iPhoneನಲ್ಲಿನ Freeform ಆ್ಯಪ್‌ನಲ್ಲಿ Apple Creator Studioಗೆ ಸಬ್‌ಸ್ಕ್ರೈಬ್ ಮಾಡುವುದು

ನೀವು Apple Creator Studioವನ್ನು ಉಚಿತವಾಗಿ ಪ್ರಯತ್ನಿಸಬಹುದು. ನಿಮ್ಮ ಉಚಿತ ಟ್ರಯಲ್ ಅನ್ನು ಪ್ರಾರಂಭಿಸಲು, ನಿಮ್ಮ Apple ಖಾತೆಯನ್ನು ಬಳಸಿಕೊಂಡು ಮಾಸಿಕ ಅಥವಾ ವಾರ್ಷಿಕ ಸಬ್‌ಸ್ಕ್ರಿಪ್ಶನ್‌ಗಾಗಿ ಸೈನ್ ಅಪ್ ಮಾಡಿ. ನೀವು ಯಾವುದೇ ಸಮಯದಲ್ಲಿ ನಿಮ್ಮ ಸಬ್‌ಸ್ಕ್ರಿಪ್ಶನ್ ಅನ್ನು ರದ್ದುಗೊಳಿಸಬಹುದು.

ನೀವು ನಿಮ್ಮ ಸಬ್‌ಸ್ಕ್ರಿಪ್ಶನ್ ಅನ್ನು ಗರಿಷ್ಟ ಐವರು ಕುಟುಂಬ ಸದಸ್ಯರೊಂದಿಗೆ ಹಂಚಿಕೊಳ್ಳಬಹುದು. ಕುಟುಂಬ ಹಂಚಿಕೆಯನ್ನು ಸೆಟಪ್ ಮಾಡಿ ಎಂಬುದನ್ನು ನೋಡಿ.

Freeformನಿಂದ Apple Creator Studioಗೆ ಸಬ್‌ಸ್ಕ್ರೈಬ್ ಮಾಡುವುದು

  1. ನಿಮ್ಮ iPhoneನಲ್ಲಿರುವ Freeform ಆ್ಯಪ್‌ಗೆ ಹೋಗಿ.

  2. ಈ ಕೆಳಗಿನವುಗಳಲ್ಲಿ ಒಂದನ್ನು ಮಾಡಿ:

    • ಆಟೋ ಕ್ರಾಪ್ನಂತಹ Apple Creator Studio ಫೀಚರ್ ಅನ್ನು ಬಳಸಿ.

    • ಕಂಟೆಂಟ್ ಹಬ್ ಬಟನ್ ಅನ್ನು ಟ್ಯಾಪ್ ಮಾಡಿ, ಬೋರ್ಡ್‌ಗೆ ಸೇರಿಸಲು ಪ್ರೀಮಿಯಂ ಚಿತ್ರವನ್ನು ಟ್ಯಾಪ್ ಮಾಡಿ, ನಂತರ ವಾಟರ್‌ಮಾರ್ಕ್‌ಗಳನ್ನು ತೆಗೆದುಹಾಕಿ ಎಂಬುದನ್ನು ಟ್ಯಾಪ್ ಮಾಡಿ.

  3. ಸ್ಕ್ರೀನ್ ಮೇಲಿನ ಸೂಚನೆಗಳನ್ನು ಅನುಸರಿಸಿ.

ನಿಮ್ಮ Apple Creator Studio ಸಬ್‌ಸ್ಕ್ರಿಪ್ಶನ್ ಅನ್ನು ರದ್ದುಗೊಳಿಸುವುದು ಅಥವಾ ಬದಲಾಯಿಸುವುದು

  1. ನಿಮ್ಮ iPhoneನಲ್ಲಿ ಸೆಟ್ಟಿಂಗ್ಸ್‌ ಆ್ಯಪ್‌ಗೆ ಹೋಗಿ.

