ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPhoneನಲ್ಲಿ ಸಂದೇಶಗಳನ್ನು ಕಳುಹಿಸಿ ಮತ್ತು ಅವುಗಳಿಗೆ ಪ್ರತ್ಯುತ್ತರಿಸಿ

ನೀವು ಪಠ್ಯ ಸಂದೇಶಗಳು, ಚಿತ್ರಗಳು ಮತ್ತು ಇನ್ನೂ ಹೆಚ್ಚಿನವುಗಳನ್ನು ಕಳುಹಿಸಬಹುದು. ನೀವು ಸಂಭಾಷಣೆಯೊಳಗೆ ಅಥವಾ ಥ್ರೆಡ್‌ನಲ್ಲಿನ ನಿರ್ದಿಷ್ಟ ಕಾಮೆಂಟ್‌ಗಳಿಗೆ ಪ್ರತ್ಯುತ್ತರಿಸಬಹುದು. ನಿಮ್ಮ ಸಂದೇಶಗಳನ್ನು ಕೇಳಲು ಮತ್ತು ಅವುಗಳಿಗೆ ಪ್ರತಿಕ್ರಿಯಿಸಲು ನೀವು Siriಯನ್ನು ಸಹ ಬಳಸಬಹುದು.

ಸಂದೇಶ ಆ್ಯಪ್‌ನಲ್ಲಿನ ಎಲ್ಲಾ ಫೀಚರ್‌ಗಳನ್ನು ಸಂಪೂರ್ಣವಾಗಿ ಬಳಸಲು, ನೀವು ಸಂದೇಶ ಆ್ಯಪ್ ಅನ್ನು ತಪ್ಪದೇ ಸೆಟಪ್ ಮಾಡಿ.

Siri: ಈ ರೀತಿ ಏನಾದರೂ Siriಗೆ ಕೇಳಿ, “Read my last message from Antonio.” Siriಯನ್ನು ಬಳಸುವುದು ಹೇಗೆಂದು ತಿಳಿಯಿರಿ.

ಕೆಳಗಿನ ಬಲಭಾಗದಲ್ಲಿ ರಚಿಸಿ ಬಟನ್ ಅನ್ನು ಹೊಂದಿರುವ ಸಂದೇಶ ಆ್ಯಪ್‌ನ ಸಂಭಾಷಣೆಯ ಪಟ್ಟಿ. ಸಂದೇಶದ ಎಡಭಾಗದಲ್ಲಿರುವ ನೀಲಿ ಬಣ್ಣದ ಡಾಟ್ ಅದನ್ನು ಓದಲಾಗಿಲ್ಲ ಎಂಬುದನ್ನು ಸೂಚಿಸುತ್ತದೆ.

ಸಂಭಾಷಣೆಯನ್ನು ಪ್ರಾರಂಭಿಸುವುದು

ಹೊಸ ಸಂಭಾಷಣೆಯನ್ನು ಪ್ರಾರಂಭಿಸಲು ನೀವು ಒಂದು ಅಥವಾ ಹೆಚ್ಚಿನ ಜನರಿಗೆ ಪಠ್ಯ ಸಂದೇಶವನ್ನು ಕಳುಹಿಸಬಹುದು.

ಸಂದೇಶ ಆ್ಯಪ್ ಸಂಭಾಷಣೆ. ನೀವು ಯಾವ ವ್ಯಕ್ತಿಗಳಿಗೆ ಸಂದೇಶಗಳನ್ನು ಕಳುಹಿಸುತ್ತಿದ್ದೀರೋ ಆ ವ್ಯಕ್ತಿಯ ಹೆಸರು ಸ್ಕ್ರೀನ್‌ನ ಮೇಲ್ಭಾಗದಲ್ಲಿರುತ್ತದೆ. ಸಂಭಾಷಣೆಯ ವಿವರಗಳನ್ನು ನೋಡಲು ನೀವು ಅವರ ಹೆಸರನ್ನು ಟ್ಯಾಪ್ ಮಾಡಬಹುದು. ಸೇರಿಸಿ ಬಟನ್ ಕೆಳಗಿನ ಎಡ ಮೂಲೆಯಲ್ಲಿದೆ.
  1. ನಿಮ್ಮ iPhoneನಲ್ಲಿ ಸಂದೇಶ ಆ್ಯಪ್‌ಗೆ ಹೋಗಿ.

