ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPhoneನಲ್ಲಿ VoiceOver ಜೆಸ್ಚರ್‌ಗಳನ್ನು ಬಳಸುವುದು

VoiceOver ಆನ್ ಆಗಿರುವಾಗ, ಸ್ಟ್ಯಾಂಡರ್ಡ್ ಟಚ್‌ಸ್ಕ್ರೀನ್ ಜೆಸ್ಚರ್‌ಗಳು ಭಿನ್ನ ಎಫೆಕ್ಟ್‌ಗಳನ್ನು ಹೊಂದಿರುತ್ತವೆ ಮತ್ತು ಹೆಚ್ಚುವರಿ ಜೆಸ್ಚರ್‌ಗಳು ನಿಮಗೆ ಸ್ಕ್ರೀನ್ ಸುತ್ತಲೂ ಮೂವ್ ಮಾಡಲು ಮತ್ತು ಐಟಮ್‌ಗಳನ್ನು ಪ್ರತ್ಯೇಕವಾಗಿ ನಿಯಂತ್ರಿಸಲು ಅವಕಾಶ ಮಾಡಿಕೊಡುತ್ತವೆ. VoiceOver ಜೆಸ್ಚರ್‌ಗಳಲ್ಲಿ ಎರಡು, ಮೂರು ಮತ್ತು ನಾಲ್ಕು-ಬೆರಳುಗಳ ಟ್ಯಾಪ್‌ಗಳು ಮತ್ತು ಸ್ವೈಪ್‌ಗಳು ಸೇರಿವೆ.

VoiceOver ಜೆಸ್ಚರ್‌ಗಳನ್ನು ನಿರ್ವಹಿಸಲು ನೀವು ವಿವಿಧ ಕಾರ್ಯವಿಧಾನಗಳನ್ನು ಬಳಸಬಹುದು. ಉದಾಹರಣೆಗೆ, ಒಂದು ಕೈಯಲ್ಲಿನ ಎರಡು ಬೆರಳುಗಳನ್ನು, ಎರಡೂ ಕೈಗಳ ಒಂದೊಂದು ಬೆರಳನ್ನು ಅಥವಾ ನಿಮ್ಮ ಹೆಬ್ಬೆರಳುಗಳನ್ನು ಬಳಸಿ ಎರಡು ಬೆರಳುಗಳ ಟ್ಯಾಪ್ ಮಾಡಬಹುದು. ಐಟಮ್ ಒಂದನ್ನು ಆಯ್ಕೆಮಾಡಿ ಡಬಲ್ ಟ್ಯಾಪ್ ಮಾಡುವ ಬದಲು, ನೀವು ಸ್ಪ್ಲಿಟ್-ಟ್ಯಾಪ್ ಜೆಸ್ಚರ್ ಅನ್ನು ಬಳಸಬಹುದು—ಒಂದು ಬೆರಳಿನಿಂದ ಐಟಮ್ ಅನ್ನು ಒತ್ತಿ ಹಿಡಿದುಕೊಳ್ಳಿ, ನಂತರ ಇನ್ನೊಂದು ಬೆರಳಿನಿಂದ ಸ್ಕ್ರೀನ್ ಅನ್ನು ಟ್ಯಾಪ್ ಮಾಡಿ.

ಸ್ಕ್ರೀನ್ ಮೇಲಿನ ಐಟಮ್‌ಗಳನ್ನು ಎಕ್ಸ್‌ಪ್ಲೋರ್ ಮಾಡುವುದು ಮತ್ತು ಮಾತಿನಲ್ಲಿ ಹೇಳುವುದು

ಸ್ಕ್ರೀನ್ ಅನ್ನು ಎಕ್ಸ್‌ಪ್ಲೋರ್ ಮಾಡಲು, ಅದರ ಮೇಲೆ ನಿಮ್ಮ ಬೆರಳನ್ನು ಡ್ರ್ಯಾಗ್ ಮಾಡಿ. ನೀವು ಸ್ಪರ್ಶಿಸುವ ಪ್ರತಿಯೊಂದು ಐಟಮ್‌ನ ಹೆಸರನ್ನು VoiceOver ಮಾತಿನಲ್ಲಿ ಹೇಳುತ್ತದೆ.

