ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPhoneನಲ್ಲಿ ನೀವು ಹಂಚಿಕೊಳ್ಳುವುದನ್ನು ನಿಯಂತ್ರಿಸಿ

ಆ್ಯಪ್‌ಗಳು ನಿಮ್ಮ iPhoneನಲ್ಲಿನ ಏನನ್ನಾದರೂ ಬಳಸಲು ಬಯಸುವ ಮೊದಲ ಬಾರಿ ಅನುಮತಿಯನ್ನು ಕೇಳುತ್ತವೆ. ಯಾವ ಆ್ಯಪ್‌ಗಳು ನಿಮ್ಮ ಡೇಟ, ಸ್ಥಳ, ಕ್ಯಾಮರಾ ಮತ್ತು ಮೈಕ್ರೋಫೋನ್‌ ಅನ್ನು ಆ್ಯಕ್ಸೆಸ್ ಮಾಡಬಹುದು ಎಂಬುದನ್ನು ನೀವು ನಿಯಂತ್ರಿಸಬಹುದು ಮತ್ತು ಭದ್ರತಾ ರಕ್ಷಣೆಗಳನ್ನು ನಿರ್ವಹಿಸಬಹುದು. ನೀವು ಎಷ್ಟು ಹಂಚಿಕೊಳ್ಳಲು ಬಯಸುತ್ತೀರಿ ಎಂಬುದನ್ನು ಬದಲಾಯಿಸಲು, ಸೆಟ್ಟಿಂಗ್ಸ್ ಆ್ಯಪ್‌ಗೆ ಹೋಗಿ, ನಂತರ ಗೌಪ್ಯತೆ ಮತ್ತು ಭದ್ರತೆ ಎಂಬುದನ್ನು ಟ್ಯಾಪ್ ಮಾಡಿ.

ಸ್ಥಳ ಸೇವೆಗಳು ಮತ್ತು ಟ್ರ್ಯಾಕಿಂಗ್ ಸೆಟ್ಟಿಂಗ್ಸ್ ಅನ್ನು ಹೊಂದಿರುವ ಗೌಪ್ಯತೆ ಮತ್ತು ಭದ್ರತೆ ಸ್ಕ್ರೀನ್ ಹಾಗೂ ನಿಮ್ಮ ಡೇಟವನ್ನು ಯಾವ ಆ್ಯಪ್‌ಗಳು ಆ್ಯಕ್ಸೆಸ್ ಮಾಡಬಹುದು ಎಂಬುದನ್ನು ನಿಯಂತ್ರಿಸುವ ಸೆಟ್ಟಿಂಗ್ಸ್.

ಯಾವ ಆ್ಯಪ್‌ಗಳು ನಿಮ್ಮ iPhoneನಲ್ಲಿನ ಮಾಹಿತಿಗೆ ಆ್ಯಕ್ಸೆಸ್ ಹೊಂದಿವೆ ಎಂಬುದನ್ನು ನಿಯಂತ್ರಿಸಿ

ಕೆಲಸಗಳನ್ನು ಹೆಚ್ಚು ವೇಗವಾಗಿ ಮಾಡುವುದಕ್ಕೆ ನಿಮಗೆ ಸಹಾಯ ಮಾಡಲು ಸಂಪರ್ಕ, ಫೋಟೋಸ್ ಮತ್ತು ಕ್ಯಾಲೆಂಡರ್ ರೀತಿಯ ನಿಮ್ಮ iPhone ಆ್ಯಪ್‌ಗಳಲ್ಲಿನ ಮಾಹಿತಿಯನ್ನು ಬಳಸಲು ಥರ್ಡ್ ಪಾರ್ಟಿ ಆ್ಯಪ್‌ಗಳಿಗೆ ನೀವು ಅವಕಾಶ ನೀಡಬಹುದು. ಉದಾಹರಣೆಗೆ, ಸಂದೇಶ ಆ್ಯಪ್ ಒಂದನ್ನು ನೀವು ಬಳಸುತ್ತಿದ್ದು, ಅದೇ ಆ್ಯಪ್ ಅನ್ನು ಬಳಸುವ ಸ್ನೇಹಿತರನ್ನು ಹುಡುಕುವುದಕ್ಕಾಗಿ ನಿಮ್ಮ ಸಂಪರ್ಕಗಳಿಗೆ ಆ್ಯಕ್ಸೆಸ್ ಅನ್ನು ಅದು ವಿನಂತಿಸಬಹುದು. ನೀವು ಯಾವುದೇ ಆ್ಯಪ್‌ನ ಆ್ಯಕ್ಸೆಸ್ ಅನ್ನು ಪ್ರತ್ಯೇಕವಾಗಿ ಆನ್ ಅಥವಾ ಆಫ್ ಮಾಡಬಹುದು.