  2. ಸಂಭಾಷಣೆಯ ಪಟ್ಟಿಯಲ್ಲಿ, ಸ್ಕ್ರೀನ್‌ನ ಕೆಳ ಬಲಭಾಗದಲ್ಲಿರುವ ರಚಿಸಿ ಬಟನ್ ಅನ್ನು ಟ್ಯಾಪ್ ಮಾಡಿ.

  3. ಫೀಲ್ಡ್ ಅನ್ನು ಟ್ಯಾಪ್ ಮಾಡಿ, ಸ್ವೀಕೃತದಾರರ ಫೋನ್ ಸಂಖ್ಯೆ, ಸಂಪರ್ಕದ ಹೆಸರು ಅಥವಾ Apple ಖಾತೆಯನ್ನು ನಮೂದಿಸಿ.

    ನಿಮ್ಮ ಸಂಪರ್ಕಗಳಿಂದ ಸ್ವೀಕರಿಸುವವರನ್ನು ಆಯ್ಕೆಮಾಡಲು, ಇವರಿಗೆ ಎಂಬ ಫೀಲ್ಡ್‌ನಲ್ಲಿ ಸಂಪರ್ಕವನ್ನು ಸೇರಿಸಿ ಬಟನ್ ಅನ್ನು ಟ್ಯಾಪ್ ಮಾಡಿ.

  4. ಈ ಕೆಳಗಿನವುಗಳಲ್ಲಿ ಯಾವುದಾದರೂ ಒಂದನ್ನು ಮಾಡಿ:

  5. ಕಳುಹಿಸಲು ಕಳುಹಿಸಿ ಬಟನ್ ಅನ್ನು ಟ್ಯಾಪ್ ಮಾಡಿ.

    ಸಂದೇಶವನ್ನು ಕಳುಹಿಸಲು ಸಾಧ್ಯವಾಗದಿದ್ದರೆ, ಅಲರ್ಟ್ ಕಾಣಿಸಿಕೊಳ್ಳುತ್ತದೆ. ಸಂದೇಶವನ್ನು ಮತ್ತೊಮ್ಮೆ ಕಳುಹಿಸಲು ಪ್ರಯತ್ನಿಸುವುದಕ್ಕಾಗಿ ಕಳುಹಿಸುವ ವೈಫಲ್ಯ ಬಟನ್ ಅನ್ನು ಟ್ಯಾಪ್ ಮಾಡಿ.

ಸಂಭಾಷಣೆಯಿಂದ ಸಂಭಾಷಣೆಯ ಪಟ್ಟಿಗೆ ಮರಳಲು, ಹಿಂದಕ್ಕೆ ಬಟನ್ ಅನ್ನು ಟ್ಯಾಪ್ ಮಾಡಿ.

Apple Intelligence* ಆನ್ ಆಗಿದ್ದರೆ, Genmoji ಎಂದು ಕರೆಯಲಾಗುವ ಕಸ್ಟಮ್ ಎಮೋಜಿಯನ್ನು ನೀವು ರಚಿಸಬಹುದು. Genmojiಯೊಂದಿಗೆ ನಿಮ್ಮ ಸ್ವಂತ ಎಮೋಜಿಯನ್ನು ರಚಿಸುವುದು ಎಂಬುದನ್ನು ನೋಡಿ.

ನೀವು ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ನಿಮ್ಮ iPhone ಅಥವಾ iPadನಲ್ಲಿ ನಿಮಗೆ ಸಂದೇಶಗಳನ್ನು ಕಳುಹಿಸಲು ಅಥವಾ ಸ್ವೀಕರಿಸಲು ಸಾಧ್ಯವಾಗದಿದ್ದರೆ ಎಂಬ Apple ಬೆಂಬಲ ಲೇಖನವನ್ನು ನೋಡಿ.

ಸಂದೇಶಕ್ಕೆ ಪ್ರತ್ಯುತ್ತರಿಸಿ

ಸಂಭಾಷಣೆಯ ಪ್ರಕಾರ ಸಂದೇಶಗಳನ್ನು ಸಂಭಾಷಣೆ ಪಟ್ಟಿಯಲ್ಲಿ ಗುಂಪು ಮಾಡಲಾಗುತ್ತದೆ. ಸಂಭಾಷಣೆಯೊಂದರ ಒಂದು ಅಥವಾ ಅದಕ್ಕಿಂತ ಹೆಚ್ಚಿನ ಸಂದೇಶಗಳನ್ನು ನೀವು ಓದಿಲ್ಲ ಎಂಬುದನ್ನು ಡಾಟ್ ಸೂಚಿಸುತ್ತದೆ.

