ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPhoneನಲ್ಲಿ Siri ಆ್ಯಕ್ಸೆಸಬಿಲಿಟಿ ಸೆಟ್ಟಿಂಗ್ಸ್ ಅನ್ನು ಬದಲಾಯಿಸಿ

Siri ಎಷ್ಟು ಬೇಗನೆ ಅಥವಾ ಯಾವಾಗ ಪ್ರತಿಕ್ರಿಯಿಸಬೇಕು ಎಂಬುದನ್ನು ನೀವು ಬದಲಾಯಿಸಬಹುದು, Siriಗೆ ವಿನಂತಿಗಳನ್ನು ಮಾಡಲು ಪಠ್ಯವನ್ನು ಬಳಸಬಹುದು, Siri ವಿಲಕ್ಷಣ ಮಾತಿನ ಮಾದರಿಗಳನ್ನು ಆಲಿಸುವಂತೆ ಮಾಡಬಹುದು, Siri ನೋಟಿಫಿಕೇಷನ್‌ಗಳನ್ನು ಗಟ್ಟಿಯಾದ ಧ್ವನಿಯಲ್ಲಿ ಹಂಚಿಕೊಳ್ಳುವಂತೆ ಮಾಡಬಹುದು ಮತ್ತು ಕರೆಗಳನ್ನು ಘೋಷಿಸಬಹುದು ಮತ್ತು ಕೊನೆಗೊಳಿಸಬಹುದು.

ವಿನಂತಿಗಳಿಗೆ ಯಾವಾಗ ಮತ್ತು ಹೇಗೆ ಪ್ರತಿಕ್ರಿಯಿಸಬೇಕು ಎಂಬುದನ್ನು Siriಗೆ ತಿಳಿಸಿ

  1. ಸೆಟ್ಟಿಂಗ್ಸ್  > ಆ್ಯಕ್ಸೆಸಬಿಲಿಟಿ > Siri ಎಂಬಲ್ಲಿಗೆ ಹೋಗಿ.

  2. ಈ ಕೆಳಗಿನವುಗಳಲ್ಲಿ ಯಾವುದಾದರೂ ಒಂದನ್ನು ಮಾಡಿ:

    • ನೀವು ಮಾತನಾಡಿ ಮುಗಿಸಲು Siri ಎಷ್ಟು ಸಮಯ ಕಾಯಬೇಕು ಎಂಬುದನ್ನು ಸೆಟ್ ಮಾಡಿ: Siri ವಿರಾಮ ಸಮಯದ ಕೆಳಗೆ ಡಿಫಾಲ್ಟ್, ದೀರ್ಘ ಅಥವಾ ಸುದೀರ್ಘ ಎಂಬ ಆಯ್ಕೆಗಳಿವೆ.

    • Siri ಎಷ್ಟು ವೇಗವಾಗಿ ಮಾತನಾಡುತ್ತದೆ ಎಂಬುದನ್ನು ಬದಲಾಯಿಸಿ: ಮಾತನಾಡುವ ದರದ ಕೆಳಗಿನ ಸ್ಲೈಡರ್ ಅನ್ನು ಸರಿಹೊಂದಿಸಿ.

    • Siri ಯಾವಾಗ ಗಟ್ಟಿಯಾದ ಧ್ವನಿಯಲ್ಲಿ ಅಥವಾ ಪಠ್ಯದಲ್ಲಿ ಪ್ರತಿಕ್ರಿಯಿಸುತ್ತದೆ ಎಂಬುದನ್ನು ನಿರ್ಧರಿಸಿ: ಮಾತನಾಡುವ ಪ್ರತಿಕ್ರಿಯೆಗಳು ಎಂಬುದರ ಕೆಳಗಿನ ಆಯ್ಕೆಯೊಂದನ್ನು ಆರಿಸಿ. Siri ಯಾವಾಗ ಪ್ರತಿಕ್ರಿಯಿಸಬೇಕು ಎಂಬುದನ್ನು ಸಹ ನೀವು ಬದಲಾಯಿಸಬಹುದು.

