ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPhoneನಲ್ಲಿ ಈಮೇಲ್‌ ನೋಟಿಫಿಕೇಷನ್‌ಗಳನ್ನು ಸೆಟ್ ಮಾಡಿ

ನಿಮ್ಮ Mail ಆ್ಯಪ್‌ ನೋಟಿಫಿಕೇಷನ್ ಸೆಟ್ಟಿಂಗ್ಸ್ ಅನ್ನು ನೀವು ಬದಲಾಯಿಸಬಹುದು ಮತ್ತು ಯಾವ ಮೇಲ್‌ಬಾಕ್ಸ್‌ಗಳು ಮತ್ತು ಈಮೇಲ್‌ ಥ್ರೆಡ್‌ಗಳಿಂದ ನೋಟಿಫಿಕೇಷನ್‌ಗಳನ್ನು ಸ್ವೀಕರಿಸಬೇಕು ಎಂಬುದನ್ನು ಆಯ್ಕೆ ಮಾಡಬಹುದು.

ಈಮೇಲ್‌ ನೋಟಿಫಿಕೇಷನ್‌ಗಳನ್ನು ಮ್ಯೂಟ್ ಮಾಡಿ

ಕಾರ್ಯನಿರತವಾಗಿರುವ ಈಮೇಲ್‌ ಥ್ರೆಡ್‌ಗಳಿಂದ ಉಂಟಾಗುವ ಅಡಚಣೆಗಳನ್ನು ಕಡಿಮೆ ಮಾಡಲು, ನೀವು ಸಂಭಾಷಣೆಯೊಂದರಲ್ಲಿನ ಸಂದೇಶಗಳಿಂದ ಬರುವ ನೋಟಿಫಿಕೇಷನ್‌ಗಳನ್ನು ಮ್ಯೂಟ್ ಮಾಡಬಹುದು.

  1. ನಿಮ್ಮ iPhoneನಲ್ಲಿ Mail ಆ್ಯಪ್‌ಗೆ ಹೋಗಿ.

  2. ಸಂಭಾಷಣೆಯಲ್ಲಿ ಸಂದೇಶವೊಂದನ್ನು ತೆರೆಯಿರಿ.

  3. ಪ್ರತ್ಯುತ್ತರಿಸಿ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಮ್ಯೂಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

ನೀವು ಮ್ಯೂಟ್ ಮಾಡಿರುವ ಈಮೇಲ್‌ ಸಂದೇಶಗಳನ್ನು ಏನು ಮಾಡಬೇಕೆಂದು ನೀವು ಬಯಸುತ್ತೀರಿ ಎಂಬುದನ್ನು ನಿರ್ದಿಷ್ಟಪಡಿಸಲು, ಸೆಟ್ಟಿಂಗ್ಸ್ > ಆ್ಯಪ್‌ಗಳು > Mail > ಮ್ಯೂಟ್ ಮಾಡಲಾದ ಥ್ರೆಡ್ ಆ್ಯಕ್ಷನ್ ಎಂಬಲ್ಲಿಗೆ ಹೋಗಿ, ಆಯ್ಕೆಯನ್ನು ಆರಿಸಿ.

ಈಮೇಲ್‌ ಅಥವಾ ಥ್ರೆಡ್‌ಗೆ ನೀಡಿದ ಪ್ರತ್ಯುತ್ತರಗಳ ಕುರಿತು ನೋಟಿಫಿಕೇಷನ್‌ಗಳನ್ನು ಸ್ವೀಕರಿಸಿ

ಮೆಚ್ಚಿನ ಮೇಲ್‌ಬಾಕ್ಸ್‌ಗಳಲ್ಲಿ ಅಥವಾ ನಿಮ್ಮ VIPಗಳಿಂದ ಈಮೇಲ್‌ ಸಂದೇಶಗಳನ್ನು ನೀವು ಸ್ವೀಕರಿಸಿದಾಗ ನಿಮಗೆ ತಿಳಿಸುವಂತಹ ಮೇಲ್ ನೋಟಿಫಿಕೇಷನ್‌ಗಳನ್ನು ನೀವು ಸೆಟಪ್ ಮಾಡಬಹುದು.

  1. ನಿಮ್ಮ iPhoneನಲ್ಲಿ Mail ಆ್ಯಪ್‌ಗೆ ಹೋಗಿ.

  2. ಈ ಕೆಳಗಿನವುಗಳಲ್ಲಿ ಯಾವುದಾದರೂ ಒಂದನ್ನು ಮಾಡಿ:

    • ಸಂದೇಶವನ್ನು ಓದುವಾಗ: ಪ್ರತ್ಯುತ್ತರಿಸಿ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ನನಗೆ ಸೂಚಿಸಿ ಎಂಬುದನ್ನು ಟ್ಯಾಪ್ ಮಾಡಿ.