  1. ನಿಮ್ಮ iPhoneನಲ್ಲಿ ಸಂದೇಶ ಆ್ಯಪ್‌ಗೆ ಹೋಗಿ.

  2. ನೀವು ಭಾಗವಹಿಸಲು ಬಯಸುವ ಸಂಭಾಷಣೆಗೆ ಹೋಗಿ.

  3. ಪಠ್ಯ ಫೀಲ್ಡ್ ಅನ್ನು ಟ್ಯಾಪ್ ಮಾಡಿ, ನಿಮ್ಮ ಸಂದೇಶವನ್ನು ರಚಿಸಿ, ನಂತರ ನಿಮ್ಮ ಸಂದೇಶವನ್ನು ಕಳುಹಿಸಲು ಕಳುಹಿಸಿ ಬಟನ್ ಅನ್ನು ಟ್ಯಾಪ್ ಮಾಡಿ.

Apple Intelligence ಆನ್ ಆಗಿದ್ದರೆ, ನೀವು ಸ್ವೀಕರಿಸುವ ಸಂದೇಶಕ್ಕೆ ಪ್ರತ್ಯುತ್ತರವೊಂದನ್ನು ಸೂಚಿಸಲು ನೀವು ಅದನ್ನು ಬಳಸಬಹುದು. ಸಂದೇಶ ಆ್ಯಪ್‌ನಲ್ಲಿ Apple Intelligence ಅನ್ನು ಬಳಸಿ ಎಂಬುದನ್ನು ನೋಡಿ.

ಸಲಹೆ: ಸಂದೇಶವೊಂದನ್ನು ಯಾವಾಗ ಕಳುಹಿಸಲಾಗಿದೆ ಎಂಬುದನ್ನು ಕಂಡುಕೊಳ್ಳಿ. ಸಂಭಾಷಣೆಯಲ್ಲಿರುವ ಎಲ್ಲಾ ಸಂದೇಶಗಳಿಗೆ ಸಂಬಂಧಿಸಿದ ಟೈಮ್‌ಸ್ಟ್ಯಾಂಪ್‌ಗಳನ್ನು ನೋಡಲು ಸಂದೇಶದ ಬಬಲ್ ಅನ್ನು ಎಡಕ್ಕೆ ಡ್ರ್ಯಾಗ್ ಮಾಡಿ.

ನಿರ್ದಿಷ್ಟ ಸಂದೇಶಕ್ಕೆ ಇನ್‌ಲೈನ್‌ನಲ್ಲಿ ಪ್ರತ್ಯುತ್ತರಿಸಿ

ನಿರ್ದಿಷ್ಟ ಸಂದೇಶದ ಇನ್‌ಲೈನ್‌ಗೆ ನೀವು ಪ್ರತಿಕ್ರಿಯಿಸಬಹುದು. ಇನ್‌ಲೈನ್ ಪ್ರತ್ಯುತ್ತರವು ನೀವು ಪ್ರತಿಕ್ರಿಯಿಸುತ್ತಿರುವ ಸಂದೇಶವನ್ನು ಉಲ್ಲೇಖಿಸುತ್ತದೆ. ಇದು ಯಾವ ಪ್ರತಿಕ್ರಿಯೆಯು ಯಾವ ಸಂದೇಶಕ್ಕೆ ಸಂಬಂಧಿಸಿದೆ ಎಂಬುದನ್ನು ಸ್ಪಷ್ಟಪಡಿಸುವ ಮೂಲಕ ಅತಿಹೆಚ್ಚು ಸಂದೇಶಗಳುಳ್ಳ ಸಂಭಾಷಣೆಯನ್ನು ವ್ಯವಸ್ಥಿತವಾಗಿರಿಸುತ್ತದೆ.

