ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPhoneನಲ್ಲಿನ ನಕ್ಷೆ ಆ್ಯಪ್‌ನಲ್ಲಿ ಎಲೆಕ್ಟ್ರಿಕ್ ವಾಹನದ ರೂಟಿಂಗ್ ಅನ್ನು ಸೆಟಪ್ ಮಾಡುವುದು

ನಿಮ್ಮ ಎಲೆಕ್ಟ್ರಿಕ್ ವಾಹನದ (EV) ಚಾರ್ಜಿಂಗ್ ನಿಲುಗಡೆಗಳನ್ನು ಒಳಗೊಂಡಿರುವ ಟ್ರಿಪ್‌ಗಳನ್ನು ನೀವು ಪ್ಲಾನ್ ಮಾಡಬಹುದು ಮತ್ತು ಡ್ರೈವಿಂಗ್ ಮಾಡುವಾಗ ನಿಮ್ಮ ಚಾರ್ಜ್‌ನಲ್ಲಿನ ಬದಲಾವಣೆಗಳನ್ನು ಮೇಲ್ವಿಚಾರಿಸಬಹುದು.

ಪ್ರಮುಖ ಸೂಚನೆ: EV ರೂಟಿಂಗ್ ಆಯ್ದ ವಾಹನಗಳಲ್ಲಿ ಮತ್ತು ಆಯ್ದ ಪ್ರದೇಶಗಳಲ್ಲಿ ಲಭ್ಯವಿದೆ. ದೇಶ ಮತ್ತು ಪ್ರದೇಶಕ್ಕೆ ಅನುಗುಣವಾಗಿ ಫೀಚರ್‌ಗಳಲ್ಲಿ ವ್ಯತ್ಯಾಸವಾಗುತ್ತದೆ. ಹೊಂದಾಣಿಕೆಯ ಮಾಹಿತಿಗಾಗಿ ನಿಮ್ಮ ವಾಹನದ ಮಾಲೀಕರ ಮಾರ್ಗದರ್ಶಿಯನ್ನು ನೋಡಿ.

ನೀವು ಡ್ರೈವಿಂಗ್ ಮಾರ್ಗ ನಿರ್ದೇಶನಗಳನ್ನು ಪಡೆದಾಗ, ನಕ್ಷೆ ಆ್ಯಪ್ ನಿಮ್ಮ ವಾಹನದ ಚಾರ್ಜ್ ಅನ್ನು ಟ್ರ್ಯಾಕ್ ಮಾಡಬಲ್ಲದು. ಮಾರ್ಗದುದ್ದಕ್ಕೂ ಬದಲಾಗುವ ಸಮುದ್ರ ಮಟ್ಟದ ಮೇಲಿನ ಎತ್ತರವನ್ನು ಮತ್ತು ಇತರ ಅಂಶಗಳನ್ನು ವಿಶ್ಲೇಷಿಸುವ ಮೂಲಕ, ನಕ್ಷೆ ಆ್ಯಪ್ ಮಾರ್ಗದುದ್ದಕ್ಕೂ ಕಂಡುಬರುವ ಸೂಕ್ತವಾದ ಚಾರ್ಜಿಂಗ್ ಸ್ಟೇಷನ್‌ಗಳನ್ನು ಗುರುತಿಸುತ್ತದೆ ಮತ್ತು ಆಯ್ದ ಚಾರ್ಜಿಂಗ್ ಪೂರೈಕೆದಾರರು ಮತ್ತು ದೇಶಗಳಿಗಾಗಿ, ಅದು ನೈಜ-ಸಮಯದ ಚಾರ್ಜಿಂಗ್ ಸ್ಟೇಷನ್ ಲಭ್ಯತೆಯ ಮಾಹಿತಿಯನ್ನು ಒದಗಿಸುತ್ತದೆ. ನಿಮ್ಮ ಚಾರ್ಜ್ ತೀರಾ ಕಡಿಮೆಯಾಗುವವರೆಗೆ ನೀವು ಡ್ರೈವ್ ಮಾಡಿದರೆ, ನಿಮ್ಮ ಅತ್ಯಂತ ಸಮೀಪದ ಹೊಂದಾಣಿಕೆಯಾಗುವ ಚಾರ್ಜಿಂಗ್ ಸ್ಟೇಷನ್‌ಗೆ ಹೋಗುವ ಮಾರ್ಗದ ಮಾಹಿತಿಯನ್ನು ನಿಮಗೆ ನೀಡಲಾಗುತ್ತದೆ.

