iPhoneನಲ್ಲಿನ ಶಾರ್ಟ್‌ಕಟ್ಸ್ ಆ್ಯಪ್‌ನಲ್ಲಿ Apple Intelligence ಅನ್ನು ಬಳಸುವುದು

ನೀವು ಈ ಹಿಂದೆಂದಿಗಿಂತಲೂ ಶಕ್ತಿಯುತವಾದ ಶಾರ್ಟ್‌ಕಟ್‌ಗಳನ್ನು Apple Intelligence* ಸಹಾಯದಿಂದ ರಚಿಸಬಹುದು. ಶಾರ್ಟ್‌ಕಟ್ಸ್‌ನಲ್ಲಿರುವ ಇಂಟೆಲಿಜೆನ್ಸ್ ಆ್ಯಕ್ಷನ್‌ಗಳು ಪಠ್ಯವನ್ನು ಸಾರಂಶಗೊಳಿಸಬಹುದು, ಚಿತ್ರಗಳನ್ನು ರಚಿಸಬಹುದು ಅಥವಾ ನಿಮ್ಮ ಶಾರ್ಟ್‌ಕಟ್‌ಗೆ ಪ್ರತಿಕ್ರಿಯೆಗಳನ್ನು ಒದಗಿಸಲು Apple Intelligence ಅಥವಾ ಎಕ್ಸ್‌ಟೆನ್ಶನ್ ಮಾಡಲ್‌ಗಳನ್ನು ನೇರವಾಗಿ ಬಳಸಬಹುದು.

ಗಮನಿಸಿ: Apple Intelligence ಎಲ್ಲಾ iPhone ಮಾಡಲ್‌ಗಳು ಅಥವಾ ಭಾಷೆಗಳು ಅಥವಾ ಪ್ರದೇಶಗಳಲ್ಲಿ ಲಭ್ಯವಿಲ್ಲ.** ತೀರಾ ಇತ್ತೀಚಿನ ಲಭ್ಯವಿರುವ ಫೀಚರ್‌ಗಳನ್ನು ಆ್ಯಕ್ಸೆಸ್ ಮಾಡಲು, ನೀವು iOSನ ಇತ್ತೀಚಿನ ಆವೃತ್ತಿಯನ್ನು ಬಳಸುತ್ತಿದ್ದೀರಿ ಮತ್ತು ನಿಮ್ಮ ಸಾಧನದಲ್ಲಿ Apple Intelligence ಆನ್ ಮಾಡಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.

Apple Intelligence ಶಾರ್ಟ್‌ಕಟ್‌ಗಳನ್ನು ಹುಡುಕುವುದು

ನಿಮ್ಮ ಸಂಗ್ರಹಕ್ಕೆ ಸೇರಿಸಲು ನೀವು ಹೊಸ ಶಾರ್ಟ್‌ಕಟ್‌ಗಳನ್ನು ಹುಡುಕುತ್ತಿದ್ದರೆ ಅಥವಾ ನೀವು ಏನೆಲ್ಲಾ ಸಾಧ್ಯವಿದೆ ಎಂಬುದನ್ನು ಮತ್ತು ನಿರ್ದಿಷ್ಟ Apple Intelligence ಶಾರ್ಟ್‌ಕಟ್‌ಗಳನ್ನು ಹೇಗೆ ನಿರ್ಮಿಸಲಾಗಿದೆ ಎಂಬುದನ್ನು ನೋಡಬಯಸುತ್ತಿದ್ದರೆ, ಶಾರ್ಟ್‌ಕಟ್ಸ್ ಗ್ಯಾಲರಿಯಲ್ಲಿನ Apple Intelligence ವರ್ಗವನ್ನು ನೋಡಿ.

  1. ನಿಮ್ಮ iPhoneನಲ್ಲಿ ಶಾರ್ಟ್‌ಕಟ್ಸ್ ಆ್ಯಪ್‌ಗೆ ಹೋಗಿ.

