ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPhoneನಲ್ಲಿನ ಆರೋಗ್ಯ ಆ್ಯಪ್‌ನಲ್ಲಿ ನಿದ್ರೆಯ ವೇಳಾಪಟ್ಟಿಗಳನ್ನು ಎಡಿಟ್ ಮಾಡುವುದು

ನಿಮ್ಮ ಮೊದಲ ನಿದ್ರೆಯ ವೇಳಾಪಟ್ಟಿಯನ್ನು ಸೆಟಪ್ ಮಾಡಿದ ನಂತರ, ನೀವು ಹೆಚ್ಚುವರಿ ವೇಳಾಪಟ್ಟಿಗಳನ್ನು ಹೊಂದಿಸಬಹುದು—ಉದಾಹರಣೆಗೆ, ನೀವು ವಾರದ ದಿನಗಳು ಮತ್ತು ವಾರಾಂತ್ಯಗಳಿಗೆ ಪ್ರತ್ಯೇಕ ವೇಳಾಪಟ್ಟಿಗಳನ್ನು ರಚಿಸಬಹುದು. ನೀವು ಯಾವುದೇ ವೇಳಾಪಟ್ಟಿಯನ್ನು ಮಾರ್ಪಡಿಸಬಹುದು—ಉದಾಹರಣೆಗೆ, ನೀವು ಅದರ ಎಚ್ಚರಗೊಳ್ಳುವ ಸಮಯವನ್ನು ಬದಲಾಯಿಸಬಹುದು.

ನಿಮ್ಮ ವೈಂಡ್ ಡೌನ್ ಅವಧಿ, ನೀವು ಎಷ್ಟು ಗಂಟೆಗಳ ಕಾಲ ನಿದ್ರೆ ಮಾಡಲು ಬಯಸುತ್ತೀರಿ ಮತ್ತು ಮುಂತಾದ ನಿದ್ರೆಯ ಆಯ್ಕೆಗಳನ್ನು ಸಹ ನೀವು ಬದಲಾಯಿಸಬಹುದು.

ನಿದ್ರೆಯ ವೇಳಾಪಟ್ಟಿಯನ್ನು ಸೇರಿಸುವುದು ಅಥವಾ ಬದಲಾಯಿಸುವುದು

  1. ನಿಮ್ಮ iPhoneನಲ್ಲಿ ಆರೋಗ್ಯ ಆ್ಯಪ್‌ಗೆ ಹೋಗಿ.

  2. ಕೆಳಗಿನ ಬಲಭಾಗದಲ್ಲಿರುವ ಹುಡುಕಾಟ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ನಿದ್ರೆ ಎಂಬುದನ್ನು ಟ್ಯಾಪ್ ಮಾಡಿ.

  3. ನಿದ್ರೆ ಎಂಬುದನ್ನು ಟ್ಯಾಪ್ ಮಾಡಿ, ನಿಮ್ಮ ವೇಳಾಪಟ್ಟಿ ಎಂಬಲ್ಲಿಗೆ ಹೋಗಲು ಕೆಳಕ್ಕೆ ಸ್ಕ್ರೋಲ್ ಮಾಡಿ, ನಂತರ ಪೂರ್ಣ ವೇಳಾಪಟ್ಟಿ ಮತ್ತು ಆಯ್ಕೆಗಳು ಎಂಬುದನ್ನು ಟ್ಯಾಪ್ ಮಾಡಿ.

  4. ಈ ಕೆಳಗಿನವುಗಳಲ್ಲಿ ಒಂದನ್ನು ಮಾಡಿ:

    • ನಿದ್ರೆಯ ವೇಳಾಪಟ್ಟಿಯನ್ನು ಸೇರಿಸಿ: ವೇಳಾಪಟ್ಟಿಯನ್ನು ಸೇರಿಸಿ ಎಂಬುದನ್ನು ಟ್ಯಾಪ್ ಮಾಡಿ.

    • ನಿದ್ರೆಯ ವೇಳಾಪಟ್ಟಿಯನ್ನು ಬದಲಾಯಿಸಿ: ನೀವು ಬದಲಾಯಿಸಲು ಬಯಸುವ ವೇಳಾಪಟ್ಟಿಗಾಗಿ ಎಡಿಟ್ ಎಂಬುದನ್ನು ಟ್ಯಾಪ್ ಮಾಡಿ.

