ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPhone ಮತ್ತು iCloud ಕೀಚೇನ್ ಹೊಂದಿರುವ ನಿಮ್ಮ ಸಾಧನಗಳಾದ್ಯಂತ ನಿಮ್ಮ ಪಾಸ್‌ವರ್ಡ್‌ಗಳು ಮತ್ತು ಪಾಸ್‌ಕೀ ಲಭ್ಯವಾಗುವಂತೆ ಮಾಡುವುದು

ನಿಮ್ಮ ವೆಬ್‌ಸೈಟ್ ಮತ್ತು ಆ್ಯಪ್ ಪಾಸ್‌ವರ್ಡ್‌ಗಳು ಮತ್ತು ಪಾಸ್‌ಕೀಗಳು, ಕ್ರೆಡಿಟ್ ಕಾರ್ಡ್ ಮಾಹಿತಿ, Wi-Fi ನೆಟ್‌ವರ್ಕ್ ಮಾಹಿತಿ ಮತ್ತು ಇತರ ಖಾತೆಯ ಮಾಹಿತಿಯನ್ನು ನಿಮ್ಮ ಎಲ್ಲಾ ಅನುಮೋದಿತ ಸಾಧನಗಳಲ್ಲಿ ಮತ್ತು Mac ಕಂಪ್ಯೂಟರ್‌ಗಳಲ್ಲಿ ಅಪ್ ಟು ಡೇಟ್ ಆಗಿ ಇರಿಸಲು iCloud ಕೀಚೇನ್ ಅನ್ನು ಬಳಸಿ. ಸಂಗ್ರಹಣೆ ಮತ್ತು ಪ್ರಸರಣದ ಸಮಯದಲ್ಲಿ iCloud ಕೀಚೇನ್ 256-ಬಿಟ್ AES ಎನ್‌ಕ್ರಿಪ್ಷನ್ ಮೂಲಕ ಸುರಕ್ಷಿತವಾಗಿರುತ್ತವೆ ಮತ್ತು ಅದರ ಡೇಟವನ್ನು Appleನಿಂದಲೂ ಓದಲು ಸಾಧ್ಯವಿಲ್ಲ.

iCloud ಕೀಚೇನ್, ನೀವು Mail, ಸಂಪರ್ಕ ಆ್ಯಪ್, ಕ್ಯಾಲೆಂಡರ್ ಮತ್ತು ಸಂದೇಶ ಆ್ಯಪ್‌ನಲ್ಲಿ ಬಳಸುವ ಖಾತೆಗಳನ್ನು ನಿಮ್ಮ ಎಲ್ಲಾ iPhone ಮತ್ತು iPad ಸಾಧನಗಳು ಮತ್ತು Mac ಕಂಪ್ಯೂಟರ್‌ಗಳಲ್ಲಿ ಅಪ್ ಟು ಡೇಟ್ ಆಗಿ ಇರಿಸಬಹುದು.

iCloud ಕೀಚೇನ್ ಅನ್ನು ಸೆಟಪ್ ಮಾಡಿ

ನಿಮ್ಮ iPhone ಅನ್ನು ಮೊದಲ ಬಾರಿಗೆ ಸೆಟಪ್ ಮಾಡಿದಾಗ ನೀವು iCloud ಕೀಚೇನ್ ಅನ್ನು ಸೆಟಪ್ ಮಾಡದಿದ್ದರೆ, ನೀವು ಈಗ ಅದನ್ನು ಮಾಡಬಹುದು.

  1. ನಿಮ್ಮ iPhoneನಲ್ಲಿ ಸೆಟ್ಟಿಂಗ್ಸ್ ಆ್ಯಪ್‌ಗೆ ಹೋಗಿ.

  2. ನಿಮ್ಮ ಹೆಸರನ್ನು ಟ್ಯಾಪ್ ಮಾಡಿ, ನಂತರ iCloud ಅನ್ನು ಟ್ಯಾಪ್ ಮಾಡಿ.

  3. ಎಲ್ಲವನ್ನೂ ನೋಡಿ ಎಂಬುದನ್ನು ಟ್ಯಾಪ್ ಮಾಡಿ (iCloudಗೆ ಸೇವ್ ಮಾಡಿರುವುದು ಎಂಬುದರ ಪಕ್ಕದಲ್ಲಿ), ನಂತರ ಪಾಸ್‌ವರ್ಡ್‌ಗಳು ಮತ್ತು ಕೀಚೇನ್ ಅನ್ನು ಟ್ಯಾಪ್ ಮಾಡಿ.