  2. ಗ್ಯಾಲರಿ ಎಂಬುದನ್ನು ಟ್ಯಾಪ್ ಮಾಡಿ, Apple Intelligence ವರ್ಗದಲ್ಲಿನ ಶಾರ್ಟ್‌ಕಟ್ ಒಂದನ್ನು ನಿಮ್ಮ ಸಂಗ್ರಹಕ್ಕೆ ಸೇರಿಸಲು ಆ ಶಾರ್ಟ್‌ಕಟ್ ಮೇಲಿರುವ ಶಾರ್ಟ್‌ಕಟ್ ಅನ್ನು ರಚಿಸಿ ಬಟನ್ ಅನ್ನು ಟ್ಯಾಪ್ ಮಾಡಿ.

ಕಸ್ಟಮ್ ಶಾರ್ಟ್‌ಕಟ್‌ಗಳನ್ನು ನಿರ್ಮಿಸಲು ಮಾಡಲ್ ಅನ್ನು ಬಳಸುವುದು

ನಿಮ್ಮ ಶಾರ್ಟ್‌ಕಟ್‌ಗಳಲ್ಲಿನ ಸರಳ ಅಥವಾ ಸಂಕೀರ್ಣ ವಿನಂತಿಗಳನ್ನು ನಿರ್ವಹಿಸಲು, ನೀವು ಆನ್-ಡಿವೈಸ್ ಅಥವಾ ಖಾಸಗಿ ಕ್ಲೌಡ್ ಕಂಪ್ಯೂಟ್‌ನಲ್ಲಿ Apple Intelligence ಮಾಡಲ್ ಬಳಸುವ ಅಥವಾ ChatGPT ಬಳಸುವ ನಿಮ್ಮದೇ ಕಸ್ಟಮ್ ಶಾರ್ಟ್‌ಕಟ್‌ಗಳನ್ನು ರಚಿಸಬಹುದು. ಆ್ಯಕ್ಷನ್‌ಗೆ ಇನ್‌ಪುಟ್ ಅನ್ನು ಒದಗಿಸಲು, ಆ್ಯಕ್ಷನ್‌ನ ಔಟ್‌ಪುಟ್ ಅನ್ನು ಪಾರ್ಸ್ ಮಾಡಲು ಮತ್ತು ಹೆಚ್ಚಿನದನ್ನು ಮಾಡಲು ನೀವು ಮಾಡಲ್ ಅನ್ನು ಬಳಸಬಹುದು.

ನೀವು ಮೂರು ಮಾಡಲ್‌ಗಳಿಂದ ಆಯ್ಕೆ ಮಾಡಬಹುದು:

  • ಆನ್-ಡಿವೈಸ್: ನೆಟ್‌ವರ್ಕ್ ಕನೆಕ್ಷನ್ ಅಗತ್ಯವಿಲ್ಲದ ಸರಳ ವಿನಂತಿಗಳನ್ನು ನಿರ್ವಹಿಸಲು ಆನ್-ಡಿವೈಸ್ Apple Intelligence ಮಾಡಲ್ ಅನ್ನು ಬಳಸುತ್ತದೆ.

  • ಖಾಸಗಿ ಕ್ಲೌಡ್ ಕಂಪ್ಯೂಟ್: ನಿಮ್ಮ ಗೌಪ್ಯತೆಯನ್ನು ರಕ್ಷಿಸುತ್ತಲೇ, ಸಂಕೀರ್ಣ ವಿನಂತಿಗಳನ್ನು ನಿರ್ವಹಿಸಲು Appleನ ಖಾಸಗಿ ಕ್ಲೌಡ್ ಕಂಪ್ಯೂಟ್ ಅನ್ನು ಬಳಸುತ್ತದೆ.

  • ಎಕ್ಸ್‌ಟೆನ್ಶನ್ ಮಾಡಲ್: ನಿಮ್ಮ ವಿನಂತಿಗಳನ್ನು ನಿರ್ವಹಿಸಲು ChatGPTಯನ್ನು ಬಳಸುತ್ತದೆ.

ಪ್ರಾರಂಭಿಸಲು, ಈ ಕೆಳಗಿನಂತಹ ಯಾವುದನ್ನಾದರೂ ಪ್ರಯತ್ನಿಸಿ:

  1. ನಿಮ್ಮ iPhoneನಲ್ಲಿ ಶಾರ್ಟ್‌ಕಟ್ಸ್ ಆ್ಯಪ್‌ಗೆ ಹೋಗಿ.