ಸಂದೇಶ ಆ್ಯಪ್‌ನಲ್ಲಿನ ಗುಂಪು ಸಂಭಾಷಣೆಯಲ್ಲಿ ಇನ್‌ಲೈನ್ ಪ್ರತ್ಯುತ್ತರವನ್ನು ಕಂಪೋಸ್ ಮಾಡುವುದು. ಸಂಭಾಷಣೆಯಲ್ಲಿರುವ ಮತ್ತೊಬ್ಬ ವ್ಯಕ್ತಿಯನ್ನು ಉಲ್ಲೇಖಿಸಲಾಗಿದೆ, ಆದ್ದರಿಂದ ಅವರ ಹೆಸರು ಬೋಲ್ಡ್ ಅಕ್ಷರಗಳಲ್ಲಿ ಕಾಣಿಸಿಕೊಳ್ಳುತ್ತದೆ.
  1. ನಿಮ್ಮ iPhoneನಲ್ಲಿ ಸಂದೇಶ ಆ್ಯಪ್‌ಗೆ ಹೋಗಿ.

  2. ಸಂಭಾಷಣೆ ಪಟ್ಟಿಯಲ್ಲಿ, ನೀವು ಭಾಗವಹಿಸಲು ಬಯಸುವ ಸಂಭಾಷಣೆಯನ್ನು ಟ್ಯಾಪ್ ಮಾಡಿ.

  3. ಈ ಕೆಳಗಿನವುಗಳಲ್ಲಿ ಒಂದನ್ನು ಮಾಡಿ:

    • ನೀವು ಪ್ರತ್ಯುತ್ತರಿಸಲು ಬಯಸುವ ಸಂದೇಶದ ಬಬಲ್ ಮೇಲೆ ಬಲಕ್ಕೆ ಸ್ವೈಪ್ ಮಾಡಿ.

    • ನೀವು ಯಾವ ಸಂದೇಶಕ್ಕೆ ಪ್ರತ್ಯುತ್ತರಿಸಲು ಬಯಸುವಿರೋ ಆ ಸಂದೇಶದ ಬಬಲ್ ಅನ್ನು ಒತ್ತಿ ಹಿಡಿದುಕೊಳ್ಳಿ, ನಂತರ ಪ್ರತ್ಯುತ್ತರಿಸಿ ಎಂಬುದನ್ನು ಟ್ಯಾಪ್ ಮಾಡಿ.

  4. ನಿಮ್ಮ ಸಂದೇಶವನ್ನು ನಮೂದಿಸಿ, ನಂತರ ಕಳುಹಿಸಿ ಬಟನ್ ಅನ್ನು ಟ್ಯಾಪ್ ಮಾಡಿ.

    ಗಮನಿಸಿ: ಗುಂಪು ಸಂಭಾಷಣೆಯಲ್ಲಿರುವ ಪ್ರತಿಯೊಬ್ಬರೂ ನಿಮ್ಮ ಇನ್‌ಲೈನ್ ಪ್ರತ್ಯುತ್ತರಗಳನ್ನು ಓದಬಹುದು. ಖಾಸಗಿಯಾಗಿ ಪ್ರತುತ್ತರಿಸಲು, ಸಂಭಾಷಣೆಯ ಮೇಲ್ಭಾಗದಲ್ಲಿರುವ ಗುಂಪಿನ ಐಕಾನ್ ಅನ್ನು ಟ್ಯಾಪ್ ಮಾಡಿ, ನೀವು ಖಾಸಗಿಯಾಗಿ ಸಂದೇಶ ಕಳುಹಿಸಲು ಬಯಸುವ ವ್ಯಕ್ತಿಯ ಐಕಾನ್ ಅನ್ನು ಒತ್ತಿ ಹಿಡಿದುಕೊಳ್ಳಿ, ನಂತರ ಸಂದೇಶ ಎಂಬುದನ್ನು ಟ್ಯಾಪ್ ಮಾಡಿ.

  5. ಮುಖ್ಯ ಸಂಭಾಷಣೆಗೆ ಮರಳಲು, ಅಸ್ಪಷ್ಟವಾಗಿರುವ ಹಿನ್ನೆಲೆಯನ್ನು ಟ್ಯಾಪ್ ಮಾಡಿ.

ಥಂಬ್ಸ್ ಅಪ್ ಅಥವಾ ಹೃದಯದಂತಹ Tapback ಮೂಲಕ ಪ್ರತಿಕ್ರಿಯಿಸಲು ಸಂದೇಶವನ್ನು ಒತ್ತಿ ಹಿಡಿದುಕೊಳ್ಳಿ.