  5. ಈ ಕೆಳಗಿನವುಗಳಲ್ಲಿ ಯಾವುದಾದರೂ ಒಂದನ್ನು ಮಾಡಿ:

    • ನಿಮ್ಮ ವೇಳಾಪಟ್ಟಿಗಾಗಿ ದಿನಗಳನ್ನು ಸೆಟ್ ಮಾಡಿ: ನಿಮ್ಮ ವೇಳಾಪಟ್ಟಿಯಿಂದ ಅದನ್ನು ಸೇರಿಸಲು ಅಥವಾ ತೆಗೆದುಹಾಕಲು ಸ್ಕ್ರೀನ್‌ನ ಮೇಲ್ಭಾಗದಲ್ಲಿರುವ ದಿನವೊಂದನ್ನು ಟ್ಯಾಪ್ ಮಾಡಿ. ಈ ವೇಳಾಪಟ್ಟಿ ದಟ್ಟ ಬಣ್ಣದ ವೃತ್ತಗಳಲ್ಲಿ ತೋರಿಸಿರುವ ದಿನಗಳವರೆಗೆ ಮಾತ್ರ ಅನ್ವಯಿಸುತ್ತದೆ.

    • ಮಲಗುವ ಸಮಯ ಮತ್ತು ಎಚ್ಚರಗೊಳ್ಳುವ ಸಮಯದ ವೇಳಾಪಟ್ಟಿಯನ್ನು ಸರಿಹೊಂದಿಸಿ: ನಿಮ್ಮ ಮಲಗುವ ಸಮಯವನ್ನು ಬದಲಾಯಿಸಲು ಮಲಗುವ ಸಮಯದ ಬಟನ್ ಅನ್ನು ಡ್ರ್ಯಾಗ್ ಮಾಡಿ, ನಿಮ್ಮ ಎಚ್ಚರಗೊಳ್ಳುವ ಸಮಯ ರಿಂಗಿಂಗ್ ಅಲಾರಂ ಬಟನ್ ಅನ್ನು ಬದಲಾಯಿಸಲು ಅಥವಾ ಎರಡೂ ಸಮಯವನ್ನು ಏಕಕಾಲದಲ್ಲಿ ಬದಲಾಯಿಸಲು ಐಕಾನ್‌ಗಳ ನಡುವಿನ ಅರ್ಧವೃತ್ತವನ್ನು ಡ್ರ್ಯಾಗ್ ಮಾಡಿ.

    • ಅಲಾರಂ ಆಯ್ಕೆಗಳನ್ನು ಸೆಟ್ ಮಾಡಿ: ಅಲಾರಂ ಅನ್ನು ಆನ್ ಅಥವಾ ಆಫ್ ಮಾಡಿ.

      ಅಲಾರಂ ಆನ್ ಆಗಿರುವಾಗ, ನೀವು ಸೌಂಡ್, ಅದರ ವಾಲ್ಯೂಮ್, ವೈಬ್ರೇಷನ್ ಮತ್ತು ಸ್ನೂಝ್ ಆಯ್ಕೆಯನ್ನು ಆರಿಸಬಹುದು.

      ಗಮನಿಸಿ: ನಿದ್ರೆಯ ವೇಳಾಪಟ್ಟಿಯ ಅಲಾರಂಗಾಗಿ ನೀವು ಹಾಡನ್ನು ಆಯ್ಕೆಮಾಡಲು ಸಾಧ್ಯವಿಲ್ಲ. ಆದರೂ, ನೀವು ಗಡಿಯಾರ ಆ್ಯಪ್‌ನಲ್ಲಿ, ಅಲಾರಂಗಾಗಿ ಹಾಡನ್ನು ಆಯ್ಕೆಮಾಡಬಹುದು.

  6. ನೀವು ಪೂರ್ಣಗೊಳಿಸಿದ ನಂತರ, ಸೇರಿಸಿ ಅಥವಾ ಮುಗಿದಿದೆ ಬಟನ್ ಎಂಬುದನ್ನು ಟ್ಯಾಪ್ ಮಾಡಿ.

    ನೀವು ಮುಗಿದಿದೆ ಬಟನ್ ಅನ್ನು ಟ್ಯಾಪ್ ಮಾಡಿದಾಗ, ಮಾಡಿರುವ ಬದಲಾವಣೆಗಳು ವೇಳಾಪಟ್ಟಿಯಲ್ಲಿನ ಪ್ರತಿ ದಿನಕ್ಕೆ ಅನ್ವಯವಾಗುತ್ತವೆ.

