ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPhoneನಲ್ಲಿ ನಕ್ಷೆ ಆ್ಯಪ್ ಬಳಸುವುದು

ನಕ್ಷೆ ಆ್ಯಪ್, ನಕ್ಷೆ ಆ್ಯಪ್‌ನ ವಿಜೆಟ್, Siri, CarPlay ಅಥವಾ ಇತರ ಸಾಧನಗಳನ್ನು ಬಳಸಿಕೊಂಡು ನೀವು ಪ್ರಯಾಣದ ಮಾರ್ಗ ನಿರ್ದೇಶನಗಳನ್ನು ಪಡೆಯಬಹುದು. ನೀವು ಹೊರಡುವ ಮೊದಲು ನಿಮ್ಮ Macನಲ್ಲಿ ಸಹ ನೀವು ಅವುಗಳನ್ನು ಪಡೆಯಬಹುದು.

ಗಮನಿಸಿ: ಎಲ್ಲಾ ಫೀಚರ್‌ಗಳು ಎಲ್ಲಾ ದೇಶಗಳು ಅಥವಾ ಪ್ರದೇಶಗಳಲ್ಲಿ ಲಭ್ಯವಿರುವುದಿಲ್ಲ. iOS ಮತ್ತು iPadOS ಫೀಚರ್ ಲಭ್ಯತೆಯ ವೆಬ್‌ಸೈಟ್ ಅನ್ನು ನೋಡಿ.

ತಲುಪಬೇಕಾದ ಒಂದೇ ಸ್ಥಳಕ್ಕೆ ಹಲವಾರು ಡ್ರೈವಿಂಗ್ ಮಾರ್ಗದ ಆಯ್ಕೆಗಳನ್ನು ಹೊಂದಿರುವ ನಕ್ಷೆಯನ್ನು ತೋರಿಸುತ್ತಿರುವ iPhone. ಪ್ರತಿ ಮಾರ್ಗವು ಅಂದಾಜು ಸಮಯ ಮತ್ತು ದೂರವನ್ನು ತೋರಿಸುತ್ತದೆ ಹಾಗೂ ಟರ್ನ್-ಬೈ-ಟರ್ನ್ ಮಾರ್ಗ ನಿರ್ದೇಶನಗಳನ್ನು ಪ್ರಾರಂಭಿಸಲು ಪ್ರಾರಂಭಿಸಿ ಎಂಬ ಬಟನ್ ಅನ್ನು ತೋರಿಸುತ್ತದೆ. ಪ್ರತಿ ಮಾರ್ಗದಲ್ಲಿನ ಬಣ್ಣದ ಕೋಡಿಂಗ್ ಟ್ರಾಫಿಕ್ ಪರಿಸ್ಥಿತಿಗಳನ್ನು ಸೂಚಿಸುತ್ತದೆ.

ಪ್ರಮುಖ ಸೂಚನೆ: ಮಾರ್ಗ ನಿರ್ದೇಶನಗಳನ್ನು ಪಡೆಯಲು, iPhone ಇಂಟರ್ನೆಟ್‌ಗೆ ಕನೆಕ್ಟ್ ಆಗಿರಬೇಕು ಮತ್ತು ನಿಖರವಾದ ಸ್ಥಳವನ್ನು ಆನ್ ಮಾಡಿರಬೇಕು. ಮೊಬೈಲ್ ಡೇಟ ದರಗಳು ಅನ್ವಯವಾಗಬಹುದು (ಮೊಬೈಲ್ ಡೇಟ ಸೆಟ್ಟಿಂಗ್ಸ್ ಅನ್ನು ನೋಡಿ ಅಥವಾ ಬದಲಾಯಿಸಿ ಎಂಬುದನ್ನು ನೋಡಿ).

ಮಾರ್ಗ ನಿರ್ದೇಶನಗಳನ್ನು ಪಡೆಯಿರಿ

  1. ನಿಮ್ಮ iPhoneನಲ್ಲಿ ನಕ್ಷೆ ಆ್ಯಪ್‌ಗೆ ಹೋಗಿ.