ಸಲಹೆ: ಸಂದೇಶದ ಒಂದು ಭಾಗವನ್ನು ಕಾಪಿ ಮಾಡಲು, ಸಂದೇಶವನ್ನು ಒತ್ತಿ ಹಿಡಿದುಕೊಳ್ಳಿ, ಆಯ್ಕೆಮಾಡಿ ಎಂಬುದನ್ನು ಟ್ಯಾಪ್ ಮಾಡಿ, ನೀವು ಕಾಪಿ ಮಾಡಲು ಬಯಸುವ ಪಠ್ಯವನ್ನು ಆಯ್ಕೆಮಾಡಿ, ನಂತರ ಕಾಪಿ ಎಂಬುದನ್ನು ಟ್ಯಾಪ್ ಮಾಡಿ.

ನಿಮ್ಮ ಲಾಕ್ ಸ್ಕ್ರೀನ್‌ನಿಂದ ಸಂದೇಶಗಳಿಗೆ ಪ್ರತ್ಯುತ್ತರಿಸಿ

ನೀವು ಸಂದೇಶ ಆ್ಯಪ್ ಅನ್ನು ತೆರೆಯದೆಯೇ ನಿಮ್ಮ ಲಾಕ್ ಸ್ಕ್ರೀನ್‌ನಲ್ಲಿ ಸಂದೇಶಗಳಿಗೆ ಪ್ರತ್ಯುತ್ತರಿಸಬಹುದು. ಲಾಕ್ ಸ್ಕ್ರೀನ್ ಫೀಚರ್‌ಗಳನ್ನು ಆನ್ ಮಾಡಿ ಎಂಬುದನ್ನು ನೋಡಿ.

ನಿಮ್ಮ ಇನ್ನೊಂದು ಸಂಖ್ಯೆಯಿಂದ ಪಠ್ಯ ಸಂದೇಶವನ್ನು ಕಳುಹಿಸಿ

ನಿಮ್ಮ iPhone ಅನ್ನು ಡ್ಯುಯಲ್ ಸಿಮ್‌ನೊಂದಿಗೆ ಸೆಟಪ್ ಮಾಡಿದ್ದರೆ, ನಿಮ್ಮ ಸಂದೇಶವನ್ನು ರಚಿಸುವಾಗ ನಿಮ್ಮ ಬೇರೊಂದು ಹೊರಹೋಗುವ ಲೈನ್‌ಗೆ ಬದಲಾಯಿಸಲು ನಿಮ್ಮ ಸಂಖ್ಯೆಯನ್ನು ನೀವು ಟ್ಯಾಪ್ ಮಾಡಬಹುದು.

ಕೆಲವು ಬಬಲ್‌ಗಳು ನೀಲಿ ಮತ್ತು ಉಳಿದವು ಹಸಿರು ಬಣ್ಣದಲ್ಲಿ ಏಕಿವೆ?

ಸಂದೇಶವೊಂದನ್ನು iMessage ಬಳಸಿ ಕಳುಹಿಸಬಹುದಾದರೆ, ನೀವು ನೀಲಿ ಬಣ್ಣದ ಕಳುಹಿಸಿ ಎಂಬ ಬಾಣವನ್ನು ನೋಡುತ್ತೀರಿ ಮತ್ತು ಸಂದೇಶವು ನೀಲಿ ಬಣ್ಣದ ಬಬಲ್‌ನಲ್ಲಿ ಕಾಣಿಸಿಕೊಳ್ಳುತ್ತದೆ.

ನಿಮಗೆ iMessage ಬಳಸಲು ಸಾಧ್ಯವಿರದಿದ್ದರೆ (ಉದಾಹರಣೆಗೆ, ಸ್ವೀಕೃತದಾರರು Apple ಸಾಧನವನ್ನು ಬಳಸದೇ ಇದ್ದಾಗ ಹೀಗಾಗುತ್ತದೆ) ನೀವು SMS, MMS ಅಥವಾ RCS ಅನ್ನು ಬಳಸಬಹುದು. SMS, MMS, ಅಥವಾ RCS ಮೂಲಕ ಕಳುಹಿಸಲಾದ ಸಂದೇಶಗಳು ಹಸಿರು ಬಣ್ಣದ ಬಬಲ್‌ಗಳಲ್ಲಿ ಕಾಣಿಸಿಕೊಳ್ಳುತ್ತವೆ.