ನಿಮ್ಮ ಮುಂದಿನ ವೇಳಾಪಟ್ಟಿಯನ್ನು ಮಾತ್ರ ಬದಲಾಯಿಸುವುದು

ನಿದ್ರೆಯ ವೇಳಾಪಟ್ಟಿಯಲ್ಲಿ ನೀವು ತಾತ್ಕಾಲಿಕವಾಗಿ ಬದಲಾವಣೆಗಳನ್ನು ಮಾಡಬಹುದು.

  1. ನಿಮ್ಮ iPhoneನಲ್ಲಿ ಆರೋಗ್ಯ ಆ್ಯಪ್‌ಗೆ ಹೋಗಿ.

  2. ಕೆಳಗಿನ ಬಲಭಾಗದಲ್ಲಿರುವ ಹುಡುಕಾಟ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ನಿದ್ರೆ ಎಂಬುದನ್ನು ಟ್ಯಾಪ್ ಮಾಡಿ.

  3. ನಿದ್ರೆ ಎಂಬುದನ್ನು ಟ್ಯಾಪ್ ಮಾಡಿ, ನಿಮ್ಮ ವೇಳಾಪಟ್ಟಿಗಾಗಿ ಕೆಳಕ್ಕೆ ಸ್ಕ್ರೋಲ್ ಮಾಡಿ, ನಂತರ ಎಡಿಟ (ಮುಂದಕ್ಕೆ ಎಂಬುದರ ಕೆಳಗೆ) ಎಂಬುದನ್ನು ಟ್ಯಾಪ್ ಮಾಡಿ.

  4. ನಿಮ್ಮ ಮಲಗುವ ಸಮಯವನ್ನು ಬದಲಾಯಿಸಲು ಮಲಗುವ ಸಮಯದ ಬಟನ್ ಅನ್ನು ಡ್ರ್ಯಾಗ್ ಮಾಡಿ, ನಿಮ್ಮ ಎಚ್ಚರಗೊಳ್ಳುವ ಸಮಯ ರಿಂಗಿಂಗ್ ಅಲಾರಂ ಬಟನ್ ಅನ್ನು ಬದಲಾಯಿಸಲು ಅಥವಾ ಎರಡೂ ಸಮಯವನ್ನು ಏಕಕಾಲದಲ್ಲಿ ಬದಲಾಯಿಸಲು ಐಕಾನ್‌ಗಳ ನಡುವಿನ ಅರ್ಧವೃತ್ತವನ್ನು ಡ್ರ್ಯಾಗ್ ಮಾಡಿ.

  5. ಅಲಾರಂ ಆಯ್ಕೆಗಳನ್ನು ಆರಿಸಿ.

    ಅಲಾರಂ ಆನ್ ಆಗಿರುವಾಗ, ನೀವು ಸೌಂಡ್, ಅದರ ವಾಲ್ಯೂಮ್, ವೈಬ್ರೇಷನ್ ಮತ್ತು ಸ್ನೂಝ್ ಆಯ್ಕೆಯನ್ನು ಆರಿಸಬಹುದು.

  6. ಮುಗಿದಿದೆ ಬಟನ್ ಅನ್ನು ಟ್ಯಾಪ್ ಮಾಡಿ.

ಗಮನಿಸಿ: ನಿಮ್ಮ ಮುಂದಿನ ನಿದ್ರೆಯ ವೇಳಾಪಟ್ಟಿಯ ಅಲಾರಂ ಅನ್ನು ಬದಲಾಯಿಸಲು ನೀವು ಗಡಿಯಾರ ಆ್ಯಪ್ ಅನ್ನು ಸಹ ಬಳಸಬಹುದು.

ನಿಮ್ಮ ಮುಂದಿನ ಎಚ್ಚರಗೊಳ್ಳುವ ಸಮಯದ ನಂತರ, ನಿಮ್ಮ ಸಾಮಾನ್ಯ ವೇಳಾಪಟ್ಟಿ ಪುನಃ ಆರಂಭವಾಗುತ್ತದೆ.