ಅನುಕ್ರಮವಾಗಿ, ಮೇಲಿನಿಂದ ಕೆಳಕ್ಕೆ ಮತ್ತು ಎಡದಿಂದ ಬಲಕ್ಕೆ, ಸ್ಕ್ರೀನ್ ಅನ್ನು ಎಕ್ಸ್‌ಪ್ಲೋರ್ ಮಾಡಲು ಸಹ ನೀವು VoiceOver ಜೆಸ್ಚರ್‌ಗಳನ್ನು ಬಳಸಬಹುದು.

ಆ್ಯಕ್ಷನ್

ಜೆಸ್ಚರ್

ಐಟಮ್ ಅನ್ನು ಆಯ್ಕೆಮಾಡಿ ಮತ್ತು ಮಾತಿನಲ್ಲಿ ಹೇಳಿ

ಐಟಮ್ ಅನ್ನು ಟ್ಯಾಪ್ ಮಾಡಿ ಅಥವಾ ಸ್ಪರ್ಶಿಸಿ

ಮುಂದಿನ ಐಟಮ್ ಅನ್ನು ಆಯ್ಕೆಮಾಡಿ

ಬಲಕ್ಕೆ ಸ್ವೈಪ್ ಮಾಡಿ

ಹಿಂದಿನ ಐಟಮ್ ಅನ್ನು ಆಯ್ಕೆಮಾಡಿ

ಎಡಕ್ಕೆ ಸ್ವೈಪ್ ಮಾಡಿ

ಐಟಮ್‌ಗಳ ಗುಂಪಿಗೆ ಮೂವ್ ಆಗಿ

ಎರಡು-ಬೆರಳಿನಿಂದ ಬಲಕ್ಕೆ ಸ್ವೈಪ್ ಮಾಡಿ

ಐಟಮ್‌ಗಳ ಗುಂಪಿನಿಂದ ಹೊರಗೆ ಮೂವ್ ಆಗಿ

ಎರಡು-ಬೆರಳಿನಿಂದ ಎಡಕ್ಕೆ ಸ್ವೈಪ್ ಮಾಡಿ

ಸ್ಕ್ರೀನ್ ಮೇಲಿನ ಮೊದಲ ಐಟಮ್ ಅನ್ನು ಆಯ್ಕೆಮಾಡಿ

ಸ್ಕ್ರೀನ್‌ನ ಮೇಲ್ಭಾಗದ ಹತ್ತಿರ ನಾಲ್ಕು ಬೆರಳಿನಿಂದ ಟ್ಯಾಪ್ ಮಾಡಿ

ಸ್ಕ್ರೀನ್ ಮೇಲಿನ ಕೊನೆಯ ಐಟಮ್ ಅನ್ನು ಆಯ್ಕೆಮಾಡಿ

ಸ್ಕ್ರೀನ್‌ನ ಕೆಳಭಾಗದ ಹತ್ತಿರ ನಾಲ್ಕು ಬೆರಳಿನಿಂದ ಟ್ಯಾಪ್ ಮಾಡಿ

ಮೇಲಿನಿಂದ ಸಂಪೂರ್ಣ ಸ್ಕ್ರೀನ್‌ನಲ್ಲಿ ಕಾಣಿಸುವುದನ್ನು ಮಾತನಾಡಿ

ಎರಡು ಬೆರಳಿನಿಂದ ಮೇಲಕ್ಕೆ ಸ್ವೈಪ್ ಮಾಡಿ

ಆಯ್ಕೆಮಾಡಿದ ಐಟಮ್‌ನಿಂದ ಸಂಪೂರ್ಣ ಸ್ಕ್ರೀನ್‌ನಲ್ಲಿ ಕಾಣಿಸುವುದನ್ನು ಮಾತನಾಡಿ

ಎರಡು ಬೆರಳಿನಿಂದ ಕೆಳಕ್ಕೆ ಸ್ವೈಪ್ ಮಾಡಿ

ವಿರಾಮಗೊಳಿಸಿ ಅಥವಾ ಮಾತನಾಡುವುದನ್ನು ಮುಂದುವರಿಸಿ

ಎರಡು-ಬೆರಳುಗಳ ಟ್ಯಾಪ್

ಪಟ್ಟಿಯೊಳಗಿನ ಸ್ಥಾನ ಅಥವಾ ಪಠ್ಯವನ್ನು ಆಯ್ಕೆಮಾಡಲಾಗಿದೆಯೇ ಇಲ್ಲವೇ ಎಂಬಂತಹ ಹೆಚ್ಚುವರಿ ಮಾಹಿತಿಯನ್ನು ಮಾತಿನಲ್ಲಿ ಹೇಳಿ