ಹೆಚ್ಚಿನ ಮಾಹಿತಿಗಾಗಿ, iMessage, RCS ಮತ್ತು SMS/MMS ನಡುವಿನ ವ್ಯತ್ಯಾಸವೇನು? ಎಂಬ Apple ಬೆಂಬಲ ಲೇಖನವನ್ನು ನೋಡಿ

ಸಂದೇಶ ಆ್ಯಪ್‌ನಲ್ಲಿರುವ ಸಂಭಾಷಣೆ. ಸಂದೇಶದ ಬಬಲ್‌ಗಳು ಹಸಿರು ಬಣ್ಣದಲ್ಲಿದ್ದರೆ, ಇದು ಇತರೆ ವ್ಯಕ್ತಿಯು iMessage ಅನ್ನು ಬಳಸುತ್ತಿಲ್ಲ ಎಂಬುದನ್ನು ಸೂಚಿಸುತ್ತದೆ.

ಗಮನಿಸಿ: ನೀವು Apple ಅಲ್ಲದ ಸಾಧನಗಳನ್ನು ಬಳಸುವ ಸ್ವೀಕೃತದಾರರಿಗೆ ಸಂದೇಶಗಳನ್ನು ಕಳುಹಿಸಿದಾಗ ಕಂಟೆಂಟ್ ನಿರೀಕ್ಷಿಸಿದಂತೆ ಕಾಣಿಸದೇ ಇರಬಹುದು.

ಲೈವ್ ಅನುವಾದವನ್ನು ಬಳಸುವುದು

Apple Intelligence ಆನ್ ಆಗಿದ್ದರೆ, ಸಂದೇಶ ಆ್ಯಪ್‌ನಲ್ಲಿನ ಪಠ್ಯವನ್ನು ಸ್ವಯಂಚಾಲಿತವಾಗಿ ಅನುವಾದಿಸಲು ನೀವು ಅದನ್ನು ಬಳಸಬಹುದು. ಸಂದೇಶಗಳು, ಕರೆಗಳು ಮತ್ತು ಸಂಭಾಷಣೆಗಳನ್ನು ಅನುವಾದಿಸಿ ಎಂಬುದನ್ನು ನೋಡಿ.

*Apple Intelligence ಈ ಕೆಳಗಿನ ಭಾಷೆಗಳಿಗೆ ಬೆಂಬಲದೊಂದಿಗೆ ಬೀಟಾದಲ್ಲಿ ಲಭ್ಯವಿದೆ: ಇಂಗ್ಲಿಷ್, ಡ್ಯಾನಿಶ್, ಡಚ್, ಫ್ರೆಂಚ್, ಜರ್ಮನ್, ಇಟಾಲಿಯನ್, ನಾರ್ವೇಜಿಯನ್, ಪೋರ್ಚುಗೀಸ್, ಸ್ಪ್ಯಾನಿಷ್, ಸ್ವೀಡಿಷ್, ಟರ್ಕಿಶ್, ಚೈನೀಸ್ (ಸರಳೀಕೃತ), ಚೈನೀಸ್ (ಸಾಂಪ್ರದಾಯಿಕ), ಜಾಪನೀಸ್, ಕೊರಿಯನ್ ಮತ್ತು ವಿಯೆಟ್ನಾಮೀಸ್. ಕೆಲವು ಫೀಚರ್‌ಗಳು ಎಲ್ಲಾ ಭಾಷೆಗಳು ಅಥವಾ ಪ್ರದೇಶಗಳಲ್ಲಿ ಲಭ್ಯವಿಲ್ಲದಿರಬಹುದು. ಭಾಷೆ ಮತ್ತು ಫೀಚರ್ ಲಭ್ಯತೆ ಮತ್ತು ಸಿಸ್ಟಂ ಅವಶ್ಯಕತೆಗಳ ಕುರಿತ ಹೆಚ್ಚಿನ ಮಾಹಿತಿಗಾಗಿ, Apple Intelligence ಅನ್ನು ಪಡೆಯುವುದು ಹೇಗೆ? ಎಂಬ Apple ಬೆಂಬಲ ಲೇಖನವನ್ನು ನೋಡಿ.
Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.