟ್ ಆಗಿ, ಆರೋಗ್ಯ ಆ್ಯಪ್‌ನಲ್ಲಿ ನೀವು ರಚಿಸಿರುವ ವೇಳಾಪಟ್ಟಿಯನ್ನು ಆಧರಿಸಿ ನಿಮ್ಮ ಔಷಧಿಗಳನ್ನು ಲಾಗ್ ಮಾಡುವ ಸಮಯ ಬಂದಾಗ ನಿಮ್ಮ iPhone ಅದನ್ನು ನಿಮಗೆ ನೆನಪಿಸುತ್ತದೆ.

ಗಮನಿಸಿ: ನಿಮ್ಮ ಆರೋಗ್ಯ ಆ್ಯಪ್ ಡೇಟವನ್ನು ಇತರ ಎಲ್ಲಾ ಸಾಧನಗಳಿಗೆ ಸಿಂಕ್ ಮಾಡಲು, ನಿಮ್ಮ ಸಾಧನಗಳು ಅದೇ Apple ಖಾತೆಗೆ ಸೈನ್ ಇನ್ ಆಗಿವೆ, ಇಂಟರ್ನೆಟ್‌ಗೆ ಕನೆಕ್ಟ್ ಆಗಿವೆ ಮತ್ತು ಇತ್ತೀಚಿನ OS ಆವೃತ್ತಿಗೆ ಅಪ್‌ಡೇಟ್ ಆಗಿವೆ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಆರೋಗ್ಯ ಆ್ಯಪ್‌ನಲ್ಲಿನ ಔಷಧಿಗಳ ಸ್ಕ್ರೀನ್ ಔಷಧಿಗಳ ಲಾಗ್ ಅನ್ನು ತೋರಿಸುತ್ತದೆ.
  1. ನಿಮ್ಮ iPhoneನಲ್ಲಿ ಆರೋಗ್ಯ ಆ್ಯಪ್‌ಗೆ ಹೋಗಿ.

  2. ಕೆಳಗಿನ ಬಲಭಾಗದಲ್ಲಿರುವ ಹುಡುಕಾಟ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಔಷಧಿಗಳು ಎಂಬುದನ್ನು ಟ್ಯಾಪ್ ಮಾಡಿ.

  3. ಸ್ಕ್ರೀನ್‌ನ ಮೇಲ್ಭಾಗದಲ್ಲಿರುವ ದಿನವೊಂದನ್ನು ಆಯ್ಕೆಮಾಡಿ.

  4. ಈ ಕೆಳಗಿನವುಗಳಲ್ಲಿ ಒಂದನ್ನು ಮಾಡಿ:

    • ನೀವು ನಿಗದಿಪಡಿಸಿದ ಔಷಧಿಯನ್ನು ತೆಗೆದುಕೊಂಡಿದ್ದಿರಾ ಎಂಬುದನ್ನು ಲಾಗ್ ಮಾಡಿ: ಲಾಗ್‌ನ ಕೆಳಗಿನ ಪಟ್ಟಿಯಲ್ಲಿರುವ ಔಷಧಿಯ ಹೆಸರನ್ನು ಟ್ಯಾಪ್ ಮಾಡಿ, ನಂತರ ಔಷಧಿ ಎಂಬುದರ ಕೆಳಗೆ ತೆಗೆದುಕೊಲ್ಲಲಾಗಿದೆ ಅಥವಾ ಸ್ಕಿಪ್ ಮಾಡಲಾಗಿದೆ ಎಂಬುದನ್ನು ಟ್ಯಾಪ್ ಮಾಡಿ.

    • ನಿಗದಿಪಡಿಸದ ಔಷಧಿಯನ್ನು ಲಾಗ್ ಮಾಡಿ: ಲಾಗ್‌ನ ಕೆಳಗಿನ ಪಟ್ಟಿಯಲ್ಲಿ ‘ಅಗತ್ಯಕ್ಕೆ ಅನುಗುಣವಾಗಿ ಔಷಧಗಳು’ ಎಂಬುದನ್ನು ಟ್ಯಾಪ್ ಮಾಡಿ, ನಂತರ ಔಷಧ ಎಂಬುದರ ಕೆಳಗೆ, ತೆಗೆದುಕೊಳ್ಳಲಾಗಿದೆ ಎಂಬುದನ್ನು ಟ್ಯಾಪ್ ಮಾಡಿ.