  2. ಶಾರ್ಟ್‌ಕಟ್ ಅನ್ನು ರಚಿಸಿ ಬಟನ್ ಅನ್ನು ಟ್ಯಾಪ್ ಮಾಡಿ.

    ಸಲಹೆ: Apple Intelligence ವರ್ಗವನ್ನು ಟ್ಯಾಪ್ ಮಾಡಿ, ನಂತರ ನಿರ್ದಿಷ್ಟ ಇಂಟೆಲಿಜೆಂಟ್ ಆ್ಯಕ್ಷನ್ ಅನ್ನು ಆಯ್ಕೆಮಾಡಿ.

  3. ಆ್ಯಕ್ಷನ್ ಒಂದನ್ನು ಹುಡುಕಿ, ನಂತರ ಅದನ್ನು ನಿಮ್ಮ ಶಾರ್ಟ್‌ಕಟ್‌ಗೆ ಸೇರಿಸಲು ಅದರ ಮೇಲೆ ಟ್ಯಾಪ್ ಮಾಡಿ.

    ಉದಾಹರಣೆಗೆ, ಪ್ರಸ್ತುತ ಹವಾಮಾನ ಮಾಹಿತಿ ಪಡೆಯಿರಿ ಎಂಬುದನ್ನು ಹುಡುಕಿ, ನಂತರ ಅದನ್ನು ಟ್ಯಾಪ್ ಮಾಡಿ. ಶಾರ್ಟ್‌ಕಟ್ಸ್ ನಿಮ್ಮ ಸ್ಥಳದ ಆ್ಯಕ್ಸೆಸ್ ಅನ್ನು ಕೇಳಿದರೆ, ಆ್ಯಕ್ಸೆಸ್ ಅನುಮತಿಸಿ.

  4. ಮಾಡಲ್ ಅನ್ನು ಬಳಸಿ ಆ್ಯಕ್ಷನ್ ಅನ್ನು ಹುಡುಕಿ, ನಂತರ ಮಾಡಲ್ ಅನ್ನು ಆರಿಸಿ.

    ಉದಾಹರಣೆಗೆ, ಆನ್-ಡಿವೈಸ್ ಅನ್ನು ಆಯ್ಕೆಮಾಡಿ.

  5. “ಮಾಡಲ್ ಅನ್ನು ಬಳಸಿ” ಎಂಬುದರ ಕೆಳಗಿನ ಪಠ್ಯ ಫೀಲ್ಡ್‌ನಲ್ಲಿ, ನಿಮ್ಮ ಪ್ರಾಂಪ್ಟ್ ಅನ್ನು ನಮೂದಿಸಿ.

    ಉದಾಹರಣೆಗೆ, “ಎಮೋಜಿಯನ್ನು ಬಳಸಿ ಇಂದಿನ ಹವಾಮಾನದ ಕುರಿತ ಸಂಕ್ಷಿಪ್ತವಾದ, ಮೋಜಿನ ಸಾರಾಂಶವನ್ನು ಬರೆಯಿರಿ” ಎಂದು ನಮೂದಿಸಿ.

    ನಿಮ್ಮ ವಿನಂತಿಯನ್ನು ಮತ್ತಷ್ಟು ಪರಿಷ್ಕರಿಸುವುದಕ್ಕಾಗಿ ಮಾಡಲ್‌ನೊಂದಿಗೆ ಸಂವಹನ ನಡೆಸಲು ನೀವು ಬಯಸಿದರೆ, “ಮಾಡಲ್ ಅನ್ನು ಬಳಸಿ” ಎಂಬುದರ ಪಕ್ಕದಲ್ಲಿರುವ ಬಾಣದ ಗುರುತನ್ನು ಟ್ಯಾಪ್ ಮಾಡಿ, ನಂತರ ಫಾಲೋ ಅಪ್ ಚೆಕ್‌ಬಾಕ್ಸ್ ಅನ್ನು ಟ್ಯಾಪ್ ಮಾಡಿ.

  6. ಮತ್ತೊಂದು ಆ್ಯಕ್ಷನ್ ಅನ್ನು ಸೇರಿಸಲು, ಅದಕ್ಕಾಗಿ ಹುಡುಕಿ, ನಂತರ ಅದನ್ನು ಸೇರಿಸಲು ಟ್ಯಾಪ್ ಮಾಡಿ.