  4. ಈ <dn>iPhone</dn> ಅನ್ನು ಸಿಂಕ್ ಮಾಡಿ ಎಂಬುದನ್ನು ಆನ್ ಮಾಡಿ, ನಂತರ ಸ್ಕ್ರೀನ್‌ ಮೇಲಿನ ಸೂಚನೆಗಳನ್ನು ಅನುಸರಿಸಿ.

ಹೆಚ್ಚುವರಿ ಸಾಧನದಲ್ಲಿ iCloud ಕೀಚೇನ್ ಅನ್ನು ಸೆಟಪ್ ಮಾಡಿ

ನೀವು ಹೆಚ್ಚುವರಿ ಸಾಧನದಲ್ಲಿ iCloud ಕೀಚೇನ್ ಅನ್ನು ಆನ್ ಮಾಡಿದಾಗ, iCloud ಕೀಚೇನ್ ಅನ್ನು ಬಳಸುವ ನಿಮ್ಮ ಇತರ ಸಾಧನಗಳು ಹೆಚ್ಚುವರಿ ಸಾಧನದಲ್ಲಿ ನಿಮ್ಮ ಅನುಮತಿಯನ್ನು ಕೋರುವ ನೋಟಿಫಿಕೇಷನ್ ಅನ್ನು ಸ್ವೀಕರಿಸುತ್ತವೆ.

ನಿಮ್ಮ ಇತರ ಸಾಧನವೊಂದರಲ್ಲಿ, ಹೆಚ್ಚುವರಿ ಸಾಧನವನ್ನು ಅನುಮೋದಿಸಿ. ಹೆಚ್ಚುವರಿ ಸಾಧನದಲ್ಲಿ ನಿಮ್ಮ iCloud ಕೀಚೇನ್ ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗಲು ಪ್ರಾರಂಭಿಸುತ್ತದೆ.

ನಿಮ್ಮ ಇತರ ಸಾಧನಗಳಿಗೆ ನೀವು ಆ್ಯಕ್ಸೆಸ್ ಅನ್ನು ಹೊಂದಿರದೇ ಇದ್ದಾಗ, iCloud ಕೀಚೇನ್ ಅನ್ನು ಅನುಮೋದಿಸಲು ನಿಮ್ಮ iCloud ಭದ್ರತಾ ಕೋಡ್ ಅನ್ನು ಬಳಸಲು ಸ್ಕ್ರೀನ್ ಮೇಲಿನ ಸೂಚನೆಗಳನ್ನು ಅನುಸರಿಸಿ.

ನಿಮ್ಮ ಎಲ್ಲಾ ಸಾಧನಗಳು ಕಳೆದುಹೋದರೆ ಅಥವಾ ಕಳುವಾದರೆ ನಿಮ್ಮ iCloud ಕೀಚೇನ್ ಅನ್ನು ರಿಕವರ್ ಮಾಡಿ

ನೀವು ಒಂದು ಸಾಧನವನ್ನು ಕಳೆದುಕೊಂಡರೆ, ಅನುಕೂಲತೆ ಮತ್ತು ಪುನರಾವರ್ತನೆಯನ್ನು ಒದಗಿಸಲು ಸಾಧನಗಳಾದ್ಯಂತ iCloud ಕೀಚೈನ್ ಸಿಂಕ್ ಆಗುತ್ತದೆ. ನಿಮ್ಮ ಎಲ್ಲಾ ಸಾಧನಗಳು ಕಳೆದುಹೋದರೆ ಮತ್ತು ನೀವು ನಿಮ್ಮ Apple ಖಾತೆಗೆ ರಿಕವರಿ ಸಂಪರ್ಕವನ್ನು ಸೇರಿಸಿದ್ದರೆ, ನಿಮ್ಮ iCloud ಕೀಚೇನ್ ಅನ್ನು ರಿಕವರ್ ಮಾಡಲು ನಿಮ್ಮ ಸಂಪರ್ಕವು ನಿಮಗೆ ಸಹಾಯ ಮಾಡುತ್ತದೆ. ಸೆಟ್ಟಿಂಗ್ಸ್ > [ನಿಮ್ಮ ಹೆಸರು] > ಸೈನ್ ಇನ್ ಮತ್ತು ಭದ್ರತೆ ಎಂಬಲ್ಲಿಗೆ ಹೋಗಿ, ರಿಕವರಿ ಸಂಪರ್ಕಗಳು ಎಂಬುದನ್ನು ಟ್ಯಾಪ್ ಮಾಡಿ, ನಂತರ ಇನ್ನಷ್ಟು ತಿಳಿಯಿರಿ ಎಂಬುದನ್ನು ಟ್ಯಾಪ್ ಮಾಡಿ.

