ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPhoneನಲ್ಲಿ ವಾಯ್ಸ್‌ಮೇಲ್ ಅನ್ನು ಸೆಟಪ್ ಮಾಡುವುದು

ಫೋನ್ ಆ್ಯಪ್‌ನಲ್ಲಿ, ವಿಷುವಲ್ ವಾಯ್ಸ್‌ಮೇಲ್ ನಿಮ್ಮ ವಾಯ್ಸ್‌ಮೇಲ್ ಸಂದೇಶಗಳ ಪಟ್ಟಿಯನ್ನು ನಿಮಗೆ ತೋರಿಸುತ್ತದೆ. ನೀವು ಅವೆಲ್ಲವನ್ನೂ ಆಲಿಸದೆಯೇ ಯಾವುದನ್ನು ಪ್ಲೇ ಮಾಡಬೇಕು ಮತ್ತು ಡಿಲೀಟ್ ಮಾಡಬೇಕು ಎಂಬುದನ್ನು ಆರಿಸಬಹುದು. ನೀವು ನಿಮ್ಮ ವಾಯ್ಸ್‌ಮೇಲ್ ಸಂದೇಶಗಳನ್ನು iCloudನಲ್ಲಿ ಸಂಗ್ರಹಿಸಿದಾಗ, ಅವು ನಿಮ್ಮ ಸಾಧನಗಳಾದ್ಯಂತ ಸಿಂಕ್ ಆಗುತ್ತವೆ. ವಾಯ್ಸ್‌ಮೇಲ್ ಐಕಾನ್ ಮೇಲಿನ ಬ್ಯಾಡ್ಜ್ ಆಲಿಸದಿರುವ ಸಂದೇಶಗಳ ಸಂಖ್ಯೆಯನ್ನು ತೋರಿಸುತ್ತದೆ.

ಲೈವ್ ವಾಯ್ಸ್‌ಮೇಲ್ ಯಾರಾದರೂ ನಿಮಗೆ ಸಂದೇಶವನ್ನು ಕಳುಹಿಸುತ್ತಿರುವಾಗ ನೈಜ-ಸಮಯದ ಟ್ರಾನ್ಸ್‌ಕ್ರಿಪ್ಷನ್ ಅನ್ನು ನೋಡಲು ನಿಮಗೆ ಅನುವುಮಾಡಿಕೊಡುತ್ತದೆ. ಅವರು ತಮ್ಮ ವಾಯ್ಸ್‌ಮೇಲ್ ಅನ್ನು ಕಳುಹಿಸುತ್ತಿರುವಾಗಲೇ ನೀವು ಕರೆಗೆ ಉತ್ತರಿಸಲೂಬಹುದು.

ಗಮನಿಸಿ: ಆಯ್ದ ದೇಶಗಳು ಅಥವಾ ಪ್ರದೇಶಗಳಲ್ಲಿ ಆಯ್ದ ನೆಟ್‌ವರ್ಕ್ ಪೂರೈಕೆದಾರರಿಂದ ವಾಯ್ಸ್‌ಮೇಲ್, ವಿಷುವಲ್ ವಾಯ್ಸ್‌ಮೇಲ್ ಮತ್ತು ಲೈವ್ ವಾಯ್ಸ್‌ಮೇಲ್ ಲಭ್ಯವಿವೆ.

ವಾಯ್ಸ್‌ಮೇಲ್ ಅನ್ನು ಸೆಟಪ್ ಮಾಡಿ

ನೀವು ಮೊದಲ ಬಾರಿಗೆ ವಾಯ್ಸ್‌ಮೇಲ್ ಅನ್ನು ಟ್ಯಾಪ್ ಮಾಡಿದಾಗ, ವಾಯ್ಸ್‌ಮೇಲ್ ಪಾಸ್‌ವರ್ಡ್ ಅನ್ನು ರಚಿಸುವಂತೆ ಮತ್ತು ನಿಮ್ಮ ವಾಯ್ಸ್‌ಮೇಲ್ ಗ್ರೀಟಿಂಗ್ ಅನ್ನು ರೆಕಾರ್ಡ್ ಮಾಡುವಂತೆ ನಿಮಗೆ ಹೇಳಲಾಗುತ್ತದೆ.

  1. ನಿಮ್ಮ iPhoneನಲ್ಲಿ ಫೋನ್ ಆ್ಯಪ್‌ಗೆ ಹೋಗಿ.