    ಉದಾಹರಣೆಗೆ, ಕಂಟೆಂಟ್ ಅನ್ನು ತೋರಿಸಿ ಎಂದು ಹುಡುಕಿ, ಅದನ್ನು ಟ್ಯಾಪ್ ಮಾಡಿ, ನಂತರ ಪ್ರತಿಕ್ರಿಯೆ ಎಂಬುದನ್ನು ಆಯ್ಕೆಮಾಡಿ.

  7. ನಿಮ್ಮ ಹೊಸ ಶಾರ್ಟ್‌ಕಟ್ ಅನ್ನು ಪರೀಕ್ಷಿಸಲು, ಪ್ಲೇ ಮಾಡಿ ಬಟನ್ ಅನ್ನು ಟ್ಯಾಪ್ ಮಾಡಿ.

ನಿಮ್ಮ ಶಾರ್ಟ್‌ಕಟ್ ಸ್ವಯಂಚಾಲಿತವಾಗಿ ಸೇವ್ ಆಗುತ್ತದೆ. ನಿಮ್ಮ ಶಾರ್ಟ್‌ಕಟ್ ಅನ್ನು ರನ್ ಮಾಡಲು ನೀವು ಬಳಸಬಹುದಾದ ವಿವಿಧ ವಿಧಾನಗಳ ಬಗ್ಗೆ ತಿಳಿಯಲು, iPhone ಅಥವಾ iPadನಲ್ಲಿ ಮತ್ತೊಂದು ಆ್ಯಪ್‌ನಿಂದ ಶಾರ್ಟ್‌ಕಟ್ ಅನ್ನು ಪ್ರಾರಂಭಿಸುವುದು ಎಂಬುದನ್ನು ನೋಡಿ.

ಇನ್‌ಪುಟ್, ಫಾಲೋ ಅಪ್ ಮತ್ತು ಔಟ್‌ಪುಟ್ ಬಗ್ಗೆ ಇನ್ನಷ್ಟು ತಿಳಿಯಿರಿ

ಮಾಡಲ್ ಅನ್ನು ಬಳಸಿ ಆ್ಯಕ್ಷನ್ ಅನ್ನು ಬಳಸುವ ಕುರಿತು ಕೆಲವು ವಿವರಗಳು ಇಲ್ಲಿವೆ:

  • ಮಾಡಲ್‌ಗಳಿಗೆ ಇನ್‌ಪುಟ್ ಮಾಡಬಹುದಾದ ಪಠ್ಯವು ವೇರಿಯಬಲ್‌ಗಳು, ಹಿಂದಿನ ಆ್ಯಕ್ಷನ್‌ಗಳ ಔಟ್‌ಪುಟ್‌ಗಳು, ಕ್ಯಾಲೆಂಡರ್ ಇವೆಂಟ್‌ಗಳು, ರಿಮೈಂಡರ್‌ಗಳು, ಫೋಟೋಗಳು ಮತ್ತು ಇತ್ಯಾದಿಗಳನ್ನು ಒಳಗೊಂಡಿರುತ್ತದೆ.

  • ನೀವು ಫಾಲೋ ಅಪ್ ಎಂಬುದನ್ನು ಆಯ್ಕೆಮಾಡಿದರೆ, ನೀವು ಶಾರ್ಟ್‌ಕಟ್ ಅನ್ನು ರನ್ ಮಾಡಿದಾಗ, ಅದು ನಿಮಗೆ ಮಾಡಲ್‌ನ ಪ್ರತಿಕ್ರಿಯೆಯನ್ನು ತೋರಿಸುತ್ತದೆ ಮತ್ತು ಅಂತಿಮ ಪ್ರತಿಕ್ರಿಯೆಯನ್ನು ಮುಂದಿನ ಆ್ಯಕ್ಷನ್‌ಗೆ ರವಾನಿಸುವ ಮೊದಲು ನಿಮ್ಮ ಇನ್‌ಪುಟ್ ಅನ್ನು ಪರಿಷ್ಕರಿಸಲು ನಿಮಗೆ ಅನುವುಮಾಡಿಕೊಡುತ್ತದೆ. ಉದಾಹರಣೆಗೆ, ನೀವು ಹೆಚ್ಚುವರಿ ವಿನಂತಿಗಳನ್ನು ಮಾಡಬಹುದು ಅಥವಾ ಹೆಚ್ಚಿನ ಮಾಹಿತಿಯನ್ನು ಒದಗಿಸಬಹುದು.