    • ಸಂದೇಶವನ್ನು ಬರೆಯುವಾಗ: ವಿಷಯ ಫೀಲ್ಡ್ ಅನ್ನು ಟ್ಯಾಪ್ ಮಾಡಿ, ವಿಷಯದ ಫೀಲ್ಡ್‌ನಲ್ಲಿನ ನನಗೆ ಸೂಚಿಸಿ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ನನಗೆ ಸೂಚಿಸಿ ಎಂಬುದನ್ನು ಟ್ಯಾಪ್ ಮಾಡಿ.

ನೋಟಿಫಿಕೇಷನ್‌ಗಳು ಹೇಗೆ ಕಾಣಿಸಿಕೊಳ್ಳಬೇಕು ಎಂಬುದನ್ನು ಬದಲಾಯಿಸಲು, ಸೆಟ್ಟಿಂಗ್ಸ್ ಆ್ಯಪ್‌  > ಆ್ಯಪ್‌ಗಳು > Mail > ನೋಟಿಫಿಕೇಷನ್‌ಗಳು ಎಂಬುದಕ್ಕೆ ಹೋಗಿ.

ನಿಮ್ಮ Mail ನೋಟಿಫಿಕೇಷನ್ ಸೆಟ್ಟಿಂಗ್ಸ್ ಬದಲಾಯಿಸಿ

  1. ನಿಮ್ಮ iPhoneನಲ್ಲಿ ಸೆಟ್ಟಿಂಗ್ಸ್‌ ಆ್ಯಪ್‌ಗೆ ಹೋಗಿ.

  2. ಆ್ಯಪ್‌ಗಳು ಎಂಬುದನ್ನು ಟ್ಯಾಪ್ ಮಾಡಿ, ನಂತರ Mail ಅನ್ನು ಟ್ಯಾಪ್ ಮಾಡಿ.

  3. ನೋಟಿಫಿಕೇಷನ್‌ಗಳನ್ನು ಟ್ಯಾಪ್ ಮಾಡಿ, ನಂತರ ’ನೋಟಿಫಿಕೇಷನ್‌ಗಳನ್ನು ಅನುಮತಿಸಿ’ ಎಂಬುದು ಆನ್ ಆಗಿದೆಯೆಂದು ಖಚಿತಪಡಿಸಿಕೊಳ್ಳಿ.

  4. ನೋಟಿಫಿಕೇಷನ್‌ಗಳನ್ನು ಕಸ್ಟಮೈಸ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ನೀವು ಬದಲಾವಣೆಗಳನ್ನು ಮಾಡಲು ಬಯಸುವ ಈಮೇಲ್‌ ಖಾತೆಯನ್ನು ಟ್ಯಾಪ್ ಮಾಡಿ.

  5. ಅಲರ್ಟ್‌ಗಳು ಅಥವಾ ಬ್ಯಾಡ್ಜ್‌ಗಳಂತಹ ನಿಮಗೆ ಬೇಕಾದ ಸೆಟ್ಟಿಂಗ್ಸ್ ಅನ್ನು ಆಯ್ಕೆ ಮಾಡಿ. ನೀವು ಅಲರ್ಟ್‌ಗಳನ್ನು ಆನ್ ಮಾಡಿದಾಗ, ಅಲರ್ಟ್ ಟೋನ್ ಅಥವಾ ರಿಂಗ್‌ಟೋನ್ ಅನ್ನು ಬದಲಾಯಿಸುವ ಮೂಲಕ ನಿಮ್ಮ ಸೌಂಡ್‌ಗಳನ್ನು ಕಸ್ಟಮೈಸ್ ಮಾಡುವ ಆಯ್ಕೆ ನಿಮಗಿರುತ್ತದೆ.

ನೀವು Mail ಅ್ಯಪ್‌ನಿಂದ ಬರುವ ನೋಟಿಫಿಕೇಷನ್‌ಗಳನ್ನು ಯಾವ ಸಮಯಗಳಲ್ಲಿ ಅನುಮತಿಸಲು ಬಯಸುತ್ತೀರಿ ಎಂಬುದನ್ನು ನೀವು ಸೆಟ್ ಮಾಡಬಹುದು. ನೋಟಿಫಿಕೇಷನ್ ಸೆಟ್ಟಿಂಗ್ಸ್ ಅನ್ನು ಬದಲಾಯಿಸಿ ಎಂಬುದನ್ನು ನೋಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.