    • iPhone ಮುಚ್ಚಿರುವಾಗ ಅಥವಾ ಕೆಳಕ್ಕೆ ಮುಖಮಾಡಿರುವಾಗ Siriಯನ್ನು ಬಳಸಿ: ನೀವು Siriಯನ್ನು ಸೆಟಪ್ ಮಾಡುವಾಗ, ನಿಮ್ಮ iPhone ಮೇಲ್ಮುಖವಾಗಿದ್ದರೆ ಮಾತ್ರ “Hey Siri” ಎಂದು ಹೇಳುವುದು Siriಯನ್ನು ಸಕ್ರಿಯಗೊಳಿಸುತ್ತದೆ. ಇದನ್ನು ಬದಲಾಯಿಸಲು, “Hey Siri”ಗಾಗಿ ಯಾವಾಗಲೂ ಆಲಿಸಿ ಎಂಬುದನ್ನು ಆನ್ ಮಾಡಿ. Siriಯನ್ನು ಬಳಸುವುದು ಹೇಗೆಂದು ತಿಳಿಯಿರಿ.

    • Siriಯನ್ನು ಅಡ್ಡಿಪಡಿಸಲು “ Siri” ಅಥವಾ “Hey Siri” ಅಗತ್ಯವಿದೆ: ಅಡಚಣೆಗಳಿಗೆ “Siri” ಅಗತ್ಯವಿದೆ ಎಂಬುದನ್ನು ಆನ್ ಮಾಡಿ. ನೀವು VoiceOver ಅಥವಾ ವಾಯ್ಸ್ ಕಂಟ್ರೋಲ್ ಅನ್ನು ಬಳಸುತ್ತಿದ್ದು, VoiceOver ಸ್ಪೀಚ್ ಅಥವಾ ವಾಯ್ಸ್ ಕಂಟ್ರೋಲ್ ಕಮಾಂಡ್‌ಗಳು Siriಯನ್ನು ಅಡ್ಡಿಪಡಿಸಬಾರದೆಂದು ನೀವು ಬಯಸಿದರೆ ಇದು ಉಪಯುಕ್ತವಾಗುತ್ತದೆ.

ನೀವು Siriಯನ್ನು ಸಕ್ರಿಯಗೊಳಿಸುವ ವಿಧಾನವನ್ನು ಬದಲಾಯಿಸಲು, Siriಯನ್ನು ಆನ್ ಮಾಡಿ ಮತ್ತು Siri ಪ್ರತಿಕ್ರಿಯಿಸಿದಾಗ ಬದಲಾಯಿಸಿ ಅನ್ನು ನೋಡಿ.

Siriಗೆ ಮಾತನಾಡುವ ಬದಲು ಟೈಪ್ ಮಾಡಿ

  1. ಸೆಟ್ಟಿಂಗ್ಸ್  > ಆ್ಯಕ್ಸೆಸಬಿಲಿಟಿ > Siri ಎಂಬಲ್ಲಿಗೆ ಹೋಗಿ, ನಂತರ Siriಗೆ ಟೈಪ್ ಮಾಡಿ ಎಂಬುದನ್ನು ಆನ್ ಮಾಡಿ.

    Apple Intelligence* ಆನ್ ಆಗಿದ್ದರೆ, ಈ ಆಯ್ಕೆಯು ಕಾಣಿಸದಿರಬಹುದು. Siriಯೊಂದಿಗೆ Apple Intelligence ಅನ್ನು ಬಳಸಿ ಎಂಬುದನ್ನು ನೋಡಿ.

  2. ವಿನಂತಿಯನ್ನು ಮಾಡಲು, Siriಯನ್ನು ಸಕ್ರಿಯಗೊಳಿಸಿ, ನಂತರ ಕೀಬೋರ್ಡ್ ಮತ್ತು ಪಠ್ಯ ಫೀಲ್ಡ್ ಅನ್ನು ಬಳಸಿಕೊಂಡು Siri ಜೊತೆಗೆ ಸಂವಹನ ಮಾಡಿ.