  • ಔಟ್‌ಪುಟ್ ಪ್ರತಿಕ್ರಿಯೆಗಳನ್ನು ಯಾವುದಕ್ಕೆ ರವಾನಿಸಲಾಗುತ್ತದೆಯೋ ಆ ಆ್ಯಕ್ಷನ್‌ಗಳಿಗಾಗಿ ಅವುಗಳನ್ನು ಸ್ವಯಂಚಾಲಿತವಾಗಿ ಆಪ್ಟಿಮೈಸ್ ಮಾಡಲಾಗುತ್ತದೆ. ಪ್ರತಿಕ್ರಿಯೆಯನ್ನು ಹೇಗೆ ಔಟ್‌ಪುಟ್ ಮಾಡಲಾಗುತ್ತದೆ ಎಂಬುದನ್ನು ಸಹ ನೀವು ನಿರ್ದಿಷ್ಟಪಡಿಸಬಹುದು: ನೀವು ಮಾಡಲ್ ಅನ್ನು ಬಳಸಿ ಎಂಬ ಆ್ಯಕ್ಷನ್ ಅನ್ನು ಸೇರಿಸಿದಾಗ, ಔಟ್‌ಪುಟ್ ಪಾಪ್-ಅಪ್ ಮೆನುವನ್ನು ಟ್ಯಾಪ್ ಮಾಡಿ ಮತ್ತು ಆಯ್ಕೆಯೊಂದನ್ನು ಆರಿಸಿ.

*Apple Intelligence ಜನರೇಟಿವ್ ಮಾಡಲ್‌ಗಳನ್ನು ಬಳಸುತ್ತದೆ ಮತ್ತು ಔಟ್‌ಪುಟ್‌ಗಳಲ್ಲಿ ವ್ಯತ್ಯಾಸವಾಗಬಹುದು. ನಿಖರತೆಗಾಗಿ ಮುಖ್ಯ ಮಾಹಿತಿಯನ್ನು ಪರಿಶೀಲಿಸಿ.
**Apple Intelligence ಈ ಕೆಳಗಿನ ಭಾಷೆಗಳಿಗೆ ಬೆಂಬಲದೊಂದಿಗೆ ಬೀಟಾದಲ್ಲಿ ಲಭ್ಯವಿದೆ: ಇಂಗ್ಲಿಷ್, ಡ್ಯಾನಿಶ್, ಡಚ್, ಫ್ರೆಂಚ್, ಜರ್ಮನ್, ಇಟಾಲಿಯನ್, ನಾರ್ವೇಜಿಯನ್, ಪೋರ್ಚುಗೀಸ್, ಸ್ಪ್ಯಾನಿಷ್, ಸ್ವೀಡಿಷ್, ಟರ್ಕಿಶ್, ಚೈನೀಸ್ (ಸರಳೀಕೃತ), ಚೈನೀಸ್ (ಸಾಂಪ್ರದಾಯಿಕ), ಜಾಪನೀಸ್, ಕೊರಿಯನ್ ಮತ್ತು ವಿಯೆಟ್ನಾಮೀಸ್. ಕೆಲವು ಫೀಚರ್‌ಗಳು ಎಲ್ಲಾ ಭಾಷೆಗಳು ಅಥವಾ ಪ್ರದೇಶಗಳಲ್ಲಿ ಲಭ್ಯವಿಲ್ಲದಿರಬಹುದು. ಭಾಷೆ ಮತ್ತು ಫೀಚರ್ ಲಭ್ಯತೆ ಮತ್ತು ಸಿಸ್ಟಂ ಅವಶ್ಯಕತೆಗಳ ಕುರಿತ ಹೆಚ್ಚಿನ ಮಾಹಿತಿಗಾಗಿ, Apple Intelligence ಅನ್ನು ಪಡೆಯುವುದು ಹೇಗೆ? ಎಂಬ Apple ಬೆಂಬಲ ಲೇಖನವನ್ನು ನೋಡಿ.
Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.