ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPhoneನಲ್ಲಿನ ಸಂದೇಶ ಆ್ಯಪ್‌ನಲ್ಲಿ Tapbackಗಳೊಂದಿಗೆ ಪ್ರತಿಕ್ರಿಯಿಸಿ

Tapbackಗಳು ಸಂದೇಶವೊಂದಕ್ಕೆ ಪ್ರತಿಕ್ರಿಯಿಸಲು ಹೃದಯ, ಥಂಬ್ಸ್-ಅಪ್ ಅಥವಾ ಥಂಬ್ಸ್-ಡೌನ್, ನಗು, ಆಶ್ಚರ್ಯಸೂಚಕ ಚಿಹ್ನೆಗಳು, ಪ್ರಶ್ನಾರ್ಥಕ ಚಿಹ್ನೆ ಮತ್ತು ಯಾವುದೇ ಸ್ಟಿಕ್ಕರ್, Memoji ಅಥವಾ ಎಮೋಜಿಯಂತಹ ತ್ವರಿತ ಮತ್ತು ಸುಲಭವಾದ ಮಾರ್ಗವನ್ನು ನಿಮಗೆ ನೀಡುತ್ತವೆ.

ಸ್ಕ್ರೀನ್‌ನ ಮೇಲ್ಭಾಗದ ಸಮೀಪ Tapback ಆ್ಯಟ್ರಿಬ್ಯೂಶನ್‌ಗಳನ್ನು ತೋರಿಸುವ ಸಂದೇಶ ಆ್ಯಪ್‌ನ ಸಂಭಾಷಣೆ ಮತ್ತು ಸಂದೇಶವೊಂದರ ಮೇಲೆ ಕಾಣಿಸುತ್ತಿರುವ Tapbackಗಳ ಮೆನು.

Tapback ಮೂಲಕ ಪ್ರತಿಕ್ರಿಯಿಸಿ

  1. ನಿಮ್ಮ iPhoneನಲ್ಲಿ ಸಂದೇಶ ಆ್ಯಪ್‌ಗೆ ಹೋಗಿ.

  2. ಸಂಭಾಷಣೆಯನ್ನು ತೆರೆಯಿರಿ.

  3. ಸಂದೇಶವನ್ನು ಡಬಲ್ ಟ್ಯಾಪ್ ಮಾಡಿ (ಅಥವಾ ಒತ್ತಿ ಹಿಡಿದುಕೊಳ್ಳಿ).

  4. ಸೂಚಿಸಲಾದ ಎಮೋಜಿ ಮತ್ತು ಸ್ಟಿಕ್ಕರ್‌ಗಳನ್ನು ನೋಡಲು ಎಡಕ್ಕೆ ಸ್ವೈಪ್ ಮಾಡಿ ಅಥವಾ ಎಮೋಜಿ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಕೆಳಗಿನ ಯಾವುದೇ ರೀತಿಯ Tapbackಗಳನ್ನು ಆಯ್ಕೆ ಮಾಡಲು ಟ್ಯಾಪ್ ಮಾಡಿ:

    • ಇತರ ಎಮೋಜಿ: ಎಮೋಜಿ ಬಟನ್ ಅನ್ನು ಟ್ಯಾಪ್ ಮಾಡಿ (ಎಮೋಜಿ ಬಟನ್ನ ಬಲಭಾಗದಲ್ಲಿರುವ ಐಕಾನ್‌ಗಳ ಮೂಲಕ ಇತರ ಎಮೋಜಿ ವರ್ಗಗಳಿಗೆ ಹೋಗಿ).

    • ಸ್ಟಿಕ್ಕರ್‌ಗಳು: ಲೈವ್ ಸ್ಟಿಕ್ಕರ್‌ಗಳ ಬಟನ್ ಅನ್ನು ಟ್ಯಾಪ್ ಮಾಡಿ.

ಸಂಭಾಷಣೆಯೊಂದರಲ್ಲಿ ನಿರ್ದಿಷ್ಟ ಸಂದೇಶಕ್ಕೆ Tapback ಅನ್ನು ಅಟಾಚ್ ಮಾಡಲಾಗುತ್ತದೆ ಮತ್ತು ಸಂಭಾಷಣೆಯ ಭಾಗವಾಗಿರುವ ಪ್ರತಿಯೊಬ್ಬರೂ ಅದನ್ನು ನೋಡಬಹುದು.