CarPlay ಮೂಲಕ EV ರೂಟಿಂಗ್ ಅನ್ನು ಸೆಟಪ್ ಮಾಡುವುದು

ತನ್ನ ತಯಾರಕರ ಆ್ಯಪ್‌ನ ಅಗತ್ಯವಿಲ್ಲದಿರುವ ಹೊಂದಾಣಿಕೆಯಾಗುವ ಎಲೆಕ್ಟ್ರಿಕ್ ವಾಹನಕ್ಕಾಗಿ (EV), ನಕ್ಷೆ ಆ್ಯಪ್‌ನಲ್ಲಿ EV ರೂಟಿಂಗ್ ಅನ್ನು ಸೆಟಪ್ ಮಾಡಲು CarPlayಯನ್ನು ಬಳಸಿ.

ಗಮನಿಸಿ: ಹೊಂದಾಣಿಕೆಯ ಮಾಹಿತಿಗಾಗಿ ನಿಮ್ಮ ವಾಹನದ ಮಾಲೀಕರ ಮಾರ್ಗದರ್ಶಿಯನ್ನು ನೋಡಿ.

  1. iPhone ಅನ್ನು CarPlayಗೆ ಕನೆಕ್ಟ್ ಮಾಡಿ.

  2. ನಿಮ್ಮ iPhoneನಲ್ಲಿ ನಕ್ಷೆ ಆ್ಯಪ್‌ಗೆ ಹೋಗಿ.

  3. ಡ್ರೈವಿಂಗ್ ಮಾರ್ಗ ನಿರ್ದೇಶನಗಳನ್ನು ಪಡೆಯಿರಿ.

  4. ಕನೆಕ್ಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ (ಮಾರ್ಗಗಳ ಪಟ್ಟಿಯ ಮೇಲೆ), ನಂತರ ಸ್ಕ್ರೀನ್ ಮೇಲಿನ ಸೂಚನೆಗಳನ್ನು ಅನುಸರಿಸಿ.

CarPlay ಮತ್ತು iPhone ಬಗ್ಗೆ ಪರಿಚಯ ಅನ್ನು ನೋಡಿ.

ವಾಹನ ತಯಾರಕರ ಆ್ಯಪ್ ಬಳಸಿ EV ರೂಟಿಂಗ್ ಅನ್ನು ಸೆಟಪ್ ಮಾಡುವುದು

ತನ್ನ ತಯಾರಕರ ಆ್ಯಪ್‌ನ ಅಗತ್ಯವಿರುವ, ಹೊಂದಾಣಿಕೆಯಾಗುವ ವಾಹನಕ್ಕಾಗಿ, ನಕ್ಷೆ ಆ್ಯಪ್‌ನಲ್ಲಿ EV ರೂಟಿಂಗ್ ಅನ್ನು ಸೆಟಪ್ ಮಾಡಲು ಅದರ ಆ್ಯಪ್ ಅನ್ನು ಬಳಸಿ.

ಗಮನಿಸಿ: ಹೊಂದಾಣಿಕೆಯ ಮಾಹಿತಿಗಾಗಿ ನಿಮ್ಮ ವಾಹನದ ಮಾಲೀಕರ ಮಾರ್ಗದರ್ಶಿಯನ್ನು ನೋಡಿ.

  1. ನಿಮ್ಮ iPhoneನಲ್ಲಿನ App Store ಆ್ಯಪ್‌ಗೆ ಹೋಗಿ.

  2. ನಿಮ್ಮ ವಾಹನದ ತಯಾರಕರನ್ನು ಹುಡುಕಿ, ನಂತರ ಅದಕ್ಕೆ EV ರೂಟಿಂಗ್ ಅನ್ನು ಬೆಂಬಲಿಸುವ ಆ್ಯಪ್ ಅನ್ನು ಡೌನ್ಲೋಡ್ ಮಾಡಿ. (App Storeನಲ್ಲಿ ಆ್ಯಪ್‌ಗಳನ್ನು ಪಡೆಯಿರಿ ಎಂಬುದನ್ನು ನೋಡಿ.)

  3. ಆ್ಯಪ್ ಅನ್ನು ತೆರೆಯಿರಿ, ನಂತರ ಅದರ ಸೆಟಪ್ ಸೂಚನೆಗಳನ್ನು ಅನುಸರಿಸಿ.

  4. ನಕ್ಷೆ ಆ್ಯಪ್‌ಗೆ ಹೋಗಿ, ನಂತರ ಹುಡುಕಾಟದ ಫೀಲ್ಡ್ ಪಕ್ಕದಲ್ಲಿರುವ ನಿಮ್ಮ ಪಿಕ್ಚರ್ ಅಥವಾ ಮೊದಲಕ್ಷರಗಳನ್ನು ಟ್ಯಾಪ್ ಮಾಡಿ.