ಮೂರು-ಬೆರಳಿನಿಂದ ಟ್ಯಾಪ್

ನ್ಯಾವಿಗೇಷನ್ ಶೈಲಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ, ಫ್ಲ್ಯಾಟ್ ಅಥವಾ ಗುಂಪು ಮಾಡಲಾದ ನ್ಯಾವಿಗೇಷನ್ ಅನ್ನು ಬಳಸುವುದು ನೋಡಿ.

ಮೇಲಕ್ಕೆ, ಕೆಳಕ್ಕೆ, ಎಡಕ್ಕೆ ಮತ್ತು ಬಲಕ್ಕೆ ಸ್ಕ್ರೋಲ್ ಮಾಡುವುದು

ಮತ್ತೊಂದು ಪುಟಕ್ಕೆ ಮೂವ್ ಆಗಲು VoiceOver ಜೆಸ್ಚರ್‌ಗಳನ್ನು ಬಳಸಿ.

ಆ್ಯಕ್ಷನ್

ಜೆಸ್ಚರ್

ಒಂದು ಪುಟ ಮೇಲಕ್ಕೆ ಸ್ಕ್ರೋಲ್ ಮಾಡಿ

ಮೂರು ಬೆರಳಿನಿಂದ ಕೆಳಕ್ಕೆ ಸ್ವೈಪ್ ಮಾಡಿ

ಒಂದು ಪುಟ ಕೆಳಕ್ಕೆ ಸ್ಕ್ರೋಲ್ ಮಾಡಿ

ಮೂರು ಬೆರಳಿನಿಂದ ಮೇಲಕ್ಕೆ ಸ್ವೈಪ್ ಮಾಡಿ

ಒಂದು ಪುಟ ಎಡಕ್ಕೆ ಸ್ಕ್ರೋಲ್ ಮಾಡಿ

ಮೂರು-ಬೆರಳಿನಿಂದ ಬಲಕ್ಕೆ ಸ್ವೈಪ್ ಮಾಡಿ

ಒಂದು ಪುಟ ಬಲಕ್ಕೆ ಸ್ಕ್ರೋಲ್ ಮಾಡಿ

ಮೂರು-ಬೆರಳಿನಿಂದ ಎಡಕ್ಕೆ ಸ್ವೈಪ್ ಮಾಡಿ

ಒಂದು ಐಟಮ್‌ನ ಮೇಲೆ ಆ್ಯಕ್ಷನ್ ನಿರ್ವಹಿಸುವುದು

ಒಂದು ಐಟಮ್‌ನ ಮೇಲೆ ಆ್ಯಕ್ಷನ್‌ಗಳನ್ನು ನಿರ್ವಹಿಸಲು VoiceOver ಜೆಸ್ಚರ್‌ಗಳನ್ನು ಬಳಸಿ.

ಆ್ಯಕ್ಷನ್

ಜೆಸ್ಚರ್

ಒಂದು ಐಟಮ್ ಅನ್ನು ಆಯ್ಕೆಮಾಡಿ

ಟ್ಯಾಪ್

ಆಯ್ಕೆಮಾಡಿದ ಐಟಮ್ ಅನ್ನು ಸಕ್ರಿಯಗೊಳಿಸಿ

ಡಬಲ್ ಟ್ಯಾಪ್

ಐಟಮ್ ಅನ್ನು ಒತ್ತಿ ಹಿಡಿದುಕೊಳ್ಳಿ (ದೀರ್ಘವಾಗಿ ಒತ್ತಿ)