  5. ಪೂರ್ಣಗೊಂಡ ನಂತರ, ಮುಗಿದಿದೆ ಎಂಬುದನ್ನು ಟ್ಯಾಪ್ ಮಾಡಿ.

ಸಲಹೆ: ನಿಗದಿತ ಔಷಧಿಯನ್ನು ಲಾಗ್ ಮಾಡಲು ನೀವು ನೋಟಿಫಿಕೇಷನ್ ಅನ್ನು ಸ್ವೀಕರಿಸಿದಾಗ, ನೋಟಿಫಿಕೇಷನ್ ಅನ್ನು ಒತ್ತಿ ಹಿಡಿದುಕೊಳ್ಳಿ, ನಂತರ ಒಂದು ಆಯ್ಕೆಯನ್ನು ಆರಿಸಿ.

ನಿಮ್ಮ ಔಷಧಿ ತೆಗೆದುಕೊಳ್ಳುವ ಇತಿಹಾಸವನ್ನು ಪರಿಶೀಲಿಸಲು, ಕೆಳಗಿನ-ಬಲಭಾಗದಲ್ಲಿರುವ ಹುಡುಕಾಟ ಬಟನ್ ಅನ್ನು ಟ್ಯಾಪ್ ಮಾಡಿ, ಔಷಧಿಗಳು ಎಂಬುದನ್ನು ಟ್ಯಾಪ್ ಮಾಡಿ, ನಂತರ ಔಷಧಿಯನ್ನು ಟ್ಯಾಪ್ ಮಾಡಿ (ನಿಮ್ಮ ಔಷಧಿಗಳ ಪಟ್ಟಿಯಲ್ಲಿ).

ನಿಮ್ಮ ಔಷಧಿಗಳ ಪಟ್ಟಿಯನ್ನು ಹಂಚಿಕೊಳ್ಳಿ

  1. ನಿಮ್ಮ iPhoneನಲ್ಲಿ ಆರೋಗ್ಯ ಆ್ಯಪ್‌ಗೆ ಹೋಗಿ.

  2. ಈ ಕೆಳಗಿನವುಗಳಲ್ಲಿ ಒಂದನ್ನು ಮಾಡಿ:

    • ನಿಮ್ಮ ಪ್ರೀತಿಪಾತ್ರರ ಜೊತೆ ನಿಮ್ಮ ಪಟ್ಟಿಯನ್ನು (ಅಥವಾ ಕೇವಲ ನಿರ್ದಿಷ್ಟ ಔಷಧಿಗಳನ್ನು) ಹಂಚಿಕೊಳ್ಳಿ: ಆರೋಗ್ಯ ಆ್ಯಪ್‌ನಲ್ಲಿ ನಿಮ್ಮ ಡೇಟವನ್ನು ಹಂಚಿಕೊಳ್ಳಿ ಎಂಬುದನ್ನು ನೋಡಿ.

      ಸಲಹೆ: ನೀವು ಹಂಚಿಕೊಳ್ಳಲು ಪ್ರಾರಂಭಿಸಿದ ನಂತರ ನೀವು ಹೊಸ ಔಷಧಿಯನ್ನು ಸೇರಿಸಿದರೆ, ಅದನ್ನು ನಿಮ್ಮ ಹಂಚಿಕೊಂಡ ಪಟ್ಟಿಗೆ ಸೇರಿಸಿ.

    • ನಿಮ್ಮ ಪಟ್ಟಿಯನ್ನು PDF ಆಗಿ ಹಂಚಿಕೊಳ್ಳಿ: ಕೆಳಗಿನ ಬಲಭಾಗದಲ್ಲಿರುವ ಹುಡುಕಾಟ ಬಟನ್ ಅನ್ನು ಟ್ಯಾಪ್ ಮಾಡಿ, ಔಷಧಿಗಳು ಎಂಬುದನ್ನು ಟ್ಯಾಪ್ ಮಾಡಿ, ಕೆಳಕ್ಕೆ ಸ್ಕ್ರೋಲ್ ಮಾಡಿ, PDF ಎಕ್ಸ್‌ಪೋರ್ಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ, ಹಂಚಿಕೊಳ್ಳಿ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಒಂದು ಆಯ್ಕೆಯನ್ನು ಆರಿಸಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.