    ನಿಮ್ಮ ಪಿಕ್ಚರ್ ಅಥವಾ ಮೊದಲಕ್ಷರಗಳು ನಿಮಗೆ ಕಾಣಿಸದಿದ್ದರೆ, ಹುಡುಕಾಟದ ಫೀಲ್ಡ್‌ನ ಪಕ್ಕದಲ್ಲಿರುವ ರದ್ದು ಎಂಬುದನ್ನು ಟ್ಯಾಪ್ ಮಾಡಿ ಅಥವಾ ಹುಡುಕಾಟದ ಫೀಲ್ಡ್ ಅನ್ನು ಟ್ಯಾಪ್ ಮಾಡಿ, ನಂತರ ರದ್ದು ಎಂಬುದನ್ನು ಟ್ಯಾಪ್ ಮಾಡಿ.

  5. ವಾಹನಗಳು ಎಂಬುದನ್ನು ಟ್ಯಾಪ್ ಮಾಡಿ, ನಿಮ್ಮ ಎಲೆಕ್ಟ್ರಿಕ್ ವಾಹನಗಳನ್ನು ಕನೆಕ್ಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ಸ್ಕ್ರೀನ್ ಮೇಲಿನ ಸೂಚನೆಗಳನ್ನು ಅನುಸರಿಸಿ.

ನಿಮ್ಮ ವಾಹನಕ್ಕಾಗಿ ನೀವು ಆದ್ಯತೆಯ ಚಾರ್ಜಿಂಗ್ ನೆಟ್‌ವರ್ಕ್ ಅನ್ನು ನಿಯೋಜಿಸಬಹುದು. ನಕ್ಷೆ ಆ್ಯಪ್ ಆಯ್ದ ಚಾರ್ಜಿಂಗ್ ಪೂರೈಕೆದಾರರು ಮತ್ತು ದೇಶಗಳಿಗೆ ನೈಜ-ಸಮಯದ ಚಾರ್ಜಿಂಗ್ ಸ್ಟೇಷನ್ ಲಭ್ಯತೆಯನ್ನು ಒದಗಿಸುತ್ತದೆ ಹಾಗೂ ನೀವು ಪ್ಲಗ್ ಪ್ರಕಾರ ಮತ್ತು ನೆಟ್‌ವರ್ಕ್‌ಗೆ ಅನುಗುಣವಾಗಿ ಹುಡುಕಬಹುದು.

ನೀವು ಮಾರ್ಗ ನಿರ್ದೇಶನಗಳನ್ನು ಪಡೆದಾಗ ಬೇರೊಂದು ವಾಹನವನ್ನು ಆರಿಸುವುದು

ನೀವು ಹಲವಾರು ವಾಹನಗಳನ್ನು ಚಲಾಯಿಸುತ್ತೀರಿ ಎಂದಾದರೆ, ಯಾವ ವಾಹನಕ್ಕೆ ನಕ್ಷೆ ಆ್ಯಪ್ ರೂಟಿಂಗ್ ಸೂಚನೆಗಳನ್ನು ಒದಗಿಸುತ್ತದೆ ಎಂಬುದನ್ನು ನೀವು ಬದಲಾಯಿಸಬಹುದು.

  1. ನಿಮ್ಮ iPhoneನಲ್ಲಿ ನಕ್ಷೆ ಆ್ಯಪ್‌ಗೆ ಹೋಗಿ.

  2. ಡ್ರೈವಿಂಗ್ ಮಾರ್ಗ ನಿರ್ದೇಶನಗಳನ್ನು ಪಡೆಯಿರಿ.

  3. ನೀವು ಪ್ರಾರಂಭಿಸಿ ಎಂಬುದನ್ನು ಟ್ಯಾಪ್ ಮಾಡುವ ಮೊದಲು, ಮಾರ್ಗದ ಕಾರ್ಡ್‌ನಲ್ಲಿ ಕೆಳಕ್ಕೆ ಸ್ಕ್ರೋಲ್ ಮಾಡಿ.

  4. ಮತ್ತೊಂದು ಎಲೆಕ್ಟ್ರಿಕ್ ವಾಹನವನ್ನು ಆಯ್ಕೆಮಾಡಿ ಅಥವಾ ನಿಮ್ಮ iPhoneನಲ್ಲಿ EV ರೂಟಿಂಗ್ ಆ್ಯಪ್ ಅನ್ನು ಹೊಂದಿರದ ವಾಹನವನ್ನು ನೀವು ಡ್ರೈವ್ ಮಾಡುತ್ತಿದ್ದರೆ, ಬೇರೊಂದು ಕಾರ್ ಎಂಬುದನ್ನು ಟ್ಯಾಪ್ ಮಾಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.