ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPhoneನಲ್ಲಿ iOS ಅನ್ನು ಅಪ್‌ಡೇಟ್ ಮಾಡಿ

iOSನ ಇತ್ತೀಚಿನ ಆವೃತ್ತಿಗೆ ನೀವು ಅಪ್‌ಡೇಟ್ ಮಾಡಿದಾಗ, ನಿಮ್ಮ ಡೇಟ ಮತ್ತು ಸೆಟ್ಟಿಂಗ್ಸ್ ಬದಲಾಗುವುದಿಲ್ಲ. iOS ಅನ್ನು ಅಪ್‌ಡೇಟ್ ಮಾಡದೆಯೇ ನಿಮ್ಮ iPhoneನ ಫೀಚರ್‌ಗಳನ್ನು ಸುಧಾರಿಸಲು, ನೀವು ಸಿಸ್ಟಂ ಫೈಲ್ ಅಪ್‌ಡೇಟ್‌ಗಳನ್ನು ಸ್ವಯಂಚಾಲಿತವಾಗಿ ಇನ್‌ಸ್ಟಾಲ್ ಮಾಡಬಹುದು.

ನೀವು ಅಪ್‌ಡೇಟ್ ಮಾಡುವ ಮೊದಲು, ಸ್ವಯಂಚಾಲಿತವಾಗಿ ಬ್ಯಾಕಪ್ ಮಾಡಲು iPhone ಅನ್ನು ಸೆಟಪ್ ಮಾಡಿ ಅಥವಾ ನಿಮ್ಮ ಸಾಧನವನ್ನು ಹಸ್ತಚಾಲಿತವಾಗಿ ಬ್ಯಾಕಪ್ ಮಾಡಿ.

iPhone ಅನ್ನು ಸ್ವಯಂಚಾಲಿತವಾಗಿ ಅಪ್‌ಡೇಟ್ ಮಾಡಿ

ನಿಮ್ಮ iPhone ಅನ್ನು ಮೊದಲ ಬಾರಿಗೆ ಸೆಟಪ್ ಮಾಡಿದಾಗ ನೀವು ಸ್ವಯಂಚಾಲಿತ ಅಪ್‌ಡೇಟ್‌ಗಳನ್ನು ಆನ್ ಮಾಡದಿದ್ದರೆ, ಈ ಕೆಳಗಿನವುಗಳನ್ನು ಮಾಡಿ:

  1. ನಿಮ್ಮ iPhoneನಲ್ಲಿ ಸೆಟ್ಟಿಂಗ್ಸ್ ಆ್ಯಪ್‌ಗೆ  ಹೋಗಿ.

  2. ಸಾಮಾನ್ಯ ಎಂಬುದನ್ನು ಟ್ಯಾಪ್ ಮಾಡಿ, ಸಾಫ್ಟ್‌ವೇರ್ ಅಪ್‌ಡೇಟ್ ಎಂಬುದನ್ನು ಟ್ಯಾಪ್ ಮಾಡಿ, ನಂತರ ಸ್ವಯಂಚಾಲಿತ ಅಪ್‌ಡೇಟ್‌ಗಳು ಎಂಬುದನ್ನು ಟ್ಯಾಪ್ ಮಾಡಿ.

  3. ಈ ಕೆಳಗಿನವುಗಳಲ್ಲಿ ಒಂದನ್ನು ಆನ್ ಮಾಡಿ:

    • ಸ್ವಯಂಚಾಲಿತವಾಗಿ ಇನ್‌ಸ್ಟಾಲ್ ಮಾಡಿ: ಅಪ್‌ಡೇಟ್ ಲಭ್ಯವಿದ್ದಾಗ, ಚಾರ್ಜ್ ಆಗುವಾಗ ಮತ್ತು Wi-Fiಗೆ ಕನೆಕ್ಟ್ ಮಾಡಿರುವಾಗ iPhone ರಾತ್ರಿಯ ವೇಳೆಯಲ್ಲಿ ಅದನ್ನು ಡೌನ್‌ಲೋಡ್ ಮಾಡಿ ಇನ್‌ಸ್ಟಾಲ್ ಮಾಡುತ್ತದೆ. ಅಪ್‌ಡೇಟ್ ಅನ್ನು ಇನ್‌ಸ್ಟಾಲ್ ಮಾಡುವ ಮೊದಲು ನಿಮಗೆ ಸೂಚಿಸಲಾಗುತ್ತದೆ.