  2. ನಕ್ಷೆಯಲ್ಲಿ ಎಲ್ಲಿಯಾದರೂ ಒತ್ತಿ ಹಿಡಿದುಕೊಳ್ಳಿ ಅಥವಾ ಹುಡುಕಾಟದ ಫೀಲ್ಡ್‌ನಲ್ಲಿ ಸ್ಥಳವನ್ನು ನಮೂದಿಸಿ.

  3. ಮಾರ್ಗ ನಿರ್ದೇಶನಗಳು ಎಂಬುದನ್ನು ಟ್ಯಾಪ್ ಮಾಡಿ ಅಥವಾ ನಿಮ್ಮ ಪ್ರಯಾಣ ಮೋಡ್ ಎಂಬುದನ್ನು ಟ್ಯಾಪ್ ಮಾಡಿ (ಡ್ರೈವಿಂಗ್ , ನಡಿಗೆ , ಸಾರಿಗೆ , ಸೈಕ್ಲಿಂಗ್  ಅಥವಾ ರೈಡ್‌ಶೇರ್ .)

  4. ಈ ಕೆಳಗಿನವುಗಳಲ್ಲಿ ಒಂದನ್ನು ಮಾಡಿ:

    • ನಿಮ್ಮ ಆರಂಭದ ಬಿಂದುವು ನನ್ನ ಸ್ಥಳ ಎಂಬುದಾಗಿದ್ದರೆ: ನೀವು ಹೋಗಲು ಬಯಸುವ ಮಾರ್ಗಕ್ಕಾಗಿ ಪ್ರಾರಂಭಿಸಿ ಎಂಬುದನ್ನು ಟ್ಯಾಪ್ ಮಾಡಿ. ನಿಮ್ಮ ಮಾರ್ಗದಲ್ಲಿ ನೀವು ಪ್ರಯಾಣಿಸುವಾಗ, ನಕ್ಷೆ ಆ್ಯಪ್ ನೀವು ತಲುಪಬೇಕಾದ ಸ್ಥಳಕ್ಕೆ ಹೋಗಲು ಟರ್ನ್-ಬೈ-ಟರ್ನ್ ಮಾರ್ಗ ನಿರ್ದೇಶನಗಳನ್ನು ಮಾತಿನಲ್ಲಿ ಹೇಳುತ್ತದೆ.

    • ನಿಮ್ಮ ಆರಂಭದ ಬಿಂದುವು ಬೇರೊಂದು ಸ್ಥಳವಾಗಿದ್ದರೆ: ನೀವು ಬಳಸಲು ಬಯಸುವ ಮಾರ್ಗಕ್ಕೆ ಸಂಬಂಧಿಸಿದ ಹಂತಗಳು ಎಂಬುದನ್ನು ಟ್ಯಾಪ್ ಮಾಡಿ.

ನೀವು ನಿಮ್ಮ ಮಾರ್ಗಗಳಿಗೆ ನಿಲುಗಡೆಗಳನ್ನು ಸೇರಿಸಬಹುದು.

ಸಲಹೆ: ನಿಮ್ಮ ಮಾರ್ಗದಲ್ಲಿ ನಿಮ್ಮ ಇಂಟರ್ನೆಟ್ ಸಂಪರ್ಕವು ಕಡಿತಗೊಳ್ಳಲಿದೆ ಎಂದು ನಿಮಗೆ ತಿಳಿದಿದ್ದರೆ, ನಿಮಗೆ ನೀವೇ ಮುಂಬರುವ ಮಾರ್ಗ ನಿರ್ದೇಶನಗಳ ಪಟ್ಟಿಯನ್ನು ಅಥವಾ ಆಫ್‌ಲೈನ್ ನಕ್ಷೆಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