ತರಹೇವಾರಿ ಸ್ಪೀಚ್ ಪ್ಯಾಟರ್ನ್‌ಗಳನ್ನು Siri ಗುರುತಿಸುವಂತೆ ಮಾಡಿ

ಇಂಗ್ಲಿಷ್‌ಗೆ (U. S.) ನಿಮ್ಮ ಪ್ರಾಥಮಿಕ ಭಾಷೆಯನ್ನು ಸೆಟ್ ಮಾಡಿದಾಗ, ವಿಲಕ್ಷಣ ಮಾತಿಗಾಗಿ Siri ಆಲಿಸುವಂತೆ ನೀವು ಮಾಡಬಹುದು. ನೀವು ಸೆರೆಬ್ರಲ್ ಪಾಲ್ಸಿ, ಅಮಿಯೊಟ್ರೊಫಿಕ್ ಲ್ಯಾಟರಲ್ ಸ್ಕ್ಲೀರೋಸಿಸ್ (ALS) ಅಥವಾ ಸ್ಟ್ರೋಕ್‌ನಂತಹ ಮಾತಿನ ಮೇಲೆ ಪರಿಣಾಮ ಬೀರುವ ಆರೋಗ್ಯ ಸಮಸ್ಯೆ ಅಥವಾ ಕಾಲ ಕಳೆದಂತೆ ಉಲ್ಬಣವಾಗುವ ಆರೋಗ್ಯ ಸಮಸ್ಯೆಯನ್ನು ಹೊಂದಿದ್ದರೆ ಇದು ಸಹಾಯಕವಾಗಬಹುದು.

ಸೆಟ್ಟಿಂಗ್ಸ್  > ಆ್ಯಕ್ಸೆಸಬಿಲಿಟಿ > Siri ಎಂಬಲ್ಲಿಗೆ ಹೋಗಿ, ನಂತರ ವಿಲಕ್ಷಣ ಮಾತು ಆಲಿಸಿ ಎಂಬುದನ್ನು ಆನ್ ಮಾಡಿ.

ನೀವು ಒಂದು ಪದವನ್ನು ಮಾತನಾಡಿದಾಗ ಅಥವಾ ನಿಮ್ಮ ಆಯ್ಕೆಯ ಸೌಂಡ್ ಮಾಡಿದಾಗ ಆ್ಯಕ್ಷನ್ ನಿರ್ವಹಿಸುವಂತೆ ಸಹ ನೀವು iPhoneಗೆ ಕಲಿಸಬಹುದು. ಧ್ವನಿ ಶಾರ್ಟ್‌ಕಟ್‌ಗಳನ್ನು ಬಳಸಿ ಎಂಬುದನ್ನು ನೋಡಿ.

ನಿರ್ದಿಷ್ಟ ಆ್ಯಪ್‌ಗಳಿಗೆ ಕರೆಗಳು ಮತ್ತು ನೋಟಿಫಿಕೇಷನ್‌ಗಳನ್ನು ಘೋಷಿಸಿ

CarPlay ಬಳಸುವಾಗ ಮತ್ತು MFi ಹಿಯರಿಂಗ್ ಸಾಧನಗಳನ್ನು ಬಳಸುವಾಗ ಸಂದೇಶ ಆ್ಯಪ್ ರೀತಿಯ ಆ್ಯಪ್‌ಗಳ ನೋಟಿಫಿಕೇಷನ್‌ಗಳು ಮತ್ತು ಕರೆಗಳನ್ನು ನಿಮ್ಮ iPhone ಸ್ಪೀಕರ್‌ನಲ್ಲಿ,ಬೆಂಬಲಿತ ಹೆಡ್‌ಫೋನ್‌ಗಳಲ್ಲಿ Siri ಘೋಷಿಸುವಂತೆ ನೀವು ಮಾಡಬಹುದು.

  1. ಸೆಟ್ಟಿಂಗ್ಸ್  > ಆ್ಯಕ್ಸೆಸಬಿಲಿಟಿ > Siri ಎಂಬಲ್ಲಿಗೆ ಹೋಗಿ, ನಂತರ ಸ್ಪೀಕರ್‌ನಲ್ಲಿ ನೋಟಿಫಿಕೇಷನ್‌ಗಳನ್ನು ಘೋಷಿಸಿ ಎಂಬುದನ್ನು ಆನ್ ಮಾಡಿ.

  2. ನೋಟಿಫಿಕೇಷನ್‌ಗಳನ್ನು ಘೋಷಿಸಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ಪ್ರತಿಯೊಂದು ಆ್ಯಪ್‌ಗೆ, ಅದರ ಎಲ್ಲಾ ನೋಟಿಫಿಕೇಷನ್‌ಗಳನ್ನು ಘೋಷಿಸಬೇಕೇ ಅಥವಾ ಸಮಯ-ಸೂಕ್ಷ್ಮ ನೋಟಿಫಿಕೇಷನ್‌ಗಳನ್ನು ಮಾತ್ರ ಘೋಷಿಸಬೇಕೇ ಎಂಬುದನ್ನು ಆಯ್ಕೆಮಾಡಿ.