iPhone ಆ್ಯಪ್‌ಗಳಲ್ಲಿರುವ ಮಾಹಿತಿಗೆ ಆ್ಯಕ್ಸೆಸ್ ಅನ್ನು ನಿಯಂತ್ರಿಸುವುದು ಹೇಗೆ

ಆ್ಯಪ್‌ಗಳೊಂದಿಗೆ ನಿಮ್ಮ iPhone ಸ್ಥಳವನ್ನು ಹಂಚಿಕೊಳ್ಳಲು ಅನುವುಮಾಡಿಕೊಡುವ ಸೆಟ್ಟಿಂಗ್ಸ್ ಅನ್ನು ಹೊಂದಿರುವ ಸ್ಥಳ ಸೇವೆಗಳ ಸ್ಕ್ರೀನ್.

ನಿಮ್ಮ iPhoneನ ಸ್ಥಳವನ್ನು ಯಾವ ಆ್ಯಪ್‌ಗಳು ಬಳಸಬಹುದು ಎಂಬುದನ್ನು ನಿಯಂತ್ರಿಸಿ

ನೀವು ಆ್ಯಪ್‌ಗಳಿಗೆ ನಿಮ್ಮ iPhoneನ ಸ್ಥಳದ ಆ್ಯಕ್ಸೆಸ್ ನೀಡಿದಾಗ, ಮಾರ್ಗ ನಿರ್ದೇಶನಗಳನ್ನು ಪಡೆಯಲು, ತುರ್ತು ಪರಿಸ್ಥಿತಿಯಲ್ಲಿ ಸಹಾಯ ಪಡೆಯಲು ಮತ್ತು ಇನ್ನೂ ಹೆಚ್ಚಿನದನ್ನು ಮಾಡಲು ಆ ಆ್ಯಪ್‌ಗಳು ನಿಮಗೆ ಸಹಾಯ ಮಾಡಬಲ್ಲವು. ಉದಾಹರಣೆಗೆ, ರೈಡ್-ಹಂಚಿಕೆ ಆ್ಯಪ್ ನಿಮ್ಮನ್ನು ಪಿಕಪ್ ಮಾಡಲು ನಿಮ್ಮ ಸ್ಥಳಕ್ಕೆ ಆ್ಯಕ್ಸೆಸ್ ಅನ್ನು ವಿನಂತಿಸಬಹುದು. ಆ್ಯಪ್ ಸ್ಥಳ ಸೇವೆಗಳನ್ನು ಬಳಸುತ್ತಿರುವಾಗ, ಸ್ಟೇಟಸ್ ಬಾರ್‌ನಲ್ಲಿ ಸ್ಥಳ ಸೇವೆಗಳ ಐಕಾನ್ ಕಾಣಿಸಿಕೊಳ್ಳುತ್ತದೆ.

ನಿಮ್ಮ iPhoneನ ಸ್ಥಳದ ಆ್ಯಕ್ಸೆಸ್ ಅನ್ನು ನಿಯಂತ್ರಿಸುವುದು ಹೇಗೆ?

ನಿಮ್ಮ iPhoneನ ಕ್ಯಾಮರಾ, ಮೈಕ್ರೋಫೋನ್ ಮತ್ತು ಇತರ ಭಾಗಗಳನ್ನು ಆ್ಯಪ್‌ಗಳು ಬಳಸಬಹುದೇ ಬೇಡವೇ ಎಂಬುದನ್ನು ನಿಯಂತ್ರಿಸುವ ಸೆಟ್ಟಿಂಗ್ಸ್ ಅನ್ನು ತೋರಿಸುವ ಗೌಪ್ಯತೆ ಮತ್ತು ಭದ್ರತೆ ಸ್ಕ್ರೀನ್.

