ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPhone ಅನ್ನು ನಿಶ್ಯಬ್ದಗೊಳಿಸಿ

ಬಟನ್ ಒತ್ತುವ ಮೂಲಕ ಅಥವಾ ಸ್ವಿಚ್ ಅನ್ನು ಫ್ಲಿಪ್ ಮಾಡುವ ಮೂಲಕ, ನಿಮ್ಮ iPhone ಅನ್ನು ನೀವು ತ್ವರಿತವಾಗಿ ನಿಶ್ಯಬ್ದಗೊಳಿಸಬಹುದು.

ನಿಶ್ಯಬ್ದ ಮೋಡ್ ಅನ್ನು ಆನ್ ಅಥವಾ ಆಫ್ ಮಾಡಿ

ನಿಶ್ಯಬ್ದ ಮೋಡ್ ಆನ್ ಆಗಿರುವಾಗ, iPhone ರಿಂಗ್ ಆಗುವುದಿಲ್ಲ ಅಥವಾ ಅಲರ್ಟ್‌ಗಳನ್ನು ಅಥವಾ ಇತರ ಸೌಂಡ್ ಎಫೆಕ್ಟ್‌ಗಳನ್ನು ಪ್ಲೇ ಮಾಡುವುದಿಲ್ಲ (ಆದರೆ ಆಗಲೂ iPhone ವೈಬ್ರೇಟ್ ಆಗಬಹುದು). ನಿಶ್ಯಬ್ದ ಮೋಡ್ ಆಫ್ ಆಗಿರುವಾಗ, iPhone ಎಲ್ಲಾ ಶಬ್ದಗಳನ್ನು ಪ್ಲೇ ಮಾಡುತ್ತದೆ.

  • ಆ್ಯಕ್ಷನ್ ಬಟನ್ ಹೊಂದಿರುವ ಮಾಡಲ್‌ಗಳಲ್ಲಿ: ಸೆಟ್ಟಿಂಗ್ಸ್  > ಸೌಂಡ್ಸ್ & ಹ್ಯಾಪ್ಟಿಕ್ಸ್ ಎಂಬಲ್ಲಿಗೆ ಹೋಗಿ, ನಂತರ ನಿಶ್ಯಬ್ದ ಮೋಡ್ ಅನ್ನು ಆನ್ ಅಥವಾ ಆಫ್ ಮಾಡಿ.

    ಇತರ ಫಂಕ್ಷನ್‌ಗಳ ಜೊತೆಗೆ ನಿಶ್ಯಬ್ದ ಮೋಡ್ ಅನ್ನು ಆನ್ ಅಥವಾ ಆಫ್ ಮಾಡುವಂತೆ ನೀವು ಆ್ಯಕ್ಷನ್ ಬಟನ್ ಅನ್ನು ಕಾನ್ಫಿಗರ್ ಮಾಡಬಹುದು. iPhoneನಲ್ಲಿರುವ ಆ್ಯಕ್ಷನ್ ಬಟನ್ ಅನ್ನು ಬಳಸಿ ಮತ್ತು ಕಸ್ಟಮೈಸ್ ಮಾಡಿ ಅನ್ನು ನೋಡಿ.

  • ಇತರ ಮಾಡಲ್‌ಗಳಲ್ಲಿ: ನಿಶ್ಯಬ್ದ ಮೋಡ್ ಅನ್ನು ಆನ್ ಮಾಡಲು ನಿಮ್ಮ iPhoneನ ಹಿಂಭಾಗದತ್ತ ರಿಂಗ್/ನಿಶ್ಯಬ್ದ ಸ್ವಿಚ್ ಅನ್ನು ಫ್ಲಿಪ್ ಮಾಡಿ. ನಿಶ್ಯಬ್ದ ಮೋಡ್ ಅನ್ನು ಆಫ್ ಮಾಡಲು ಅದನ್ನು ಮುಂಭಾಗದ ಕಡೆಗೆ ಫ್ಲಿಪ್ ಮಾಡಿ.