ಟ್ರಿಪಲ್ ಟ್ಯಾಪ್

ಸ್ಲೈಡರ್ ಅನ್ನು ಡ್ರ್ಯಾಗ್ ಮಾಡಿ

ಸ್ಲೈಡರ್ ಅನ್ನು ಆಯ್ಕೆಮಾಡಲು ಅದನ್ನು ಟ್ಯಾಪ್ ಮಾಡಿ, ನಂತರ ಒಂದು ಬೆರಳಿನಿಂದ ಮೇಲಕ್ಕೆ ಅಥವಾ ಕೆಳಕ್ಕೆ ಸ್ವೈಪ್ ಮಾಡಿ; ಅಥವಾ ಎರಡು ಬಾರಿ ಟ್ಯಾಪ್ ಮಾಡಿ ಮತ್ತು ನೀವು ಕ್ರಮೇಣವಾಗಿ ಏರುವ ಮೂರು ಟೋನ್‌ಗಳನ್ನು ಕೇಳುವವರೆಗೆ ಸ್ಲೈಡರ್ ಅನ್ನು ಹಿಡಿದುಕೊಳ್ಳಿ, ನಂತರ ಸ್ಲೈಡರ್ ಅನ್ನು ಡ್ರ್ಯಾಗ್ ಮಾಡಿ

ಪ್ರಸ್ತುತ ಆ್ಯಕ್ಷನ್ ಅನ್ನು ಪ್ರಾರಂಭಿಸಿ ಅಥವಾ ನಿಲ್ಲಿಸಿ (ಉದಾಹರಣೆಗೆ, ಸಂಗೀತ ಅಥವಾ ವೀಡಿಯೊವನ್ನು ಪ್ಲೇ ಮಾಡಿ ಅಥವಾ ವಿರಾಮಗೊಳಿಸಿ, ಕ್ಯಾಮರಾದಲ್ಲಿ ಫೋಟೋ ತೆಗೆದುಕೊಳ್ಳಿ, ರೆಕಾರ್ಡಿಂಗ್ ಅನ್ನು ಪ್ರಾರಂಭಿಸಿ ಅಥವಾ ನಿಲ್ಲಿಸಿ, ಸ್ಟಾಪ್‌ವಾಚ್ ಅನ್ನು ಪ್ರಾರಂಭಿಸಿ ಅಥವಾ ನಿಲ್ಲಿಸಿ)

ಎರಡು ಬೆರಳಿನಿಂದ ಡಬಲ್ ಟ್ಯಾಪ್ ಮಾಡಿ

ಅಲರ್ಟ್ ಅನ್ನು ವಜಾಗೊಳಿಸಿ ಅಥವಾ ಹಿಂದಿನ ಸ್ಕ್ರೀನ್‌ಗೆ ಹಿಂತಿರುಗಿ

ಎರಡು ಬೆರಳುಗಳ ಸ್ಕ್ರಬ್ (ಎರಡು ಬೆರಳುಗಳನ್ನು “z” ಆಕಾರದಲ್ಲಿ ಮೂರು ಬಾರಿ ವೇಗವಾಗಿ ಹಿಂದಕ್ಕೂ ಮುಂದಕ್ಕೂ ಸರಿಸಿ)

ಐಟಮ್ ಅನ್ನು ಹುಡುಕುವುದು ಸುಲಭವಾಗುವಂತೆ ಅದರ ಲೇಬಲ್ ಅನ್ನು ಎಡಿಟ್ ಮಾಡಿ

ಎರಡು ಬೆರಳಿನಿಂದ ಡಬಲ್ ಟ್ಯಾಪ್ ಮಾಡಿ ಮತ್ತು ಹಿಡಿದುಕೊಳ್ಳಿ

ಸ್ಕ್ರೀನ್‌ನ ಮೇಲಿನ ಅರ್ಧಭಾಗವನ್ನು ಕಡಿಮೆ ಮಾಡಿ

ಸ್ಕ್ರೀನ್‌ನ ಕೆಳಗಿನಿಂದ ಒಂದು ಬೆರಳು ಬಳಸಿ ಮೇಲಕ್ಕೆ ಸ್ವೈಪ್ ಮಾಡಿ, ನಂತರ, ನಿಮ್ಮ ಬೆರಳನ್ನು ಎತ್ತದೆಯೇ ಕೆಳಕ್ಕೆ ಸ್ವೈಪ್ ಮಾಡಿ

