ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPhoneನಲ್ಲಿನ ನಕ್ಷೆ ಆ್ಯಪ್‌ನಲ್ಲಿ ಸೈಕ್ಲಿಂಗ್ ಮಾರ್ಗ ನಿರ್ದೇಶನಗಳನ್ನು ಪಡೆಯುವುದು

ಸೈಕಲ್ ಪಥಗಳು, ಸೈಕಲ್ ಲೇನ್‌ಗಳು ಮತ್ತು ಸೈಕಲ್-ಸ್ನೇಹಿ ರಸ್ತೆಗಳಲ್ಲಿನ ಮಾರ್ಗಗಳನ್ನು ಒಳಗೊಂಡಂತೆ ನೀವು ವಿವರವಾದ ಸೈಕ್ಲಿಂಗ್ ಮಾರ್ಗ ನಿರ್ದೇಶನಗಳನ್ನು ಪಡೆಯಬಹುದು. ನಿಮ್ಮ ರೈಡ್ ಸಮುದ್ರ ಮಟ್ಟದಿಂದ ಎಷ್ಟು ಎತ್ತರದಲ್ಲಿದೆ ಎಂಬುದನ್ನು ನೀವು ಪ್ರಿವ್ಯೂ ಮಾಡಬಹುದು, ರಸ್ತೆ ಎಷ್ಟು ನಿಬಿಡವಾಗಿದೆ ಎಂಬುದನ್ನು ಪರಿಶೀಲಿಸಬಹುದು ಮತ್ತು ಬೆಟ್ಟಗಳು ಆದಷ್ಟೂ ಇಲ್ಲದ ಮಾರ್ಗವನ್ನು ಆಯ್ಕೆ ಮಾಡಬಹುದು.

ಗಮನಿಸಿ: ಸೈಕ್ಲಿಂಗ್ ಮಾರ್ಗ ನಿರ್ದೇಶನಗಳು ಮತ್ತು ಮಾತಿನ ರೂಪದ ಟರ್ನ್-ಬೈ-ಟರ್ನ್ ಮಾರ್ಗ ನಿರ್ದೇಶನಗಳು ಎಲ್ಲಾ ದೇಶಗಳು ಅಥವಾ ಪ್ರದೇಶಗಳಲ್ಲಿ ಲಭ್ಯವಿರುವುದಿಲ್ಲ. iOS ಮತ್ತು iPadOS ಫೀಚರ್ ಲಭ್ಯತೆಯ ವೆಬ್‌ಸೈಟ್ ಅನ್ನು ನೋಡಿ.

ಸೈಕ್ಲಿಂಗ್ ಮಾರ್ಗದ ಆಯ್ಕೆಗಳನ್ನು ತೋರಿಸುವ ನಕ್ಷೆ. ಕೆಳಭಾಗದಲ್ಲಿರುವ ಮಾರ್ಗದ ಕಾರ್ಡ್ ಪ್ರಯಾಣದ ಅಂದಾಜು ಸಮಯಗಳು, ಸಮುದ್ರ ಮಟ್ಟದ ಮೇಲಿನ ಎತ್ತರದ ಬದಲಾವಣೆಗಳು ಮತ್ತು ರಸ್ತೆಗಳ ಪ್ರಕಾರಗಳನ್ನು ಒಳಗೊಂಡ ವಿವರಗಳನ್ನು ಒದಗಿಸುತ್ತದೆ. ವಿವರಗಳ ಬಲಭಾಗದಲ್ಲಿ ಪ್ರಾರಂಭಿಸಿ ಎಂಬ ಬಟನ್ ಕಾಣಿಸುತ್ತದೆ.

ಸೈಕ್ಲಿಂಗ್ ಮಾರ್ಗ ನಿರ್ದೇಶನಗಳನ್ನು ಪಡೆಯುವುದು

  1. ನಿಮ್ಮ iPhoneನಲ್ಲಿ ನಕ್ಷೆ ಆ್ಯಪ್‌ಗೆ ಹೋಗಿ.

  2. ನಕ್ಷೆಯಲ್ಲಿ ಎಲ್ಲಿಯಾದರೂ ಒತ್ತಿ ಹಿಡಿದುಕೊಳ್ಳಿ ಅಥವಾ ಹುಡುಕಾಟದ ಫೀಲ್ಡ್‌ನಲ್ಲಿ ವಿಳಾಸವನ್ನು ನಮೂದಿಸಿ, ನಂತರ ಮಾರ್ಗ ನಿರ್ದೇಶನಗಳು ಎಂಬುದನ್ನು ಅಥವಾ ಪ್ರಯಾಣ ಮೋಡ್ ಬಟನ್ ಅನ್ನು ಟ್ಯಾಪ್ ಮಾಡಿ.

  3. ನೀವು ಬಳಸಲು ಬಯಸುವ ಮಾರ್ಗಕ್ಕಾಗಿ ‘ಪ್ರಾರಂಭಿಸಿ’ ಅಥವಾ ‘ಹಂತಗಳು’ ಎಂಬುದನ್ನು ಟ್ಯಾಪ್ ಮಾಡಿ.

ಬೆಟ್ಟಗಳು ಅಥವಾ ಜನನಿಬಿಡ ರಸ್ತೆಗಳನ್ನು ತಪ್ಪಿಸುವುದು

  1. ನಿಮ್ಮ iPhoneನಲ್ಲಿ ನಕ್ಷೆ ಆ್ಯಪ್‌ಗೆ ಹೋಗಿ.

  2. ನಕ್ಷೆಯಲ್ಲಿ ಎಲ್ಲಿಯಾದರೂ ಒತ್ತಿ ಹಿಡಿದುಕೊಳ್ಳಿ ಅಥವಾ ಹುಡುಕಾಟದ ಫೀಲ್ಡ್‌ನಲ್ಲಿ ವಿಳಾಸವನ್ನು ನಮೂದಿಸಿ, ನಂತರ ಮಾರ್ಗ ನಿರ್ದೇಶನಗಳು ಎಂಬುದನ್ನು ಅಥವಾ ಪ್ರಯಾಣ ಮೋಡ್ ಬಟನ್ ಅನ್ನು ಟ್ಯಾಪ್ ಮಾಡಿ.

  3. ತಪ್ಪಿಸಿ ಎಂಬುದನ್ನು ಟ್ಯಾಪ್ ಮಾಡಿ (ತಲುಪಬೇಕಾದ ಸ್ಥಳದ ಕೆಳಗೆ), ನಿಮ್ಮ ಆಯ್ಕೆಗಳನ್ನು ಆರಿಸಿ, ನಂತರ ಅನ್ವಯಿಸಿ ಎಂಬುದನ್ನು ಟ್ಯಾಪ್ ಮಾಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.