  2. ನೀವು ಬಳಸುತ್ತಿರುವ ಫೋನ್ ಆ್ಯಪ್ ಲೇಔಟ್ ಅನ್ನು ಆಧರಿಸಿ ಈ ಕೆಳಗಿನ ಒಂದನ್ನು ಮಾಡಿ:

    • ಯೂನಿಫೈಡ್ ಲೇಔಟ್: ಫಿಲ್ಟರ್ ಬಟನ್ ಅನ್ನು ಟ್ಯಾಪ್ ಮಾಡಿ, ವಾಯ್ಸ್‌ಮೇಲ್‌ಗಳು ಎಂಬುದನ್ನು ಟ್ಯಾಪ್ ಮಾಡಿ, ನಂತರ ವಾಯ್ಸ್‌ಮೇಲ್ ಗ್ರೀಟಿಂಗ್ ಅನ್ನು ಎಡಿಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

    • ಕ್ಲಾಸಿಕ್ ಲೇಔಟ್: ನಿಮ್ಮ ಸ್ಕ್ರೀನ್‌ನ ಕೆಳಭಾಗದಲ್ಲಿರುವ ವಾಯ್ಸ್‌ಮೇಲ್ ಅನ್ನು ಟ್ಯಾಪ್ ಮಾಡಿ, ನಂತರ ಗ್ರೀಟಿಂಗ್ ಎಂಬುದನ್ನು ಟ್ಯಾಪ್ ಮಾಡಿ.

  3. ಗ್ರೀಟಿಂಗ್ ಒಂದನ್ನು ಆಯ್ಕೆಮಾಡಿ—ಡಿಫಾಲ್ಟ್ ಅಥವಾ ಕಸ್ಟಮ್; ನೀವು ಕಸ್ಟಮ್ ಎಂಬುದನ್ನು ಆಯ್ಕೆ ಮಾಡಿದರೆ, ನೀವು ಹೊಸ ಗ್ರೀಟಿಂಗ್ ಅನ್ನು ರೆಕಾರ್ಡ್ ಮಾಡಬಹುದು.

ಲೈವ್ ವಾಯ್ಸ್‌ಮೇಲ್ ಅನ್ನು ಆನ್ ಮಾಡಿ

ಲೈವ್ ವಾಯ್ಸ್‌ಮೇಲ್ ಅನ್ನು ಆನ್ ಮಾಡಲು, ಈ ಕೆಳಗಿನವುಗಳನ್ನು ಮಾಡಿ:

  1. ನಿಮ್ಮ iPhoneನಲ್ಲಿ ಸೆಟ್ಟಿಂಗ್ಸ್ ಆ್ಯಪ್‌ಗೆ ಹೋಗಿ.

  2. ಆ್ಯಪ್‌ಗಳು ಎಂಬುದನ್ನು ಟ್ಯಾಪ್ ಮಾಡಿ, ನಂತರ ಫೋನ್ ಎಂಬುದನ್ನು ಟ್ಯಾಪ್ ಮಾಡಿ.

  3. ಲೈವ್ ವಾಯ್ಸ್‌ಮೇಲ್ ಅನ್ನು ಆನ್ ಮಾಡಿ.

    ಲೈವ್ ವಾಯ್ಸ್‌ಮೇಲ್ ಆನ್ ಆಗಿರುವಾಗ ಮತ್ತು ಕರೆ ಮಾಡುವವರನ್ನು ವಾಯ್ಸ್‌ಮೇಲ್‌ಗೆ ನಿರ್ದೇಶಿಸಿದಾಗ, ಅವರು ಮಾತನಾಡುತ್ತಾ ಹೋದಂತೆ ಅವರ ವಾಯ್ಸ್‌ಮೇಲ್‌ನ ಟ್ರಾನ್ಸ್‌ಕ್ರಿಪ್ಶನ್ ಅನ್ನು ನಿಮ್ಮ iPhone ಪ್ರದರ್ಶಿಸುತ್ತದೆ. (ಕರೆ ಮತ್ತು ಡೇಟ ದರಗಳು ಅನ್ವಯವಾಗಬಹುದು.) ನೀವು ಕರೆಗೆ ಉತ್ತರಿಸದಿದ್ದರೆ ನಿಮ್ಮ ಧ್ವನಿಯನ್ನು ಕೇಳಲು ಕರೆಮಾಡುವವರಿಗೆ ಸಾಧ್ಯವಾಗುವುದಿಲ್ಲ ಮತ್ತು ಅವರ ಧ್ವನಿಯನ್ನು ಕೇಳಲು ನಿಮಗೆ ಸಾಧ್ಯವಾಗುವುದಿಲ್ಲ. ಕರೆಗೆ ಉತ್ತರಿಸದೆಯೇ ಅಥವಾ ಬ್ಲಾಕ್ ಮಾಡದೆಯೇ ಒಳಬರುವ ವಾಯ್ಸ್‌ಮೇಲ್ ಅನ್ನು ನಿಲ್ಲಿಸಲು, ನಿಲ್ಲಿಸಿ ಎಂಬುದನ್ನು ಟ್ಯಾಪ್ ಮಾಡಿ.