ನಿಮ್ಮ iPhoneನಲ್ಲಿ ಯಾವ ಆ್ಯಪ್‌ಗಳು ಕ್ಯಾಮರಾ ಮತ್ತು ಮೈಕ್ರೋಫೋನ್‌ಗೆ ಆ್ಯಕ್ಸೆಸ್ ಹೊಂದಿವೆ ಎಂಬುದನ್ನು ನಿಯಂತ್ರಿಸಿ

ಕ್ಯಾಮರಾ ಮತ್ತು ಮೈಕ್ರೋಫೋನ್‌ ಅನ್ನು ಬಳಸಲು ನೀವು ಆ್ಯಪ್‌ಗಳಿಗೆ ಅವಕಾಶ ನೀಡುವ ಮೂಲಕ ಆ ಆ್ಯಪ್‌ಗಳಿಗೆ ನೇರವಾಗಿ ಕಂಟೆಂಟ್ ಅನ್ನು ಅಪ್‌ಲೋಡ್ ಮಾಡುವುದನ್ನು ಸುಲಭಗೊಳಿಸಬಹುದು. ಉದಾಹರಣೆಗೆ, ಸಾಮಾಜಿಕ ನೆಟ್‌ವರ್ಕಿಂಗ್ ಆ್ಯಪ್ ನಿಮ್ಮ ಕ್ಯಾಮರಾವನ್ನು ಬಳಸಲು ಕೇಳಬಹುದು, ಇದರಿಂದ ನೀವು ಆ ಆ್ಯಪ್‌ಗೆ ಚಿತ್ರಗಳನ್ನು ತೆಗೆದುಕೊಳ್ಳಬಹುದು ಮತ್ತು ಪೋಸ್ಟ್ ಮಾಡಬಹುದು. ಒಂದು ಆ್ಯಪ್ ಕ್ಯಾಮರಾವನ್ನು ಬಳಸುವ ಪ್ರತಿಬಾರಿ (ಕ್ಯಾಮರಾ ಮತ್ತು ಮೈಕ್ರೋಫೋನ್‌ ಅನ್ನು ಒಟ್ಟಿಗೆ ಬಳಸುವ ಸಂದರ್ಭವನ್ನು ಸೇರಿದಂತೆ), ಹಸಿರು ಬಣ್ಣದ ಇಂಡಿಕೇಟರ್ ಕಾಣಿಸಿಕೊಳ್ಳುತ್ತದೆ.

ಕ್ಯಾಮರಾ ಮತ್ತು ಮೈಕ್ರೋಫೋನ್‌ನ ಆ್ಯಕ್ಸೆಸ್ ಅನ್ನು ನಿಯಂತ್ರಿಸುವುದು ಹೇಗೆ

ಇತರ ಕಂಪನಿಗಳ ಮಾಲೀಕತ್ವದ ವೆಬ್‌ಸೈಟ್‌ಗಳು ಅಥವಾ ಆ್ಯಪ್‌ಗಳಾದ್ಯಂತ ನಿಮ್ಮನ್ನು ಟ್ರ್ಯಾಕ್ ಮಾಡಲು ಆ್ಯಪ್‌ಗಳು ವಿನಂತಿಸಬಹುದೇ ಬೇಡವೇ ಎಂಬುದನ್ನು ನಿಯಂತ್ರಿಸುವ ಸೆಟ್ಟಿಂಗ್ ಇರುವ ಟ್ರ್ಯಾಕಿಂಗ್ ಸ್ಕ್ರೀನ್.

ವೆಬ್‌ಸೈಟ್‌ಗಳು ಅಥವಾ ಇತರ ಆ್ಯಪ್‌ಗಳಲ್ಲಿ ಯಾವ ಆ್ಯಪ್‌ಗಳು ನಿಮ್ಮನ್ನು ಅಥವಾ ನಿಮ್ಮ iPhone ಅನ್ನು ಟ್ರ್ಯಾಕ್ ಮಾಡಬಹುದು ಎಂಬುದನ್ನು ನಿಯಂತ್ರಿಸಿ