ಸಲಹೆ: ಐಟಮ್ ಅನ್ನು ಆಯ್ಕೆಮಾಡುವ ಮತ್ತು ಅದನ್ನು ಸಕ್ರಿಯಗೊಳಿಸಲು ಡಬಲ್ ಟ್ಯಾಪ್ ಮಾಡುವುದಕ್ಕೆ ಪರ್ಯಾಯವಾಗಿ, ಐಟಮ್ ಅನ್ನು ಒಂದು ಬೆರಳಿನಿಂದ ಒತ್ತಿ ಹಿಡಿದುಕೊಳ್ಳಿ, ನಂತರ ಇನ್ನೊಂದು ಬೆರಳಿನಿಂದ ಸ್ಕ್ರೀನ್ ಅನ್ನು ಟ್ಯಾಪ್ ಮಾಡಿ.

VoiceOver ಅನ್ನು ನಿಯಂತ್ರಿಸಲು ಜೆಸ್ಚರ್‌ಗಳನ್ನು ಬಳಸುವುದು

VoiceOver ಅನ್ನು ನಿಯಂತ್ರಿಸಲು ಈ ಜೆಸ್ಚರ್‌ಗಳನ್ನು ಬಳಸಿ.

ಆ್ಯಕ್ಷನ್

ಜೆಸ್ಚರ್

VoiceOver ಅನ್ನು ಮ್ಯೂಟ್ ಅಥವಾ ಅನ್‌ಮ್ಯೂಟ್ ಮಾಡಿ

ಮೂರು ಬೆರಳಿನಿಂದ ಡಬಲ್ ಟ್ಯಾಪ್ ಮಾಡಿ.

VoiceOver ಮತ್ತು ಝೂಮ್ ಎರಡನ್ನೂ ಆನ್ ಮಾಡಿದ್ದರೆ, ಮೂರು-ಬೆರಳುಗಳಿಂದ ಮೂರು ಬಾರಿ ಟ್ಯಾಪ್ ಮಾಡುವ ಜೆಸ್ಟರ್ ಅನ್ನು ಬಳಸಿ.

ಸ್ಕ್ರೀನ್ ಕರ್ಟನ್ ಅನ್ನು ಆನ್ ಅಥವಾ ಆಫ್ ಮಾಡಿ

(ಸ್ಕ್ರೀನ್ ಕರ್ಟನ್ ಆನ್ ಆಗಿರುವಾಗ, ಡಿಸ್‌ಪ್ಲೇ ಕಪ್ಪು ಬಣ್ಣದ್ದಾಗಿದ್ದರೂ ಮತ್ತು ಅದು ಆಫ್ ಆಗಿರುವಂತೆ ಕಂಡು ಬಂದರೂ ಸ್ಕ್ರೀನ್ ಕಂಟೆಂಟ್‌ಗಳು ಸಕ್ರಿಯವಾಗಿರುತ್ತವೆ.)

ಮೂರು-ಬೆರಳಿನಿಂದ ಟ್ರಿಪಲ್ ಟ್ಯಾಪ್ ಮಾಡಿ.

VoiceOver ಮತ್ತು ಝೂಮ್ ಎರಡನ್ನೂ ಆನ್ ಮಾಡಿದ್ದರೆ, ಮೂರು-ಬೆರಳುಗಳಿಂದ ನಾಲ್ಕು ಬಾರಿ ಟ್ಯಾಪ್ ಮಾಡುವ ಜೆಸ್ಚರ್ ಅನ್ನು ಬಳಸಿ.

ಸ್ಟ್ಯಾಂಡರ್ಡ್ ಜೆಸ್ಚರ್ ಅನ್ನು ಬಳಸಿ

ಡಬಲ್ ಟ್ಯಾಪ್ ಮಾಡಿ ಮತ್ತು ಕ್ರಮೇಣವಾಗಿ ಏರುವ ಮೂರು ಟೋನ್‌ಗಳನ್ನು ಕೇಳುವವರೆಗೆ ನಿಮ್ಮ ಬೆರಳನ್ನು ಸ್ಕ್ರೀನ್ ಮೇಲೆ ಹಿಡಿದುಕೊಳ್ಳಿ, ನಂತರ ಜೆಸ್ಚರ್ ಮಾಡಿ. ನೀವು ನಿಮ್ಮ ಬೆರಳನ್ನು ಎತ್ತಿದಾಗ, VoiceOver ಜೆಸ್ಚರ್‌ಗಳು ಪುನರಾರಂಭಗೊಳ್ಳುತ್ತವೆ.