    ನಿಮ್ಮ iPhone ಅನ್ನು ಆಫ್ ಮಾಡಿದ್ದರೆ ಅಥವಾ ಅದು ನಿಮ್ಮ ನೆಟ್‌ವರ್ಕ್ ಪೂರೈಕೆದಾರರ ವ್ಯಾಪ್ತಿಯಿಂದ ಹೊರಗಿದ್ದರೆ, ಕರೆಯನ್ನು ನೆಟ್‌ವರ್ಕ್ ಪೂರೈಕೆದಾರರ ವಾಯ್ಸ್‌ಮೇಲ್ ಲಭ್ಯವಿದ್ದಲ್ಲಿ ಅದಕ್ಕೆ ಕಳುಹಿಸಲಾಗುತ್ತದೆ.

    ನೀವು ‘ಅಪರಿಚಿತ ಕರೆಮಾಡುವವರನ್ನು ನಿಶ್ಯಬ್ದಗೊಳಿಸಿ’ ಎಂಬುದನ್ನು ಆನ್ ಮಾಡಿದ್ದರೆ, ಅಪರಿಚಿತ ಕರೆಗಳು ನಿಮಗೆ ಮೊದಲು ರಿಂಗ್ ಮಾಡದೆಯೇ ನೇರವಾಗಿ ಲೈವ್ ವಾಯ್ಸ್‌ಮೇಲ್‌ಗೆ ಹೋಗುತ್ತವೆ. ನಿಮ್ಮ ನೆಟ್‌ವರ್ಕ್ ಪೂರೈಕೆದಾರರು ಸ್ಪ್ಯಾಮ್ ಎಂದು ಗುರುತಿಸಿರುವ ಕರೆಗಳು ಲೈವ್ ವಾಯ್ಸ್‌ಮೇಲ್‌ಗೆ ಹೋಗುವುದಿಲ್ಲ. ಬದಲಿಗೆ ಅವುಗಳನ್ನು ತಕ್ಷಣವೇ ನಿರಾಕರಿಸಲಾಗುತ್ತದೆ.

ಗಮನಿಸಿ: ಲೈವ್ ವಾಯ್ಸ್‌ಮೇಲ್ ಎಲ್ಲಾ ದೇಶಗಳಲ್ಲಿ, ಪ್ರದೇಶಗಳಲ್ಲಿ ಅಥವಾ ಭಾಷೆಗಳಲ್ಲಿ ಲಭ್ಯವಿಲ್ಲ. iOS ಮತ್ತು iPhoneOS ಫೀಚರ್ ಲಭ್ಯತೆಯ ವೆಬ್‌ಸೈಟ್ ಅನ್ನು ನೋಡಿ.

ಸಂಪರ್ಕದಿಂದ ಬಂದ ಲೈವ್ ವಾಯ್ಸ್‌ಮೇಲ್ ಅನ್ನು ತೋರಿಸುತ್ತಿರುವ ಕರೆಯ ಸ್ಕ್ರೀನ್. ಟ್ರಾನ್ಸ್‌ಕ್ರೈಬ್ ಮಾಡಲಾದ ಪಠ್ಯದ ಕೆಳಗೆ ಕರೆಗೆ ಸಂಬಂಧಿಸಿದ ನಿಲ್ಲಿಸಿ ಮತ್ತು ಸ್ವೀಕರಿಸಿ ಎಂಬ ಬಟನ್‌ಗಳಿವೆ.

iCloudನಲ್ಲಿ ವಾಯ್ಸ್‌ಮೇಲ್ ಅನ್ನು ಸಂಗ್ರಹಿಸಿ

iCloudನಲ್ಲಿ ನಿಮ್ಮ ಲೈವ್ ವಾಯ್ಸ್‌ಮೇಲ್ ಮತ್ತು ನೆಟ್‌ವರ್ಕ್ ಪೂರೈಕೆದಾರರ ವಾಯ್ಸ್‌ಮೇಲ್ ಅನ್ನು ನೀವು ಸಂಗ್ರಹಿಸಬಹುದು ಮತ್ತು ಸಿಂಕ್ ಮಾಡಬಹುದು.

  1. ನಿಮ್ಮ iPhoneನಲ್ಲಿ ಸೆಟ್ಟಿಂಗ್ಸ್‌ ಆ್ಯಪ್‌ಗೆ  ಹೋಗಿ.

  2. ನಿಮ್ಮ ಹೆಸರನ್ನು ಟ್ಯಾಪ್ ಮಾಡಿ, ನಂತರ iCloud ಅನ್ನು ಟ್ಯಾಪ್ ಮಾಡಿ.

  3. iCloudನಲ್ಲಿ ಸೇವ್ ಮಾಡಿರುವುದು ಎಂಬುದರ ಪಕ್ಕದಲ್ಲಿನ ಎಲ್ಲವನ್ನೂ ನೋಡಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ಫೋನ್ ಮತ್ತು FaceTime ಅನ್ನು ಆನ್ ಮಾಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.