Tapback ಕಳುಹಿಸಿದ್ದು ಯಾರೆಂದು ಕಂಡುಹಿಡಿಯಿರಿ

ಸಂದೇಶವೊಂದಕ್ಕೆ ಒಂದಕ್ಕಿಂತ ಹೆಚ್ಚಿನ Tapbackಗಳಿದ್ದರೆ, ಅವು ಸ್ಟ್ಯಾಕ್‌ನಲ್ಲಿ ಕಾಣಿಸಿಕೊಳ್ಳುತ್ತವೆ. ಪ್ರತಿ Tapback ಅನ್ನು ಯಾರು ಸೇರಿಸಿದ್ದಾರೆ ಎಂಬುದನ್ನು ನೀವು ಕಂಡುಹಿಡಿಯಬಹುದು.

  1. ನಿಮ್ಮ iPhoneನಲ್ಲಿ ಸಂದೇಶ ಆ್ಯಪ್‌ಗೆ ಹೋಗಿ.

  2. Tapbackಗಳನ್ನು ಹೊಂದಿರುವ ಸಂಭಾಷಣೆಯನ್ನು ತೆರೆಯಿರಿ.

  3. Tapbackಗಳ ಸ್ಟ್ಯಾಕ್ ಒಂದನ್ನು ಟ್ಯಾಪ್ ಮಾಡಿ.

    ಕಳುಹಿಸುವವರು ಮತ್ತು ಅವರ Tapback ಸ್ಕ್ರೀನ್‌ನ ಮೇಲ್ಭಾಗದ ಹತ್ತಿರ ಕಾಣಿಸಿಕೊಳ್ಳುತ್ತಾರೆ.

ನಿಮ್ಮ Tapback ಅನ್ನು ಎಡಿಟ್ ಮಾಡಿ ಅಥವಾ ತೆಗೆದುಹಾಕಿ

ನೀವು ಸೇರಿಸಿದ Tapbackಗಳನ್ನು ಮಾತ್ರ ನೀವು ಎಡಿಟ್ ಮಾಡಬಹುದು ಅಥವಾ ತೆಗೆದುಹಾಕಬಹುದು. ಇತರರು ಸೇರಿಸಿದ Tapbackಗಳನ್ನು ಎಡಿಟ್ ಮಾಡಲು ಅಥವಾ ತೆಗೆದುಹಾಕಲು ನಿಮಗೆ ಸಾಧ್ಯವಿರುವುದಿಲ್ಲ.

  1. ನಿಮ್ಮ iPhoneನಲ್ಲಿ ಸಂದೇಶ ಆ್ಯಪ್‌ಗೆ ಹೋಗಿ.

  2. ಸಂಭಾಷಣೆಯನ್ನು ತೆರೆಯಿರಿ.

  3. ನಿಮ್ಮ Tapback ಅನ್ನು ಟ್ಯಾಪ್ ಮಾಡಿ, ನಂತರ ಈ ಕೆಳಗಿನವುಗಳಲ್ಲಿ ಒಂದನ್ನು ಮಾಡಿ:

    • ಬೇರೆ Tapback ಅನ್ನು ಬಳಸಿ: ಬೇರೆ ಎಮೋಜಿ, Memoji ಅಥವಾ ಸ್ಟಿಕ್ಕರ್ ಅನ್ನು ಟ್ಯಾಪ್ ಮಾಡಿ.

    • Tapback ಅನ್ನು ತೆಗೆದುಹಾಕಿ: ನೀವು ಬಳಸಿದ ಅದೇ Tapback ಅನ್ನು ಟ್ಯಾಪ್ ಮಾಡಿ (ಇದರಿಂದ ಅದನ್ನು ಹೈಲೈಟ್ ಮಾಡಲಾಗುವುದಿಲ್ಲ).

ನೀವು ಪ್ರತಿ ಸಂದೇಶಕ್ಕೆ ಒಂದು Tapback ಅನ್ನು ಮಾತ್ರ ಸೇರಿಸಬಹುದು. ನೀವು ಹೆಚ್ಚುವರಿ ಸ್ಟಿಕರ್‌ಗಳನ್ನು ಕಳುಹಿಸಲು ಬಯಸಿದರೆ, ಸಂಭಾಷಣೆಯಲ್ಲಿ ಸ್ಟಿಕ್ಕರ್‌ಗಳನ್ನು ಇರಿಸಿ ಅನ್ನು ನೋಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.