    • ಸ್ವಯಂಚಾಲಿತವಾಗಿ ಡೌನ್ಲೋಡ್ ಮಾಡಿ: ನಿಮ್ಮ iPhone Wi‑Fiಗೆ ಕನೆಕ್ಟ್ ಆಗಿರುವಾಗ, ಚಾರ್ಜ್ ಆಗುತ್ತಿರುವಾಗ ಮತ್ತು ಲಾಕ್ ಆಗಿರುವಾಗ ಅಪ್‌ಡೇಟ್ ಅನ್ನು ಸ್ವಯಂಚಾಲಿತವಾಗಿ ಡೌನ್‌ಲೋಡ್‌ ಮಾಡುತ್ತದೆ, ಇದರಿಂದ ನೀವು ನಂತರದ ಸಮಯದಲ್ಲಿ ಅಪ್‌ಡೇಟ್ ಅನ್ನು ಇನ್‌ಸ್ಟಾಲ್ ಮಾಡಬಹುದು. ಈ ಆಯ್ಕೆಯನ್ನು ನೋಡಲು, ಮೊದಲು ಸ್ವಯಂಚಾಲಿತವಾಗಿ ಇನ್‌ಸ್ಟಾಲ್ ಮಾಡಿ ಎಂಬುದನ್ನು ಆಫ್ ಮಾಡಿ.

iPhone ಅನ್ನು ಹಸ್ತಚಾಲಿತವಾಗಿ ಅಪ್‌ಡೇಟ್ ಮಾಡಿ

ಯಾವುದೇ ಸಮಯದಲ್ಲಿ, ನೀವು ಸಾಫ್ಟ್‌ವೇರ್ ಅಪ್‌ಡೇಟ್‌ಗಳಿಗಾಗಿ ಪರಿಶೀಲಿಸಬಹುದು ಮತ್ತು ಇನ್‌ಸ್ಟಾಲ್ ಮಾಡಬಹುದು.

  1. ನಿಮ್ಮ iPhoneನಲ್ಲಿ ಸೆಟ್ಟಿಂಗ್ಸ್ ಆ್ಯಪ್‌ಗೆ  ಹೋಗಿ.

  2. ಸಾಮಾನ್ಯ ಎಂಬುದನ್ನು ಟ್ಯಾಪ್ ಮಾಡಿ, ಸಾಫ್ಟ್‌ವೇರ್ ಅಪ್‌ಡೇಟ್ ಅನ್ನು ಟ್ಯಾಪ್ ಮಾಡಿ.

    ಪ್ರಸ್ತುತ ಇನ್‌ಸ್ಟಾಲ್ ಆಗಿರುವ iOSನ ಆವೃತ್ತಿ ಮತ್ತು ಅಪ್‌ಡೇಟ್ ಲಭ್ಯವಿದೆಯೇ ಅಥವಾ ಇಲ್ಲವೇ ಎಂಬುದನ್ನು ತೋರಿಸಲಾಗುತ್ತದೆ.

  3. ಅಪ್‌ಡೇಟ್ ಲಭ್ಯವಿದ್ದರೆ, ಡೌನ್‌ಲೋಡ್ ಮಾಡಿ ಮತ್ತು ಇನ್‌ಸ್ಟಾಲ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ಸ್ಕ್ರೀನ್ ಮೇಲಿನ ಸೂಚನೆಗಳನ್ನು ಅನುಸರಿಸಿ.

ನಿಮ್ಮ ಕಂಪ್ಯೂಟರ್ ಅನ್ನು ಬಳಸಿ ಅಪ್‌ಡೇಟ್ ಮಾಡಿ

  1. iPhone ಮತ್ತು ನಿಮ್ಮ ಕಂಪ್ಯೂಟರ್ ಅನ್ನು ಕೇಬಲ್ ಮೂಲಕ ಕನೆಕ್ಟ್ ಮಾಡಿ.

  2. ಈ ಕೆಳಗಿನವುಗಳಲ್ಲಿ ಒಂದನ್ನು ಮಾಡಿ:

    • Macನಲ್ಲಿ (macOS 10.15 ಅಥವಾ ನಂತರದ ಆವೃತ್ತಿ): Finder ಸೈಡ್‌ಬಾರ್‌ನಲ್ಲಿ, ನಿಮ್ಮ iPhone ಅನ್ನು ಆಯ್ಕೆಮಾಡಿ, ನಂತರ ವಿಂಡೋ ಮೇಲ್ಭಾಗದ ಸಾಮಾನ್ಯ ಎಂಬುದನ್ನು ಕ್ಲಿಕ್ ಮಾಡಿ.

