ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

ತುರ್ತು ಪರಿಸ್ಥಿತಿಯಲ್ಲಿ ಗೌಪ್ಯತೆ ಮತ್ತು ಭದ್ರತಾ ಸೆಟ್ಟಿಂಗ್ಸ್ ಅನ್ನು ರೀಸೆಟ್ ಮಾಡಿ

ನಿಮ್ಮ ಸಾಧನದ ಆ್ಯಕ್ಸೆಸ್ ಮತ್ತು ವೈಯಕ್ತಿಕ ಮಾಹಿತಿಯನ್ನು ಇತರರೊಂದಿಗೆ ತ್ವರಿತವಾಗಿ ಹಂಚಿಕೊಳ್ಳುವುದನ್ನು ನಿಲ್ಲಿಸಲು, ನೀವು iPhoneನಲ್ಲಿ ಸುರಕ್ಷತಾ ಪರಿಶೀಲನೆಯನ್ನು ಬಳಸಬಹುದು. ಸುರಕ್ಷತಾ ಪರಿಶೀಲನೆಯು ನಿಮ್ಮ ಪಾಸ್‌ಕೋಡ್ ಮತ್ತು Apple ಖಾತೆ ಪಾಸ್‌ವರ್ಡ್ ಅನ್ನು ತ್ವರಿತವಾಗಿ ಬದಲಾಯಿಸಲು, ಹುಡುಕಿ ಆ್ಯಪ್‌ನಲ್ಲಿ ನಿಮ್ಮ ಸ್ಥಳವನ್ನು ಹಂಚಿಕೊಳ್ಳುವುದನ್ನು ನಿಲ್ಲಿಸಲು, ಸಂದೇಶ ಆ್ಯಪ್ ಮತ್ತು FaceTime ಅನ್ನು ನಿಮ್ಮ ಕೈಯಲ್ಲಿರುವ ಸಾಧನಕ್ಕೆ ಸೀಮಿತಗೊಳಿಸಲು ಮತ್ತು ಇನ್ನೂ ಹೆಚ್ಚಿನವುಗಳಿಗೆ ಸಹಾಯ ಮಾಡುತ್ತದೆ.

  1. ನಿಮ್ಮ iPhoneನಲ್ಲಿ ಸೆಟ್ಟಿಂಗ್ಸ್ ಆ್ಯಪ್  > ಗೌಪ್ಯತೆ ಮತ್ತು ಭದ್ರತೆ > ಸುರಕ್ಷತಾ ಪರಿಶೀಲನೆ ಎಂಬಲ್ಲಿಗೆ ಹೋಗಿ.

  2. ತುರ್ತು ರೀಸೆಟ್ ಎಂಬುದನ್ನು ಟ್ಯಾಪ್ ಮಾಡಿ, ತುರ್ತು ರೀಸೆಟ್ ಪ್ರಾರಂಭಿಸಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ಸ್ಕ್ರೀನ್ ಮೇಲಿನ ಸೂಚನೆಗಳನ್ನು ಅನುಸರಿಸಿ.

ಜನರು, ಆ್ಯಪ್‌ಗಳು ಮತ್ತು ಸಾಧನಗಳೊಂದಿಗೆ ನೀವು ಹಂಚಿಕೊಳ್ಳುವ ಮಾಹಿತಿಯನ್ನು ನಿಯತಕಾಲಿಕವಾಗಿ ಪರಿಶೀಲಿಸಲು ಮತ್ತು ಅಪ್‌ಡೇಟ್ ಮಾಡಲು ನೀವು ಸುರಕ್ಷತಾ ಪರಿಶೀಲನೆಯನ್ನು ಸಹ ಬಳಸಬಹುದು. ಸುರಕ್ಷತಾ ಪರಿಶೀಲನೆಯು ಏನು ಮಾಡುತ್ತದೆ ಎಂಬ ಕುರಿತು ಇನ್ನಷ್ಟು ತಿಳಿಯಲು, ಬಳಕೆದಾರರ ವೈಯಕ್ತಿಯ ಸುರಕ್ಷತೆಯ ಮಾರ್ಗದರ್ಶಿಯಲ್ಲಿನ iPhoneನಲ್ಲಿನ ಸುರಕ್ಷತಾ ಪರಿಶೀಲನೆಯು ನಿಮ್ಮನ್ನು ಹೇಗೆ ಸುರಕ್ಷಿತವಾಗಿರಿಸುತ್ತದೆ ಎಂಬುದನ್ನು ನೋಡಿ.

ಪ್ರಮುಖ ಸೂಚನೆ: ಸುರಕ್ಷತಾ ಪರಿಶೀಲನೆಯಿಂದ ಪರಿಶೀಲಿಸಲಾಗದ ಅಥವಾ ಬದಲಾಯಿಸಲಾಗದ ಮಾಹಿತಿಯನ್ನು ಸಹ ನೀವು ಹಂಚಿಕೊಳ್ಳುತ್ತಿರಬಹುದು. ಉದಾಹರಣೆಗೆ, ಖಾತೆಗಳು ಮತ್ತು ಪಾಸ್‌ವರ್ಡ್‌ಗಳು, ಸಾಮಾಜಿಕ ಮಾಧ್ಯಮದ ಹಂಚಿಕೆ ಮತ್ತು ಬೇರೆ ಸಾಧನದಿಂದ ಹಂಚಿಕೊಳ್ಳಲಾದ ಮಾಹಿತಿ. ನೀವು ಹಂಚಿಕೊಳ್ಳುವ ಮಾಹಿತಿಯನ್ನು ಕಡಿಮೆ ಮಾಡುವ ಕುರಿತು ಹೆಚ್ಚುವರಿ ಹಂತಗಳಿಗೆ ಸಂಬಂಧಿಸಿದಂತೆ ನಿರ್ಧರಿಸಲು ನಿಮಗೆ ಸಹಾಯ ಮಾಡುವುದಕ್ಕಾಗಿ, ಬಳಕೆದಾರರ ವೈಯಕ್ತಿಕ ಸುರಕ್ಷತೆಯ ಮಾರ್ಗದರ್ಶಿಯಲ್ಲಿನ ಸುರಕ್ಷತೆ ಪರಿಶೀಲನೆಯನ್ನು ಬಳಸುವಾಗ ಹೆಚ್ಚುವರಿ ಪರಿಗಣನೆಗಳು ಎಂಬುದನ್ನು ನೋಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.