ಎರಡು ಸ್ಥಳಗಳ ನಡುವಿನ ಹಲವಾರು ಮಾರ್ಗ ಆಯ್ಕೆಗಳನ್ನು ತೋರಿಸುತ್ತಿರುವ ನಕ್ಷೆ ಇದೆ. ಇದರೊಂದಿಗೆ ಇತರೆ ಪ್ರಯಾಣದ ಮೋಡ್‌ಗಳನ್ನು ಆಯ್ಕೆಮಾಡುವ, ಆರಂಭದ ಬಿಂದು ಮತ್ತು ತಲುಪಬೇಕಾದ ಸ್ಥಳವನ್ನು ಸ್ವಿಚ್ ಮಾಡುವ ಮತ್ತು ಮಾರ್ಗ ನಿರ್ದೇಶನಗಳನ್ನು ಹಂತಗಳಾಗಿ ನೋಡುವ ಬಟನ್‌ಗಳಿವೆ.

ನಕ್ಷೆ ಆ್ಯಪ್‌ನ ವಿಜೆಟ್ ಅನ್ನು ಬಳಸುವುದು

ತಲುಪಬೇಕಾದ ನಿಮ್ಮ ಸಂಭಾವ್ಯ ಸ್ಥಳಕ್ಕೆ ಮಾರ್ಗ ನಿರ್ದೇಶನಗಳನ್ನು ಪಡೆಯಲು ಮತ್ತು ನ್ಯಾವಿಗೇಷನ್ ಸಮಯದಲ್ಲಿ ನಿಮ್ಮ ETAಯನ್ನು ಟ್ರ್ಯಾಕ್ ಮಾಡಲು, ನಕ್ಷೆ ಆ್ಯಪ್‌ನ ವಿಜೆಟ್ ಅನ್ನು ನಿಮ್ಮ ಹೋಮ್ ಸ್ಕ್ರೀನ್‌ಗೆ ಸೇರಿಸಿ. ನೀವು ಹೊರಡುವ ಮೊದಲು ಏನನ್ನು ನಿರೀಕ್ಷಿಸಬೇಕು ಎಂಬುದನ್ನು ತಿಳಿಯಲು ನಕ್ಷೆ ಆ್ಯಪ್‌ನ ವಿಜೆಟ್ ನಿಮ್ಮ ಪ್ರಯಾಣದ ಪ್ರಿವ್ಯೂವನ್ನು ತೋರಿಸುತ್ತದೆ.

iPhone ಹೋಮ್ ಸ್ಕ್ರೀನ್‌ನಲ್ಲಿರುವ ನಕ್ಷೆ ಆ್ಯಪ್‌ನ ವಿಜೆಟ್, ಇತರೆ ವಿಜೆಟ್‌ಗಳು ಮತ್ತು ಆ್ಯಪ್ ಐಕಾನ್‌ಗಳು.

ವಿಜೆಟ್‌ಗಳನ್ನು ಸೇರಿಸಿ, ಎಡಿಟ್ ಮಾಡಿ ಮತ್ತು ತೆಗೆದುಹಾಕಿ ಎಂಬುದನ್ನು ನೋಡಿ.

CarPlay, ನಿಮ್ಮ Mac ಅಥವಾ ನಿಮ್ಮ Apple Watch ಅನ್ನು ಬಳಸಿಕೊಂಡು ದಾರಿಗಳನ್ನು ಪಡೆಯುವುದು

ನಿಮ್ಮ iPhone ಅನ್ನು ಬಳಸುವ ಜೊತೆಯಲ್ಲೇ, ಈ ಕೆಳಗಿನವುಗಳಿಂದಲೂ ನೀವು ಮಾರ್ಗ ನಿರ್ದೇಶನಗಳನ್ನು ಪಡೆಯಬಹುದು:

  • ನಿಮ್ಮ ಕಾರ್: ನಿಮ್ಮ iPhone ಅನ್ನು CarPlayಗೆ ಕನೆಕ್ಟ್ ಮಾಡಿದ ನಂತರ, ಡ್ರೈವಿಂಗ್ ನಿರ್ದೇಶನಗಳನ್ನು ಪಡೆಯಲು, ನಿಮ್ಮ ಆಗಮನದ ಸಮಯವನ್ನು ಅಂದಾಜು ಮಾಡಲು ಮತ್ತು ಇತ್ಯಾದಿಗಳಿಗಾಗಿ ನೀವು CarPlayಯನ್ನು ಬಳಸಬಹುದು. CarPlay ಮೂಲಕ ಹಂತ ಹಂತವಾಗಿ ನಿರ್ದೇಶನಗಳನ್ನು ಪಡೆಯಿರಿ ಅನ್ನು ನೋಡಿ.