ನೀವು iCloud ಕೀಚೇನ್ ಎಸ್ಕ್ರೋ ಮೂಲಕ ನಿಮ್ಮ iCloud ಕೀಚೇನ್ ಅನ್ನು ಸಹ ರಿಕವರ್ ಮಾಡಬಹುದು, ಇದು ಬ್ರೂಟ್-ಫೋರ್ಸ್ ದಾಳಿಗಳಿಂದಲೂ ಸಹ ರಕ್ಷಿಸಲ್ಪಟ್ಟಿದೆ. iCloud ಕೀಚೇನ್ Appleಗೆ ಪಾಸ್‌ವರ್ಡ್‌ಗಳು ಮತ್ತು ಅದರಲ್ಲಿರುವ ಇತರ ಡೇಟವನ್ನು ಓದಲು Appleಗೆ ಅವಕಾಶ ನೀಡದೆಯೆ ಬಳಕೆದಾರರ ಕೀಚೇನ್ ಡೇಟವನ್ನು ಎಸ್ಕ್ರೋವ್ ಮಾಡುತ್ತದೆ. ನಿಮ್ಮ ಕೀಚೇನ್ ಅನ್ನು ಸದೃಢ ಪಾಸ್‌ಕೋಡ್ ಅನ್ನು ಬಳಸಿ ಎನ್‌ಕ್ರಿಪ್ಟ್ ಮಾಡಲಾಗಿದೆ ಮತ್ತು ಕೆಲವು ಕಟ್ಟುನಿಟ್ಟಾದ ಷರತ್ತುಗಳನ್ನು ಪೂರೈಸಿದರೆ ಮಾತ್ರ ಎಸ್ಕ್ರೋ ಸೇವೆಯು ಕೀಚೇನ್‌ನ ನಕಲನ್ನು ಒದಗಿಸುತ್ತದೆ.

iCloud ಕೀಚೇನ್ ಎಸ್ಕ್ರೋ ಮೂಲಕ ನಿಮ್ಮ ಕೀಚೇನ್ ಅನ್ನು ರಿಕವರ್ ಮಾಡಲು, ಹೊಸ ಸಾಧನದಲ್ಲಿ ನಿಮ್ಮ Apple ಖಾತೆಯೊಂದಿಗೆ ದೃಢೀಕರಿಸಿ, ನಂತರ ವಿಶ್ವಾಸಾರ್ಹ ಫೋನ್ ಸಂಖ್ಯೆಗೆ ಕಳುಹಿಸಿದ SMSಗೆ ಪ್ರತಿಕ್ರಿಯಿಸಿ. ನೀವು ದೃಢೀಕರಿಸಿದ ಮತ್ತು ಪ್ರತಿಕ್ರಿಯಿಸಿದ ನಂತರ, ನೀವು ಸಾಧನದ ಪಾಸ್ ಕೋಡ್ ಅನ್ನು ನಮೂದಿಸಬೇಕು. iOS, iPadOS ಮತ್ತು macOS ದೃಢೀಕರಿಸಲು ಕೇವಲ 10 ಪ್ರಯತ್ನಗಳಿಗೆ ಮಾತ್ರ ಅವಕಾಶವನ್ನು ನೀಡುತ್ತದೆ. ಹಲವಾರು ವಿಫಲ ಪ್ರಯತ್ನಗಳ ನಂತರ, ರೆಕಾರ್ಡ್ ಅನ್ನು ಲಾಕ್ ಮಾಡಲಾಗಿದೆ ಮತ್ತು ಹೆಚ್ಚಿನ ಪ್ರಯತ್ನಗಳನ್ನು ಅನುಮತಿಸಲು ನೀವು Apple ಬೆಂಬಲ ವೆಬ್‌ಸೈಟ್‌ನಲ್ಲಿ Apple ಬೆಂಬಲ ತಂಡವನ್ನು ಸಂಪರ್ಕಿಸಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.