  2. ನಿಮ್ಮ ಹೆಸರನ್ನು ಟ್ಯಾಪ್ ಮಾಡಿ, ಸಬ್‌ಸ್ಕ್ರಿಪ್ಶನ್‌ಗಳನ್ನು ಟ್ಯಾಪ್ ಮಾಡಿ, ನಂತರ Apple Creator Studio ಎಂಬುದನ್ನು ಟ್ಯಾಪ್ ಮಾಡಿ.

    ಗಮನಿಸಿ: ನಿಮ್ಮ ಸಬ್‌ಸ್ಕ್ರಿಪ್ಶನ್‌ಗಳು ನಿಮಗೆ ಕಾಣಿಸದಿದ್ದರೆ, ನೀವು App Storeನಲ್ಲಿ ನಿಮ್ಮ Apple ಖಾತೆಗೆ ಸೈನ್ ಇನ್ ಮಾಡಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.

  3. ಈ ಕೆಳಗಿನವುಗಳಲ್ಲಿ ಒಂದನ್ನು ಮಾಡಿ:

    • ನಿಮ್ಮ ಸಬ್‌ಸ್ಕ್ರಿಪ್ಶನ್ ಪ್ಲಾನ್ ಅನ್ನು ಮಾರ್ಪಡಿಸಿ: ಎಲ್ಲಾ ಪ್ಲ್ಯಾನ್‌ಗಳನ್ನು ನೋಡಿ ಎಂಬುದನ್ನು ಟ್ಯಾಪ್ ಮಾಡಿ, ಹೊಸ ಪ್ಲ್ಯಾನ್ ಅನ್ನು ಆಯ್ಕೆಮಾಡಿ, ನಂತರ ಸಬ್‌ಸ್ಕ್ರೈಬ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

    • ನಿಮ್ಮ ಸಬ್‌ಸ್ಕ್ರಿಪ್ಶನ್ ಅಥವಾ ಉಚಿತ ಟ್ರಯಲ್ ಅನ್ನು ರದ್ದುಮಾಡಿ: ಸಬ್‌ಸ್ಕ್ರಿಪ್ಶನ್ ಅನ್ನು ರದ್ದುಮಾಡಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ಸ್ಕ್ರೀನ್ ಮೇಲಿನ ಸೂಚನೆಗಳನ್ನು ಅನುಸರಿಸಿ

ನೀವು ನಿಮ್ಮ ಸಬ್‌ಸ್ಕ್ರಿಪ್ಶನ್ ಅನ್ನು ರದ್ದುಗೊಳಿಸಿದರೆ, ನಿಮ್ಮ ಬಿಲ್ಲಿಂಗ್ ಅವಧಿ ಮುಗಿಯುವವರೆಗೆ ನೀವು ಪ್ರೀಮಿಯಂ ಕಂಟೆಂಟ್ ಮತ್ತು ಫೀಚರ್‌ಗಳಿಗೆ ಸಂಪೂರ್ಣ ಆ್ಯಕ್ಸೆಸ್ ಹೊಂದಿರುತ್ತೀರಿ.

ಉತ್ತಮ ಅನುಭವಕ್ಕಾಗಿ, ನೀವು iCloudಗಾಗಿ ಬಳಸುವ Apple ಖಾತೆಯನ್ನೇ ಬಳಸಿ Apple Creator Studioಗೆ ಸಬ್‌ಸ್ಕ್ರೈಬ್ ಮಾಡಿ. ಕೆಲವು Apple Creator Studio ಆ್ಯಪ್‌ಗಳು iCloud ಅನ್ನು ಬಳಸಿಕೊಂಡು ಸಾಧನಗಳ ನಡುವೆ ಪ್ರಾಜೆಕ್ಟ್‌ಗಳು, ಡಾಕ್ಯುಮಂಟ್‌ಗಳು ಮತ್ತು ಕಂಟೆಂಟ್ ಅನ್ನು ಸಿಂಕ್ ಮಾಡುತ್ತವೆ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.