Siri ಮೂಲಕ ಕರೆಗಳನ್ನು ಮುಕ್ತಾಯಗೊಳಿಸಿ

Siri ಫೋನ್ ಮತ್ತು FaceTime ಕರೆಗಳನ್ನು ಮುಕ್ತಾಯಗೊಳಿಸುವಂತೆ ನೀವು ಮಾಡಬಹುದು.

  1. ಸೆಟ್ಟಿಂಗ್ಸ್  > ಆ್ಯಕ್ಸೆಸಬಿಲಿಟಿ > Siri ಎಂಬಲ್ಲಿಗೆ ಹೋಗಿ, ಕರೆ ಕೊನೆಗೊಳಿಸುವಿಕೆ ಎಂಬುದನ್ನು ಟ್ಯಾಪ್ ಮಾಡಿ, ನಂತರ ಕರೆ ಕೊನೆಗೊಳಿಸುವಿಕೆ ಎಂಬುದನ್ನು ಆನ್ ಮಾಡಿ.

    ಗಮನಿಸಿ: ಆಯ್ದ ಭಾಷೆಗಳಲ್ಲಿ ಮತ್ತು iPhone 11, iPhone SE (2ನೇ ಜನರೇಷನ್) ಮತ್ತು ನಂತರದ ಮಾಡಲ್‌ಗಳಲ್ಲಿ ಲಭ್ಯವಿದೆ. ಸ್ಪೀಚ್ ಮಾಡಲ್‌ಗಳ ಡೌನ್‌ಲೋಡ್ ಅಗತ್ಯವಿದೆ.

  2. ಕರೆಯನ್ನು ಮುಗಿಸಲು, ಈ ರೀತಿ ಏನಾದರೂ Siriಗೆ ಕೇಳಿ, “Siri, hang up.” (ಕರೆಯಲ್ಲಿದ್ದವರು ನಿಮ್ಮ ಮಾತು ಕೇಳಿಸಿಕೊಳ್ಳುತ್ತಾರೆ.)

ನೀವು ಕರೆಗಳನ್ನು ರೂಟ್ ಮಾಡಬಹುದು ಮತ್ತು ಸ್ವಯಂಚಾಲಿತವಾಗಿ ಉತ್ತರಿಸಬಹುದು ಅಥವಾ Siri ಕರೆಗಳನ್ನು ಘೋಷಿಸುವಂತೆ ಹಾಗೂ ಉತ್ತರಿಸುವಂತೆ ಮಾಡಬಹುದು.

*Apple Intelligence ಈ ಕೆಳಗಿನ ಭಾಷೆಗಳಿಗೆ ಬೆಂಬಲದೊಂದಿಗೆ ಬೀಟಾದಲ್ಲಿ ಲಭ್ಯವಿದೆ: ಇಂಗ್ಲಿಷ್, ಡ್ಯಾನಿಶ್, ಡಚ್, ಫ್ರೆಂಚ್, ಜರ್ಮನ್, ಇಟಾಲಿಯನ್, ನಾರ್ವೇಜಿಯನ್, ಪೋರ್ಚುಗೀಸ್, ಸ್ಪ್ಯಾನಿಷ್, ಸ್ವೀಡಿಷ್, ಟರ್ಕಿಶ್, ಚೈನೀಸ್ (ಸರಳೀಕೃತ), ಚೈನೀಸ್ (ಸಾಂಪ್ರದಾಯಿಕ), ಜಾಪನೀಸ್, ಕೊರಿಯನ್ ಮತ್ತು ವಿಯೆಟ್ನಾಮೀಸ್. ಕೆಲವು ಫೀಚರ್‌ಗಳು ಎಲ್ಲಾ ಭಾಷೆಗಳು ಅಥವಾ ಪ್ರದೇಶಗಳಲ್ಲಿ ಲಭ್ಯವಿಲ್ಲದಿರಬಹುದು. ಭಾಷೆ ಮತ್ತು ಫೀಚರ್ ಲಭ್ಯತೆ ಮತ್ತು ಸಿಸ್ಟಂ ಅವಶ್ಯಕತೆಗಳ ಕುರಿತ ಹೆಚ್ಚಿನ ಮಾಹಿತಿಗಾಗಿ, Apple Intelligence ಅನ್ನು ಪಡೆಯುವುದು ಹೇಗೆ? ಎಂಬ Apple ಬೆಂಬಲ ಲೇಖನವನ್ನು ನೋಡಿ.
Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.