  • ನಿಮ್ಮ Mac: ದೊಡ್ಡ ಪ್ರವಾಸ ಅಥವಾ ಸೈಕಲ್ ಸವಾರಿ ಮಾಡುವ ದಿನದ ಮೊದಲು, ನಿಮ್ಮ Macನಲ್ಲಿ ನಿಮ್ಮ ದಾರಿಯನ್ನು ನೀವು ಪ್ಲ್ಯಾನ್ ಮಾಡಬಹುದು, ನಂತರ ಫೈಲ್‌ > ಹಂಚಿಕೊಳ್ಳಿ > [ನಿಮ್ಮ iPhone]ಗೆ ಕಳುಹಿಸಿ ಎಂಬುದನ್ನು ಆಯ್ಕೆಮಾಡಿ. Macಗಾಗಿ ನಕ್ಷೆ ಆ್ಯಪ್‌ನ ಬಳಕೆದಾರರ ಮಾರ್ಗದರ್ಶಿಯಲ್ಲಿ ಮಾರ್ಗವನ್ನು ಪ್ಲಾನ್ ಮಾಡಿ ಎಂಬುದನ್ನು ನೋಡಿ.

  • ನಿಮ್ಮ Apple Watch: ಡ್ರೈವಿಂಗ್, ನಡಿಗೆ, ಸಾರಿಗೆ ಮತ್ತು ಸೈಕ್ಲಿಂಗ್ ನಿರ್ದೇಶನಗಳನ್ನು ಪಡೆಯಲು ನೀವು Apple Watch ಅನ್ನು ಬಳಸಬಹುದು, ಮತ್ತು ಅವುಗಳನ್ನು ನೀವು ವಾಚ್ ಫೇಸ್ ಮತ್ತು ನಿಮ್ಮ iPhoneನಲ್ಲಿ ಫಾಲೋ ಮಾಡಬಹುದು. Apple Watch ಬಳಕೆದಾರರ ಮಾರ್ಗದರ್ಶಿಯಲ್ಲಿ Apple Watchನಲ್ಲಿ ನಿರ್ದೇಶನಗಳನ್ನು ಪಡೆಯಿರಿ ಎಂಬುದನ್ನು ನೋಡಿ.

ನೀವು ನಿಮ್ಮ Apple ಖಾತೆಗೆ ಸೈನ್ ಇನ್ ಮಾಡಿದಾಗ, ಬೇರೆಡೆ ದಾರಿಗಳನ್ನು ನೋಡಲು ನೀವು ನಿಮ್ಮ iPhone ಮತ್ತು ನಿಮ್ಮ ಇತರ ಸಾಧನಗಳ ನಡುವೆ ಕಾರ್ಯಗಳನ್ನು ಹ್ಯಾಂಡ್‌-ಆಫ್ ಮಾಡಬಹುದು.

Siri: ಮಾರ್ಗ ನಿರ್ದೇಶನಗಳನ್ನು ಪಡೆಯಲು ಮತ್ತು ರಸ್ತೆಯ ಮೇಲೆ ಗಮನವನ್ನು ಕೇಂದ್ರೀಕರಿಸಲು ನೀವು Siriಯನ್ನು ಬಳಸಬಹುದು. ಉದಾಹರಣೆಗೆ, ಈ ರೀತಿ ಏನಾದರೂ Siriಗೆ ಕೇಳಿ, “Find a charging station” ಅಥವಾ “Give me directions home.” ಮಾರ್ಗ ನಿರ್ದೇಶನಗಳನ್ನು ಪಡೆಯಲು Siriಯನ್ನು ಬಳಸಿ ಎಂಬುದನ್ನು ನೋಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.