ಪ್ರಮುಖ ಸೂಚನೆ: ನಿಶ್ಯಬ್ದ ಮೋಡ್ ಆನ್ ಆಗಿದ್ದಾಗಲೂ ಗಡಿಯಾರದ ಅಲಾರಂಗಳು, ಸಂಗೀತದಂತಹ ಆಡಿಯೊ ಆ್ಯಪ್‌ಗಳು ಮತ್ತು ಹಲವಾರು ಗೇಮ್‌ಗಳು ಬಿಲ್ಟ್-ಇನ್ ಸ್ಪೀಕರ್ ಮೂಲಕ ಸೌಂಡ್‌ಗಳನ್ನು ಪ್ಲೇ ಮಾಡುತ್ತವೆ. ಕೆಲವು ದೇಶಗಳು ಅಥವಾ ಪ್ರದೇಶಗಳಲ್ಲಿ ರಿಂಗ್/ನಿಶ್ಯಬ್ದ ಸ್ವಿಚ್ ಅನ್ನು ನಿಶ್ಯಬ್ದ ಎಂಬುದಕ್ಕೆ ಸೆಟ್ ಮಾಡಿದ್ದಾಗಲೂ ಕ್ಯಾಮರಾ, ವಾಯ್ಸ್ ಮೆಮೊಸ್ ಮತ್ತು ತುರ್ತು ಅಲರ್ಟ್‌ಗಳ ಸೌಂಡ್ ಎಫೆಕ್ಟ್‌ಗಳನ್ನು ಪ್ಲೇ ಮಾಡಲಾಗುತ್ತದೆ.

ಅಡಚಣೆ ಮಾಡಬೇಡಿ ಎಂಬುದನ್ನು ಆನ್ ಮಾಡುವ ಮೂಲಕ iPhone ಅನ್ನು ನಿಶ್ಯಬ್ದಗೊಳಿಸಿ

ಅಡಚಣೆ ಮಾಡಬೇಡಿ ಎಂಬುದನ್ನು ಆನ್ ಮಾಡುವ ಮೂಲಕ ನೀವು ಕರೆಗಳು, ಅಲರ್ಟ್‌ಗಳು ಮತ್ತು ನೋಟಿಫಿಕೇಷನ್‌ಗಳನ್ನು ತಾತ್ಕಾಲಿಕವಾಗಿ ನಿಶ್ಶಬ್ದಗೊಳಿಸಬಹುದು.

  1. ಕಂಟ್ರೋಲ್ ಸೆಂಟರ್ ಅನ್ನು ತೆರೆಯಿರಿ.

  2. ಫೋಕಸ್ ಅನ್ನು ಟ್ಯಾಪ್ ಮಾಡಿ, ನಂತರ ಅಡಚಣೆ ಮಾಡಬೇಡಿ ಎಂಬುದನ್ನು ಟ್ಯಾಪ್ ಮಾಡಿ.

    ಅಡಚಣೆ ಮಾಡಬೇಡಿ ಎಂಬುದನ್ನು ಆನ್ ಮಾಡಿದಾಗ, ಒಳಬರುವ ಕರೆಗಳು, ಪಠ್ಯಗಳು ಅಥವಾ ನೋಟಿಫಿಕೇಷನ್‌ಗಳಿಗಾಗಿ ರಿಂಗ್‌ಟೋನ್‌ಗಳು ಅಥವಾ ಪಠ್ಯದ ಟೋನ್‌ಗಳು ನಿಮಗೆ ಕೇಳಿಸುವುದಿಲ್ಲ. ಅಡಚಣೆ ಮಾಡಬೇಡಿ ಐಕಾನ್ಸ್ಕ್ರೀನ್‌ನ ಮೇಲ್ಭಾಗದಲ್ಲಿರುವ ಸ್ಟೇಟಸ್ ಬಾರ್‌ನಲ್ಲಿ ಸಹ ಕಾಣಿಸಿಕೊಳ್ಳುತ್ತದೆ.

ಫೋಕಸ್ ಅನ್ನು ಆನ್ ಮಾಡಿ ಅಥವಾ ನಿಗದಿಪಡಿಸಿ ಎಂಬುದನ್ನು ನೋಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.