ಇತರ ಕಂಪನಿಗಳ ಮಾಲೀಕತ್ವದ ವೆಬ್‌ಸೈಟ್‌ಗಳು ಅಥವಾ ಆ್ಯಪ್‌ಗಳಾದ್ಯಂತ ನಿಮ್ಮನ್ನು ಅಥವಾ ನಿಮ್ಮ iPhone ಅನ್ನು ಟ್ರ್ಯಾಕ್ ಮಾಡುವ ಮೊದಲು ಎಲ್ಲಾ ಆ್ಯಪ್‌ಗಳು ನಿಮ್ಮ ಅನುಮತಿಯನ್ನು ಕೇಳುವ ಅಗತ್ಯವಿರುತ್ತದೆ (ಉದಾಹರಣೆಗೆ, ಜಾಹೀರಾತು ಉದ್ದೇಶಗಳಿಗಾಗಿ ಅಥವಾ ನಿಮ್ಮ ಮಾಹಿತಿಯನ್ನು ಡೇಟ ಬ್ರೋಕರ್‌ಗಳೊಂದಿಗೆ ಹಂಚಿಕೊಳ್ಳಲು). ನೀವು ಆ್ಯಪ್ ಒಂದಕ್ಕೆ ಅನುಮತಿಯನ್ನು ನೀಡಿದ ಅಥವಾ ನಿರಾಕರಿಸಿದ ಬಳಿಕ, ನಂತರದ ಸಮಯದಲ್ಲಿ ನೀವು ಅನುಮತಿಯನ್ನು ಬದಲಾಯಿಸಬಹುದು. ಎಲ್ಲಾ ಆ್ಯಪ್‌ಗಳನ್ನು ಅನುಮತಿ ಕೋರದಂತೆಯೂ ನೀವು ನಿಲ್ಲಿಸಬಹುದು.

ಆ್ಯಪ್ ಟ್ರ್ಯಾಕಿಂಗ್ ಅನುಮತಿಗಳನ್ನು ನಿಯಂತ್ರಿಸುವುದು ಹೇಗೆ

ಆ್ಯಪ್‌ಗಳ ‘ಡೇಟ ಮತ್ತು ಸೆನ್ಸರ್ ಆ್ಯಕ್ಸೆಸ್’ ವರ್ಗದ ಬಗೆಗಿನ ಮಾಹಿತಿಯನ್ನು ಮತ್ತು ಆ್ಯಪ್‌ಗಳ ‘ಆ್ಯಪ್ ನೆಟ್‌ವರ್ಕ್ ಚಟುವಟಿಕೆ’ ವರ್ಗದ ಬಗೆಗಿನ ಮಾಹಿತಿಯನ್ನು ಪಟ್ಟಿ ಮಾಡುವ ಆ್ಯಪ್ ಗೌಪ್ಯತೆ ವರದಿ.

ನೀವು ಆ್ಯಪ್‌ಗಳಿಗೆ ನೀಡುವ ಅನುಮತಿಗಳನ್ನು ಅವು ಹೇಗೆ ಬಳಸುತ್ತಿವೆ ಎಂಬುದನ್ನು ಪರಿಶೀಲಿಸಿ

ಆ್ಯಪ್ ಗೌಪ್ಯತೆ ವರದಿಯೊಂದನ್ನು ಪರಿಶೀಲಿಸುವ ಮೂಲಕ ನೀವು ಆ್ಯಪ್‌ಗಳಿಗೆ ನೀಡಿದ ಅನುಮತಿಗಳನ್ನು ಅವುಗಳು ಹೇಗೆ ಬಳಸುತ್ತಿವೆ ಎಂಬುದನ್ನು ಮತ್ತು ಅವುಗಳ ನೆಟ್‌ವರ್ಕ್ ಚಟುವಟಿಕೆಯನ್ನು ನೀವು ನೋಡಬಹುದು.

ಆ್ಯಪ್ ಗೌಪ್ಯತೆ ವರದಿಯನ್ನು ವೀಕ್ಷಿಸುವುದು ಹೇಗೆ

ನಿಮ್ಮ ಮಾಹಿತಿಯನ್ನು Apple ಹೇಗೆ ರಕ್ಷಿಸುತ್ತದೆ ಎಂಬುದರ ಕುರಿತು ಇನ್ನಷ್ಟು ತಿಳಿಯಲು, ಗೌಪ್ಯತೆ ವೆಬ್‌ಸೈಟ್ಗೆ ಹೋಗಿ. Apple ತನ್ನ ಪ್ಲ್ಯಾಟ್‌ಫಾರ್ಮ್‌ಗಳ ಮೂಲಭೂತ ಅಂಶಗಳಿಗೆ ಭದ್ರತೆಯನ್ನು ಹೇಗೆ ವಿನ್ಯಾಸಗೊಳಿಸುತ್ತದೆ ಎಂಬುದನ್ನು ತಿಳಿಯಲು, Apple ಪ್ಲ್ಯಾಟ್‌ಫಾರ್ಮ್ ಭದ್ರತೆಯ ಮಾರ್ಗದರ್ಶಿ ಎಂಬುದನ್ನು ನೋಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.