ಉದಾಹರಣೆಗೆ, ವಾಲ್ಯೂಮ್ ಸ್ಲೈಡರ್ ಅನ್ನು ಮೇಲಕ್ಕೆ ಮತ್ತು ಕೆಳಕ್ಕೆ ಸ್ವೈಪ್ ಮಾಡುವ ಬದಲು ನಿಮ್ಮ ಬೆರಳಿನಿಂದ ಡ್ರ್ಯಾಗ್ ಮಾಡಲು, ಸ್ಲೈಡರ್ ಅನ್ನು ಆಯ್ಕೆಮಾಡಿ, ಡಬಲ್ ಟ್ಯಾಪ್ ಮಾಡಿ ಹಿಡಿದುಕೊಳ್ಳಿ, ಮೂರು ಟೋನ್‌ಗಳಿಗಾಗಿ ನಿರೀಕ್ಷಿಸಿ, ನಂತರ ಎಡಕ್ಕೆ ಅಥವಾ ಬಲಕ್ಕೆ ಸ್ಲೈಡ್ ಮಾಡಿ.

ಐಟಮ್ ಚೂಸರ್ ಅನ್ನು ತೆರೆಯಿರಿ

ಎರಡು-ಬೆರಳಿನಿಂದ ಮೂರು ಬಾರಿ ಟ್ಯಾಪ್ ಮಾಡಿ.

ಐಟಮ್‌ಗಳ ಪಟ್ಟಿಯನ್ನು ತ್ವರಿತವಾಗಿ ಮೂವ್ ಮಾಡಲು, ಹುಡುಕಾಟ ಫೀಲ್ಡ್‌ನಲ್ಲಿ ಹೆಸರನ್ನು ಟೈಪ್ ಮಾಡಿ, ಪಟ್ಟಿಯನ್ನು ವರ್ಣಮಾಲೆಯ ಪ್ರಕಾರವಾಗಿ ಮೂವ್ ಮಾಡಲು ಬಲಕ್ಕೆ ಅಥವಾ ಎಡಕ್ಕೆ ಸ್ವೈಪ್ ಮಾಡಿ ಅಥವಾ ಪಟ್ಟಿಯ ಬಲಭಾಗದಲ್ಲಿರುವ ಟೇಬಲ್ ಇಂಡೆಕ್ಸ್ ಅನ್ನು ಟ್ಯಾಪ್ ಮಾಡಿ ಮತ್ತು ಮೇಲಕ್ಕೆ ಅಥವಾ ಕೆಳಕ್ಕೆ ಸ್ವೈಪ್ ಮಾಡಿ. ಐಟಮ್ ಹೆಸರನ್ನು ಬರೆಯುವ ಮೂಲಕ ಅದನ್ನು ಆಯ್ಕೆಮಾಡಲು ನೀವು ಕೈಬರಹವನ್ನು ಸಹ ಬಳಸಬಹುದು. ನೀವು ಪಠ್ಯವನ್ನು ನಮೂದಿಸದೇ ಇರುವಾಗ, ನೀವು ಸ್ಕ್ರೀನ್ ಮೇಲೆ ನೇರವಾಗಿ ಬ್ರೇಲ್ ಅನ್ನು ಟೈಪ್ ಮಾಡಲು ಬ್ರೇಲ್ ಸ್ಕ್ರೀನ್ ಇನ್‌ಪುಟ್ ಅನ್ನು ಬಳಸಿದರೆ, ನೀವು ಐಟಮ್ ಅನ್ನು ಹುಡುಕಲು ಟೈಪ್ ಮಾಡಬಹುದು.

