ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPhoneನಲ್ಲಿರುವ ಸ್ಟಾಕ್ಸ್ ಆ್ಯಪ್‌ನಲ್ಲಿ ಕ್ಯಾಲೆಂಡರ್‌ಗೆ ಗಳಿಕೆಗಳ ವರದಿಗಳನ್ನು ಸೇರಿಸುವುದು

ಕಂಪನಿಯು ಮುಂಬರುವ ಗಳಿಕೆಯ ವರದಿಯನ್ನು ಬಿಡುಗಡೆ ಮಾಡುವಾಗ ನೀವು ಅದನ್ನು ನೋಡಬಹುದು ಮತ್ತು ಅದನ್ನು ಕ್ಯಾಲೆಂಡರ್ ಆ್ಯಪ್‌ನಲ್ಲಿ ಇವೆಂಟ್ ಆಗಿ ಸೇರಿಸಬಹುದು.

ಸ್ಕ್ರೀನ್‌ನ ಮಧ್ಯದಲ್ಲಿ, ಒಂದು ಚಾರ್ಟ್ 10 ವರ್ಷಗಳ ಅವಧಿಯಲ್ಲಿ ಸ್ಟಾಕ್‌ನ ಪರ್ಫಾರ್ಮೆನ್ಸ್ ಹೇಗಿತ್ತು ಎಂಬುದನ್ನು ತೋರಿಸುತ್ತದೆ. ಕಂಪನಿಯು ತನ್ನ ಗಳಿಕೆಯ ವರದಿಯನ್ನು ಮರುದಿನ ಹಂಚಿಕೊಳ್ಳಲು ಯೋಜಿಸಿದೆ ಎಂಬ ನೋಟಿಫಿಕೇಷನ್ ಚಾರ್ಟ್‌ನ ಮೇಲ್ಭಾಗದಲ್ಲಿ ಇದ್ದು, ಅದರಲ್ಲಿ ಆ ಇವೆಂಟ್ ಅನ್ನು ಕ್ಯಾಲೆಂಡರ್‌ಗೆ ಸೇರಿಸುವ ಬಟನ್ ಇದೆ.

ಗಳಿಕೆಗಳ ವರದಿ ಇವೆಂಟ್ ಅನ್ನು ನಿಮ್ಮ ಕ್ಯಾಲೆಂಡರ್‌ಗೆ ಸೇರಿಸುವುದು

ಸ್ಟಾಕ್ಸ್ ಆ್ಯಪ್ ಮುಂಬರುವ ಗಳಿಕೆಯ ವರದಿಯನ್ನು ಬಿಡುಗಡೆ ಮಾಡುವಾಗ ನೀವು ಅದನ್ನು ಕ್ಯಾಲೆಂಡರ್ ಆ್ಯಪ್‌ನಲ್ಲಿ ಇವೆಂಟ್ ಆಗಿ ಸೇರಿಸಬಹುದು.

  1. ನಿಮ್ಮ iPhoneನಲ್ಲಿ ಸ್ಟಾಕ್ಸ್ ಆ್ಯಪ್‌ಗೆ ಹೋಗಿ.

  2. ನಿಮ್ಮ ವಾಚ್‌ಲಿಸ್ಟ್‌ನಲ್ಲಿರುವ ಟಿಕರ್ ಚಿಹ್ನೆಯನ್ನು ಟ್ಯಾಪ್ ಮಾಡಿ ಅಥವಾ ಹುಡುಕಾಟದ ಫೀಲ್ಡ್ ಅನ್ನು ಬಳಸಿಕೊಂಡು ಬೇಕಾದ ಚಿಹ್ನೆಯನ್ನು ಹುಡುಕಿ.

  3. ಗಳಿಕೆಯ ವರದಿಯು ಮುಂಬರಲಿದ್ದರೆ, ಕ್ಯಾಲೆಂಡರ್‌ಗೆ ಸೇರಿಸಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ಮುಗಿದಿದೆ ಬಟನ್ ಅನ್ನು ಟ್ಯಾಪ್ ಮಾಡಿ.

ಗಳಿಕೆಯ ವರದಿಯನ್ನು ಕ್ಯಾಲೆಂಡರ್ ಆ್ಯಪ್‌ನಲ್ಲಿ ಇಡೀ ದಿನದ ಇವೆಂಟ್ ಆಗಿ ಸೇವ್ ಮಾಡಲಾಗಿದೆ. ಗಳಿಕೆಯ ವರದಿ ಬಿಡುಗಡೆಯ ದಿನದಂದು ಕ್ಯಾಲೆಂಡರ್ ನಿಮಗೆ ಇವೆಂಟ್ ರಿಮೈಂಡರ್ ಅನ್ನು ಕಳುಹಿಸುತ್ತದೆ.

ನಿಮ್ಮ ಕ್ಯಾಲೆಂಡರ್‌ನಿಂದ ಗಳಿಕೆಗಳ ವರದಿಯ ಇವೆಂಟ್ ಅನ್ನು ಡಿಲೀಟ್ ಮಾಡಿ

  1. ನಿಮ್ಮ iPhoneನಲ್ಲಿ ಸ್ಟಾಕ್ಸ್ ಆ್ಯಪ್‌ಗೆ ಹೋಗಿ.

  2. ನಿಮ್ಮ ವಾಚ್‌ಲಿಸ್ಟ್‌ನಲ್ಲಿರುವ ಟಿಕರ್ ಚಿಹ್ನೆಯನ್ನು ಟ್ಯಾಪ್ ಮಾಡಿ ಅಥವಾ ಹುಡುಕಾಟದ ಫೀಲ್ಡ್ ಅನ್ನು ಬಳಸಿಕೊಂಡು ಬೇಕಾದ ಚಿಹ್ನೆಯನ್ನು ಹುಡುಕಿ.

  3. ಕ್ಯಾಲೆಂಡರ್ ಆ್ಯಪ್‌ಗೆ ಬದಲಾಯಿಸಲು ವ್ಯೂ ಎಂಬುದನ್ನು ಟ್ಯಾಪ್ ಮಾಡಿ.

  4. ಕ್ಯಾಲೆಂಡರ್ ಆ್ಯಪ್‌ನಲ್ಲಿ, ಇವೆಂಟ್ ಅನ್ನು ಟ್ಯಾಪ್ ಮಾಡಿ, ಎಡಿಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ, ಇವೆಂಟ್ ಅನ್ನು ಡಿಲೀಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ (ನೀವು ಕೆಳಕ್ಕೆ ಸ್ಕ್ರೋಲ್ ಮಾಡಬೇಕಾಗಬಹುದು), ನಂತರ ಇವೆಂಟ್ ಅನ್ನು ಡಿಲೀಟ್ ಮಾಡಿ ಎಂಬುದನ್ನು ಮತ್ತೊಮ್ಮೆ ಟ್ಯಾಪ್ ಮಾಡುವ ಮೂಲಕ ದೃಢೀಕರಿಸಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.