ನಿಮ್ಮ ವೈಂಡ್ ಡೌನ್ ಅವಧಿ, ನಿದ್ರೆಯ ಗೋಲ್ ಮತ್ತು ಮುಂತಾದುವನ್ನು ಬದಲಾಯಿಸುವುದು

  1. ನಿಮ್ಮ iPhoneನಲ್ಲಿ ಆರೋಗ್ಯ ಆ್ಯಪ್‌ಗೆ ಹೋಗಿ.

  2. ಕೆಳಗಿನ ಬಲಭಾಗದಲ್ಲಿರುವ ಹುಡುಕಾಟ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ನಿದ್ರೆ ಎಂಬುದನ್ನು ಟ್ಯಾಪ್ ಮಾಡಿ.

  3. ನಿದ್ರೆ ಎಂಬುದನ್ನು ಟ್ಯಾಪ್ ಮಾಡಿ, ನಿಮ್ಮ ವೇಳಾಪಟ್ಟಿ ಎಂಬಲ್ಲಿಗೆ ಹೋಗಲು ಕೆಳಕ್ಕೆ ಸ್ಕ್ರೋಲ್ ಮಾಡಿ, ನಂತರ ಪೂರ್ಣ ವೇಳಾಪಟ್ಟಿ ಮತ್ತು ಆಯ್ಕೆಗಳು ಎಂಬುದನ್ನು ಟ್ಯಾಪ್ ಮಾಡಿ.

  4. ಹೆಚ್ಚುವರಿ ವಿವರಗಳು ಎಂಬಲ್ಲಿಗೆ ಸ್ಕ್ರೋಲ್ ಮಾಡಿ, ನಂತರ ನಿಮ್ಮ ಬದಲಾವಣೆಗಳನ್ನು ಮಾಡಿ:

    • ವೈಂಡ್ ಡೌನ್ ಅವಧಿ: ವೈಂಡ್ ಡೌನ್ ಎಂಬುದನ್ನು ಟ್ಯಾಪ್ ಮಾಡಿ, ನಂತರ ನಿಮ್ಮ ನಿಗದಿತ ಮಲಗುವ ಸಮಯಕ್ಕಿಂತ ಮೊದಲು ನೀವು ಎಷ್ಟು ನಿಮಿಷಗಳು ಅಥವಾ ಗಂಟೆಗಳನ್ನು ಬಿಡಬೇಕು ಎಂಬುದನ್ನು ಆಯ್ಕೆಮಾಡಿ. ವೈಂಡ್ ಡೌನ್ ಅವಧಿಯ ಆರಂಭದಲ್ಲಿ ನಿಮ್ಮ ನಿದ್ರೆಯ ಫೋಕಸ್ ಆನ್ ಆಗುತ್ತದೆ.

    • ನಿದ್ರೆಯ ಗೋಲ್: ನಿದ್ರೆಯ ಗೋಲ್ ಎಂಬುದನ್ನು ಟ್ಯಾಪ್ ಮಾಡಿ, ನಂತರ ಸಮಯವನ್ನು ಆಯ್ಕೆಮಾಡಿ. ನೀವು ಸೆಟಪ್ ಮಾಡುವ ಯಾವುದೇ ಹೊಸ ವೇಳಾಪಟ್ಟಿಗಳು ನಿಮ್ಮ ಹೊಸ ಗೋಲ್ ಅನ್ನು ಪ್ರತಿಬಿಂಬಿಸುತ್ತವೆ.

    • ನಿದ್ರೆಯ ನೋಟಿಫಿಕೇಷನ್‌ಗಳು: ನಿದ್ರೆಯ ರಿಮೈಂಡರ್‌ಗಳನ್ನು ಅಥವಾ ನಿದ್ರೆಯ ಫಲಿತಾಂಶಗಳನ್ನು ಆನ್ ಅಥವಾ ಆಫ್ ಮಾಡಿ.

      ಗಮನಿಸಿ: ನಿದ್ರೆಯ ಫಲಿತಾಂಶಗಳ ನೋಟಿಫಿಕೇಷನ್‌ಗಳಿಗೆ Apple Watch ಅಥವಾ ಇತರ ನಿದ್ರೆಯ ಟ್ರ್ಯಾಕಿಂಗ್ ಆ್ಯಪ್‌ಗಳು ಮತ್ತು ಹಾರ್ಡ್‌ವೇರ್‌ಗಳಿಂದ ಡೇಟದ ಅಗತ್ಯವಿರುತ್ತದೆ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.