ಏನನ್ನೂ ಆಯ್ಕೆಮಾಡದೆ ಐಟಮ್ ಚೂಸರ್ ಅನ್ನು ವಜಾಗೊಳಿಸಲು, ಎರಡು ಬೆರಳುಗಳ ಸ್ಕ್ರಬ್ ಮಾಡಿ (ಎರಡು ಬೆರಳುಗಳನ್ನು “z” ಆಕಾರದಲ್ಲಿ ಮೂರು ಬಾರಿ ವೇಗವಾಗಿ ಹಿಂದಕ್ಕೂ ಮುಂದಕ್ಕೂ ಸರಿಸಿ).

VoiceOver ತ್ವರಿತ ಸೆಟ್ಟಿಂಗ್ಸ್ ಅನ್ನು ತೆರೆಯಿರಿ

ಎರಡು ಬೆರಳುಗಳಿಂದ ನಾಲ್ಕು ಬಾರಿ ಟ್ಯಾಪ್ ಮಾಡಿ.

ಲೈವ್ ಗುರುತಿಸುವಿಕೆಯನ್ನು ಪ್ರಾರಂಭಿಸಿ ಅಥವಾ ನಿಲ್ಲಿಸಿ

ನಾಲ್ಕು ಬೆರಳಿನಿಂದ ಮೂರು ಬಾರಿ ಟ್ಯಾಪ್ ಮಾಡಿ. VoiceOver ಮೂಲಕ ನಿಮ್ಮ ಸುತ್ತಮುತ್ತಲಿನ ಲೈವ್ ವಿವರಣೆಗಳನ್ನು ಪಡೆಯಿರಿ ಎಂಬುದನ್ನು ನೋಡಿ.

VoiceOver ರೋಟರ್ ಬಳಸುವುದು

ನೀವು ಆನ್‌ಸ್ಕ್ರೀನ್ ರೋಟರ್ ಅನ್ನು VoiceOver ಸೆಟ್ಟಿಂಗ್ಸ್ ಅನ್ನು ಬದಲಾಯಿಸಲು, ಸ್ಕ್ರೀನ್ ಮೇಲೆ ಒಂದು ಐಟಮ್‌ನಿಂದ ಮುಂದಿನ ಐಟಮ್‌ಗೆ ಹೋಗಲು, ಬ್ರೇಲ್ ಸ್ಕ್ರೀನ್ ಇನ್‌ಪುಟ್ ಅಥವಾ ಕೈಬರಹದಂತಹ ವಿಶೇಷ ಇನ್‌ಪುಟ್ ವಿಧಾನಗಳನ್ನು ಆಯ್ಕೆಮಾಡಲು ಬಳಸಬಹುದು. ರೋಟರ್ ಬಳಸಿಕೊಂಡು VoiceOver ಅನ್ನು ನಿಯಂತ್ರಿಸಿ ಎಂಬುದನ್ನು ನೋಡಿ.

ನೀವು ರೋಟರ್ ಮೂಲಕ ಈ ಜೆಸ್ಚರ್‌ಗಳನ್ನು ಬಳಸಬಹುದು.

ಆ್ಯಕ್ಷನ್

ಜೆಸ್ಚರ್

ರೋಟರ್ ಸೆಟ್ಟಿಂಗ್ ಅನ್ನು ಆರಿಸಿ

ಎರಡು ಬೆರಳುಗಳಿಂದ ತಿರುಗಿಸುವುದು

ಹಿಂದಿನ ಐಟಮ್‌ಗೆ ಮೂವ್ ಆಗಿ ಅಥವಾ ಹೆಚ್ಚಿಸಿ (ರೋಟರ್ ಸೆಟ್ಟಿಂಗ್ ಅನ್ನು ಅವಲಂಬಿಸಿ)

ಮೇಲಕ್ಕೆ ಸ್ವೈಪ್ ಮಾಡಿ

ಮುಂದಿನ ಐಟಮ್‌ಗೆ ಮೂವ್ ಆಗಿ ಅಥವಾ ಕಡಿಮೆ ಮಾಡಿ (ರೋಟರ್ ಸೆಟ್ಟಿಂಗ್ ಅನ್ನು ಅವಲಂಬಿಸಿ)

ಕೆಳಕ್ಕೆ ಸ್ವೈಪ್ ಮಾಡಿ

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.