    • Mac (macOS 10.14 ಅಥವಾ ಹಿಂದಿನ ಆವೃತ್ತಿಯನ್ನು ಹೊಂದಿರುವ) ಅಥವಾ Windows ಸಾಧನದಲ್ಲಿ: iTunes ಆ್ಯಪ್ ತೆರೆಯಿರಿ, iTunes ವಿಂಡೋ ಮೇಲಿನ ಎಡಭಾಗದ ಸಮೀಪದಲ್ಲಿನ iPhone ಅನ್ನು ಹೋಲುವ ಬಟನ್ ಅನ್ನು ಕ್ಲಿಕ್ ಮಾಡಿ, ನಂತರ ಸಾರಾಂಶ ಎಂಬುದನ್ನು ಕ್ಲಿಕ್ ಮಾಡಿ.

      ಗಮನಿಸಿ: iTunesನ ಇತ್ತೀಚಿನ ಆವೃತ್ತಿಯನ್ನು ಬಳಸಿ. iTunesನ ಇತ್ತೀಚಿನ ಆವೃತ್ತಿಗೆ ಅಪ್‌ಡೇಟ್ ಮಾಡಿ ಎಂಬ Apple ಬೆಂಬಲ ಲೇಖನವನ್ನು ನೋಡಿ.

  3. ಅಪ್‌ಡೇಟ್‌ಗಾಗಿ ಪರಿಶೀಲಿಸಿ ಎಂಬುದನ್ನು ಕ್ಲಿಕ್ ಮಾಡಿ.

  4. ಲಭ್ಯವಿರುವ ಅಪ್‌ಡೇಟ್ ಅನ್ನು ಇನ್‌ಸ್ಟಾಲ್ ಮಾಡಲು, ಅಪ್‌ಡೇಟ್ ಎಂಬುದನ್ನು ಕ್ಲಿಕ್ ಮಾಡಿ.

ಸಿಸ್ಟಮ್ ಫೈಲ್‌ಗಳನ್ನು ಮಾತ್ರ ಸ್ವಯಂಚಾಲಿತವಾಗಿ ಅಪ್‌ಡೇಟ್ ಮಾಡುವುದು

iPhone ತನ್ನ iOS ಅನ್ನು ಅಪ್‌ಡೇಟ್ ಮಾಡದೆಯೇ iPhone ಫೀಚರ್‌ಗಳನ್ನು ಸುಧಾರಿಸಲು, ಸಿಸ್ಟಂ ಫೈಲ್‌ ಅಪ್‌ಡೇಟ್‌ಗಳನ್ನು ಸ್ವಯಂಚಾಲಿತವಾಗಿ ಇನ್‌ಸ್ಟಾಲ್ ಮಾಡಬಹುದು.

  1. ನಿಮ್ಮ iPhoneನಲ್ಲಿ ಸೆಟ್ಟಿಂಗ್ಸ್ ಆ್ಯಪ್‌ಗೆ ಹೋಗಿ.

  2. ಸಾಮಾನ್ಯ ಎಂಬುದನ್ನು ಟ್ಯಾಪ್ ಮಾಡಿ, ಸಾಫ್ಟ್‌ವೇರ್ ಅಪ್‌ಡೇಟ್ ಎಂಬುದನ್ನು ಟ್ಯಾಪ್ ಮಾಡಿ, ನಂತರ ಸ್ವಯಂಚಾಲಿತ ಅಪ್‌ಡೇಟ್‌ಗಳು ಎಂಬುದನ್ನು ಟ್ಯಾಪ್ ಮಾಡಿ.

  3. iOS ಅಪ್‌ಡೇಟ್‌ಗಳು ಎಂಬುದರ ಅಡಿಯಲ್ಲಿ, ಅಪ್‌ಡೇಟ್‌ಗಳನ್ನು ಸ್ವಯಂಚಾಲಿತವಾಗಿ ಇನ್‌ಸ್ಟಾಲ್ ಮಾಡಿ ಎಂಬುದನ್ನು ಆಫ್ ಮಾಡಿ.

  4. ಸಿಸ್ಟಂ ಫೈಲ್‌ಗಳು ಎಂಬುದರ ಅಡಿಯಲ್ಲಿ, ಸ್ವಯಂಚಾಲಿತವಾಗಿ ಇನ್‌ಸ್ಟಾಲ್ ಮಾಡಿ ಎಂಬುದನ್ನು ಆನ್ ಮಾಡಿ.

iOS 26 ಅನ್ನು ಡೌನ್‌ಲೋಡ್ ಮಾಡುವುದು ಹೇಗೆ? ಮತ್ತು ನಿಮ್ಮ iPhone, iPad ಅಥವಾ iPod touch ಅನ್ನು ಅಪ್‌ಡೇಟ್ ಮಾಡಲು ಅಥವಾ ರಿಸ್ಟೋರ್ ಮಾಡಲು ನಿಮಗೆ ಸಾಧ್ಯವಾಗದಿದ್ದರೆ ಎಂಬ Apple ಬೆಂಬಲ ಲೇಖನಗಳನ್ನು ನೋಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.